• Home
  • »
  • News
  • »
  • lifestyle
  • »
  • Wonder Of Ancient: ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಪ್ರಾಚೀನ ಭಾರತದ ಅದ್ಭುತ ಜಾಗಗಳು

Wonder Of Ancient: ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಪ್ರಾಚೀನ ಭಾರತದ ಅದ್ಭುತ ಜಾಗಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Wonder Of Ancient: ನಮ್ಮ ಭಾರತದಲ್ಲಿ (India) ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಅದೆಷ್ಟೋ ಅದ್ಭುತ ತಾಣಗಳಿವೆ. ಅದರಲ್ಲೂ ಪ್ರಾಚೀನ ಭಾರತ ಅನ್ನೋದು ಜ್ಞಾನವನ್ನು, ಶಿಲ್ಪಕಲೆಯನ್ನು, ನಿಸರ್ಗದ ಅದ್ಭುತ ಸೌಂದರ್ಯವನ್ನು, ಕೌಶಲ್ಯವನ್ನು ಒಡಲಲ್ಲಿ ತುಂಬಿಕೊಂಡಿರುವ ದೇಶ.

  • Trending Desk
  • Last Updated :
  • New Delhi, India
  • Share this:

ನಮ್ಮ ಭಾರತದಲ್ಲಿ (India) ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಅದೆಷ್ಟೋ ಅದ್ಭುತ ತಾಣಗಳಿವೆ. ಅದರಲ್ಲೂ ಪ್ರಾಚೀನ ಭಾರತ ಅನ್ನೋದು ಜ್ಞಾನವನ್ನು, ಶಿಲ್ಪಕಲೆಯನ್ನು, ನಿಸರ್ಗದ ಅದ್ಭುತ ಸೌಂದರ್ಯವನ್ನು, ಕೌಶಲ್ಯವನ್ನು ಒಡಲಲ್ಲಿ ತುಂಬಿಕೊಂಡಿರುವ ದೇಶ. ಅದರಲ್ಲೂ ಇಲ್ಲಿನ ಕೆಲವು ಪುರಾತನ ತಾಣಗಳು (Wonder Of Ancient) ಆ ಕಾಲದಲ್ಲೇ ವಿಶ್ವವಿಖ್ಯಾತವಾಗಿದ್ದವು. ಅಲ್ಲದೇ ಈ ಸ್ಥಳಗಳು ನಾಗರಿಕತೆಯ ಬದಲಾವಣೆಯನ್ನು ಕಂಡಿವೆ. ಭಾರತದ ಶ್ರೀಮಂತ ಇತಿಹಾಸವನ್ನು (History) ಸಾರುವ ಇಂತಹ ಕೆಲವು ಅದ್ಭುತ ಸ್ಥಳಗಳ ಬಗ್ಗೆ ನಾವಿಂದು ನಿಮಗೆ ಹೇಳುತ್ತೇವೆ.


ಮಧ್ಯಪ್ರದೇಶದ ಭೀಮ್ಬೆಟ್ಕಾ ರಾಕ್ ಶೆಲ್ಟರ್ಸ್:


ಭಾರತದ ಪ್ರಾಚೀನ, ಐತಿಹಾಸಿಕ ಸ್ಥಳವೆಂದ ಕೂಡಲೇ ನೆನಪಿಗೆ ಬರುವುದು ಭೀಮ್ಬೇಟ್ಕಾ ಬೃಹತ್‌ ಬಂಡೆಗಳು. ಈ ಬೃಹತ್‌ ಕಲ್ಲುಗಳು ಭಾರತದಲ್ಲಿ ಮಾನವ ಜೀವನದ ಆರಂಭಿಕ ಕುರುಹುಗಳನ್ನು ಪ್ರದರ್ಶಿಸುತ್ತದೆ. ಶಿಲಾಯುಗದಲ್ಲಿ ಮಾನವರು ಅಭಿವೃದ್ಧಿ ಹೊಂದುತ್ತಾ ಸಾಗಿದ್ದು ಇಲ್ಲಿಯೇ. ಪ್ಯಾಲಿಯೊಲಿಥಿಕ್ ಮತ್ತು ಮೆಸೊಲಿಥಿಕ್ ಅವಧಿಗಳು ಭೀಮ್ಬೇಟ್ಕಾ ರಾಕ್ ಶೆಲ್ಟರ್ಸ್ ಗಳಲ್ಲಿಯೇ ನಡೆಯಲ್ಪಟ್ಟಿವೆ ಎನ್ನುತ್ತದೆ ಇತಿಹಾಸ.


ಕೊಂಕಣದ ಪೆಟ್ರೋಗ್ಲಿಫ್ಸ್, ಕೊಂಕಣ ಬೆಲ್ಟ್‌: 


ಇದು ಮತ್ತೊಂದು ಐತಿಹಾಸಿಕ ಸ್ಥಳವಾಗಿದೆ. ಇದು, ಮೆಸೊಲಿಥಿಕ್ ಅವಧಿಗಿಂತ ಹಿಂದಿನದು ಎನ್ನಲಾಗುತ್ತದೆ. ಕೊಂಕಣದ ಪೆಟ್ರೋಗ್ಲಿಫ್ಸ್ ಅಥವಾ ಜಿಯೋಗ್ಲಿಫ್ಸ್ ನಲ್ಲಿ ಬಹಳ ಹಿಂದೆಯೇ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನು ಚಿತ್ರಿಸಲಾಗಿತ್ತು. ಮಹಾರಾಷ್ಟ್ರದ ಕಶೇಲಿ, ರುಂಧ್ಯೆ ತಾಳಿ, ದೇವಾಚೆ ಗೋಠಾನೆ, ಬರ್ಸು, ದೇವಿ ಹಸೋಲ್, ಜಂಭರುನ್, ಕುಡೋಪಿ ಮತ್ತು ಉಕ್ಷಿ ಮತ್ತು ಗೋವಾದ ಪನ್ಸಾಯ್ಮೋಲ್ ಈ ಶಿಲಾಕೃತಿಗಳನ್ನು ಕಂಡುಹಿಡಿದಂತಹ ಸ್ಥಳಗಳಾಗಿವೆ. ಇಲ್ಲಿ ಇಂತಹ 70 ಕ್ಕೂ ಹೆಚ್ಚು ಸ್ಥಳಗಳಿವೆ.


ಲೋಥಲ್, ಗುಜರಾತ್‌:


ಸುಮಾರು 4400 ವರ್ಷಗಳ ಹಿಂದೆ, ಗುಜರಾತ್‌ ನ ಲೋಥಾಲ್ ಪ್ರಾಚೀನ ಸಿಂಧೂ ಕಣಿವೆ ನಾಗರಿಕತೆಯ ಗಲಭೆಯ ಬಂದರು ಪಟ್ಟಣವಾಗಿತ್ತು. ಸಿಂಧೂ ಕಣಿವೆ ನಾಗರಿಕತೆಯ ಏಕೈಕ ಬಂದರು ಪಟ್ಟಣವಾಗಿರುವುದರಿಂದ, ಲೋಥಾಲ್ ಆಗ ಆರ್ಥಿಕವಾಗಿ ನಿರ್ಣಾಯಕವಾಗಿತ್ತು ಎಂದು ಹೇಳಬಹುದು.


ಇದನ್ನೂ ಓದಿ: Raw Onion: ಈರುಳ್ಳಿಯನ್ನು ಹಸಿಯಾಗಿ ತಿನ್ನುತ್ತೀರಾ? ಈ ಅಭ್ಯಾಸ ಯಾವೆಲ್ಲಾ ಸಮಸ್ಯೆಗೆ ಕಾರಣ?


ಕೇರಳದ ಕುಡಕಲ್ಲು ಪರಂಬುವಿನ ಸಮಾಧಿ ಸ್ಥಳ:


ಕೇರಳದ ತ್ರಿಶೂರ್‌ನಲ್ಲಿರುವ ಕುಡಕಲ್ಲು ಪರಂಬು ತಾಣವು ಸುಮಾರು 4000 ವರ್ಷಗಳಿಗಿಂತಲೂ ಹಳೆಯದು. ಚೆರ್ಮನಂಗಾಡ್‌ನಲ್ಲಿ ಈ ಐತಿಹಾಸಿಕ ಮೆಗಾಲಿಥಿಕ್ ಸಮಾಧಿ ಸ್ಥಳವನ್ನು ನೀವು ಕಾಣಬಹುದು. 69 ಬೃಹತ್ ಹುಡ್ ಕಲ್ಲುಗಳು ಮತ್ತು ಕಲ್ಲಿನ ವಲಯಗಳು ಸ್ಮಾರಕಗಳ ಈ ತಾಣವನ್ನು ರೂಪಿಸಿವೆ ಎನ್ನುತ್ತದೆ ಇತಿಹಾಸ.


ಮಹಾರಾಷ್ಟ್ರದ ಅಜಂತಾ ಮತ್ತು ಎಲ್ಲೋರಾ ಗುಹೆಗಳು


ಮಹಾರಾಷ್ಟ್ರದ ಅಜಂತಾ ಮತ್ತು ಎಲ್ಲೋರಾದ ರಾಕ್-ಕಟ್ ಸ್ಮಾರಕಗಳು 2500 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದವು ಎನ್ನಲಾಗುತ್ತದೆ. ಅಜಂತಾ ಗುಹೆಗಳು ಎಲ್ಲೋರಾಕ್ಕಿಂತ ಹಳೆಯದಾಗಿದೆ ಮತ್ತು 30 ಬಂಡೆಗಳಿಂದ ಕತ್ತರಿಸಿದ ಬೌದ್ಧ ಗುಹೆಗಳಿಗೆ ನೆಲೆಯಾಗಿದೆ. ಎಲ್ಲೋರಾ ಗುಹೆಗಳು ಅತಿದೊಡ್ಡ ಬಂಡೆಯಿಂದ ಮಾಡಲ್ಪಟ್ಟಿರುವ ಹಿಂದೂ ಗುಹೆ, ದೇವಾಲಯವಾದ ಕೈಲಾಸ ದೇವಾಲಯದ ನೆಲೆಯಾಗಿದೆ. ಅಂದಹಾಗೆ ಈ ಎರಡೂ ತಾಣಗಳು UNESCO ವಿಶ್ವ ಪರಂಪರೆಯ ತಾಣಗಳಾಗಿವೆ.


ಒಡಿಶಾದ ಉದಯಗಿರಿ ಮತ್ತು ಖಂಡಗಿರಿ ಗುಹೆಗಳು:


ಒಡಿಶಾದ ಈ ಗುಹೆಗಳು 2000 ವರ್ಷಗಳಿಗಿಂತಲೂ ಹಳೆಯವು. ಉದಯಗಿರಿ ಮತ್ತು ಖಂಡಗಿರಿಯ ಈ ಗುಹೆಗಳು ಭುವನೇಶ್ವರದ ಹೊರವಲಯದಲ್ಲಿವೆ. ಇವು ಒಡಿಶಾದ(ಮೊದಲಿನ ಹೆಸರು ಕಳಿಂಗ) ಮಹಾಮೇಘವಾಹನ ರಾಜವಂಶದ ರಾಜ ಖಾರವೇಲರಿಂದ ನಿಯೋಜಿಸಲ್ಪಟ್ಟವು. ಅಂದಹಾಗೆ, ಉದಯಗಿರಿ ಮತ್ತು ಖಂಡಗಿರಿಯ ಗುಹೆಗಳನ್ನು ಆಗಿನ ಕಾಲದ ಸಂಚಾರಿ ಜೈನ ವಿದ್ವಾಂಸರಿಗಾಗಿ ನಿರ್ಮಿಸಲಾಗಿತ್ತು.


ಇದನ್ನೂ ಓದಿ: No Internet Zone: ಭಾರತದ ಈ ಪ್ರವಾಸಿ ತಾಣಗಳಲ್ಲಿ ಇಂಟರ್ನೆಟ್ ಇಲ್ಲ!


ಬಿಹಾರದ ನಳಂದದ ಅವಶೇಷಗಳು:


1500 ವರ್ಷಗಳಿಗಿಂತಲೂ ಹಳೆಯದಾದ, ನಳಂದಾ ಒಂದು ಕಾಲದಲ್ಲಿ ವಿಶ್ವವಿಖ್ಯಾತ ಕಲಿಕಾ ಕೇಂದ್ರವಾಗಿತ್ತು. ಇದು ಭಾರತದ ಅತ್ಯಂತ ಹಳೆಯ ವಿಶ್ವವಿದ್ಯಾಲಯವಾಗಿದೆ. ನಳಂದವು ಪ್ರಾಚೀನ ಮಗಧ ಸಾಮ್ರಾಜ್ಯದಲ್ಲಿ ಬೌದ್ಧ ಸನ್ಯಾಸಿಗಳ ವಿಶ್ವವಿದ್ಯಾಲಯವಾಗಿತ್ತು. ಇದು ವಿಶ್ವದ ಮೊದಲ ವಸತಿ ವಿಶ್ವವಿದ್ಯಾಲಯವೂ ಆಗಿತ್ತು ಎನ್ನುವುದು ವಿಶೇಷ.

Published by:shrikrishna bhat
First published: