Vitamin A Benefits: ಮಕ್ಕಳಲ್ಲಿನ ವಿಟಮಿನ್ ಎ ಕೊರತೆ ನೀಗಿಸುವ ಆಹಾರಗಳಿವು

ವಿಟಮಿನ್, ಕ್ಯಾಲ್ಸಿಯಂ ಮತ್ತು ಖನಿಜ ಸೇರಿದಂತೆ ಹಲವು ಪೋಷಕಾಂಶಗಳು ಮಕ್ಕಳ ದೈಹಿಕ ಬೆಳವಣಿಗೆ ಮತ್ತು ಆಂತರಿಕ ಆರೋಗ್ಯಕ್ಕೆ ಹಾಗೂ ದೈಹಿಕ ಚಟುವಟಿಕೆ ಮತ್ತು ಸರಿಯಾದ ಬೆಳವಣಿಗೆಗೆ ಅತೀ ಅವಶ್ಯಕವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಇಂದಿನ ಕಾಲದಲ್ಲಿ ಮಕ್ಕಳು (Children’s) ಚಿಕ್ಕ ವಯಸ್ಸಿನಲ್ಲೇ ಹೆಚ್ಚು ಮೊಬೈಲ್ ಗೆ (Mobile) ಅಂಟಿಕೊಳ್ಳುತ್ತಿದ್ದಾರೆ. ಇದರಿಂದ ಮಕ್ಕಳ ಆಟೋಟ, ದೈಹಿಕ ಆರೋಗ್ಯದ (Health) ಮೇಲೆ ಇದು ಹೆಚ್ಚು ಪರಿಣಾಮ (Effect) ಬೀರುತ್ತದೆ. ಅನೇಕ ಚಟುವಟಿಕೆಗಳಿಂದ ಹೊರಗುಳಿಯುತ್ತಿದ್ದಾರೆ ಮಕ್ಕಳು. ಅಂತಹ ಸ್ಥಿತಿಯಲ್ಲಿ ಮಕ್ಕಳಿಗೆ ಸರಿಯಾದ ಪೋಷಣೆಯ ಜೊತೆಗೆ ಚಯಾಪಚಯ ಉತ್ತೇಜಿಸುವ ಪೋಷಣೆಯ ಅಗತ್ಯ ತುಂಬಾ ಇದೆ. ವಿಟಮಿನ್, ಕ್ಯಾಲ್ಸಿಯಂ ಮತ್ತು ಖನಿಜ ಸೇರಿದಂತೆ ಹಲವು ಪೋಷಕಾಂಶಗಳು ಮಕ್ಕಳ ದೈಹಿಕ ಬೆಳವಣಿಗೆ ಮತ್ತು ಆಂತರಿಕ ಆರೋಗ್ಯಕ್ಕೆ ಹಾಗೂ ದೈಹಿಕ ಚಟುವಟಿಕೆ ಮತ್ತು ಸರಿಯಾದ ಬೆಳವಣಿಗೆಗೆ ಅತೀ ಅವಶ್ಯಕವಾಗಿದೆ. ಜೊತೆಗೆ ವಿವಿಧ ಆಂತರಿಕ ಅಂಗಗಳು ಮತ್ತು ಅವುಗಳ ಸುಗಮ ಕಾರ್ಯ ನಿರ್ವಹಣೆಗೆ ಪೋಷಕಾಂಶಗಳು ಸಹಾಯ ಮಾಡುತ್ತವೆ.

  ಮಕ್ಕಳು ಉತ್ತಮ ಜೀವನ ನಡೆಸಲು ಪೋಷಕಾಂಶಗಳು ಹಾಗೂ ವಿಟಮಿನ್ ಬೇಕೇ ಬೇಕು. ವಿಟಮಿನ್ ಎ ಪೋಷಕಾಂಶದ ಬಗ್ಗೆ ಅನೇಕ ಪೋಷಕರು ಚೆನ್ನಾಗಿ ಕಾಳಜಿ ವಹಿಸುತ್ತಾರೆ. ಮತ್ತು ಅವರ ಮಗುವಿಗೆ ಅಗತ್ಯವಿರುವ ವಿಟಮಿನ್ ಎ ಪ್ರಮಾಣ ನೀಡುತ್ತಾರೆ. ವಿಟಮಿನ್ ಎ ಪ್ರಯೋಜನಗಳ ಬಗ್ಗೆ ಇಲ್ಲಿ ತಿಳಿಯೋಣ.

  ಮಕ್ಕಳಲ್ಲಿ ವಿಟಮಿನ್ ಎ ಆರೋಗ್ಯ ಪ್ರಯೋಜನಗಳು

  ಮಕ್ಕಳಿಗೆ ವಿಟಮಿನ್ ಎ ಯ ಪ್ರಯೋಜನಗಳು ಅಸಾಧಾರಣ. ಏಕೆಂದರೆ ಇದು ಮಕ್ಕಳ ಬೆಳವಣಿಗೆಯ ಮೇಲೆ ಹಲವು ವಿಧಗಳಲ್ಲಿ ಪರಿಣಾಮ ಬೀರುತ್ತದೆ. ವಿಟಮಿನ್ ಎ ದೇಹಕ್ಕೆ ಎಷ್ಟೆಲ್ಲಾ ಪ್ರಯೋಜನ ನೀಡುತ್ತದೆ ಎಂದು ಕೆಳಗೆ ನೀಡಲಾಗಿದೆ.

  ಇದನ್ನೂ ಓದಿ: ಮಧ್ಯ ವಯಸ್ಕರರು ಪ್ರತಿದಿನ ಎಷ್ಟು ಹೊತ್ತಿನ ನಿದ್ದೆ ಮಾಡಬೇಕು? ಸಂಶೋಧಕರು ಏನು ಹೇಳುತ್ತಾರೆ?

  - ಬೆಳೆಯುತ್ತಿರುವ ಮಗುವಿನ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ಬಲಪಡಿಸಲು ಸಹಕಾರಿ.

  - ದೇಹದಲ್ಲಿರುವ ವಿವಿಧ ಪೊರೆ ಮತ್ತು ಅಂಗಾಂಶಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ಅವುಗಳನ್ನು ಆರೋಗ್ಯಕರವಾಗಿಡಲು ಸಹಕಾರಿ.

  - ರೆಟಿನಾದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ತೀಕ್ಷ್ಣವಾದ ದೃಷ್ಟಿ ಮತ್ತು ಬಲವಾದ ದೃಷ್ಟಿಯ ಉತ್ತೇಜನಕ್ಕೆ ಸಹಕಾರಿ. (ವಿಟಮಿನ್ ಎ ಅನ್ನು ರೆಟಿನಾಲ್ ಎಂದೂ ಕರೆಯಲಾಗುತ್ತದೆ)

  - ದೇಹದ ಒಳಗೆ ಮತ್ತು ಹೊರಗಿನ ಪ್ರಕ್ರಿಯೆ ತ್ವರಿತವಾಗಿ ಗುಣಪಡಿಸಲು, ಅಂಗಾಂಶ ಪುನರುತ್ಪಾದನೆಗೆ ಸಹಾಯ ಮಾಡುತ್ತದೆ ಮತ್ತು ಗಾಯಗಳನ್ನು ಸಕ್ರಿಯವಾಗಿ ಗುಣಪಡಿಸಲು ಸಹಕಾರಿ .

  - ಸರಿಯಾದ ದೈಹಿಕ ಮತ್ತು ರಚನಾತ್ಮಕ ಬೆಳವಣಿಗೆಗೆ ಮೂಳೆಗಳು, ಹಲ್ಲುಗಳು ಮತ್ತು ವಿವಿಧ ಅಂಗಾಂಶಗಳ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತದೆ.

  ಮಕ್ಕಳಿಗೆ ದೈನಂದಿನ ವಿಟಮಿನ್ ಎ ಸೇವನೆಯ ಅತ್ಯುತ್ತಮ ಮಟ್ಟ

  ವಿಟಮಿನ್ ಎ ಪ್ರಮಾಣವು ಮಗುವಿನಿಂದ ಮಗುವಿಗೆ ಬದಲಾಗುತ್ತದೆ. ಮಕ್ಕಳ ವಯಸ್ಸಿನ ಆಧಾರದ ಮೇಲೆ ಕೆಲವು ಹಂತಗಳನ್ನು ನಿಗದಿಪಡಿಸಲಾಗಿದ್ದು, ಇದರ ಪ್ರಕಾರ ಮಕ್ಕಳಿಗೆ ವಿಟಮಿನ್ ಎ ಪದಾರ್ಥಗಳನ್ನು ಸೇವಿಸಲು ತಿಳಿಸಿ.

  3 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ: ದಿನಕ್ಕೆ 300 ಮೈಕ್ರೋಗ್ರಾಂಗಳಷ್ಟು ವಿಟಮಿನ್ ಎ ಸೇವನೆಯು ಸೂಕ್ತವೆಂದು ಪರಿಗಣಿಸಲಾಗಿದೆ.

  ಕನಿಷ್ಠ 4 ವರ್ಷ ವಯಸ್ಸಿನ ಮತ್ತು 8 ವರ್ಷ ವಯಸ್ಸಿನ ಮಕ್ಕಳಿಗೆ: 400 ಮೈಕ್ರೋಗ್ರಾಂಗಳಷ್ಟು ವಿಟಮಿನ್ ಎ ದೈನಂದಿನ ಸೇವನೆಯನ್ನು ಶಿಫಾರಸು ಮಾಡಲಾಗಿದೆ.

  9 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ: 600 ಮೈಕ್ರೋಗ್ರಾಂಗಳಷ್ಟು ವಿಟಮಿನ್ ಎ ಮಟ್ಟವು ನಿರಂತರ ಬೆಳವಣಿಗೆಗೆ ಅಗತ್ಯವೆಂದು ಪರಿಗಣಿಸಲಾಗಿದೆ.

  ವಿಟಮಿನ್ ಎ ಯಲ್ಲಿ ಸಮೃದ್ಧ ಆಹಾರಗಳು

  ಹಸಿರು ಎಲೆಗಳ ತರಕಾರಿಗಳು: ಕಡು ಹಸಿರು ಬಣ್ಣದ ಅಥವಾ ಗಾಢ ಕೆಂಪು ಅಥವಾ ಕಿತ್ತಳೆ ಬಣ್ಣದ  ಹೆಚ್ಚಿನ ತರಕಾರಿಗಳು ಸಾಮಾನ್ಯವಾಗಿ ವಿಟಮಿನ್ ಎ ಯ ಉತ್ತಮ ಮೂಲವಾಗಿದೆ. ಈ ಕಾರಣದಿಂದಾಗಿ ಮಕ್ಕಳಿಗೆ ಪಾಲಕ್ ತಿನ್ನಲು ಸಲಹೆ ನೀಡಲಾಗುತ್ತದೆ.

  ವಿಟಮಿನ್ ಎ ಸಮೃದ್ಧ ಮತ್ತೊಂದು ತರಕಾರಿ ಕ್ಯಾರೆಟ್: ಬೀಟಾ-ಕ್ಯಾರೋಟಿನ್ ಎಂಬುದು ರೆಟಿನಾಲ್ಗೆ ಪೂರ್ವಗಾಮಿ ಎಂದು ಕರೆಯಲ್ಪಡುವ ವಸ್ತು. ಸಲಾಡ್ ಅಥವಾ ಇತರ ಊಟಗಳಲ್ಲಿ ನಿಯಮಿತವಾಗಿ ಕ್ಯಾರೆಟ್ ಸೇರಿಸುವುದು ಉತ್ತಮ ದೃಷ್ಟಿ ಪಡೆಯಬಹುದು.

  ಮಕ್ಕಳಿಗೆ ಪ್ರತಿದಿನ ಹಾಲು ಕುಡಿಯಲು ಪ್ರೋತ್ಸಾಹಿಸಿ: ಹಾಲಿನಿಂದ ತಯಾರಿಸಿದ ಇತರ ಉತ್ಪನ್ನಗಳಾದ ಚೀಸ್, ಮೊಸರು ಅಥವಾ ಮೊಟ್ಟೆಗಳು ಸಹ ಅತ್ಯುತ್ತಮ ಮೂಲಗಳಾಗಿವೆ.

  ಇದನ್ನೂ ಓದಿ: ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದೀರಾ? ಹಾಗಾದ್ರೆ ಈ 5 ಭಾರತೀಯ ತಿನಿಸುಗಳನ್ನು ಟ್ರೈ ಮಾಡಿ

  ಮಾಂಸಾಹಾರಿಗಳಿಗೆ, ವಿವಿಧ ಮಾಂಸ ಉತ್ಪನ್ನಗಳು, ಮೀನು ಮತ್ತು ಕಾಡ್ ಲಿವರ್ ಎಣ್ಣೆಯನ್ನು ಆರಿಸುವುದರಿಂದ ಅವರ ದೇಹಕ್ಕೆ ವಿಟಮಿನ್ ಎ ದೊರೆಯುತ್ತದೆ.
  Published by:renukadariyannavar
  First published: