Vision problem: ದೃಷ್ಟಿ ಸಮಸ್ಯೆ ಇದೆಯೇ? ಹಾಗಾದ್ರೆ ನೀವು ಈ ಕಾಯಿಲೆಗಳಲ್ಲಿ ಒಂದನ್ನು ಹೊಂದಿರಬಹುದು!

ಕಡಿಮೆ ದೃಷ್ಟಿ(Low Eyesight)ಯೊಂದಿಗೆ ಬದುಕುವುದು ಜೀವನ(Life)ದ ಗುಣಮಟ್ಟದ ಮೇಲೆ ಪರಿಣಾಮ ಬೀರುವುದರ ಜೊತೆಗೆ ಕೆಲವು ರೋಗಗಳ (Diseases) ಜೊತೆಯೂ ಸಂಬಂಧ ಹೊಂದಿದೆ.

ಕಣ್ಣು

ಕಣ್ಣು

  • Share this:
ನಮ್ಮ ಕಣ್ಣಿನ ಆರೋಗ್ಯ(Eyes Health)ವು ನಮ್ಮ ಒಟ್ಟಾರೆ ಯೋಗಕ್ಷೇಮಕ್ಕೆ ಕನ್ನಡಿಯಾಗಿದೆ. ನಾವು ನಿಯಮಿತವಾಗಿ ಕಣ್ಣಿನ ತಪಾಸಣೆ (Eyes Test) ಮಾಡಿಸಿಕೊಳ್ಳುವುದು ಮತ್ತು ನಾವು ಅತ್ಯುತ್ತಮ ದೃಷ್ಟಿಯನ್ನು ಹೊಂದಿದ್ದೇವೆ ಎಂದು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ. ಕಣ್ಣುಗಳು ನಮ್ಮ ದೇಹದ ಅತ್ಯಂತ ಸೂಕ್ಷ್ಮ ಭಾಗಗಳಲ್ಲಿ ಒಂದಾಗಿದೆ ಮತ್ತು ನಾವು ದೈನಂದಿನ ಚಟುವಟಿಕೆ ನಡೆಸಲು ಹಾಗೂ ಎಲ್ಲಾ ರೀತಿಯ ಕೆಲಸ ಕಾರ್ಯಗಳಿಗೆ ಕಣ್ಣು ಅಗತ್ಯವಾಗಿ ಬೇಕೇ ಬೇಕು. ಅಲ್ಲದೇ ಕಡಿಮೆ ದೃಷ್ಟಿ(Low Eyesight)ಯೊಂದಿಗೆ ಬದುಕುವುದು ಜೀವನ(Life)ದ ಗುಣಮಟ್ಟದ ಮೇಲೆ ಪರಿಣಾಮ ಬೀರುವುದರ ಜೊತೆಗೆ ಕೆಲವು ರೋಗಗಳ (Diseases) ಜೊತೆಯೂ ಸಂಬಂಧ ಹೊಂದಿದೆ.

ಹೌದು, ದೃಷ್ಟಿಯಲ್ಲಿನ ಸಮಸ್ಯೆಗಳು ಒಬ್ಬರ ರೋಗಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಕಣ್ಣಿನ ದೃಷ್ಟಿ ಸಮಸ್ಯೆ ಇರುವವರು ನೀವು ಈ ಕೆಳಗಿನ ಕಾಯಿಲೆಗಳಲ್ಲಿ ಒಂದನ್ನು ಹೊಂದಿರಬಹುದು. ಹಾಗಾದರೆ ದೃಷ್ಟಿ ಸಮಸ್ಯೆಯು ಯಾವೆಲ್ಲಾ ರೋಗಗಳ ಗುಣಲಕ್ಷಣ ತೋರಿಸುತ್ತದೆ ಎಂಬ ವಿವರ ಹೀಗಿದೆ.

1)ಕ್ಯಾನ್ಸರ್

ಮಾರಕ ಕ್ಯಾನ್ಸರ್ ರೋಗದ ಲಕ್ಷಣಗಳು ಕಣ್ಣಿನ ಸಮಸ್ಯೆ ಜೊತೆ ತಳಕು ಹಾಕಿಕೊಂಡಿದೆ. ದೃಷ್ಟಿ ಕಡಿಮೆಯಾಗುವುದು, ತೇಲುವಿಕೆ ಮತ್ತು ಕಣ್ಣುಗುಡ್ಡೆಗಳ ಉಬ್ಬುವಿಕೆಯನ್ನು ಈ ರೋಗದ ಲಕ್ಷಣಗಳು ಒಳಗೊಂಡಿರುತ್ತದೆ. ಕ್ಯಾನ್ಸರ್ ಗಡ್ಡೆಗಳು ದೇಹದ ಬೇರೆ ಭಾಗಗಳಲ್ಲಿ ಉಂಟಾದಂತೆ ಕಣ್ಣಿನಲ್ಲೂ ಸಂಭವಿಸಬಹುದು ಮತ್ತು ಮೇಲ್ಮೈಯಲ್ಲಿ ಅಥವಾ ಕಣ್ಣುಗುಡ್ಡೆಯ ಒಳಗೆ ಕಂಡುಬರುವ ಮೆಲನೋಮವನ್ನು ಉಂಟುಮಾಡಬಹುದು. ದೇಹದ ಇತರ ಭಾಗಗಳಿಂದ ಮೆಟಾಸ್ಟಾಟಿಕ್ ಟ್ಯೂಮರ್ ಕಣ್ಣನ್ನು ತಲುಪುವುದರಿಂದ ಕಣ್ಣುಗಳು ಉಬ್ಬುವುದು ಉಂಟಾಗುತ್ತದೆ.

ಇದನ್ನೂ ಓದಿ:  Eggs Side Effects: ಅತಿಯಾದ ಮೊಟ್ಟೆ ಸೇವನೆ ಶುಗರ್, ಹೃದಯಾಘಾತಕ್ಕೆ ಕಾರಣವಾಗುತ್ತೆ.. ಸರಿಯಾಗಿ ತಿಳಿದುಕೊಳ್ಳಿ

2)ಮಧುಮೇಹ

ಹಠಾತ್ ಮಸುಕಾದ ದೃಷ್ಟಿ ಮಧುಮೇಹ ಟೈಪ್ 1 ಮತ್ತು 2 ಅನ್ನು ಸೂಚಿಸುತ್ತದೆ. ಸರಿಯಾದ ಚಿಕಿತ್ಸೆಯನ್ನು ಮಾಡದಿದ್ದರೆ, ಇದು ಡಯಾಬಿಟಿಕ್ ರೆಟಿನೋಪತಿಗೆ ಕಾರಣವಾಗಬಹುದು. ಶಾಶ್ವತ ಕುರುಡುತನದ ಈ ಪ್ರಮುಖ ಕಾರಣ ರೆಟಿನಾದ ಕ್ಯಾಪಿಲ್ಲರಿಗಳ ಹಾನಿಯಿಂದ ಉಂಟಾಗುತ್ತದೆ. ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳದಿರುವುದು ದೈನಂದಿನ ಜೀವನದಲ್ಲಿ ಅನಿರೀಕ್ಷಿತ ಸಮಸ್ಯೆಗಳನ್ನು ಉಂಟುಮಾಡಬಹುದು.

3)ಬಹು ಅಂಗಾಂಶ ಗಟ್ಟಿಯಾಗುವ ರೋಗ

ನೀವು ಹಠಾತ್ ತೀವ್ರವಾದ ಕಣ್ಣಿನ ನೋವು, ದೃಷ್ಟಿ ಕಳೆದುಕೊಳ್ಳುವುದು ಅಥವಾ ನೋಡುವಾಗ ಕಪ್ಪು ಕಲೆಗಳನ್ನು ಅನುಭವಿಸಿದರೆ, ಇವುಗಳು ಮಲ್ಟಿಪಲ್ ಸ್ಕ್ಲೆರೋಸಿಸ್ ಸ್ಥಿತಿಯನ್ನು ಸೂಚಿಸಬಹುದು. ನೀವು ಈ ಯಾವುದೇ ರೋಗಲಕ್ಷಣಗಳನ್ನು ಅನುಭವಿಸಿದರೆ, ಅದನ್ನು ನರವಿಜ್ಞಾನಿಗಳಿಂದ ಪರೀಕ್ಷಿಸಿ.
ಸ್ಥಿತಿಯ ಪ್ರಕಾರವನ್ನು ನಿರ್ಧರಿಸಲು ಮತ್ತು ಚಿಕಿತ್ಸೆಯನ್ನು ನಿರ್ಧರಿಸಲು ಅವರು ಮೆದುಳು ಮತ್ತು ಬೆನ್ನುಮೂಳೆಯ MRI ಮತ್ತು ರಕ್ತ ಪರೀಕ್ಷೆಗಳನ್ನು ಶಿಫಾರಸ್ಸು ಮಾಡುತ್ತಾರೆ.

4)ಆಟೋಇಮ್ಯೂನ್ ರೋಗ

ಕಣ್ಣಿನ ಸ್ವಯಂಚಾಲಿತ ಶುಷ್ಕತೆಯು ಆಗಾಗ್ಗೆ ಸ್ವಯಂ ನಿರೋಧಕ ಕಾಯಿಲೆಗಳಾದ ರುಮಟಾಯ್ಡ್ ಸಂಧಿವಾತ, ಸ್ಜೋಗ್ರೆನ್ಸ್ ಸಿಂಡ್ರೋಮ್, ಉರಿಯೂತದ ಕರುಳಿನ ಕಾಯಿಲೆ ಅಥವಾ ಆಕ್ಯುಲರ್ ಸಿಕಾಟ್ರಿಶಿಯಲ್ ಪೆಂಫಿಗೋಯಿಡ್ ಮುಂತಾದ ರೋಗಗಳ ಆರಂಭಿಕ ಲಕ್ಷಣವಾಗಿದೆ. ಈ ರೀತಿ ಕಣ್ಣಿನ ಶುಷ್ಕತೆಗೆ ಚಿಕಿತ್ಸೆ ನೀಡಲು ಡ್ರಾಪ್ಸ್ ಮತ್ತು ಜೆಲ್‌ಗಳನ್ನು ಬಳಸಲಾಗುತ್ತದೆ ಮತ್ತು ಮೇಲಿನ ಯಾವ ರೋಗಗಳಿಂದ ನೀವು ಬಳಲುತ್ತಿರುವಿರಿ ಎಂಬುದರ ಆಧಾರದ ಮೇಲೆ ಇತರ ಔಷಧಿಗಳನ್ನು ಸೂಚಿಸಲಾಗುತ್ತದೆ.

5)ಸ್ಟ್ರೋಕ್

ಕಣ್ಣಿನ ಅಪಧಮನಿಯಲ್ಲಿ ಅಡಚಣೆಯು ದೃಷ್ಟಿ ನಷ್ಟಕ್ಕೆ ಕಾರಣವಾಗಬಹುದು. ಇದು ಸಂಭವಿಸಿದಾಗ ಹೃದಯದ ಸೂಕ್ತ ಪರೀಕ್ಷೆ ತುಂಬಾ ಅವಶ್ಯಕವಾಗಿದೆ ಏಕೆಂದರೆ ಇದು ಹೃದಯರಕ್ತನಾಳದ ಕಾಯಿಲೆಗಳಿಗೆ ಕಾರಣವಾಗಬಹುದು ಮತ್ತು ನಾವು ಅದನ್ನು ಅಸಡ್ಡೆ ಮಾಡಿದ್ದಲ್ಲಿ ಹೃದಯಾಘಾತಕ್ಕೂ ಕಾರಣವಾಗಬಹುದು ಮತ್ತು ಗಂಭೀರ ಪಾರ್ಶ್ವವಾಯು ಸಹ ಉಂಟಾಗಬಹುದು.

ಇದನ್ನೂ ಓದಿ:  Summer Yoga: ಬೇಸಿಗೆಯಲ್ಲಿ ನಿಮ್ಮ ದೇಹವನ್ನು ತಂಪಾಗಿರಿಸಿಕೊಳ್ಳಬೇಕೇ? ಈ 5 ಯೋಗಾಸನಗಳನ್ನು ಮಾಡಿ...

ಹೀಗೆ ಈ ಎಲ್ಲಾ ಕಾಯಿಲೆಗಳು ದೃಷ್ಟಿ ಸಮಸ್ಯೆ ಜೊತೆ ಗುರುತಿಸಿಕೊಂಡಿರುವುದರಿಂದ, ನೀವು ದೀರ್ಘ ಕಾಲದಿಂದ ಕಣ್ಣು ನೋವು, ಉರಿ, ದೃಷ್ಟಿ ಸಮಸ್ಯೆಗಳಿಂದ ಬಳಲುತ್ತಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ. ನಿಯಮಿತ ಕಣ್ಣಿನ ತಪಾಸಣೆಗಳು ಈ ಪರಿಸ್ಥಿತಿಗಳನ್ನು ತಪ್ಪಿಸಲು ಮತ್ತು ಆರಂಭಿಕ ವೈದ್ಯಕೀಯ ಆರೈಕೆಯನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ.
Published by:Mahmadrafik K
First published: