Chilly Chicken: ಬಾಯಲ್ಲಿ ನೀರೂರಿಸುವಂತಹ ಹಳ್ಳಿ ಶೈಲಿಯ ರುಚಿಯಾದ ಹೆಚ್ಚು ಮಸಾಲೆ ಬಳಸದೇ ಚಿಲ್ಲಿ ಚಿಕನ್ ಮಾಡುವ ವಿಧಾನ

ಮನೆಯಲ್ಲಿರುವ ಸಾಮಾಗ್ರಿಗಳನ್ನ ಬಳಸಿ, ಕಡಿಮೆ ಸಮಯದಲ್ಲಿ ಚಿಲ್ಲಿ ಚಿಕನ್ ಮಾಡಬಹುದು. ಈ ರೆಸಿಪಿ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು.

ಚಿಲ್ಲಿ ಚಿಕನ್

ಚಿಲ್ಲಿ ಚಿಕನ್

  • Share this:
ಭಾನುವಾರ ಬಂದ್ರೆ ಸಾಕು ಬಹುತೇಕರಿಗೆ ಬಾಡೂಟ (Sunday Non Veg) ಬೇಕೇ ಬೇಕು. ಪ್ರತಿ ಬಾರಿಯೂ ಚಿಕನ್ ಕರ್ರಿ (Chicken Curry), ಚಿಕನ್ ಫ್ರೈ (Chicken Fry), ಕಬಾಬ್ (Chicken kebab) ತಿಂದು ಬೇಜಾರು ಆಗಿರುತ್ತದೆ. ಹೋಟೆಲ್ (hotel) ನಿಂದ ಆರ್ಡರ್ ಮಾಡೋಣ ಅಂದ್ರೆ ಹೆಚ್ಚು ಮಸಾಲೆ ಮತ್ತು ಎಣ್ಣೆ(Masala And Oil)ಯಿಂದ ತುಂಬಿರುತ್ತದೆ. ಬೆಂಗಳೂರಿನಲ್ಲಿರೋದು ಬಹುತೇಕ ಗ್ರಾಮೀಣ ಭಾಗದ ಜನರು. ಹಾಗಾಗಿ ಅವರಿಗೆ ನಾಟಿ ಶೈಲಿಯ ಚಿಕನ್ ಅಡುಗೆ ತಿನ್ನಬೇಕು ಅಂತ ಆಸೆ ಆಗಿರುತ್ತದೆ. ಕಾರಣ ಹಳ್ಳಿ ಆಥವಾ ಮನೆಯಗಳಲ್ಲಿ ಮಾಡುವ ಚಿಕನ್ ಅಡುಗೆ(Chicken Recipe)ಯಲ್ಲಿ ಹೆಚ್ಚು ಮಸಾಲೆಯೂ ಬಳಕೆ ಆಗಿರಲ್ಲ. ಆದ್ರೂ ಅದರ ರುಚಿಯೇ ಸಖತ್ ಆಗಿರುತ್ತದೆ. ಉದ್ಯೋಗ ಅರಸಿ ಬಂದ ಬಹುತೇಕರು ಇಂತಹ ಚಿಕನ್ ಅಡುಗೆಯನ್ನು ಮಿಸ್ ಮಾಡಿಕೊಳ್ಳುತ್ತಿರುತ್ತಾರೆ. ಇಂದು ನಾವು ನಿಮಗೆ ಹೆಚ್ಚು ಮಸಾಲೆ ಬಳಸದೇ ಹೇಗೆ ಚಿಲ್ಲಿ ಚಿಕನ್ (Chilly Chicken) ಮಾಡಬೇಕು ಅನ್ನೋದನ್ನು ಹೇಳುತ್ತಿದ್ದೇವೆ.

ಮನೆಯಲ್ಲಿರುವ ಸಾಮಾಗ್ರಿಗಳನ್ನ ಬಳಸಿ, ಕಡಿಮೆ ಸಮಯದಲ್ಲಿ ಚಿಲ್ಲಿ ಚಿಕನ್ ಮಾಡಬಹುದು. ಈ ರೆಸಿಪಿ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು.

ಚಿಕನ್ ಚಿಲ್ಲಿ ಮಾಡಲು ಬೇಕಾಗುವ ಸಾಮಾಗ್ರಿಗಳು

ಚಿಕನ್ : 1/4 ಕೆಜಿ

ಹಸಿ ಮೆಣಸಿನಕಾಯಿ: 10 ರಿಂದ 15

ಬೆಳ್ಳುಳ್ಳಿ: 10 ರಿಂದ 12 ಎಸಳು

ಕೋತಂಬರಿ ಸೊಪ್ಪು; ಸ್ವಲ್ಪ

ಪುದಿನ: 2 ಎಲೆ

ಹಸಿ ಶುಂಠಿ: 1/2ಇಂಚು

ಜೀರಿಗೆ; ಅರ್ಧ ಟೀ ಸ್ಪೂನ್

ಧನಿಯಾ ಪೌಡರ್  ಅರ್ಧ ಟೀ ಸ್ಪೂನ್

ಗರಂ ಮಸಲಾ: ಅರ್ಧ ಟೀ ಸ್ಪೂನ್

ನಿಂಬೆ ರಸ: 2 ರಿಂದ 3 ಟೀ ಸ್ಪೂನ್

ಎಣ್ಣೆ; 2 ಟೀ ಸ್ಪೂನ್

ಅರಿಶಿಣ: ಚಿಟಿಕೆ

ಉಪ್ಪು; ರುಚಿಗೆ ತಕ್ಕಷ್ಟು

ಇದನ್ನೂ ಓದಿ:  Sunday Special Recipe: ಮನೆಯಲ್ಲೇ ಮಾಡಿ ರೆಸ್ಟೋರೆಂಟ್ ಶೈಲಿಯ ಕಡಾಯಿ ಚಿಕನ್

ಚಿಕನ್ ಚಿಲ್ಲಿ ಮಾಡುವ ವಿಧಾನ

*ಮೊದಲಿಗೆ ಅಂಗಡಿಯಿಂದ ತಂದ ಚಿಕನ್ ಅನ್ನು ಬಿಸಿ ನೀರಿನಿಂದ ಎರಡರಿಂದ ಮೂರು ಬಾರಿ ತೊಳೆದುಕೊಂಡು ಎತ್ತಿಟ್ಟುಕೊಳ್ಳಿ. ಇದರಿಂದ ಮಾಂಸದಲ್ಲಿರುವ ರಕ್ತ ಸಂಪೂರ್ಣ ಸ್ವಚ್ಛವಾಗುತ್ತದೆ.

*ಎರಡನೇಯದಾಗಿ ಹಸಿ ಮೆಣಸಿನಕಾಯಿಯನ್ನು ಉದ್ದವಾಗಿ ಕತ್ತರಿಸಿಕೊಳ್ಳಿ. (ಖಾರ ತಿನ್ನುವವರು ಹೆಚ್ಚು ಮೆಣಸಿನಕಾಯಿ ಬಳಸಬಹುದು)

*ತದನಂತರ ಬೆಳ್ಳುಳ್ಳಿ ಎಳಸುಗಳ ಮೇಲಿನ ಸಿಪ್ಪಿ ಬಿಡಿಸಿಕೊಳ್ಳಿ. ಹಸಿ ಶುಂಠಿಯಲ್ಲಿ ಜಜ್ಜಿಕೊಂಡು ಎತ್ತಿಡಿ.

*ಈಗ ಕೋತಂಬರಿ ಮತ್ತು ಪುದಿನಾವನ್ನು ಸಣ್ಣದಾಗಿ ಕತ್ತಿರಿಸಿಕೊಂಡು ತೆಗೆದಿಡಿ.

*ಸ್ಟೌವ್ ಆನ್ ಮಾಡಿಕೊಂಡು ಪಾತ್ರೆ ಇಡಿ. ಅಡುಗೆ ಮುಗಿಯುವರೆಗೂ ಸ್ಟೌವ್ ಮಧ್ಯಮ ಉರಿಯಲ್ಲಿರಬೇಕು. ಪಾತ್ರೆಗೆ ಎರಡು ಟೀ ಸ್ಪೂನ್ ಎಣ್ಣೆ ಹಾಕಿ.

*ಎಣ್ಣೆ ಬಿಸಿಯಾಗುತ್ತಿದ್ದಂತೆ ಜೀರಿಗೆ ಹಾಕಿ. ಜೀರಿಗೆ ಕಪ್ಪು ಬಣ್ಣಕ್ಕೆ ತಿರುಗುತ್ತಿದ್ದಂತೆ ಕತ್ತರಿಸಿಕೊಂಡಿರುವ ಹಸಿ ಮೆಣಸಿನಕಾಯಿ ಹಾಕಿ ಎರಡರಿಂದ ಮೂರು ನಿಮಿಷ ಮಿಕ್ಸ್ ಮಾಡಿಕೊಳ್ಳಿ.

*ಮೂರನೇಯದಾಗಿ ಜಜ್ಜಿಕೊಂಡಿರುವ ಶುಂಠಿ ಮತ್ತು ಬೆಳ್ಳುಳ್ಳಿ ಹಾಕಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ ಎರಡು ನಿಮಿಷ ಬೇಯಲು ಬಿಡಿ.

*ಈಗ ತೊಳೆದುಕೊಂಡು ಕತ್ತರಿಸಿಕೊಂಡಿರುವ ಚಿಕನ್ ಹಾಕಿ ಮಿಕ್ಸ್ ಮಾಡಿ.

*ಚಿಕನ್ ಮಿಕ್ಸ್ ಮಾಡಿದ ಬಳಿಕ ಧನಿಯಾ ಪೌಡರ್, ಗರಂ ಮಸಾಲಾ, ಅರಿಶಿನ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಮುಚ್ಚಳ ಮುಚ್ಚಿ ನಾಲ್ಕರಿಂದ ಐದು ನಿಮಿಷ ಬೇಯಿಸಿ.

ಇದನ್ನೂ ಓದಿ:  Sunday Special Recipe: ಸಖತ್ ಸಂಡೇಗೆ ಚಿಕನ್ ಪುಳಿಮುಂಚಿ, ರೆಸಿಪಿ ಇಲ್ಲಿದೆ..ಟ್ರೈ ಮಾಡಿ!


*ಐದು ನಿಮಿಷದ ನಂತರ ಕತ್ತರಿಸಿಕೊಂಡಿರುವ ಕೋತಂಬರಿ ಮತ್ತು ಪುದಿನಾ ಸೊಪ್ಪ ಹಾಕಿ. ನಂತರ ನಿಂಬೆ ಹಣ್ಣಿನ ರಸ ಸೇರಿಸಿ ಮಿಕ್ಸ್ ಮಾಡಬೇಕು. ಮತ್ತೆ ಮುಚ್ಚಳ ಮುಚ್ಚಿ ನಾಲ್ಕರಿಂದ ಐದು ನಿಮಿಷ ಬೇಯಿಸಿದ್ರೆ ಹಳ್ಳಿ ಶೈಲಿನ ಚಿಕನ್ ಚಿಲ್ಲಿ ರೆಡಿ.
Published by:Mahmadrafik K
First published: