• Home
  • »
  • News
  • »
  • lifestyle
  • »
  • Healthy Food: ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಬೇಕು ಎಂದರೆ ಈ ಆಹಾರಗಳನ್ನು ಸೇವಿಸಿ

Healthy Food: ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಬೇಕು ಎಂದರೆ ಈ ಆಹಾರಗಳನ್ನು ಸೇವಿಸಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆಹಾರ ವಿಷಯದಲ್ಲಿ ಸಮಯ ಮತ್ತು ಆಹಾರ ಸಂಯೋಜನೆ ಬಗ್ಗೆ ಜಾಗ್ರತೆ ವಹಿಸಿ. ನೀವು ಏನು ತಿನ್ನುತ್ತಿದ್ದೀರಿ ಮತ್ತು ಎಷ್ಟು ಪ್ರಮಾಣದ ಆಹಾರ ತಿನ್ನುತ್ತಿದ್ದೀರಿ ಎಂಬುದು ತುಂಬಾ ಮುಖ್ಯ ಆಗಿದೆ. ಉತ್ತಮ ಮತ್ತು ಆರೋಗ್ಯಕರ ಆಹಾರ ಸೇವಿಸುವ ಅನೇಕ ಜನರು ಇನ್ನೂ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.

ಮುಂದೆ ಓದಿ ...
  • Share this:

    ಆರೋಗ್ಯಕರ (Healthy) ಮತ್ತು ಉತ್ತಮ ಜೀವನ (Good Life) ನಡೆಸಲು ಆಹಾರ ಮತ್ತು ಪಾನೀಯ (Food And Drinks) ಹಾಗೂ ದೈಹಿಕ ಚಟುವಟಿಕೆಯ ಬಗ್ಗೆ ಕಾಳಜಿ (Care) ವಹಿಸುವುದು ಬಹಳ ಮುಖ್ಯ. ನೀವು ಪ್ರತಿದಿನ ಯಾವ ರೀತಿಯ ಆಹಾರ ಸೇವನೆ ಮಾಡುತ್ತಿದ್ದೀರಿ? ಇಂದು ಏನು ತಿನ್ನುತ್ತೀರಿ ಅನ್ನೋದು ನಿಮ್ಮ ಭವಿಷ್ಯದಲ್ಲಿ ನಿಮ್ಮ ಆರೋಗ್ಯ ಹೇಗಿರುತ್ತದೆ ಎಂಬುದನ್ನು ನಿರ್ಧಾರ ಮಾಡುತ್ತದೆ. ತಿನ್ನುವುದು ಮತ್ತು ಕುಡಿಯುವುದು ಎಂದರೆ ನೀವು ಏನನ್ನೂ ಮತ್ತು ಯಾವಾಗ ಬೇಕಾದರೂ ತಿನ್ನುತ್ತಿದ್ದೀರಿ ಎಂದು ಇದರ ಅರ್ಥವಲ್ಲ. ಇದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ವಾಸ್ತವದಲ್ಲಿ ತಿನ್ನಲು ಮತ್ತು ಕುಡಿಯುವಾಗ ಕೆಲವು ನಿಯಮಗಳನ್ನು ಫಾಲೋ ಮಾಡುವುದು ತುಂಬಾ ಮುಖ್ಯ.


    ಆಹಾರ ಸೇವನೆ ಬಗ್ಗೆ ಕಾಳಜಿ ವಹಿಸಿ


    ಆಹಾರ ವಿಷಯದಲ್ಲಿ ಸಮಯ, ಆಹಾರ ಸಂಯೋಜನೆ ಬಗ್ಗೆ ಜಾಗ್ರತೆ ವಹಿಸಿ. ನೀವು ಏನು ತಿನ್ನುತ್ತಿದ್ದೀರಿ ಮತ್ತು ಎಷ್ಟು ಪ್ರಮಾಣದ ಆಹಾರ ತಿನ್ನುತ್ತಿದ್ದೀರಿ ಎಂಬುದು ತುಂಬಾ ಮುಖ್ಯ ಆಗಿದೆ. ಉತ್ತಮ ಮತ್ತು ಆರೋಗ್ಯಕರ ಆಹಾರ ಸೇವಿಸುವ ಅನೇಕ ಜನರು ಇನ್ನೂ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಇದಕ್ಕೆ ಒಂದು ದೊಡ್ಡ ಕಾರಣ ಅಂದರೆ ನಿಮ್ಮ ಆಹಾರದಿಂದ ನೀವು ಎಲ್ಲಾ ಪೋಷಕಾಂಶಗಳನ್ನು ಪಡೆಯದೇ ಇರುವುದು.


    ಭಾರತದ ಪ್ರಸಿದ್ಧ ಪೌಷ್ಟಿಕತಜ್ಞ ಮತ್ತು ಆಹಾರ ತಜ್ಞ ಶಿಖಾ ಅಗರ್ವಾಲ್ ಅವರು ತಪ್ಪು ಆಹಾರ ಸಂಯೋಜನೆ ದೇಹವು ಅಗತ್ಯವಾದ ಪೋಷಕಾಂಶಗಳಿಂದ ವಂಚಿತವಾಗುತ್ತದೆ ಎಂದಿದ್ದಾರೆ. ಇದಕ್ಕೆ ವಿರುದ್ಧವಾಗಿ ಆರೋಗ್ಯಕರ ಆಹಾರ ಸಂಯೋಜನೆ ನಿಮ್ಮ ದೇಹವು ವಿಟಮಿನ್


    ಇದನ್ನೂ ಓದಿ: ನಿಂಬೆ ಅಷ್ಟೇ ಅಲ್ಲ ಅದರ ಎಲೆಗಳೂ ಸಹ ಹಲವು ಆರೋಗ್ಯ ಪ್ರಯೋಜನ ನೀಡುತ್ತವೆ! ಹೇಗೆ ಎಂದು ನೋಡಿ


    ಮತ್ತು ಉತ್ಕರ್ಷಣ ನಿರೋಧಕಗಳನ್ನು ಉತ್ತಮವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಆರೋಗ್ಯವಾಗಿರಲು ಮತ್ತು ಫಿಟ್ ಆಗಿರಲು ಯಾವ ಆಹಾರದ ಜೊತೆ ಏನು ತಿನ್ನಬೇಕು ಎಂಬುದನ್ನು ನೀವು ತಿಳಿಯಬೇಕು.


    ಬಾಳೆಹಣ್ಣು ಮತ್ತು ಮೊಸರು


    ಎರಡೂ ಪೋಷಕಾಂಶಗಳ ಸೇವನೆಗೆ ನೀವು ಬೆಳಗಿನ ಉಪಾಹಾರದಲ್ಲಿ ಮೊಸರು ಮತ್ತು ಬಾಳೆಹಣ್ಣು ಸೇವನೆ ಮಾಡಬೇಕು. ಬಾಳೆಹಣ್ಣಿನಲ್ಲಿ ಕಂಡು ಬರುವ ಪೊಟ್ಯಾಸಿಯಮ್, ಮೊಸರಿನಂತಹ ಹೆಚ್ಚಿನ ಪ್ರೋಟೀನ್ ಆಹಾರಗಳೊಂದಿಗೆ ಸಂಯೋಜಿಸಲ್ಪಟ್ಟಿದೆ.


    ಇದು ಸ್ನಾಯುಗಳ ನಿರ್ಮಾಣಕ್ಕೆ ಸಹಾಯ ಮಾಡುತ್ತದೆ. ಇದರ ಜೊತೆ ಬಾಳೆಹಣ್ಣು ಇನ್ಯುಲಿನ್ ಅನ್ನು ಒಳಗೊಂಡಿವೆ. ಇದು ಕರುಳಿನ ಆರೋಗ್ಯ ಉತ್ತೇಜಿಸುತ್ತದೆ ಮತ್ತು ಮೊಸರಿನ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳುವ ದೇಹದ ಸಾಮರ್ಥ್ಯ ಹೆಚ್ಚಿಸುತ್ತದೆ.


    ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂಗಾಗಿ ಅಣಬೆ ಮತ್ತು ಎಳ್ಳು ಬೀಜ ಸೇವಿಸಿ


    ವಿಟಮಿನ್ ಮತ್ತು ಖನಿಜ ಸಂಯೋಜನೆ ನಿಮ್ಮ ಮೂಳೆಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ವಿಟಮಿನ್ ಡಿ ನೀವು ಸೇವಿಸುವ ಆಹಾರ ಮತ್ತು ನೀವು ತೆಗೆದುಕೊಳ್ಳುವ ಪೂರಕಗಳಿಂದ ಹೆಚ್ಚಿನ ಕ್ಯಾಲ್ಸಿಯಂ ಅನ್ನು ತರಲು ಸಹಾಯ ಮಾಡುತ್ತದೆ. ಈ ಸಂಯೋಜನೆ ವಿಟಮಿನ್ ಡಿ ಅನ್ನು ಹೆಚ್ಚಿಸುವ ಮೂಲಕ ಕರುಳಿನಲ್ಲಿ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆ ಹೆಚ್ಚಿಸುತ್ತದೆ.


    ವಿಟಮಿನ್ ಸಿ ಮತ್ತು ಕಬ್ಬಿಣಕ್ಕಾಗಿ ನಿಂಬೆ ಮತ್ತು ಹಸಿರು ತರಕಾರಿ  


    ಕಬ್ಬಿಣ ಮತ್ತು ಸಸ್ಯ ಆಧಾರಿತ ಕಬ್ಬಿಣದ ಹೀರಿಕೊಳ್ಳುವಿಕೆ ಹೆಚ್ಚಿಸಲು ದೇಹಕ್ಕೆ ವಿಟಮಿನ್ ಸಿ ಬೇಕು. ವಿಟಮಿನ್ ಸಿ ದೇಹವು ಹೆಚ್ಚು ಸುಲಭವಾಗಿ ಹೀರಿಕೊಳ್ಳುತ್ತದೆ. ಇದಕ್ಕೆ ಕಬ್ಬಿಣ ಒಡೆಯಲು ಸಹಕಾರಿ.


    ಆರೋಗ್ಯಕರ ಕೊಬ್ಬು ಮತ್ತು ವಿಟಮಿನ್ ಎ ಗಾಗಿ ಆಲಿವ್ ಮತ್ತು ಪಾಲಕ


    ಬಹುತೇಕ ಎಲ್ಲಾ ಪೋಷಕಾಂಶಗಳು ಪಾಲಕ್ ದಲ್ಲಿವೆ. ಇದಕ್ಕೆ ಸ್ವಲ್ಪ ಆಲಿವ್ ಎಣ್ಣೆ ಸೇರಿಸಬೇಕು. ಹಾಗೆ ಮಾಡುವುದರಿಂದ ದೇಹದಲ್ಲಿ ದ್ಯುತಿರಾಸಾಯನಿಕ ಹೀರಿಕೊಳ್ಳಲು ಸಹಾಯ ಮಾಡುತ್ತದೆ.


    ಇದನ್ನೂ ಓದಿ: ಗರ್ಭಧಾರಣೆಯ ನಂತರ ಹೊಟ್ಟೆ ಕೊಬ್ಬನ್ನು ಕಡಿಮೆ ಮಾಡುವುದು ಹೇಗೆ?


    ವಿಟಮಿನ್ ಇ ಮತ್ತು ವಿಟಮಿನ್ ಸಿ ಗಾಗಿ ಬಾದಾಮಿ ಮತ್ತು ಕಿತ್ತಳೆ


    ಎರಡೂ ಜೀವಸತ್ವಗಳು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತವೆ. ವಿಟಮಿನ್ ಸಿ ಮತ್ತು ಇ ಅನ್ನು ಸೇರಿಸಿ. ಇದು ಚರ್ಮಕ್ಕೆ ಸಹಕಾರಿ. ವಿಟಮಿನ್ ಇ ಕೆಂಪು ರಕ್ತ ಕಣಗಳ ರಚನೆಗೆ ಸಹಕಾರಿ. ವಿಟಮಿನ್ ಸಿ ಗಾಯಗಳನ್ನು ಗುಣಪಡಿಸುತ್ತದೆ.

    Published by:renukadariyannavar
    First published: