• Home
  • »
  • News
  • »
  • lifestyle
  • »
  • Virat Kohli: ಕಿಂಗ್ ಕೊಹ್ಲಿ ಫೇವರೇಟ್​ ಸಲಾಡ್​ ಇದು, ನೀವೂ ಮನೆಯಲ್ಲಿ ಮಾಡ್ಬೋದು ನೋಡಿ

Virat Kohli: ಕಿಂಗ್ ಕೊಹ್ಲಿ ಫೇವರೇಟ್​ ಸಲಾಡ್​ ಇದು, ನೀವೂ ಮನೆಯಲ್ಲಿ ಮಾಡ್ಬೋದು ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Super Food Salad Recipe: ಸಲಾಡ್​ ಕೇವಲ ರುಚಿಕರ ಮಾತ್ರವಲ್ಲ ಆರೋಗ್ಯಕರ ಕೂಡ. ಇದರಲ್ಲಿರುವ ಸೂಪರ್ ಫುಡ್​ಗಳು ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತದೆ. ಹಾಗಾದ್ರೆ ಈ ಸಲಾಡ್ ಮಾಡುವುದು ಹೇಗೆ? ಇಲ್ಲಿದೆ ನೋಡಿ.

  • Share this:

ಯಾವುದೇ ಪರಿಚಯದ ಅಗತ್ಯವಿಲ್ಲದ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli).  ತಮ್ಮ ಆಟದ ಮೂಲಕ ಕೋಟಿಗಟ್ಟಲೆ ಅಭಿಮಾನಿಗಳನ್ನು (Fans) ಸಂಪಾದಿಸಿದ್ದಾರೆ. ಅಭಿಮಾನಿಗಳಿಗೆ, ತಮ್ಮ ನೆಚ್ಚಿನ ಆಟಗಾರನ ಬಗ್ಗೆ ಯಾವಾಗಲೂ ತಿಳಿದುಕೊಂಡಿರಬೇಕು ಎಂದು ಆಸೆ ಪಡುತ್ತಾರೆ. ಅದರಲ್ಲೂ ಅವರ ಫಿಟ್​ನೆಸ್​ ಮತ್ತು ಆಹಾರದ ಬಗ್ಗೆ ಜನರಿಗೆ ಆಸಕ್ತಿ ಜಾಸ್ತಿ ಎನ್ನಬಹುದು. ವಿರಾಟ್​ ಒಬ್ಬ ಆಹಾರಪ್ರಿಯ ಮತ್ತು ಅದೇ ಸಮಯದಲ್ಲಿ ಫಿಟ್ನೆಸ್ (Fitness)  ಬಗ್ಗೆ ಬಹಳ ಕಾಳಜಿ ಇರುವ ವ್ಯಕ್ತಿ.  ಅವರು ಕಟ್ಟುನಿಟ್ಟಾದ ಆಹಾರಕ್ರಮವನ್ನು ಅನುಸರಿಸುತ್ತಾರೆ. ಹೀಗಿರುವಾಗ ಅವರ ಫೇವರೇಟ್​ ಸಲಾಡ್​ ಬಗ್ಗೆ ಸಧ್ಯ ಚರ್ಚೆ ಆರಂಭವಾಗಿದೆ. ಆ ಸಲಾಡ್​ ಯಾವುದು ಹಾಗೂ ಅದನ್ನು ಮಾಡುವುದು ಹೇಗೆ ಎಂಬುದು ಇಲ್ಲಿದೆ.


ದೆಹಲಿ ಮೂಲದ ವಿರಾಟ್​ ಪಂಜಾಬಿ ಕುಟುಂಬದಲ್ಲಿ ಹುಟ್ಟಿ ಬೆಳೆದಿದ್ದು, ಹಾಗಾಗಿ ಆಹಾರ ಎಂದರೆ ಎಷ್ಟು ಇಷ್ಟ ಎಂದು ಹೇಳಬೇಕಿಲ್ಲ. ಅವರ ಫೇವರೇಟ್​ ಆಹಾರ ಎಂದರೆ ರಾಜ್ಮಾ ಚಾವಲ್ ಮತ್ತು ಚೋಲೆ ಭತುರ್ ಎಂದು ಅವರೇ ಹೇಳಿಕೊಂಡಿದ್ದರು. ಆದರೆ, ಅವರ ಮತ್ತೊಂದು ಫೇವರೇಟ್​ ಈ ಸೂಪರ್ ಫುಡ್​ ಸಲಾಡ್​.  ಈ ಸೂಪರ್ ಫುಡ್​ ಸಲಾಡ್​ ಅವರ ದೆಹಲಿಯ ರೆಸ್ಟೊರೆಂಟ್ ಒನ್8 ಕಮ್ಯೂನೆಯಲ್ಲಿ ಸಹ ಜನರಿಗೆ ನೀಡಲಾಗುತ್ತದೆ. ಈ ಸಲಾಡ್​ ಕೇವಲ ರುಚಿಕರ ಮಾತ್ರವಲ್ಲ ಆರೋಗ್ಯಕರ ಕೂಡ. ಇದರಲ್ಲಿರುವ ಸೂಪರ್ ಫುಡ್​ಗಳು ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತದೆ. ಹಾಗಾದ್ರೆ ಈ ಸಲಾಡ್ ಮಾಡುವುದು ಹೇಗೆ? ಇಲ್ಲಿದೆ ನೋಡಿ.


ಸೂಪರ್ ಫುಡ್ ಸಲಾಡ್ ಮಾಡಲು ಬೇಕಾಗುವ ಸಾಮಾಗ್ರಿಗಳು


ಆಲಿವ್ ಆಯಿಲ್ – 2 ಟೇಬಲ್ ಸ್ಪೂನ್


ವಿನೆಗರ್  - 1  ಟೇಬಲ್​ ಸ್ಪೂನ್


ಜೇನುತುಪ್ಪ – 1 ಟೇಬಲ್​ ಸ್ಪೂನ್


ಸಾಸಿವೆ ಸಾಸ್ – 1 ಟೇಬಲ್​ ಸ್ಪೂನ್


ಚಿಲ್ಲಿ ಫ್ಲೆಕ್ಸ್​ – 1 ಟೇಬಲ್​ ಸ್ಪೂನ್​


ರಾಕೆಟ್​​ ಎಲೆಗಳು  - 1 ಕಪ್


ಕ್ವಿನೋವಾ – ಕಾಲು ಚಮಚ


ದೊಡ್ಡ ಮೆಣಸಿನಕಾಯಿ– 1


ಕಲ್ಲಂಗಡಿ – 1 ಕಪ್


ಸಿಹಿ ಕುಂಬಳ ಬೀಜ – ಟೇಬಲ್​ ಸ್ಪೂನ್


ಗೋಡಂಬಿ – 10


ಉಪ್ಪು – ರುಚಿಗೆ ತಕ್ಕಷ್ಟು


ಇದನ್ನೂ ಓದಿ: ಈ ಕಲರ್ ಕಲರ್ ತರಕಾರಿಗಳು ನಿಮ್ಮ ತೂಕ ಕಡಿಮೆ ಮಾಡುತ್ತವೆ


ಸೂಪರ್ ಫುಡ್ ಸಲಾಡ್ ಮಾಡುವ ವಿಧಾನ


ಒಂದು ಬೌಲ್​ನಲ್ಲಿ ಆಲಿವ್ ಎಣ್ಣೆ, ವಿನೆಗರ್, ಸಾಸಿವೆ ಸಾಸ್​, ಜೇನುತುಪ್ಪ , ಚಿಲ್ಲಿ ಫ್ಲೆಕ್ಸ್​ ಮತ್ತು ರುಚಿಕೆ ತಕ್ಕಷ್ಟು ಉಪ್ಪು ಹಾಕಿ. ಈ ಎಲ್ಲಾ ವಸ್ತುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಉಪ್ಪು ಎಲ್ಲಾ ಪದಾರ್ಥಗಳಿಗೆ ಹೊಂದಿಕೊಳ್ಳಬೇಕು.




ಈಗ ಇನ್ನೊಂದು ಪಾತ್ರೆಯಲ್ಲಿ ಒಂದು ಲೋಟ ನೀರನ್ನು ಕುದಿಯಲು ಇಡಿ. ಅದಕ್ಕೆ ಕ್ವಿನೋವಾ ಸೇರಿದಿ, ಸಿಮ್​ನಲ್ಲಿ 10 ನಿಮಿಷ ಕುದಿಸಿ. ಈಗ ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ. ಈಗ ಆ ಕ್ವಿನೋವಾ ಗಟ್ಟಿಯಾದ ನಂತರ ಅದನ್ನು ಇಳಿಸಿ, ಹೆಚ್ಚಿರುವ ನೀರನ್ನು ಸೋಸಿಕೊಳ್ಳಿ. ದಪ್ಪವಾಗಿರುವ ಈ ಕ್ವಿನೋವಾವನ್ನು ಒಂದು ಬೌಲ್​ನಲ್ಲಿ ಹಾಕಿಕೊಳ್ಳಿ.


ಈಗ ದೊಡ್ಡ ಮೆಣಸಿನಕಾಯಿಯನ್ನು ನೇರವಾಗಿ ಒಲೆಯ ಮೇಲೆ ಸುಟ್ಟುಕೊಳ್ಳಿ. ನಂತರ ಅದನ್ನು 2 ಪೀಸ್​ ಮಾಡಿ, ಅದಕ್ಕೆ ಉಪ್ಪು ಹಚ್ಚಿ. ಈಗ ಸ್ಕೂಪ್​ ಸ್ಪೂನ್ ಬಳಸಿ, ಕಲ್ಲಂಗಡಿ ಹಣ್ಣಿನ ಸಣ್ಣ ಸಣ್ಣ ಬಾಲ್ ತಯಾರಿಸಿಕೊಳ್ಳಿ. ಒಂದು ಕಪ್ ಸಾಕು.


ಇದನ್ನೂ ಓದಿ: ಮೂಗು ಕಟ್ಟಿ ಉಸಿರಾಡೋಕೆ ಕಷ್ಟ ಆಗ್ತಿದ್ರೆ, ತಜ್ಞರು​ ಹೇಳಿರೋ ಈ ಸಿಂಪಲ್ ಟ್ರಿಕ್ಸ್ ಟ್ರೈ ಮಾಡಿ ಸಾಕು


ಈಗ ಒಂದು ಪಾತ್ರೆ ತೆಗೆದುಕೊಂಡು, ಅದರಲ್ಲಿ ರಾಕೆಟ್​ ಲೀವ್ಸ್​, ದೊಡ್ಡ ಮೆಣಸಿನಕಾಯಿ, ಕ್ವಿನೋವಾ ಮಿಶ್ರಣ ಹಾಗೂ ಕಲ್ಲಂಗಡಿಯನ್ನು ಹಾಕಿ ಮಿಶ್ರಣ ಮಾಡಿ, ಈಗಾಗಲೇ ತಯಾರಿಸಿಕೊಂಡ ಸಲಾಡ್​ ಮೇಲೆ ಹಾಕುವ ಮಿಶ್ರಣವನ್ನು ಸಹ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಅದಕ ಮೇಲೆ ಸಿಹಿ ಕುಂಬಳ ಬೀಜ ಹಾಗೂ ಗೋಡಂಬಿ ಹಾಕಿ, ಅಲಂಕರಿಸಿದರೆ ಸೂಪರ್ ಫುಡ್​ ಸಲಾಡ್​ ರೆಡಿ.

Published by:Sandhya M
First published: