Vitamin C ಕೊರತೆಯಾದರೆ ಯಾವೆಲ್ಲ ರೋಗಗಳು ನಿಮ್ಮನ್ನು ಕಾಡುತ್ತವೆ ಗೊತ್ತಾ..?

ವಿಟಮಿನ್ ಸಿ ಕೊರತೆಯು ಅನೇಕ ರೋಗಗಳಿಗೆ (Diseases) ಕಾರಣವಾಗಬಹುದು ಮತ್ತು ಇದು ಮತ್ತಷ್ಟು ತೊಡಕುಗಳನ್ನು ಉಂಟು ಮಾಡಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಮ್ಮ ದೇಹವನ್ನು ಆರೋಗ್ಯವಾಗಿ ಕಾಪಾಡಿಕೊಳ್ಳುವ ವಿಷಯಕ್ಕೆ ಬಂದಾಗ, ಪೋಷಕಾಂಶಗಳು ಪ್ರಮುಖವಾದ ಪಾತ್ರ ವಹಿಸುತ್ತವೆ. ನಮ್ಮ ದೇಹದ ಆರೋಗ್ಯಕರ ಕಾರ್ಯನಿರ್ವಹಣೆಗೆ ಅಗತ್ಯ ಪೋಷಕಾಂಶಗಳಲ್ಲಿ ವಿಟಮಿನ್ ಸಿ (Vitamin C) ಮುಖ್ಯವಾದದ್ದು ಎಂದು ಹೇಳಬಹುದು. ದೇಹದಲ್ಲಿ ಕೊಲಾಜನ್ ಸರಿಯಾಗಿ ರೂಪುಗೊಳ್ಳುವುದಕ್ಕೆ ಕಾರಣವಾಗುವುದರ ಜೊತೆಗೆ, ಮೂಳೆಗಳ ಬೆಳವಣಿಗೆ, ರಕ್ತನಾಳದ ಆರೋಗ್ಯ ಮತ್ತು ಗಾಯ ಗುಣಪಡಿಸುವಿಕೆಗೆ ವಿಟಮಿನ್ ಸಿ ಮುಖ್ಯವಾಗಿದೆ. ಇದಕ್ಕಾಗಿಯೇ ವಿಟಮಿನ್ ಸಿ ಕೊರತೆಯು ಅನೇಕ ರೋಗಗಳಿಗೆ (Diseases) ಕಾರಣವಾಗಬಹುದು ಮತ್ತು ಇದು ಮತ್ತಷ್ಟು ತೊಡಕುಗಳನ್ನು ಉಂಟು ಮಾಡಬಹುದು.

ಸ್ಕರ್ವಿ: ವಿಟಮಿನ್ ಸಿ ಕೊರತೆಯಿಂದ ಬರುವ ಅತ್ಯಂತ ಪ್ರಮುಖ ರೋಗ ಎಂದರೆ ಅದು ಸ್ಕರ್ವಿ (Scurvy). ಇದು ಆಹಾರದಲ್ಲಿ ವಿಟಮಿನ್ ಸಿಯ ಭಾರಿ ಕೊರತೆಯನ್ನು ಸೂಚಿಸುತ್ತದೆ. ಇದು ಗಾಯ, ರಕ್ತಸ್ರಾವ, ಒಸಡುಗಳ ದೌರ್ಬಲ್ಯ, ಆಯಾಸ, ದದ್ದು ಮತ್ತು ಹೆಚ್ಚಿನದಕ್ಕೆ ಕಾರಣವಾಗುತ್ತದೆ. ಈ ರೋಗ ಆವರಿಸುವ ಮುನ್ನ ಎಚ್ಚರಿಕೆಯ ರೋಗಲಕ್ಷಣಗಳಾದ ದಣಿವು, ಕಡಿಮೆ ಹಸಿವು ಆಗುವುದು, ಕಿರಿಕಿರಿ ಮತ್ತು ಕೀಲು ನೋವು ಸೇರಿರಬಹುದು. ಚಿಕಿತ್ಸೆ ನೀಡದಿದ್ದಾಗ, ಇದು ರಕ್ತಹೀನತೆ, ಚರ್ಮದ ರಕ್ತಸ್ರಾವ ಇತ್ಯಾದಿಗಳಿಗೆ ಕಾರಣವಾಗಬಹುದು.

ಹೈಪರ್ ಥೈರಾಯ್ಡಿಸಮ್: ಥೈರಾಯ್ಡ್ ಗ್ರಂಥಿಯು ಹೆಚ್ಚುವರಿ ಹಾರ್ಮೋನುಗಳನ್ನು ಸ್ರವಿಸಿದಾಗ ಹೈಪರ್ ಥೈರಾಯ್ಡಿಸಮ್ ಆಗುತ್ತದೆ. ವಿಟಮಿನ್ ಸಿ ಜೊತೆಗೆ ಇತರ ಪ್ರಮುಖ ಪೋಷಕಾಂಶಗಳು ನಿಮ್ಮ ಥೈರಾಯ್ಡ್ ಆರೋಗ್ಯಕ್ಕೆ ಮುಖ್ಯವಾಗಿರುತ್ತವೆ. ದೀರ್ಘಕಾಲದ ವಿಟಮಿನ್ ಸಿ ಕೊರತೆಯು ಥೈರಾಯ್ಡ್ ಗ್ರಂಥಿಗಳಿಂದ ಹಾರ್ಮೋನುಗಳ ಹೆಚ್ಚುವರಿ ಸ್ರವಿಸುವಿಕೆಗೆ ಕಾರಣವಾಗಬಹುದು. ಇದರಿಂದ ಹೈಪರ್ ಥೈರಾಯ್ಡಿಸಮ್ ಬರಬಹುದು. ತೂಕ ನಷ್ಟ, ಹೃದಯ ಬಡಿತ, ಹೆಚ್ಚಿದ ಹಸಿವು, ನರ ದೌರ್ಬಲ್ಯ, ನಡುಕ, ಮಹಿಳೆಯರ ಋತುಚಕ್ರದಲ್ಲಿ ಬದಲಾವಣೆಗಳು ಇವೆಲ್ಲಾ ರೋಗಲಕ್ಷಣಗಳಿಗೆ ಕಾರಣವಾಗಬಹುದು.

ಇದನ್ನೂ ಓದಿ: ವೈರಸ್​ ವಿರುದ್ಧ ಹೋರಾಡಲು ನಿಮ್ಮ ದೇಹವನ್ನು ಸಿದ್ಧಗೊಳಿಸುವುದು ಹೇಗೆ?; ಮನೆಯಲ್ಲೇ ಇದೆ ಔಷಧಿ...

ರಕ್ತಹೀನತೆ: ವಿಟಮಿನ್ ಸಿ ಉಳ್ಳಂತಹ ಆಹಾರ ಪದಾರ್ಥಗಳು ರಕ್ತಹೀನತೆಯಂತಹ ರೋಗಗಳನ್ನು ತಡೆಗಟ್ಟಲು ಅತ್ಯಗತ್ಯವಾಗಿದೆ. ಇದು ನಿಮ್ಮ ದೇಹದಲ್ಲಿ ಕೆಂಪು ರಕ್ತ ಕಣಗಳ ಸಂಖ್ಯೆ ಕಡಿಮೆ ಆಗುವುದರಿಂದ ಉಂಟಾಗುತ್ತದೆ. ಆಯಾಸ, ಬಿಳಿಚಿಕೊಳ್ಳುವುದು, ಉಸಿರಾಟದ ತೊಂದರೆ, ತಲೆ ತಿರುಗುವಿಕೆ, ತೂಕ ನಷ್ಟ ಹೀಗೆ ಅನೇಕ ರೋಗಲಕ್ಷಣಗಳನ್ನು ನಾವು ಗಮನಿಸಬಹುದು.

ರಕ್ತಸ್ರಾವದ ಒಸಡುಗಳು: ನಿಮ್ಮ ಹಲ್ಲಿನ ಆರೋಗ್ಯದ ವಿಷಯಕ್ಕೆ ಬಂದಾಗ, ವಿಟಮಿನ್ ಸಿ ಅತ್ಯಂತ ಮಹತ್ವದ್ದಾಗಿದೆ. ಇದು ನಿಮ್ಮ ಹಲ್ಲುಗಳನ್ನು ಬಲಪಡಿಸುವುದಲ್ಲದೆ, ಒಸಡುಗಳನ್ನು ರಕ್ಷಿಸುತ್ತದೆ. ಆದ್ದರಿಂದ, ವಿಟಮಿನ್ ಸಿ ಕೊರತೆಯು ಒಸಡುಗಳ ರಕ್ತಸ್ರಾವ ಮತ್ತು ಒಸಡು ಕಾಯಿಲೆಗೆ ಕಾರಣವಾಗಬಹುದು.

ಚರ್ಮ ರೋಗಗಳು: ವಿಟಮಿನ್ ಸಿ ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ಆರೋಗ್ಯಕರ ಚರ್ಮಕ್ಕೆ ನಿರ್ಣಾಯಕವಾದ ಚರ್ಮ, ಕೂದಲು, ಕೀಲುಗಳು ಮುಂತಾದ ಅಂಗಾಂಶಗಳಲ್ಲಿ ಹೇರಳವಾಗಿರುವ ಪ್ರೋಟೀನ್ ಕೊಲಾಜನ್ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸ್ಕರ್ವಿ ಎಂದೂ ಕರೆಯಲ್ಪಡುವ ವಿಟಮಿನ್ ಸಿ ಕೊರತೆಯು ಚರ್ಮದ ಗಾಯಗಳಿಗೆ ಕಾರಣವಾಗಬಹುದು.

ಇದನ್ನೂ ಓದಿ: ಈ ಜ್ಯೂಸ್ ಕುಡಿಯುವುದರಿಂದ ನಿಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಬಹುದು

ವಿಟಮಿನ್ ಸಿ ಯ ಕೊರತೆಯನ್ನು ಹೇಗೆ ನಿವಾರಿಸಬಹುದು
ವಿಟಮಿನ್ ಸಿ ಉಳ್ಳಂತಹ ಆಹಾರಗಳನ್ನು ಹೆಚ್ಚಾಗಿ ಸೇವಿಸಿ ಈ ಮೇಲೆ ನೀಡಿದ ಎಲ್ಲ ರೋಗಗಳಿಂದ ದೂರವಿರಬಹುದು. ಸಿಟ್ರಸ್ ಹಣ್ಣುಗಳು, ವಿಟಮಿನ್ ಸಿ ಸಮೃದ್ಧವಾಗಿರುವ ತರಕಾರಿಗಳನ್ನು ಸೇವಿಸಬೇಕು. ನೀವು ಧೂಮಪಾನ ಮಾಡುತ್ತಿದ್ದರೆ ಮೊದಲು ಅದನ್ನು ಬಿಡಬೇಕು, ಏಕೆಂದರೆ ಇದು ದೇಹದಲ್ಲಿ ವಿಟಮಿನ್ ಸಿ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ಸಾಬೀತುಪಡಿಸಿವೆ.
Published by:Anitha E
First published: