Vitamin B3: ದೇಹಕ್ಕೆ ಯಾಕೆ ವಿಟಮಿನ್ ಬಿ3 ಬಹಳ ಅವಶ್ಯಕ? ಕಮ್ಮಿ ಆದ್ರೆ ಈ ಸಮಸ್ಯೆಗಳು ಗ್ಯಾರಂಟಿ

ವಿಟಮಿನ್ ಬಿ 3 ದೇಹಕ್ಕೆ ಯಾಕೆ ಅತೀ ಅವಶ್ಯಕ ಆಗಿದೆ. ನಿಯಾಸಿನ್ ನೀರಿನಲ್ಲಿ ಕರಗುತ್ತದೆ. ಮತ್ತು ಹೆಚ್ಚಿನ ಪ್ರಮಾಣದಲ್ಲಿ ಮೂತ್ರದ ಮೂಲಕ ಹೊರಗೆ ಹಾಕಲ್ಪಡುತ್ತದೆ. ನಿಯಾಸಿನ್ ದೇಹದಲ್ಲಿ ಕಿಣ್ವದಂತೆ ಕೆಲಸ ಮಾಡುತ್ತದೆ. ಇದು ಪೋಷಕಾಂಶಗಳನ್ನು ಶಕ್ತಿಯನ್ನಾಗಿ ಪರಿವರ್ತನೆ ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ದೇಹದ (Body) ಉತ್ತಮ ಕಾರ್ಯ ನಿರ್ವಹಣೆಗೆ ಪ್ರೋಟೀನ್ (Protein), ಕ್ಯಾಲ್ಸಿಯಂ (Calcium), ವಿಟಮಿನ್, ಖನಿಜ ಮತ್ತು ವಿಟಮಿನ್ ಸಿ ಯಂತಹ ಪೋಷಕಾಂಶಗಳು ತುಂಬಾ ಅವಶ್ಯಕವಾಗಿ ಬೇಕು. ಅದೇ ರೀತಿ ವಿಟಮಿನ್ ಬಿ 3 (Vitamin B 3) ಸಹ ದೇಹಕ್ಕೆ ತುಂಬಾ ಅಗತ್ಯ ಆಗಿದೆ. ವಿಟಮಿನ್ ಬಿ 3 ನ್ನು ನಿಯಾಸಿನ್ ಎಂದೂ ಕರೆಯುತ್ತಾರೆ. ವಿಟಮಿನ್ B3, ನೀರಿನಲ್ಲಿ ಕರಗುವ B ವಿಟಮಿನ್ ಆಗಿದೆ. ಕೆಲವು ಆಹಾರ ಮತ್ತು ಪಾನೀಯಗಳಲ್ಲಿ ವಿಟಮಿನ್ ಬಿ 3 ಹೇರಳವಾಗಿ ಕಂಡು ಬರುತ್ತದೆ. ವಿಟಮಿನ್ ಬಿ 3 ವಿಟಮಿನ್ ನ್ನ ನಾವೂ ಪೂರಕವಾಗಿ ಸಹ ಬಳಕೆ ಮಾಡಬಹುದು ಆಗಿದೆ.

  ವಿಟಮಿನ್ ಬಿ 3 ದೇಹಕ್ಕೆ ಯಾಕೆ ಅತೀ ಅವಶ್ಯಕ?

  ವಿಟಮಿನ್ ಬಿ 3 ದೇಹಕ್ಕೆ ಯಾಕೆ ಅತೀ ಅವಶ್ಯಕ ಆಗಿದೆ? ನಿಯಾಸಿನ್ ನೀರಿನಲ್ಲಿ ಕರಗುತ್ತದೆ. ಮತ್ತು ಹೆಚ್ಚಿನ ಪ್ರಮಾಣದಲ್ಲಿ ಮೂತ್ರದ ಮೂಲಕ ಹೊರಗೆ ಹಾಕಲ್ಪಡುತ್ತದೆ. ನಿಯಾಸಿನ್ ದೇಹದಲ್ಲಿ ಕಿಣ್ವದಂತೆ ಕೆಲಸ ಮಾಡುತ್ತದೆ. ಇದು ಪೋಷಕಾಂಶಗಳನ್ನು ಶಕ್ತಿಯನ್ನಾಗಿ ಪರಿವರ್ತನೆ ಮಾಡುತ್ತದೆ.

  ಕೊಲೆಸ್ಟ್ರಾಲ್ ಮತ್ತು ಕೊಬ್ಬನ್ನು ನಿರ್ಮಿಸಲು ಇದು ಸಹಾಯ ಮಾಡುತ್ತದೆ. ಡಿಎನ್ಎ ನಿರ್ಮಿಸಲು ಮತ್ತು ಸರಿಪಡಿಸಲು ಮತ್ತು ಉತ್ಕರ್ಷಣ ನಿರೋಧಕ ಪರಿಣಾಮ ಬೀರಲು ಇದು ಸಹಾಯ ಮಾಡುತ್ತದೆ. ವಿಟಮಿನ್ ಬಿ 3 ಕೊರತೆಯ ಅನಾನುಕೂಲತೆಗಳು ಯಾವುವು ಎಂಬುದನ್ನು ತಿಳಿಯುವುದು ತುಂಬಾ ಮುಖ್ಯ.

  ಇದನ್ನೂ ಓದಿ: ಋತುಚಕ್ರ ನಿಲ್ಲುವ ಸಮಯದಲ್ಲಿ ನಿಮ್ಮ ಚರ್ಮದ ಆರೈಕೆ ಹೀಗಿದ್ದರೆ ಚೆಂದ

  ದೇಹದಲ್ಲಿ ವಿಟಮಿನ್ ಬಿ 3 ಕೊರತೆಯಿದ್ದರೆ ವ್ಯಕ್ತಿಯು ಒತ್ತಡ, ತಲೆನೋವು, ಆಯಾಸ, ಮೆಮೊರಿ ನಷ್ಟ ಸಮಸ್ಯೆ ಎದುರಿಸುತ್ತಾನೆ. ಈ ರೋಗ ಲಕ್ಷಣಗಳನ್ನು ತಪ್ಪಿಸಲು ನೀವು ವಿಟಮಿನ್ ಬಿ 3 ಸಮೃದ್ಧ ಆಹಾರ ಪದಾರ್ಥಗಳ ಸೇವನೆ ಮಾಡುವುದು ತುಂಬಾ ಮುಖ್ಯ ಆಗಿದೆ.

  ದಿನಕ್ಕೆ ಎಷ್ಟು ಪ್ರಮಾಣದಲ್ಲಿ ವಿಟಮಿನ್ ಬಿ 3 ಅತ್ಯಂತ ಅವಶ್ಯಕವಾಗಿದೆ?

  ಹಾರ್ವರ್ಡ್ ಆರೋಗ್ಯದ ಪ್ರಕಾರ, ನಿಯಾಸಿನ್ ಅನ್ನು ಮಿಲಿ ಗ್ರಾಂಗಳಲ್ಲಿ ಅಳೆತೆ ಮಾಡಲಾಗುತ್ತದೆ. ಒಂದು NE 1 ಮಿಗ್ರಾಂ ನಿಯಾಸಿನ್ ಅಥವಾ 60 ಮಿಗ್ರಾಂ ಟ್ರಿಪ್ಟೊಫಾನ್‌ಗೆ ಸಮಾನ ಆಗಿರುತ್ತದೆ.

  19 ವರ್ಷಕ್ಕಿಂತ ಮೇಲ್ಪಟ್ಟ ಪುರುಷರಿಗೆ 16 ಮಿಲಿ ಗ್ರಾಂ,

  ಮಹಿಳೆಯರಿಗೆ 14 ಮಿಲಿ ಗ್ರಾಂ,

  ಗರ್ಭಿಣಿಯರಿಗೆ 18 ಮಿಲಿ ಗ್ರಾಂ

  ಹಾಲುಣಿಸುವ ಮಹಿಳೆಯರಿಗೆ 17 ಮಿಲಿ ಗ್ರಾಂ ಅಗತ್ಯವಿದೆ.

  ವಿಟಮಿನ್ ಬಿ3 ಯಾವ ಆಹಾರ ಪದಾರ್ಥಗಳಲ್ಲಿ ಕಂಡು ಬರುತ್ತದೆ?

  ಗೋಮಾಂಸ ಯಕೃತ್ತು, ಹಂದಿಮಾಂಸ, ಕೆಂಪು ಮಾಂಸ, ಚಿಕನ್, ಮೀನು, ಕಂದು ಅಕ್ಕಿ, ಧಾನ್ಯಗಳು ಮತ್ತು ಬ್ರೆಡ್, ಬೀಜಗಳು, ದ್ವಿದಳ ಧಾನ್ಯಗಳು, ಬಾಳೆಹಣ್ಣುಗಳಲ್ಲಿ ಕಂಡು ಬರುತ್ತದೆ.

  ವಿಟಮಿನ್ ಬಿ 3 ಕೊರತೆಯ ಅನಾನುಕೂಲತೆಗಳು

  ವಿಟಮಿನ್ B3 ಕೊರತೆಯು ನಿಮಗೆ ಅನೇಕ ರೀತಿಯಲ್ಲಿ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ. ಇದು ಖಿನ್ನತೆ, ತಲೆನೋವು, ಆಯಾಸ, ಜ್ಞಾಪಕ ಶಕ್ತಿ ನಷ್ಟ ಮತ್ತು ಭ್ರಮೆ ಸೇರಿದಂತೆ ಕೆಲವು ಸಮಸ್ಯೆ ಉಂಟು ಮಾಡುತ್ತದೆ.

  ವಿಟಮಿನ್ ಬಿ 3 ಕೊರತೆಯ ಗಂಭೀರ ಅನಾನುಕೂಲತೆಗಳು

  ದೇಹದಲ್ಲಿ ವಿಟಮಿನ್ ಬಿ 3 ನ ಅತಿಯಾದ ಕೊರತೆ ಅನೇಕ ಗಂಭೀರ ಸಮಸ್ಯೆ ಉಂಟು ಮಾಡಬಹುದು. ಇದರ ಕೊರತೆಯು ಪೆಲ್ಲಾಗ್ರಾಕ್ಕೆ ಕಾರಣ ಆಗಬಹುದು. ಇದು ಸೂರ್ಯನ ಬೆಳಕಿಗೆ ಒಡ್ಡಿಕೊಂಡ ಚರ್ಮದ ಪ್ರದೇಶಗಳಲ್ಲಿ ಕೆಲವೊಮ್ಮೆ ಗಾಢವಾದ, ಚಿಪ್ಪುಗಳಂತಹ ದದ್ದುಗಳು ಉಂಟು ಮಾಡುವ ಸ್ಥಿತಿ. ಕೆಂಪು ನಾಲಿಗೆ, ಮಲಬದ್ಧತೆ ಮತ್ತು ಅತಿಸಾರ ತೊಂದರೆ ಉಂಟಾಗುತ್ತವೆ.

  ವಿಟಮಿನ್ ಬಿ ಕೊರತೆಯ ಅಪಾಯ ಯಾರಲ್ಲಿ ಹೆಚ್ಚು ಕಂಡು ಬರುತ್ತದೆ?

  ತಮ್ಮ ಆಹಾರದಿಂದ ಎಲ್ಲಾ ಪೋಷಕಾಂಶ ಪಡೆಯದ ಜನರು, ಹೆಚ್ಚು ಆಲ್ಕೊಹಾಲ್ ಸೇವಿಸುವ ಜನರು ಅಥವಾ ಕಾರ್ಸಿನಾಯ್ಡ್ ಸಿಂಡ್ರೋಮ್‌ನಿಂದ ಬಳಲುತ್ತಿರುವ ಜನರು ಅಪಾಯದಲ್ಲಿದ್ದಾರೆ. ಇದು ಕರುಳಿನಲ್ಲಿ ನಿಧಾನವಾಗಿ ಬೆಳೆಯುವ ಕ್ಯಾನ್ಸರ್ ಕೋಶಗಳ ಕಾಯಿಲೆ ಆಗಿದೆ. ಅದು ಸೆರೊಟೋನಿನ್ ಎಂಬ ರಾಸಾಯನಿಕ ಬಿಡುಗಡೆ ಮಾಡುತ್ತದೆ.

  ಇದನ್ನೂ ಓದಿ: ಹೊಳೆಯುವ ಚರ್ಮ ಕಾಪಾಡಿಕೊಳ್ಳಬೇಕೇ? ಹಾಗಾದ್ರೆ ಕೊತ್ತಂಬರಿ ಮತ್ತು ನಿಂಬೆ ರಸ ಹೀಗೆ ಬಳಸಿ!

  ಹೆಚ್ಚು ವಿಟಮಿನ್ ಬಿ 3 ಸೇವಿಸಿದರೆ ಏನಾಗುತ್ತದೆ?

  ವಿಟಮಿನ್ ಬಿ 3 ಯನ್ನು ಆಹಾರ ಮತ್ತು ಪಾನೀಯದಿಂದ ಪಡೆಯಬೇಕು. ದೀರ್ಘಾವಧಿಯ ಮಿತಿ ಮೀರಿದ ಸೇವನೆಯು ತುರಿಕೆ ಅಥವಾ ಜುಮ್ಮೆನಿಸುವಿಕೆ, ಮುಖ, ತೋಳು ಮತ್ತು ಎದೆಯ ಮೇಲೆ ಕೆಂಪು ದದ್ದುಗೆ ಕಾರಣವಾಗುತ್ತದೆ. ದೌರ್ಬಲ್ಯ, ಕಡಿಮೆ ರಕ್ತದೊತ್ತಡ, ಆಯಾಸ, ತಲೆನೋವು, ವಾಕರಿಕೆ ಮತ್ತು ದೃಷ್ಟಿ ಮಂದ ಉಂಟು ಮಾಡುತ್ತದೆ.
  Published by:renukadariyannavar
  First published: