HOME » NEWS » Lifestyle » VIRAT KOHLIS PATERNITY LEAVE FOR ASIS MATCH KNOW THE LAWS FOR PATERNITY LEAVE IN INDIA SESR

paternity leave: ಮಗುವಿನ ಪಾಲನೆಗೆ ಪೆಟರ್ನಿಟಿ ರಜೆ ತೆಗೆದುಕೊಂಡ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ; ಈ ರಜೆ ಬಗ್ಗೆ ಎಷ್ಟು ಗೊತ್ತು?

paternity leave: ವಿರಾಟ್​ ಕೊಹ್ಲಿ ಮಗುವಿಗಾಗಿ ಪೆಟರ್ನಿಟಿ ರಜೆ ಮೊರೆ ಹೋಗುತ್ತಿರುವುದು ಸಾಕಷ್ಟು ತಂದೆಯರ ಹುಬ್ಬೇರಿಸಿದೆ. ಅಲ್ಲದೇ ಈ ಕುರಿತು ಚರ್ಚೆಯನ್ನು ಹುಟ್ಟು ಹಾಕಿದೆ.

Seema.R | news18-kannada
Updated:November 19, 2020, 6:17 PM IST
paternity leave: ಮಗುವಿನ ಪಾಲನೆಗೆ ಪೆಟರ್ನಿಟಿ ರಜೆ ತೆಗೆದುಕೊಂಡ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ; ಈ ರಜೆ ಬಗ್ಗೆ ಎಷ್ಟು ಗೊತ್ತು?
ಅನುಷ್ಕಾ-ವಿರಾಟ್
  • Share this:
ಮೊದಲ ಮಗುವಿನ ನಿರೀಕ್ಷೆಯ ಸಂಭ್ರಮದಲ್ಲಿ ನಟಿ ಅನುಷ್ಕಾ ಶರ್ಮಾ ಮತ್ತು ವಿರಾಟ್​ ಕೊಹ್ಲಿ ಇದ್ದಾರೆ. ಮಗುವಿನ ಆಗಮನಕ್ಕೆ ಸಾಕಷ್ಟು ಕಾತುರತೆ ಹೊಂದಿರುವ ಟೀಂ ಇಂಡಿಯಾ ನಾಯಕ ಇದಕ್ಕಾಗಿ ಪೆರ್ಟನಿಟಿ ರಜೆ (ಪಿತೃತ್ವದ ರಜೆ) ಮೊರೆ ಹೋಗಿದ್ದಾರೆ. ಜನವರಿಯಯಲ್ಲಿ ಆಸ್ಟೇಲಿಯಾ ಮತ್ತು ಭಾರತದ ಟೆಸ್ಟ್​ ಸರಣಿಯಲ್ಲಿ ಮೂರು ನಾಲ್ಕು ಪಂದ್ಯಕ್ಕೆ ಅವರು ಗೈರಾಗಲಿದ್ದಾರೆ. ಈ ಕುರಿತು ಬಿಸಿಸಿಐ ಕೂಡ ಸ್ಪಷ್ಟಪಡಿಸಿದೆ. ಆಡಿಲೇಡ್​ ಪಂದ್ಯದ ನಂತರ ವಿರಾಟ್​ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು. ವಿರಾಟ್​ ಕೊಹ್ಲಿ ಮಗುವಿಗಾಗಿ ಪೆಟರ್ನಿಟಿ ರಜೆ ಮೊರೆ ಹೋಗುತ್ತಿರುವುದು ಸಾಕಷ್ಟು ತಂದೆಯರ ಹುಬ್ಬೇರಿಸಿದೆ. ಅಲ್ಲದೇ ಈ ಕುರಿತು ಚರ್ಚೆಯನ್ನು ಹುಟ್ಟು ಹಾಕಿದೆ. ಆಸೀಸ್​ ಸರಣಿ ಮಹತ್ವದ್ದಾಗಿದ್ದರೂ ವಿರಾಟ್​ ಈ ಸರಣಿಯಿಂದ ಹಿಂದೆ ಸರಿದಿರುವುದು ಕೆಲವರ ಆಕ್ರೋಶಕ್ಕೂ ಕಾರಣವಾಗಿದೆ. ಅಲ್ಲದೇ ಮಾಜಿ ಟೀಂ ಇಂಡಿಯಾ ಕ್ಯಾಪ್ಟನ್​ ಧೋನಿ, ಮಗಳ ಜನನದ ವೇಳೆ ಕ್ರಿಕೆಟ್​ ಆಡುತ್ತಿದ್ದನ್ನು ಕೆಲವರು ನೆನಪಿಸಿದ್ದಾರೆ. ಅದೇನೇ ಇರಲಿ ವಿರಾಟ್​ನ ಈ ನಿರ್ಧಾರದಿಂದ ಈಗ ದೇಶದಲ್ಲಿ ಪಿತೃತ್ವದ ರಜೆ ಮತ್ತೊಮ್ಮೆ ಚರ್ಚೆಯಾಗಿದೆ.

ಮಗುವಿನ ಆರೈಕೆಯಲ್ಲಿ ತಾಯಿಯರಂತೆ ತಂದೆಯರಿಗೂ ಜವಾಬ್ದಾರಿ ಇರುತ್ತದೆ. ಈ ಹಿನ್ನಲೆ ಪಿತೃತ್ವದ ರಜೆ ಬೇಕು ಎಂಬುದು ಹಲವರ ವಾದ. ಇದೇ ಕಾರಣಕ್ಕೆ 2017ರಲ್ಲಿ ಲೋಕಸಭೆಯಲ್ಲಿ ಪಿತೃತ್ವದ ರಜೆ ಕುರಿತು ಮಸೂದೆ ಮಂಡಿಸಲಾಗಿತ್ತು. ಆದರೆ, ಸಂಸತ್ತು ಇದನ್ನು ಅಂಗೀಕರಿಸಿರಲಿಲ್ಲ. ಮಗುವಿನ ಲಾಲನೆ ಪಾನೆಯಲ್ಲಿ ತಂದೆ ಕೂಡ ಸಮಾನ ಪಾಲುದಾರಿಕೆ ಹೊಂದಿದ್ದು, ಅವರಿಗೂ ರಜೆ ನೀಡಬೇಕು ಈ ಹಿನ್ನಲೆ ಸಂಘಟಿತ ಮತ್ತು ಅಸಂಘಟಿತ ವಲಯಗಳ ಕಾರ್ಮಿಕರಿಗೆ ಈ ರಜೆ ನೀಡಲು ಮಸೂದೆ ಜಾರಿಗೆ ತರಬೇಕು ಎಂಬ ಕೂಗುನ್ನು ರಾಜೀವ್​ ಸತವ್​ ಎತ್ತಿದ್ದರು. ಅಲ್ಲದೇ 15 ದಿನಗಳಿಂದ ಮೂರು ತಿಂಗಳ ವರೆಗೆ ಈ ರಜೆ ವಿಸ್ತರಣೆ ಮಾಡಿಕೊಳ್ಳುವ ಅವಕಾಶವನ್ನು ನೀಡಬೇಕು ಎಂದು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿತ್ತು.

ಇದನ್ನು ಓದಿ: ಟ್ರಿಪ್ ಪ್ಲಾನ್ ಮಾಡ್ತಿದ್ದೀರಾ? ಈ ಬಾರಿಯ ಟೂರಿಸಂ ಬಗ್ಗೆ ಫುಲ್ ಡೀಟೆಲ್ಸ್​ಗೆ ಈ ವರದಿ ಓದಿ

1999ರಲ್ಲಿ ಕೇಂದ್ರ ನಾಗರಿಕ ಸೇವೆಗಳ (ರಜೆ) ನಿಯಮ 551 (ಎ) ಮೂಲಕ ಸಾರ್ವಜನಿಕ ಉದ್ಯೋಗಿಗಳಿಗೆ ಪಿತೃತ್ವದ ರಜೆ ನೀಡಲು ಸರ್ಕಾರ ಅವಕಾಶ ನೀಡಿತು. ಎರಡು ಮಕ್ಕಳಿಗೆ ಮಾತ್ರ ಸರ್ಕಾರಿ ನೌಕರ ಈ 15 ದಿನಗಳ ರಜೆ ಪಡೆಯಬಹುದಾಗಿದೆ.
ಕಾರ್ಪೊರೇಟರ್​ ಕಂಪನಿಗಳಲ್ಲೂ ರಜೆ

ಕಾರ್ಪೊರೇಟ್​ ಕಂಪನಿಗಳಲ್ಲಿಯೂ ಕೂಡ ಮಗುವಿನ ಆರೈಕೆಗೆ ಪಿತೃತ್ವದ ರಜೆ ನೀಡುವ ಪರಿಕಲ್ಪನೆ ಚಾಲ್ತಿಯಲ್ಲಿದೆ. ಆದರೆ, ಇಲ್ಲಿ ಕೇವಲ 15 ದಿನಗಳಿಗೆ ಮಾತ್ರ ಈ ರಜೆಯನ್ನು ನೀಡವು ಪದ್ಧತಿ ಅಳವಡಿಸಲಾಗಿದೆ. ಇನ್ನು ಭಾರತದಲ್ಲಿ ಕೇವಲ 5ರಿಂದ 15 ದಿನದವರೆಗೆ ಈ ರಜೆ ಪಡೆಯಬಹುದಾಗಿದೆ.
Published by: Seema R
First published: November 19, 2020, 6:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories