• ಹೋಂ
  • »
  • ನ್ಯೂಸ್
  • »
  • ಲೈಫ್ ಸ್ಟೈಲ್
  • »
  • Chicken Sambar: ಬರೀ ಕೋಳಿ ತಿಂದ್ರೆ ಲಾಭವಿಲ್ಲ, ಒಮ್ಮೆ ನಾಟಿ ಕೋಳಿ ಸಾಂಬಾರ್ ಟೇಸ್ಟ್ ನೋಡಿ! ಬಿಸಿ ಮುದ್ದೆ ಜೊತೆಗೆ ಇದು ಬೆಸ್ಟ್ ಕಾಂಬಿನೇಷನ್

Chicken Sambar: ಬರೀ ಕೋಳಿ ತಿಂದ್ರೆ ಲಾಭವಿಲ್ಲ, ಒಮ್ಮೆ ನಾಟಿ ಕೋಳಿ ಸಾಂಬಾರ್ ಟೇಸ್ಟ್ ನೋಡಿ! ಬಿಸಿ ಮುದ್ದೆ ಜೊತೆಗೆ ಇದು ಬೆಸ್ಟ್ ಕಾಂಬಿನೇಷನ್

ನಾಟಿ ಕೋಳಿ ಸಾಂಬಾರ್

ನಾಟಿ ಕೋಳಿ ಸಾಂಬಾರ್

ಮೊದಲ ಬಾರಿಗೆ ಋತುಮತಿಯಾದಾಗ ಮಹಿಳೆಯರಿಗೆ ಮತ್ತು ಬಾಣಂತಿಯರಿಗೆ  ನಾಟಿ ಕೋಳಿ ಸಾಂಬಾರ್ ಅನ್ನು ಮಾಡಿಕೊಡಲಾಗುತ್ತದೆ. ನಾಟಿ ಕೋಳಿ ಸಾಂಬಾರ್ ಟೆಸ್ಟಿ ಆಗಿರುವುದರ  ಸಖತ್ ಡಿಫರೆಂಟ್ ಆಗಿರುತ್ತದೆ. ಆರೋಗ್ಯಕ್ಕೆ ಕೂಡ ಒಳ್ಳೆಯದು. ಹಾಗಾದ್ರೆ ನಾಟಿ ಕೋಳಿ ಸಾಂಬಾರ್ ಮಾಡುವುದೇಗೆ ಅಂತೀರಾ ಈ ಸ್ಟೋರಿ ಓದಿ.

ಮುಂದೆ ಓದಿ ...
  • Share this:

ಸಾಮಾನ್ಯವಾಗಿ ತರಕಾರಿಗಳಲ್ಲಿ (Vegetables) ನಾಟಿ ಟೊಮ್ಯಾಟೋ, ನಾಟಿ ಕೊತ್ತಬರಿ, ನಾಟಿ ಬೆಳ್ಳುಳ್ಳಿ, ನಾಟಿ ಮೆಣಸಿನಕಾಯಿ ಹೀಗೆ ಹಲವಾರು ಪದಾರ್ಥಗಳಿರುವುದನ್ನು ನಾವು ಕೇಳಿರುತ್ತೇವೆ. ಹಾಗೆಯೇ ಕೋಳಿಯಲ್ಲಿ (Chicken) ಕೂಡ ನಾಟಿ ಕೋಳಿ ಬರುತ್ತದೆ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ವಾಸ್ತವವಾಗಿ ತರಕಾರಿ ಆಗಲಿ ಅಥವಾ ಕೋಳಿಯಲ್ಲಾಗಲಿ ಫಾರಂಗಿಂತ ನಾಟಿಗೆ ಹೆಚ್ಚು ಡಿಮ್ಯಾಂಡ್. ಅಲ್ಲದೇ ಬೆಲೆ ಕೂಡ ಜಾಸ್ತಿ. ಏಕೆಂದರೆ ಇದರಿಂದ ಸಾಕಷ್ಟು ಪ್ರಯೋಜನಗಳಿದೆ. ಸದ್ಯ ಇಂದು ನಾವು ನಿಮಗೆ ನಾಟಿ ಕೋಳಿ ಸಾಂಬಾರ್ (Naati Koli Sambar) ಮಾಡುವುದು ಹೇಗೆ ಎಂಬುವುದನ್ನು ತಿಳಿಸುತ್ತಿದ್ದೇವೆ. ಯಾವಾಗಲೂ ಫಾರಂ, ಬೈಲರ್​ ಕೋಳಿಯಲ್ಲಿ (Broiler Chicken) ಅಡುಗೆ ಮಾಡಿ ತಿಂದು ಬೋರ್ ಆಗಿದ್ದರೆ ಒಮ್ಮೆ ನಾಟಿ ಕೋಳಿಯ ಸಾಂಬಾರ್ ಮಾಡಿ, ರುಚಿ ನೋಡಿ. ನಾಟಿ ಕೋಳಿ ಸಾಂಬಾರ್ ಅನ್ನು ಹೆಚ್ಚಾಗಿ ಹಳ್ಳಿಗಳ ಕಡೆ ಮಾಡಿ ಜನ ತಿನ್ನುತ್ತಾರೆ. ಅದರಲ್ಲಿಯೂ ಮುದ್ದೆ  (Ragi Ball) ಜೊತೆಗೆ ನಾಟಿ ಕೋಳಿ ಸಾಂಬಾರ್ ಬೆಸ್ಟ್​ ಕಾಂಬಿನೇಷನ್. ಅನ್ನದ ಜೊತೆಗೂ ಕೂಡ ಸಿಕ್ಕಾಪಟ್ಟೆ ಟೆಸ್ಟಿಯಾಗಿರುತ್ತದೆ. ಇಷ್ಟೇ ಅಲ್ಲದೇ ಇಡ್ಲಿ, ದೋಸೆ, ನೀರ್​ ದೋಸೆ ಜೊತೆ ಕೂಡ ನಾಟಿ ಕೋಳಿ ಸಾಂಬಾರ್ ಟ್ರೈ ಮಾಡಬಹುದು. ಖಂಡಿತ ಇದು ನಿಮಗೆ ಇಷ್ಟವಾಗುವುದರಲ್ಲಿ ಮತ್ತೊಂದು ಮಾತಿಲ್ಲ.


ನಾಟಿ ಕೋಳಿ ಸಾಂಬಾರ್


ಅಲ್ಲದೇ ಮೊದಲ ಬಾರಿಗೆ ಋತುಮತಿಯಾದಾಗ ಮಹಿಳೆಯರಿಗೆ ಮತ್ತು ಬಾಣಂತಿಯರಿಗೆ  ನಾಟಿ ಕೋಳಿ ಸಾಂಬಾರ್ ಅನ್ನು ಮಾಡಿಕೊಡಲಾಗುತ್ತದೆ. ನಾಟಿ ಕೋಳಿ ಸಾಂಬಾರ್ ಟೆಸ್ಟಿ ಆಗಿರುವುದರ  ಸಖತ್ ಡಿಫರೆಂಟ್ ಆಗಿರುತ್ತದೆ. ಆರೋಗ್ಯಕ್ಕೆ ಕೂಡ ಒಳ್ಳೆಯದು. ಹಾಗಾದ್ರೆ ನಾಟಿ ಕೋಳಿ ಸಾಂಬಾರ್ ಮಾಡುವುದೇಗೆ ಅಂತೀರಾ ಈ ಸ್ಟೋರಿ ಓದಿ.


ನಾಟಿ ಕೋಳಿ ಸಾಂಬಾರ್


ನಾಟಿ ಕೋಳಿ ಸಾಂಬಾರ್ ಮಾಡಲು ಬೇಕಾಗುವ ಸಾಮಾಗ್ರಿಗಳು:


  • ಈರುಳ್ಳಿ – 1

  • ಬೆಳ್ಳುಳ್ಳಿ- 2

  • ಸ್ವಲ್ಪ ಶುಂಠಿ

  • ಮೆಣಸಿನಕಾಯಿ – 6

  • ಹುರಿಗಡಲೆ – 1 ಚಮಚ

  • ಗಸೆಗಸೆ- ಚಮಚ

  • ಚಕ್ಕೆ- 1

  • ಲವಂಗ -2

  • ದನಿಯಾ ಪುಡಿ- 2 ಚಮಚ

  • ಕೊತ್ತಂಬರಿ ಸೊಪ್ಪು- ಸ್ವಲ್ಪ

  • ತೆಂಗಿನತುರಿ- 1 ಕಪ್

  • ಅಡುಗೆ ಎಣ್ಣೆ- ಅರ್ಧ ಕಪ್

  • ಟೊಮೆಟೊ-1

  • ಸ್ವಲ್ಪ ಮೆಂತ್ಯ ಸೊಪ್ಪು

  • ಅರಿಸಿಣ ಪುಡಿ – 1 ಚಮಚ


ನಾಟಿ ಕೋಳಿ ಸಾಂಬಾರ್


ನಾಟಿ ಕೋಳಿ ಸಾಂಬಾರ್ ಮಾಡುವ ವಿಧಾನ:


  • ದನಿಯಾ ಪುಡಿ, ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ, ಈರುಳ್ಳಿ, ಹುರಿಗಡಲೆ, ಗಸೆಗಸೆ, ತೆಂಗಿನತುರಿ, ಈ ಎಲ್ಲಾ ಪದಾರ್ಥಗಳನ್ನು ಒಂದು ಚಮಚ ಎಣ್ಣೆ ಹಾಕಿ ಹುರಿದು, ನುಣ್ಣಗೆ ರುಬ್ಬಿಕೊಳ್ಳಬೇಕು.

  • ಕುಕ್ಕರ್‍ಗೆ ಅಡುಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಲವಂಗ, ಚಕ್ಕೆ, ಈರುಳ್ಳಿ, ಟೊಮೆಟೊ, ಸ್ವಲ್ಪ ಮೆಂತ್ಯ ಸೊಪ್ಪು, ನಂತರ ನಾಟಿ ಕೋಳಿಯನ್ನು ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು, ಅರಿಸಿಣ ಪುಡಿ ಹಾಕಿ 5 ನಿಮಿಷ ಬಾಡಿಸಿಕೊಳ್ಳಿ.

  • ಈಗ ಇದಕ್ಕೆ ರುಬ್ಬಿದ ಮಸಾಲೆ ಸೇರಿಸಿ ನೀರು ಹಾಕಿ ಕುಕರ್ ಮುಚ್ಚಿ 5 ವಿಷಲ್ ಕೂಗಿಸಿದರೆ ನಾಟಿಕೋಳಿ ಸಾರು ಸವಿಯಲು ಸಿದ್ಧವಾಗುತ್ತದೆ.




ಕೋಳಿ ಸಾಕಣೆಯಲ್ಲಿ ಎರಡು ವಿಧ. ಫಾರಂ ಕೋಳಿಗಳು ಮತ್ತು ಹಿತ್ತಿಲಲ್ಲಿ ಸಾಕುವ ನಾಟಿ ಕೋಳಿಗಳು. ಫಾರಂ ಕೋಳಿಗಳಲ್ಲಿ ಮಾಂಸ ಮತ್ತು ಮೊಟ್ಟೆಗಾಗಿ ಸಾಕುವ ಪ್ರತ್ಯೇಕ ತಳಿಗಳಿವೆ. ದೊಡ್ಡ ಪ್ರಮಾಣದಲ್ಲಿ ಇವುಗಳನ್ನು ಸಾಕುತ್ತಾರೆ. ಇದಕ್ಕೆ ಹೆಚ್ಚಿನ ಬಂಡವಾಳ ಬೇಕು. ಲಾಭವೂ ಹೆಚ್ಚು. ನಾಟಿ ಕೋಳಿಗಳಲ್ಲಿಯೇ ಅಭಿವೃದ್ಧಿಪಡಿಸಿದ ಕೋಳಿಗಳು ಸಿಗುತ್ತವೆ. ಉದಾಹರಣೆಗೆ ಗಿರಿರಾಜ, ಗಿರಿರಾಣಿ, ಸ್ವರ್ಣಧಾರಾ ಇತ್ಯಾದಿ

Published by:Monika N
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು