• Home
  • »
  • News
  • »
  • lifestyle
  • »
  • Weekend Story: ಏಕಾಗ್ರತೆ ಇಲ್ಲದೇ ಯಾವುದೇ ಕೆಲಸ ಮಾಡಿದ್ರೂ ನೀರಿನಲ್ಲಿ ಹೋಮ ಮಾಡಿದ ಹಾಗೆ, ಬೇತಾಳ ಹೇಳಿದ ನೀತಿ ಕಥೆ

Weekend Story: ಏಕಾಗ್ರತೆ ಇಲ್ಲದೇ ಯಾವುದೇ ಕೆಲಸ ಮಾಡಿದ್ರೂ ನೀರಿನಲ್ಲಿ ಹೋಮ ಮಾಡಿದ ಹಾಗೆ, ಬೇತಾಳ ಹೇಳಿದ ನೀತಿ ಕಥೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Vikram Betal Story: ಒಂದು ವಿಷಯವನ್ನು ಸರಿಯಾಗಿ ಯೋಚಿಸಿ ಗಮನವಿಟ್ಟು ಕಾರ್ಯ ಮಾಡ್ಬೇಕು ಎಂಬ ನೀತಿ ಪಾಠವನ್ನು ಹೇಳುವ ವಿಕ್ರಮ ಬೇತಾಳದ ಕತೆಯನ್ನು ನಾವಿಂದು ನಿಮ್ಮ ಮುಂದೆ ತಂದಿದ್ದು, ನಿಮ್ಮ ಮಕ್ಕಳಿಗೆ ಮಾತ್ರವಲ್ಲದೇ ನಿಮಗೂ ಸಹ ಇದು ಬಹಳ ಅವಶ್ಯಕ.

  • Share this:

ಯಾವುದೇ ಕೆಲಸಕ್ಕೆ (Work)  ಕುಳಿತರೂ, ಕೆಲವೇ ಕ್ಷಣದಲ್ಲಿ ನಮ್ಮ ಗಮನ ಬೇರೆ ಕಡೆ ಸಾಗುತ್ತದೆ ಯಾವುದನ್ನೂ ಸರಿಯಾಗಿ ಕೆಳಿಸಿಕೊಳ್ಳುವುದಿಲ್ಲ, ಮತ್ತೆ ಅ ಕೆಲಸದ ಕಡೆ ಗಮನ ಕೊಡುವುದರಲ್ಲಿ ಸಾಕಷ್ಟು ಸಮಯ ವ್ಯರ್ಥವಾಗಿರುತ್ತದೆ. ಇದಕ್ಕೆ ಕಾರಣ ನಮಗಿರುವ ಏಕಾಗ್ರತೆಯ (Concentration) ಕೊರತೆ. ಇದರಿಂದಲೇ ನೀವು ಎಲ್ಲಾ ಕಾರ್ಯವನ್ನು ಮುಂದೂಡುತ್ತಲೇ ಬರುವುದು ಕೂಡ. ಅಲ್ಲದೇ, ನಮಗೆ ಈ ಏಕಾಗ್ರತೆ ಕೊರತೆಯಿಂದ ಸಮಸ್ಯೆಗಳು ಸಹ ಬರುತ್ತದೆ. ಸರಿಯಾಗಿ ಕೇಳಿಸಿಕೊಳ್ಳದೇ, ತಪ್ಪು ಮಾಡಿ ಸಂಕಷ್ಟಕ್ಕೆ ಸಿಲುಕುತ್ತೇವೆ. ಆದ್ದರಿಂದ ಏಕಾಗ್ರತೆ ಬಹಳ ಮುಖ್ಯ. ನಾವು ಒಂದು ವಿಷಯವನ್ನು ಸರಿಯಾಗಿ ಯೋಚಿಸಿ ಗಮನವಿಟ್ಟು ಕಾರ್ಯ ಮಾಡ್ಬೇಕು ಎಂಬ ನೀತಿ ಪಾಠವನ್ನು (Life Lesson) ಹೇಳುವ ವಿಕ್ರಮ ಬೇತಾಳದ (vikram bethal) ಕತೆಯನ್ನು ನಾವಿಂದು ನಿಮ್ಮ ಮುಂದೆ ತಂದಿದ್ದು, ನಿಮ್ಮ ಮಕ್ಕಳಿಗೆ ಮಾತ್ರವಲ್ಲದೇ ನಿಮಗೂ ಸಹ ಇದು ಬಹಳ ಅವಶ್ಯಕ.


ಜೂಜುಕೋರ ರಾಜನೊಬ್ಬನ ಕಥೆ


ನಾಗಪುರದ ರಾಜ ವೃಷಸೇನ, ಅವನಿಗೆ ಸಂಪತ್ತು, ಆಸ್ತಿ ಹೀಗೆ ಎಲ್ಲವೂ ಇತ್ತು. ರಾಜನಲ್ವಾ ಯಾವುದಕ್ಕೂ ಕಡಿಮೆ ಇರಲಿಲ್ಲ. ಆದರೆ ಅವನಲ್ಲಿದ್ದ ಕೆಟ್ಟ ಚಟ ಎಂದರೆ, ಜೂಜು ಆಡುವುದು. ಹೌದು, ಅವನೊಬ್ಬ ಜೂಜುಕೋರನಾಗಿದ್ದ. ಅವರ ಈ ಚಟದಿಂದ ಎಲ್ಲವನ್ನೂ ಕಳೆದುಕೊಳ್ಳುತ್ತಾನೆ.  ರಾಜನಿಂದ ರಾಜ್ಯವನ್ನು ವಶ ಮಾಡಿಕೊಂಡ ಅವನ ದಾಯಾದಿಗಳು, ಆತನನ್ನ ಊರಿನಿಂದ ಹೊರ ಹಾಕುತ್ತಾರೆ. ಎಲ್ಲವನ್ನೂ ಕಳೆದುಕೊಂಡು ಎಲ್ಲಿಗೆ ಹೋಗಬೇಕು ಎಂದು ರಾಜನಿಗೆ ತಿಳಿಯುವುದಿಲ್ಲ. ಮತ್ತೊಂದು ರಾಜ್ಯಕ್ಕೆ ಹೋಗೋಣ ಎಂದು ಕಾಡಿನ ಮೂಲಕ ಹೊರಡುತ್ತಾನೆ.


ರಸ್ತೆಯಲ್ಲಿ ಮರದ ಕೆಳಗೆ ಧ್ಯಾನ್ಯ ಮಾಡುತ್ತಿರುವ ಋಷಿಯನ್ನು ನೋಡಿ, ಆತನ ಬಳಿ ಹೋಗಿ ಕುಳಿತುಕೊಳ್ಳುತ್ತಾನೆ. ಋಷಿ ಕಣ್ಣು ತೆಗೆಯುವವರೆಗೂ ಕಾದು ಕುಳಿತಿರುತ್ತಾನೆ. ನಂತರ ಕಣ್ಣು ತೆರೆದ ಮುನಿ, ರಾಜನನ್ನ ನೋಡಿ ನೀರು ಹಾಗು ಆಹಾರಗಳನ್ನು ಬೇಕಾ? ಎಂದು ಕೇಳುತ್ತಾನೆ.  ಆಗ ಬಹಳ ಹಸಿವಾಗಿದ್ದ ರಾಜ, ತಿನ್ನಲು ಏನಾದರೂ ಸಿಗಬಹುದಾ? ಎಂದು ಕೇಳುತ್ತಾನೆ. ಅದಕ್ಕೆ ಆ ಸಂನ್ಯಾಸಿ, ತನ್ನ ಚೀಲದಲ್ಲಿ ಹಣ್ಣು ಹಾಗೂ ಬಾದಾಮಿ ಬೀಜಗಳನ್ನು ನೀಡುತ್ತಾರೆ.
ಇದನ್ನು ನೋಡಿದ ರಾಜ, ನಾನು ಒಬ್ಬ ರಾಜ, ಈ ರೀತಿ ನೆಲದ ಮೇಲೆ ಕುಳಿತು ತಿನ್ನಲು ಸಾಧ್ಯವಿಲ್ಲ ಎನ್ನುತ್ತಾನೆ.  ರಾಜನ ಮನಸ್ಸನ್ನು ಅರಿತ ಋಷಿ, ತನ್ನ ಮಾಯವಿದ್ಯೆಯಿಂದ ಸುಂದರ ತರುಣಿಯನ್ನು ಸೃಷ್ಟಿಸಿ, ಗುಡಿಸಿನ ಒಳಗೆ ಕರೆದುಕೊಂಡು ಹೋಗಿ, ರಾಜನಿಗೆ ಔತಣ ನೀಡುವಂತೆ ಹೇಳುತ್ತಾರೆ. ತರುಣಿ ಸಹ ರಾಜನನ್ನ ಒಳಗೆ ಕರೆದು ಕರೆದುಕೊಂಡು ಹೋಗುತ್ತಾಳೆ. ಆ ಗುಡಿಸಿಲಿನ ಒಳಗೆ ಒಂದು ಅರಮನೆ ಇರುತ್ತದೆ. ಅಲ್ಲಿ ರಾಜನಿಗೆ ಮೃಷ್ಟಾನ್ನ ಬೋಜನ ನೀಡಲಾಗುತ್ತದೆ. ನಂತರ ಅಲ್ಲೇ ಇದ್ದ ಮಂಚದ ಮೇಲೆ ರಾಜ ಮಲಗುತ್ತಾನೆ.
ಕೆಲ ಸಮಯದ ನಂತರ ಎಚ್ಚರಗೊಂಡ ರಾಜ, ಎದ್ದು ನೋಡಿದರೆ ಅಲ್ಲಿ ಅರಮನೆಯಾಗಲಿ, ಮಂಚವಾಗಲಿ ಇರುವುದಿಲ್ಲ. ನೆಲದ ಮೆಲೆ ಮಲಗಿರುತ್ತಾನೆ. ಇದನ್ನು ನೋಡಿ ಸಂನ್ಯಾಸಿಯ ಬಳಿ ಕೆಳಿದಾಗ. ಅವರು, ಇದು ನನ್ನ ಮಾಯವಿದ್ಯೆಯ ಪವಾಡ, ಅದನ್ನು ಕಲಿತವರು ಮಾತ್ರ ಇದನ್ನು ಮಾಡಬಹುದು. ಈ ವಿದ್ಯೆ ಕಲಿತವರು ಸುಖ, ಸಂಪತ್ತು, ಸಮೃದ್ಧಿಗಳಿಸುತ್ತಾರೆ ಎಂದು ಹೇಳುತ್ತಾರೆ.


ಇದನ್ನೂ ಓದಿ: ರಸಗುಲ್ಲಾದಿಂದ ಸಂದೇಶ್​ವರೆಗೆ, ಬೆಂಗಳೂರಿನಲ್ಲಿ ಬೆಸ್ಟ್ ಬಂಗಾಳಿ ಸ್ವೀಟ್ಸ್ ಸಿಗುವ ಬೇಕರಿಗಳಿವು


ಆಗ ರಾಜ, ನನಗೂ ಆ ವಿದ್ಯೆ ಹೇಳಿಕೊಡುವಂತೆ ಕೇಳಿಕೊಳ್ಳುತ್ತಾನೆ.  ಇದಕ್ಕೆ ಒಪ್ಪಿಕೊಂಡ ಮುನಿಗಳು ಒಂದು ಮಂತ್ರವನ್ನು ಹೇಳಿಕೊಟ್ಟು, ಇದನ್ನು ಸ್ವಲ್ಪವೂ ನಿಲ್ಲಿಸದೇ, 40 ದಿನಗಳ ಕಾಲ ನೀರಿನಲ್ಲಿ ಒಂದು ಕಾಲಿನಲ್ಲಿ ನಿಂತು ಹೇಳಬೇಕು ಎನ್ನುತ್ತಾರೆ. ಅವರು ಹೇಳಿದಂತೆ ರಾಜ ಮಾಡುತ್ತಾನೆ. ನಂತರ ಋಷಿಗಳ ಬಳಿ ಬಂದು ಈ ವಿದ್ಯೆ ಕಲಿಯಲು ಮತ್ತೇನು ಮಾಡಬೇಕು ಎಂದು ಕೇಳುತ್ತಾನೆ. ಇದೇ ಮಂತ್ರವನ್ನು ಬೆಂಕಿಯಲ್ಲಿ ಕುಳಿತು ಹೇಳಬೇಕು ಎನ್ನುತ್ತಾರೆ. ಅದನ್ನೂ ಸಹ ಕಷ್ಟಪಟ್ಟು ರಾಜ ಮಾಡುತ್ತಾನೆ.


ಏಕಾಗ್ರತೆಯ ಕೊರತೆಯೇ ಸೋಲಿಗೆ ಕಾರಣ


ಮತ್ತೆ 40 ದಿನಗಳ ನಂತರ ರಾಜ ತಾನು ವಿದ್ಯೆಯನ್ನು ಕಲಿತಿರುವ ಬಗ್ಗೆ ಪರೀಕ್ಷೆ ಮಾಡುತ್ತಾನೆ. ಆದರೆ, ಅದು ವರ್ಕ್ ಆಗುವುದಿಲ್ಲ.  ಇಲ್ಲಿಗೆ ಕತೆ ನಿಲ್ಲಿಸಿದ ಬೇತಾಳ ವಿಕ್ರಮಾದಿತ್ಯನ ಬಳಿ, ರಾಜನಿಗೆ ಆ ವಿದ್ಯೆ ಏಕೆ ಒಲಿಯುವುದಿಲ್ಲ ಎಂದು ಕೇಳುತ್ತದೆ.


ಆಗ ವಿಕ್ರಮಾದಿತ್ಯ, ಮನುಷ್ಯ ದಾನಿಯೂ ಧರ್ಮಿಷ್ಠನೂ ಆಗದೆ ಒಳ್ಳೆ ಹೆಸರು ಪಡೆಯಲು ಸಾಧ್ಯವಿಲ್ಲ. ಹಾಗೆಯೇ,  ಧ್ಯಾನ ಮಾಡದೇ ದೇವರು ಒಲಿಯಲ್ಲ, ಗುರು ಇಲ್ಲದೆ ಜ್ಞಾನ ಸಂಪಾದನೆ ಸಾಧ್ಯವಿಲ್ಲವೋ, ಅದೇ ರೀತಿ ಏಕಾಗ್ರತೆಯ ಕೊರತೆ ರಾಜನಿಗೆ ಆ ವಿದ್ಯೆ ಒಲಿಯದಿರಲು ಸಾಧ್ಯವಿಲ್ಲ.


ಇದನ್ನೂ ಓದಿ: ಈ ಆಹಾರಗಳನ್ನು ತಿಂದ್ರೆ ಫಿಶರ್ಸ್‌ ಸಮಸ್ಯೆಗೆ ಪರಿಹಾರ ನೀಡುತ್ತೆ


ರಾಜ ನೀರು ಹಾಗೂ ಬೆಂಕಿಯಲ್ಲಿ ಕಷ್ಟಪಟ್ಟು ಪ್ರಯತ್ನ ಮಾಡಿದರೂ ಸಹ ವಿದ್ಯೆ ಒಲಿಯಲು ಅವನ ಏಕಾಗ್ರತೆಯ ಕೊರತೆ ಕಾರಣ. ಅವನು ಕಷ್ಟಪಟ್ಟು ನಿಂತಿದ್ದರೂ ಸಹ ಆತನ ಮನಸ್ಸು ಮಾತ್ರ ತರುಣಿ ಹಾಗೂ ಸುಖ, ಸಂತೋಷದ ಬಗ್ಗೆ ಆಲೋಚನೆ ಮಾಡುತ್ತಿತ್ತು. ಹಾಗಾಗಿ ಅವನು ಸೋತಿದ್ದು ಎನ್ನುತ್ತಾನೆ.

Published by:Sandhya M
First published: