HOME » NEWS » Lifestyle » VIRAL VIDEO THIS DESI JUGAAD TO PLUCK LEAVES EASILY FROM GREEN LEAFY VEGETABLES IS A HUGE TIME SAVER WATCH STG LG

Kitchen Hacks: ಸೊಪ್ಪು ಬಿಡಿಸೋಕೆ ಸೂಪರ್ ಐಡಿಯಾ; ನಿಮಿಷಗಳಲ್ಲೇ ಅಡುಗೆ ರೆಡಿಯಾಗುತ್ತೆ ನೋಡಿ..!

ತೂತುಗಳಿರುವ ಪುಟ್ಟ ಪ್ಲಾಸ್ಟಿಕ್ ಬುಟ್ಟಿ ಬಳಸಿಕೊಂಡು ಸುಲಭವಾಗಿ ಸೊಪ್ಪು ಬಿಡಿಸಬಹುದು ಎಂದು ತಿಳಿಸುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

news18-kannada
Updated:June 11, 2021, 12:59 PM IST
Kitchen Hacks: ಸೊಪ್ಪು ಬಿಡಿಸೋಕೆ ಸೂಪರ್ ಐಡಿಯಾ; ನಿಮಿಷಗಳಲ್ಲೇ ಅಡುಗೆ ರೆಡಿಯಾಗುತ್ತೆ ನೋಡಿ..!
ಸೊಪ್ಪು ಬಿಡಿಸುತ್ತಿರುವ ದೃಶ್ಯ
  • Share this:

ಹಸಿರು ಸೊಪ್ಪುಗಳು ನಮ್ಮ ಆಹಾರದ ಅವಿಭಾಜ್ಯ ಅಂಗವಾಗಿದ್ದು, ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ. ಅವು ಹೇರಳವಾದ ವಿಟಮಿನ್‍ಗಳನ್ನು ಹೊಂದಿರುವುದು ಮಾತ್ರವಲ್ಲ, ನಿಮಗೆ ತೂಕ ಇಳಿಸಲು ಕೂಡ ಸಹಾಯ ಮಾಡುತ್ತವೆ. ಆದರೆ ಒಂದೊಂದೇ ಸೊಪ್ಪನ್ನು ಬಿಡಿಸುವ ಕಿರಿಕಿರಿ ಯಾರಿಗೆ ಬೇಕಪ್ಪಾ ಎಂದು ಕೆಲವರು ಸೊಪ್ಪನ್ನು ಮನೆಗೆ ಕೊಂಡು ತರುವ ಉಸಾಬರಿಗೇ ಹೋಗುವುದಿಲ್ಲ. ಸೊಪ್ಪು ಬಿಡಿಸುವುದು ಯಾವ ಬ್ರಹ್ಮ ವಿದ್ಯೆ , ಯಾರೂ ಬೇಕಾದರೂ ಸುಲಭವಾಗಿ ಮಾಡಬಹುದು ಎಂದು ಮೂಗು ಮುರಿಯಬೇಡಿ. ನಿತ್ಯವೂ ಅಡುಗೆ ಮಾಡುವವರಿಗೆ, ಸೊಪ್ಪು ಬಿಡಿಸುವ ಕಷ್ಟ ಮತ್ತು ಅದಕ್ಕೆ ಎಷ್ಟು ಸಮಯ ವ್ಯರ್ಥವಾಗುತ್ತದೆ ಎಂಬುವುದು ಖಂಡಿತಾ ಅರ್ಥವಾಗುತ್ತದೆ.


ಇನ್ನು ಮುಂದೆ, ಸೊಪ್ಪು ಬಿಡಿಸಲು ಸೋಮಾರಿತನ ಇರುವವರು, ಸೊಪ್ಪು ಬಿಡಿಸಲು ಕಷ್ಟಪಡುವವರು ಮತ್ತು ಸಮಯ ವ್ಯರ್ಥವಾಗುತ್ತದೆ ಎಂದು ಗೋಳಾಡುವವರು ಚಿಂತಿಸಬೇಕಿಲ್ಲ. ಹಾಗಂತ, ಮಾರುಕಟ್ಟೆಗೆ ಸೊಪ್ಪು ಬಿಡಿಸುವ ಯಂತ್ರ ಬಂದಿರಬಹುದೇ ಎಂದು ಆಲೋಚಿಸಬೇಡಿ. ನೀವು ಮನೆಯಲ್ಲೇ ಇರುವ ಪುಟ್ಟ ಪ್ಲಾಸ್ಟಿಕ್ ಬುಟ್ಟಿಯ ಸಹಾಯದಿಂದ ಸೊಪ್ಪು ಬಿಡಿಸಬಹುದು! ಹೌದು, ತೂತುಗಳಿರುವ ಪುಟ್ಟ ಪ್ಲಾಸ್ಟಿಕ್ ಬುಟ್ಟಿ ಬಳಸಿಕೊಂಡು ಸುಲಭವಾಗಿ ಸೊಪ್ಪು ಬಿಡಿಸಬಹುದು ಎಂದು ತಿಳಿಸುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.



ಇದನ್ನೂ ಓದಿ:ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ನಡುವೆ ಮಠಾಧೀಶರನ್ನು ಭೇಟಿಯಾದ ಡಿಸಿಎಂ ಅಶ್ವತ್ಥ ನಾರಾಯಣ

ಆ ವಿಡಿಯೋದಲ್ಲಿ ಹುಡುಗನೊಬ್ಬ , ರಂಧ್ರಗಳಿರುವ ಪುಟ್ಟ ಬುಟ್ಟಿಯ ಒಳಗೆ ಸೊಪ್ಪುಗಳನ್ನು ಇಟ್ಟು, ಒಂದೊಂದೇ ಸೊಪ್ಪಿನ ಕಡ್ಡಿಯನ್ನು ರಂಧ್ರದ ಒಳಗೆ ತೂರಿಸಿ, ಎಲೆಗಳು ಬುಟ್ಟಿಯ ಒಳಗೆ ಬೀಳುವಂತೆ, ಕಡ್ಡಿಯನ್ನು ಹೊರ ಎಳೆಯುತ್ತಾನೆ. ಈ ವಿಧಾನದಲ್ಲಿ ಅತ್ಯಂತ ವೇಗವಾಗಿ ಮತ್ತು ಸುಲಭವಾಗಿ ಸೊಪ್ಪನ್ನು ದಂಟಿನಿಂದ ಬೇರೆ ಮಾಡಲು ಸಾಧ್ಯವಾಗುತ್ತದೆ ಎಂಬುದನ್ನು ಕಂಡ ವಿಡಿಯೋ ವೀಕ್ಷಕರು ಸೋಜಿಗ ಪಟ್ಟಿದ್ದಾರೆ. ಈ ವಿಡಿಯೋದಲ್ಲಿ ಹೇಳಿರುವ ರೀತಿ ಸೊಪ್ಪು ಬಿಡಿಸುವುದರಿಂದ ಕೈಗೆ ಹೆಚ್ಚು ಕಷ್ಟವಿಲ್ಲ, ದುಬಾರಿ ಯಂತ್ರದ ಅಗತ್ಯವಿಲ್ಲ.


ಕೆಲವು ದಿನಗಳ ಹಿಂದೆ ಇನ್ನೊಂದು ಕಿಚನ್ ಹ್ಯಾಕ್ ವಿಡಿಯೋ ವೈರಲ್ ಆಗಿತ್ತು. ಅದು ಬೆಳ್ಳುಳ್ಳಿಯ ಸಿಪ್ಪೆಯನ್ನು ಸುಲಭವಾಗಿ ಹೇಗೆ ಬಿಡಿಸುವುದು ಎಂಬ ವಿಡಿಯೋ. ಆ ವಿಡಿಯೋದ ಪ್ರಕಾರ ನೀವು ಇಡೀ ಬೆಳ್ಳುಳ್ಳಿಯನ್ನು ತೆಗೆದುಕೊಂಡು, ಚಾಪಿಂಗ್ ಬೋರ್ಡ್ ಮೇಲೆ ಇಟ್ಟು ಅದನ್ನು ಅಡ್ಡಕ್ಕೆ ಕತ್ತರಿಸಬೇಕು. ಬಳಿಕ ಆ ಎರಡೂ ಹೋಳುಗಳನ್ನು ಚೋಪಿಂಗ್ ಬೋರ್ಡ್‍ನಲ್ಲಿ ಕೆಳಮುಖವಾಗಿ ಇಟ್ಟು ಚಾಕುವಿನ ಸಪಾಟಾದ ಭಾಗದಿಂದ, ಆ ಹೋಳುಗಳನ್ನು ಜಜ್ಜಬೇಕು. ಆಗ ಸುಲಭವಾಗಿ ಬೆಳ್ಳುಳ್ಳಿಯ ಸಿಪ್ಪೆಯನ್ನು ಬಿಡಿಸಬಹುದು. ಅಡುಗೆ ಮನೆಯ ಕೆಲಸವನ್ನು ಸುಲಭಗೊಳಿಸುವ ಇಂತಹ ಅನೇಕ ವಿಡಿಯೋ ಇಂಟರ್‌ನೆಟ್‌ನಲ್ಲಿ ಲಭ್ಯ ಇವೆ.


ಇದನ್ನೂ ಓದಿ:Fresh Fruits: ರೈಲಿನಲ್ಲಿ ಬೆಂಗಳೂರಿಗೆ ಬಂದಿಳಿದ ಇಂಪೋರ್ಟೆಡ್ ಹಣ್ಣುಗಳು; ಬೆಲೆಯೂ ಕಡಿಮೆ, ತಾಜಾ ಕೂಡ..!
Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು. 

Published by: Latha CG
First published: June 11, 2021, 12:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories