• Home
  • »
  • News
  • »
  • lifestyle
  • »
  • Vikram- Betal: ವಯಸ್ಸು ಮುಖ್ಯವಲ್ಲ ಜ್ಞಾನ ಮುಖ್ಯ, ಈ ಕಥೆಯ ಹಿಂದೆ ಅಡಗಿದೆ ಸಾವಿರ ಗೂಡಾರ್ಥ

Vikram- Betal: ವಯಸ್ಸು ಮುಖ್ಯವಲ್ಲ ಜ್ಞಾನ ಮುಖ್ಯ, ಈ ಕಥೆಯ ಹಿಂದೆ ಅಡಗಿದೆ ಸಾವಿರ ಗೂಡಾರ್ಥ

ವಿಕ್ರಮ ಬೇತಾಳ ಕಥೆ

ವಿಕ್ರಮ ಬೇತಾಳ ಕಥೆ

ವಿಕ್ರಮ – ಬೇತಾಳನ ಕಥೆಗಳು ಜೀವನಕ್ಕೆ ಯಾವಾಗಲೂ ಬಹಳ ಸ್ಪೂರ್ತಿ ನೀಡುತ್ತದೆ. ಒಂದೊಂದು ಕಥೆಯ ಹಿಂದೆ ನೀತಿ ಪಾಠ ಅಡಗಿರುತ್ತದೆ. ಈ ಬಾರಿ ಸಹ ವಿಕ್ರಮನಿಗೆ ಬೇತಾಳ ಅದ್ಭುತವಾದ ಕಥೆಯನ್ನು ಹೇಳಿದೆ. ಆ ಕಥೆಯಲ್ಲಿ 2 ನೀತಿ ಇದೆ. ಒಂದು ಯಾರನ್ನೂ ಬಹಳ ಸುಲಭವಾಗಿ ನಂಬಬಾರದು. ಹಾಗೆಯೇ, ದೊಡ್ಡವರು ಚಿಕ್ಕವರು ಎನ್ನುವ ಭೇದ ಜ್ಞಾನಕ್ಕೆ ಇರುವುದಿಲ್ಲ ಎಂಬುದು.

ಮುಂದೆ ಓದಿ ...
  • Share this:

ಒಂದು ಊರು, ಆ ಊರಿಗೊಬ್ಬ ರಾಜ (King) ಆತನ ಹೆಸರು ಶಶಿ ವಲ್ಲಭ. ಆ ಊರಿನಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಬುದ್ದಿವಂತ ರಾಜ ಒಳ್ಳೆಯ ಆಡಳಿತ ನೀಡುತ್ತಿದ್ದ. ಹಾಗೆಯೇ, ಆ ಊರಿನಲ್ಲಿ ಒಬ್ಬ ಬ್ರಾಹ್ಮಣ ಇದ್ದ. ಆತ ಬಹಳ ನಿಷ್ಠೆಯಿಂದ ಎಲ್ಲಾ ಆಚರಣೆಗಳನ್ನು ಮಾಡುತ್ತಿದ್ದ. ಹಾಗಾಗಿಯೇ ಇರಬೇಕು ಆತನಿಗೆ ಇಬ್ಬರು ಮಹಾ ಬುದ್ದಿವಂತ ಮಕ್ಕಳಿದ್ದರು (Children). ಮೊದಲ ಮಗ (Son) ವಸ್ತುಗಳನ್ನು ಮುಟ್ಟಿ ನೋಡಿ ಅಥವಾ ಅದನ್ನು ಮೂಸಿ ನೋಡಿ ಅದರ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತಾನೆ. ಎರಡನೇ ಮಗ, ಒಬ್ಬ ವ್ಯಕ್ತಿ,ವಸ್ತು ಹಾಗೂ ಜಾಗವನ್ನು ನೋಡಿ, ಅವರ ಚಲನವಲನಗಳನ್ನು ಗಮನಿಸಿ ಅದರ ಬಗ್ಗೆ ಹೇಳುವ ವಿಶೇಷ ಗುಣ ಹೊಂದಿರುತ್ತಾನೆ.


ಹೀಗಿರುವಾಗ ಒಂದು ರಾಜನ ಅರಮನೆಗೆ ಬಂದ ಬ್ರಾಹ್ಮಣ ತನ್ನ ಮಕ್ಕಳು ಬಹಳ ಬುದ್ದಿವಂತರು, ಅವರನ್ನು ಆಸ್ಥಾನದಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳಿ ಎಂದು ಬೇಡುತ್ತಾನೆ. ಅದೇ, ರೀತಿ ರಾಜನು ಸಹ ಅವರನ್ನು ಒಳ್ಳೆಯ ಸಂಬಳಕ್ಕೆ ಕೆಲಸಕ್ಕೆ ಸೇರಿಸಿಕೊಳ್ಳುತ್ತಾನೆ.


ಅವರು ಕೆಲಸಕ್ಕೆ ಸೇರಿದ ಕೆಲವು ದಿನಗಳ ನಂತರ ಅರಮನೆಯ ದ್ವಾರದಲ್ಲಿ ಇಬ್ಬರು ಯುವಕರು ಜಗಳವಾಡುತ್ತಿರುತ್ತಾರೆ. ಒಂದು ಮುತ್ತಿನ ಸರವನ್ನು ಹಿಡಿದುಕೊಂಡು, ತಮ್ಮದೆಂದು ಹೊಡೆದಾಡುತ್ತಿರುತ್ತಾರೆ. ಕೊನೆಗೆ ದಾರಿ ಕಾಣದೆ ರಾಜನ ಬಳಿ ಬಂದು. ಈ ಮುತ್ತಿನ ಸರ ಯಾರದ್ದು ಎಂದು ತನಿಖೆ ನೀಡಿ, ಅವರಿಗೆ ನೀಡುವಂತೆ ಕೇಳಿಕೊಳ್ಳುತ್ತಾರೆ.


ಇದನ್ನೂ ಓದಿ: Vikram- Betal: ವೀಕೆಂಡ್​ ಮಕ್ಕಳಿಗೆ ಹೇಳಿ ವಿಕ್ರಮ್ - ಬೇತಾಳದ ಈ ಅದ್ಭುತ ಸ್ಟೋರಿ


ಆಗ ರಾಜ, ಆ ಅಣ್ಣ- ತಮ್ಮಂದಿರನ್ನು ಕರೆದು ಇದನ್ನು ಪರೀಕ್ಷಿಸಿ ಹೇಳುವಂತೆ ಕೇಳುತ್ತಾನೆ. ಮೊದಲನೆಯವನು ಮುತ್ತಿನ ಹಾರವನ್ನು ಮೂಸಿ, ಅದು ಯಾರಿಗೆ ಸೇರಿದ್ದು ಎಂದು ಹೇಳುತ್ತಾನೆ. ಆದರೆ, ಇದನ್ನು ಒಪ್ಪದ ಇನ್ನೊಬ್ಬ ಮತ್ತೊಮ್ಮೆ ಪರೀಕ್ಷಿಸಲು ಹೇಳುತ್ತಾನೆ. ಆಗ ರಾಜ, ಬ್ರಾಹ್ಮಣನ ಕಿರಿಯ ಮಗನಿಗೆ ಹೇಳುತ್ತಾನೆ. ಅವನು ಸಹ ಅದನ್ನು ನೋಡಿ, ಸರಿಯಾಗಿ ಹೇಳುತ್ತಾನೆ.


ಇದನ್ನು ನೋಡಿದ ಆ ಇಬ್ಬರು, ನಾವು ಸುಮ್ಮನೆ ಜಗಳವಾಡುತ್ತಿದ್ದೆವು. ಈ ಇಬ್ಬರ ಬಗ್ಗೆ ಕೇಳಿದ್ದವು, ಅವರನ್ನು ಪರೀಕ್ಷೆ ಮಾಡಲು ಹೀಗೆ ಮಾಡಿದೆವು ಎನ್ನುತ್ತಾರೆ. ಇದನ್ನು ನೋಡಿ ಸಂತೋಷಗೊಂಡ ರಾಜ ಆ ಅಣ್ಣ ತಮ್ಮನಿಗೆ ಹೆಚ್ಚು ಸಂಬಳ ಹೆಚ್ಚಿಸುತ್ತಾನೆ.
ಹೀಗೆ ಕೆಲ ದಿನಗಳು ಕಳೆದ ನಂತರ ದಕ್ಷಿಣ ದೇಶದ ರಾಜನೊಬ್ಬ ಧೂತನೊಬ್ಬನನ್ನ ಶಶಿ ವಲ್ಲಭನ ಆಸ್ಥಾನಕ್ಕೆ ಕಳುಹಿಸುತ್ತಾನೆ. ಅಲ್ಲದೇ, ರಾಜ ಮತ್ತು ಈ ಇಬ್ಬರನ್ನು ಔತಣಕ್ಕೆ ಆಹ್ವಾನಿಸುತ್ತಾನೆ. ಇದು ರಾಜನನ್ನ ಗೊಂದಲಕ್ಕೆ ದೂಡುತ್ತದೆ. ಆಗ, ರಾಜ ಬ್ರಾಹ್ಮಣನ ಮಕ್ಕಳನ್ನು ಕರೆದು, ಈ ರಾಜ ಯಾರು ಎಂಬುದು ಗೊತ್ತಿಲ್ಲ. ಅಲ್ಲದೇ, ಸಾಮಾನ್ಯವಾಗಿ ರಾಜನ ಕುಟುಂಬವನ್ನು ಔತಣವನ್ನು ಕರೆಯುತ್ತಾರೆ. ಆದರೆ ಈತ ನಿಮ್ಮನ್ನ ಕರೆತರುವಂತೆ ಹೇಳಿದ್ದಾನೆ. ಹಾಗಾಗಿ ಆ ರಾಜ್ಯಕ್ಕೆ ಹೋಗಿ ಸರಿಯಾದ ಮಾಹಿತಿ ತಿಳಿದುಕೊಂಡು ಬನ್ನಿ ಎಂದು ಹೇಳುತ್ತಾನೆ.


ದಕ್ಷಿಣ ದೇಶಕ್ಕೆ ಹೋದ ಈ ಇಬ್ಬರು, ಮರಳಿ ಬಂದು, ಶಶಿ ವಲ್ಲಭನ ಬಳಿ ಆ ರಾಜ ಒಳ್ಳೆಯವನು. ಆದರೆ, ನಿಮ್ಮ ಆಸ್ಥಾನದಲ್ಲಿ ನಾವಿರುವುದರ ಬಗ್ಗೆ ಸ್ವಲ್ಪ ಮತ್ಸರ ಇದೆ ಎನ್ನುತ್ತಾರೆ. ಸರಿ ಎಂದು ರಾಜ ಶಶಿ ವಲ್ಲಭ ಸಹ ಈ ಇಬ್ಬರ ಜೊತೆ ಆ ರಾಜ್ಯಕ್ಕೆ ಔತಣಕ್ಕೆ ಹೋಗುತ್ತಾನೆ.


ಇದನ್ನೂ ಓದಿ: Vikrama Bethala: ಜೀವನದಲ್ಲಿ ಆಯ್ಕೆ ಮಾಡುವಾಗ ಹೀಗೂ ಯೋಚನೆ ಮಾಡ್ಬೇಕು, ಮಕ್ಕಳಿಗೆ ಹೇಳಿ ಈ ನೀತಿ ಕಥೆ


ಅಲ್ಲಿ ಉತ್ತಮ ಔತಣದ ನಂತರ, ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡುತ್ತಾರೆ. ಇನ್ನೇನು ರಾಜ ಮಲಗಬೇಕು ಎನ್ನುವಾಗ, ಬ್ರಾಹ್ಮಣನ ಕಿರಿಯ ಮಗ ತಡೆದು. ಮಲಗಬೇಡಿ. ಅಲ್ಲಿ ಕೆಳಗೆ ಏನೋ ಇದೆ. ಅದು ಅಪಾಯಕರ ಎನ್ನುತ್ತಾನೆ. ಆಗ ಹಿರಿಯ ಮಗ, ದಿಂಬನ್ನು ತೆಗೆದು ನೋಡಿದರೆ, ಅಲ್ಲೊಂದು ವಿಷಪೂರಿತ ಕೂದಲು ಇರುತ್ತದೆ. ಆ ಕೂದಲು ರಾಜ ಮಲಗಿದ ಚುಚ್ಚಿದ್ದರೆ, ಅಲ್ಲಿಯೇ ಸಾವು ಸಂಭವಿಸುತ್ತಿತ್ತು.


ಇಲ್ಲಿಗೆ ಕಥೆ ನಿಲ್ಲಿಸಿದ ಬೇತಾಳ ಈಗ ಹೇಳು ವಿಕ್ರಮ, ಈ ಇಬ್ಬರಲ್ಲಿ ರಾಜ ಜೀವ ಉಳಿಸಿದ್ದಕ್ಕಾಗಿ ಯಾರಿಗೆ ಬಹುಮಾನ ಕೊಡಬೇಕು ಎಂದು ಕೇಳುತ್ತದೆ. ಅದಕ್ಕೆ ವಿಕ್ರಮ, ಕಿರಿಯ ಮಗ ಸಣ್ಣವನಾದರೂ ಆ ವಸ್ತುವನ್ನು ನೋಡದೇ, ಮುಟ್ಟದೇ ಅಪಾಯವನ್ನು ಸೂಚಿಸಿದ್ದಾನೆ. ಅವನು ಹೇಳದಿದ್ದರೆ, ಹಿರಿಯ ಮಗ ಕೂದಲನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ, ಹಾಗಾಗಿ ಕಿರಿಯ ಮಗನಿಗೆ ಬಹುಮಾನ ಸಿಗಬೇಕು ಎನ್ನುತ್ತಾನೆ, ಈ ಉತ್ತರ ಕೇಳಿ ಬೇತಾಳ ಹಾರಿ ಹೋಗುತ್ತದೆ.

Published by:shrikrishna bhat
First published: