• Home
  • »
  • News
  • »
  • lifestyle
  • »
  • Vitamin Deficiency: ಬೆನ್ನು ನೋವಿಗೆ ಈ ವಿಟಮಿನ್ ಕೊರತೆಯೂ ಕಾರಣವಂತೆ

Vitamin Deficiency: ಬೆನ್ನು ನೋವಿಗೆ ಈ ವಿಟಮಿನ್ ಕೊರತೆಯೂ ಕಾರಣವಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದೇಹದಲ್ಲಿ ವಿಟಮಿನ್ ಬಿ12 ಕೊರತೆ ಬೆನ್ನು ನೋವಿಗೆ ಕಾರಣವಾಗುತ್ತದೆ. ದೇಹದ ಸರಿಯಾಗಿ ಕೆಲಸ ಮಾಡಲು ಜೀವಸತ್ವಗಳು ಮತ್ತು ಖನಿಜಗಳು ಬಹಳ ಮುಖ್ಯ. ಅವುಗಳ ಕೊರತೆ ದೇಹದ ಕಾರ್ಯ ನಿರ್ವಹಣೆಗೆ ಅಡಚಣೆ ಉಂಟು ಮಾಡುತ್ತದೆ.

  • Share this:

    ವಯಸ್ಸಾಗುತ್ತಿದ್ದಂತೆ (Age) ಹಲವು ಆರೋಗ್ಯ ಸಮಸ್ಯೆಗಳು (Health Problems) ಕಾಡುತ್ತವೆ. ಅದರಲ್ಲಿ ಒಂದು ಬೆನ್ನು ನೋವು (Back Pain). ಯಾವುದೇ ಕೆಲಸವಿರಲಿ ಬೆನ್ನು ನೋವು ತುಂಬಾ ಬಾಧಿಸುತ್ತದೆ. ವಯಸ್ಸಾದ ಮೇಲೆ ದಿನವಿಡೀ ಒಂದೇ ಸ್ಥಳದಲ್ಲಿ ಕೆಲಸ (Work) ಮಾಡಿದರೆ ಬೆನ್ನು ನೋವು ಬಂದೇ ಬರುತ್ತದೆ. ಕಾಡುವ ಬೆನ್ನು ನೋವು ಸಾಕಷ್ಟು ತೊಂದರೆ ಉಂಟು ಮಾಡುತ್ತದೆ. ನೋವು, ಸಂತಸವನ್ನೇ ಕಸಿಯುತ್ತದೆ. ಇತ್ತೀಚಿನ ದಿನಗಳಲ್ಲಿ ತುಂಬಾ ಜನರು ಬೆನ್ನು ನೋವು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬೆನ್ನುನೋವಿನಿಂದ ಬಳಲುತ್ತಿರುವ ಬಹುತೇಕ ಎಲ್ಲಾ ಜನರು ಇದ್ಯಾವ ಜನ್ಮದ ಕರ್ಮವೋ ಅಂತಾ ಗೊಣಗುತ್ತಾರೆ. ಇದರ್ಥ ಬೆನ್ನು ನೋವು ಅಷ್ಟೊಂದು ಕೆಟ್ಟದಾಗಿರುತ್ತದೆ.


    ವಿಟಮಿನ್ ಕೊರತೆಯಿಂದಲೂ ಬರುತ್ತೆ ಬೆನ್ನು ನೋವು


    ಬೆನ್ನು ನೋವು ಕೇವಲ ದಪ್ಪ ಇದ್ದವರಲ್ಲಿ, ದೀರ್ಘಕಾಲ ಒಂದೇ ಕಡೆ ಕುಳಿತು ಕೆಲಸ ಮಾಡುವವರು, ಹೆಚ್ಚು ದೈಹಿಕ ಚಟುವಟಿಕೆ ಇಲ್ಲದವರು ಹೀಗೆ ಈ ಕಾರಣಗಳಿಂದ ಮಾತ್ರ ಬೆನ್ನು ನೋವು ಬರುತ್ತದೆ ಅನ್ನೋ ಕಾರಣವಷ್ಟೇ ಅಲ್ಲದೇ, ಕೆಲವು ಬೇರೆ ಕಾರಣಗಳಿಂದಲೂ ಬರುತ್ತದೆ. ಅದರಲ್ಲಿ ವಿಟಮಿನ್ ಕೊರತೆಯೂ ಬೆನ್ನು ನೋವಿಗೆ ಕಾರಣ ಅಂತಾರೆ ತಜ್ಞರು.


    ದೇಹದಲ್ಲಿ ವಿಟಮಿನ್ ಬಿ12 ಕೊರತೆ ಬೆನ್ನು ನೋವಿಗೆ ಕಾರಣವಾಗುತ್ತದೆ. ದೇಹದ ಸರಿಯಾಗಿ ಕೆಲಸ ಮಾಡಲು ಜೀವಸತ್ವಗಳು ಮತ್ತು ಖನಿಜಗಳು ಬಹಳ ಮುಖ್ಯ. ಅವುಗಳ ಕೊರತೆ ದೇಹದ ಕಾರ್ಯ ನಿರ್ವಹಣೆಗೆ ಅಡಚಣೆ ಉಂಟು ಮಾಡುತ್ತದೆ.




    ಹಾಗಾಗಿ ಅವುಗಳನ್ನು ಆಹಾರದಲ್ಲಿ ಸರಿಯಾದ ಪ್ರಮಾಣದಲ್ಲಿ ಸೇವಿಸುವುದು ತುಂಬಾ ಮುಖ್ಯ. ಆಗ ಅದಕ್ಕೆ ಸಂಬಂಧಿಸಿದ ಸಮಸ್ಯೆ ನಿವಾರಿಸಬಹುದು.


    ಬೆನ್ನು ನೋವಿಗೆ ಪರಿಹಾರವಾಗಿ ನೀವು ವಿಟಮಿನ್ ಬಿ 12 ಅನ್ನು ನಿಮ್ಮ ಆಹಾರದಲ್ಲಿ ಸೇರಿಸುವ ಮೊದಲು ಇದರ ಬಗ್ಗೆ ತಿಳಿಯುವುದು ಮುಖ್ಯ.


    ವಿಟಮಿನ್ ಬಿ 12


    ವಿಟಮಿನ್ ಬಿ 12 ಬಿ-ಕಾಂಪ್ಲೆಕ್ಸ್ ಕುಟುಂಬಕ್ಕೆ ಸೇರಿದ ವಿಟಮಿನ್ ಆಗಿದೆ. ರಕ್ತ ಕಣಗಳ ರಚನೆ ಮತ್ತು ರಚನೆ, ಡಿಎನ್ ಎ ಉತ್ಪಾದನೆ ಮತ್ತು ಮೆದುಳಿನ ಕೋಶಗಳ ಒಟ್ಟಾರೆ ನಿರ್ವಹಣೆಗೆ ಇದು ಅತ್ಯಗತ್ಯ.


    ವಿಟಮಿನ್ ಬಿ 12 ದೇಹದ ಬೆನ್ನುಹುರಿಯನ್ನು ಮೆದುಳಿನೊಂದಿಗೆ ಸಂಪರ್ಕಿಸಲು ಸಹಾಯ ಮಾಡುತ್ತದೆ. ಇದು ಉರಿಯೂತ ಕಡಿಮೆ ಮಾಡುತ್ತದೆ. ಇದು ಬೆನ್ನು ನೋವಿಗೆ ಸಾಮಾನ್ಯ ಕಾರಣ ಆಗಿದೆ.


    ಬೆನ್ನು ನೋವು ಮತ್ತು ವಿಟಮಿನ್ ಬಿ 12 ನಡುವಿನ ಸಂಬಂಧವೇನು?


    ವಿಟಮಿನ್ ಬಿ 12 ನರಮಂಡಲವನ್ನು ನಿಯಂತ್ರಿಸಲು ಸಹಕಾರಿ ಆಗಿದೆ. ಇದು ತನ್ನ ಕೆಲಸವನ್ನು ಸರಾಗವಾಗಿ ನಡೆಸಲು ಸಹಕಾರಿ.


    ದೇಹದಲ್ಲಿ ವಿಟಮಿನ್ ಬಿ 12 ಕೊರತೆ ಕಂಡು ಹಿಡಿಯುವುದು ಹೇಗೆ?


    ದೇಹದ ವಿಟಮಿನ್ ಬಿ 12 ಮಟ್ಟವನ್ನು ರಕ್ತ ಪರೀಕ್ಷೆ ಮೂಲಕ ಪತ್ತೆ ಹಚ್ಚಲಾಗುತ್ತದೆ. ದೇಹದಲ್ಲಿನ ಅದರ ಕೊರತೆ ಸರಿದೂಗಿಸಲು ನೀವು ಈ ಪರೀಕ್ಷೆ ಮಾಡಿಸಬೇಕು. ದೇಹದಲ್ಲಿ ವಿಟಮಿನ್ ಬಿ 12 ನ ಸಾಮಾನ್ಯ ಮಟ್ಟವು 200 ರಿಂದ 900 ಮಿಲಿ ನಡುವೆ ಇರಬೇಕು.


    ವಿಟಮಿನ್ ಬಿ 12 ಕೊರತೆಯ ಲಕ್ಷಣಗಳು


    ದೌರ್ಬಲ್ಯ, ಆಯಾಸ, ತ್ವರಿತ ಉಸಿರಾಟ, ಹೆಚ್ಚಿದ ಹೃದಯ ಬಡಿತ, ನಾಲಿಗೆ ನೋವು, ಚರ್ಮ ತೆಳುವಾಗುವುದು, ಒಸಡುಗಳಲ್ಲಿ ರಕ್ತಸ್ರಾವ, ತೂಕ ನಷ್ಟ, ಹೊಟ್ಟೆ ಅಸಮಾಧಾನ, ಮಲಬದ್ಧತೆ ಅಥವಾ ಅತಿಸಾರ ಲಕ್ಷಣಗಳಾಗಿವೆ.


    ಇದನ್ನೂ ಓದಿ: ದಿನಕ್ಕೆ 7 ಗಂಟೆ ನಿದ್ರೆ ಮಾಡಿದರೂ ಸಾಕಾಗ್ತಿಲ್ವಾ? ಈ ಸಮಸ್ಯೆಗೆ ಚಿಕಿತ್ಸೆ ಏನು?


    ವಿಟಮಿನ್ ಬಿ 12 ಕೊರತೆ ಪೂರೈಸುವ ಆಹಾರಗಳು


    ಮೀನು, ಗೋಮಾಂಸ, ಸಾಲ್ಮನ್, ಟ್ಯೂನ ಮೀನು, ಹಾಲಿನ ಉತ್ಪನ್ನಗಳು, ಮೊಟ್ಟೆ ಸೇವಿಸಿ.

    Published by:renukadariyannavar
    First published: