• Home
  • »
  • News
  • »
  • lifestyle
  • »
  • Vitamin A: ಆರೋಗ್ಯಕರ ಸಂತಾನೋತ್ಪತ್ತಿಗೆ ವಿಟಮಿನ್ ಎ! ಇನ್ನೂ ಹಲವು ಪ್ರಯೋಜನ

Vitamin A: ಆರೋಗ್ಯಕರ ಸಂತಾನೋತ್ಪತ್ತಿಗೆ ವಿಟಮಿನ್ ಎ! ಇನ್ನೂ ಹಲವು ಪ್ರಯೋಜನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆರೋಗ್ಯಕರ ಸಂತಾನೋತ್ಪತ್ತಿ ವ್ಯವಸ್ಥೆ ಮತ್ತು ಉತ್ತಮ ಚರ್ಮದ ಆರೋಗ್ಯಕ್ಕೆ ಅವಶ್ಯಕವಾಗಿ ಬೇಕು. ವಿಟಮಿನ್ ಎ ಅನ್ನು ರೆಟಿನಾಲ್ ಎಂದೂ ಕರೆಯುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ರಾತ್ರಿ ಕುರುಡುತನವು ವಿಟಮಿನ್ ಎ ಕೊರತೆಯ ಮೊದಲ ಲಕ್ಷಣಗಳಲ್ಲಿ ಒಂದಾಗಿದೆ.

  • Share this:

    ದೇಹವು (Body) ಸರಿಯಾಗಿ ಕಾರ್ಯ ನಿರ್ವಹಿಸಲು ಅನೇಕ ತರಹದ ಜೀವಸತ್ವಗಳು ಮತ್ತು ಖನಿಜಗಳು (Vitamin and Minerals) ಬೇಕು. ಅಂತಹ ಸ್ಥಿತಿಯಲ್ಲಿ, ದೇಹದಲ್ಲಿ ಜೀವಸತ್ವ ಮತ್ತು ಖನಿಜಗಳ ಪ್ರಮಾಣ (Quantity) ಸಾಕಷ್ಟು ಇಲ್ಲದೇ ಹೋದರೆ ನೀವು ಅನೇಕ ರೀತಿಯ ಆರೋಗ್ಯ (Health) ತೊಂದರೆಗೆ ಗುರಿಯಾಗ ಬೇಕಾಗುತ್ತದೆ. ಹೆಚ್ಚಿನ ಜನರು D ಮತ್ತು C ಯಂತಹ ವಿಟಮಿನ್ ಕೊರತೆಯ ಅಪಾಯ ಹೊಂದಿರುತ್ತಾರೆ. ಇನ್ನು ಕೆಲವರು ವಿಟಮಿನ್ ಎ ಕೊರತೆ ಹೊಂದಿರುತ್ತಾರೆ. ಜೊತೆಗೆ ಅವುಗಳ ಗಂಭೀರ ಪರಿಣಾಮಗಳ ಬಗ್ಗೆ ತಿಳಿದಿರುತ್ತಾರೆ. ಉತ್ತಮ ದೃಷ್ಟಿ ಜೊತೆಗೆ, ವಿಟಮಿನ್ ಎ ಬಲವಾದ ರೋಗ ನಿರೋಧಕ ಶಕ್ತಿಗೆ ವಿಟಮಿನ್ ಎ ಬೇಕು.


    ವಿಟಮಿನ್ ಎ ಕೊರತೆ


    ಆರೋಗ್ಯಕರ ಸಂತಾನೋತ್ಪತ್ತಿ ವ್ಯವಸ್ಥೆ ಮತ್ತು ಉತ್ತಮ ಚರ್ಮದ ಆರೋಗ್ಯಕ್ಕೆ ಅವಶ್ಯಕವಾಗಿ ಬೇಕು. ವಿಟಮಿನ್ ಎ ಅನ್ನು ರೆಟಿನಾಲ್ ಎಂದೂ ಕರೆಯುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ರಾತ್ರಿ ಕುರುಡುತನವು ವಿಟಮಿನ್ ಎ ಕೊರತೆಯ ಮೊದಲ ಲಕ್ಷಣಗಳಲ್ಲಿ ಒಂದಾಗಿದೆ. ಅದರ ತೀವ್ರ ಸ್ವರೂಪಗಳಲ್ಲಿ,


    ವಿಟಮಿನ್ ಎ ಕೊರತೆಯು ರೆಟಿನಾ ಮತ್ತು ಕಾರ್ನಿಯಾಗೆ ಹಾನಿ ಉಂಟು ಮಾಡುತ್ತದೆ. ವಿಟಮಿನ್ ಎ ಕೊರತೆಯಿರುವ ಅಂದಾಜು 250,000–500,000 ಮಕ್ಕಳು ಪ್ರತಿ ವರ್ಷ ದೃಷ್ಟಿಹೀನತೆ ಹೊಂದುತ್ತಾರೆ. ಅವರಲ್ಲಿ ಅರ್ಧದಷ್ಟು ಜನರು ಕುರುಡರಾದ 12 ತಿಂಗಳೊಳಗೆ ಸಾವಿಗೆ ತುತ್ತಾಗುತ್ತಾರೆ.


    ಇದನ್ನೂ ಓದಿ: ಪಿತ್ತ, ಕಫ ಸಮಸ್ಯೆ ನಿವಾರಣೆಗೆ ಮೆಂತ್ಯ ಬೀಜಗಳನ್ನು ಹೀಗೆ ಬಳಸಿದರೆ ಉತ್ತಮ!


    ದೇಹಕ್ಕೆ ದಿನಕ್ಕೆ ಎಷ್ಟು ಪ್ರಮಾಣದಲ್ಲಿ ವಿಟಮಿನ್ ಎ ಬೇಕು?


    ಮೇಯೊ ಕ್ಲಿನಿಕ್ ಪ್ರಕಾರ, ವಯಸ್ಕ ಪುರುಷರಿಗೆ ದಿನಕ್ಕೆ 900 ಮೈಕ್ರೋಗ್ರಾಂ (mcg) ಮತ್ತು ವಯಸ್ಕ ಮಹಿಳೆಯರಿಗೆ 700 mcg ವಿಟಮಿನ್ ಎ ಅಗತ್ಯವಿದೆ. ಅದೇ ಸಮಯದಲ್ಲಿ 1 ರಿಂದ 3 ವರ್ಷ ವಯಸ್ಸಿನ ಮಕ್ಕಳಿಗೆ ದಿನಕ್ಕೆ 2,000 IU ಮತ್ತು 4 ರಿಂದ 8 ವರ್ಷ ವಯಸ್ಸಿನ ಮಕ್ಕಳಿಗೆ 3,000 IU ವಿಟಮಿನ್ ಎ ಅಗತ್ಯವಿದೆ.


    ವಿಟಮಿನ್ ಎ ಕೊರತೆಯಿಂದ ಏನಾಗುತ್ತದೆ?


    ನಿಮ್ಮ ದೇಹವು ವಿಟಮಿನ್ ಎ ಯ ಅವಶ್ಯಕತೆ ಪೂರೈಸದಿದ್ದರೆ, ನೀವು ದೃಷ್ಟಿ ಸಮಸ್ಯೆ ಹೊಂದಬಹುದು. ಪ್ರತಿರಕ್ಷೆಯ ಮಟ್ಟದಲ್ಲಿ ಇಳಿಕೆ ಕಂಡು ಬರಬಹುದು. ಇದು ಬಾಲ್ಯದ ಕುರುಡುತನಕ್ಕೆ ಪ್ರಮುಖ ಕಾರಣವಾಗಿದೆ. ವಿಟಮಿನ್ ಎ ಕೊರತೆಯು ಗರ್ಭಧಾರಣೆ, ಹಾಲುಣಿಸುವಿಕೆ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಮತ್ತು ತಾಯಿಯ ಮರಣವನ್ನು ಸೂಚಿಸುತ್ತದೆ.


    ವಿಟಮಿನ್ ಎ ಕೊರತೆಯ ಚಿಹ್ನೆಗಳು ಚರ್ಮದ ಮೇಲೆ ಗೋಚರಿಸುತ್ತವೆ


    ಚರ್ಮದ ಕೋಶಗಳನ್ನು ನಿರ್ಮಿಸಲು ಮತ್ತು ಸರಿಪಡಿಸಲು ವಿಟಮಿನ್ ಎ ಅಗತ್ಯವಿದೆ. ಇದು ಚರ್ಮದ ಉರಿಯೂತ ತಡೆಯುತ್ತದೆ. ಆದರೆ ನಿಮ್ಮ ದೇಹವು ವಿಟಮಿನ್ ಎ ಕೊರತೆ ಹೊಂದಿದ್ದರೆ, ನೀವು ಚರ್ಮದಲ್ಲಿ ಶುಷ್ಕತೆ,


    ತುರಿಕೆ ಅಥವಾ ಸ್ಕೇಲಿಂಗ್ ಅನುಭವಿಸಬಹುದು. ವಿಟಮಿನ್ ಎ ಕೊರತೆಯು ಎಸ್ಜಿಮಾಗೆ ಕಾರಣ. ಈ ಸ್ಥಿತಿಯು ಚರ್ಮದ ಉರಿಯೂತ, ದದ್ದು, ಚಿಪ್ಪುಗಳುಳ್ಳ ತೇಪೆ, ಹುಣ್ಣು ಮತ್ತು ಗುಳ್ಳೆ ಉಂಟಾಗುತ್ತವೆ.


    ವಿಟಮಿನ್ ಎ ಕೊರತೆ ಅಪಾಯ ಯಾರಿಗಿದೆ?


    ವಿಟಮಿನ್ ಎ ಕೊರತೆ ಪರಿಣಾಮ ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರಲ್ಲಿ ಕಂಡು ಬರುತ್ತದೆ. ವಿಟಮಿನ್ ಎ ಕೊರತೆ ಅಪಾಯ ಹೆಚ್ಚಿಸುವ ಆರೋಗ್ಯ ಪರಿಸ್ಥಿತಿಯಲ್ಲಿ ಹೆಚ್ಚಾಗಿ ಜಠರಗರುಳಿನ ವ್ಯವಸ್ಥೆಯ ರೋಗಗಳಾಗಿವೆ.


    ಇದು ಸಾಕಷ್ಟು ಆಹಾರ ಸೇವನೆಯ ಹೊರತಾಗಿ ವಿಟಮಿನ್ ಎ ಹೀರಿಕೊಳ್ಳುವಿಕೆಗೆ ಅಡ್ಡಿ ಪಡಿಸುತ್ತದೆ. ವಿಟಮಿನ್ ಎ ಕೊರತೆ ಅಪಾಯ ಉದರ ಕಾಯಿಲೆ, ಸಿರೋಸಿಸ್, ಮೇದೋಜ್ಜೀರಕ ಗ್ರಂಥಿಯ ಕೊರತೆ ಮತ್ತು ಪಿತ್ತರಸ ನಾಳದ ಅಸ್ವಸ್ಥತೆ ಉಂಟು ಮಾಡುತ್ತದೆ.


    ಇದನ್ನೂ ಓದಿ: ಪ್ರತಿದಿನ ಹೆಚ್ಚು ಸಕ್ಕರೆ ಸೇವನೆ ಮಾಡುವುದು ಈ ಸಮಸ್ಯೆಗಳಿಗೆ ಕಾರಣವಾಗುತ್ತದೆ


    ವಿಟಮಿನ್ ಎ ವಿವಿಧ ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರಗಳಲ್ಲಿದೆ. ಯಕೃತ್ತು, ಎಣ್ಣೆಯುಕ್ತ ಮೀನು, ಚಿಪ್ಪುಮೀನು ಮತ್ತು ಕಾಡ್ ಲಿವರ್ ನಲ್ಲಿ ವಿಟಮಿನ್ ಎ ಇದೆ. ಸಿಹಿ ಆಲೂಗಡ್ಡೆ, ಕುಂಬಳಕಾಯಿ, ಕ್ಯಾರೆಟ್ ಮತ್ತು ಸ್ಕ್ವ್ಯಾಷ್, ಪಾಲಕ್ ಮತ್ತು ಲೆಟಿಸ್, ಮಾವು, ಪಪ್ಪಾಯಿ, ಹಲಸಿನ ಹಣ್ಣು ಮತ್ತು ಏಪ್ರಿಕಾಟ್‌ಗಳು ವಿಟಮಿನ್ ಎ ಹೊಂದಿವೆ.

    Published by:renukadariyannavar
    First published: