• Home
  • »
  • News
  • »
  • lifestyle
  • »
  • Vikram Betal: ಒಳ್ಳೆಯ ಮನಸ್ಸಿನಿಂದ ಸಹಾಯ ಮಾಡಿದ್ರೂ ಬದುಕಿಗೆ ಉರುಳಾಗಬಹುದು, ಕಥೆ ಹಿಂದಿದೆ ನೂರು ಅರ್ಥ

Vikram Betal: ಒಳ್ಳೆಯ ಮನಸ್ಸಿನಿಂದ ಸಹಾಯ ಮಾಡಿದ್ರೂ ಬದುಕಿಗೆ ಉರುಳಾಗಬಹುದು, ಕಥೆ ಹಿಂದಿದೆ ನೂರು ಅರ್ಥ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Vikram betal Story: ಇನ್ನೂ ಕೆಲವೊಮ್ಮೆ ನಮ್ಮ ಬೆನ್ನಿಗೆ ಚೂರಿ ಹಾಕುತ್ತಾರೆ. ಅದಕ್ಕೆ ಉದಾಹರಣೆ ನಮ್ಮ ನಿತ್ಯ ಜೀವನದಲ್ಲಿ ಸಹ ಸಿಗುತ್ತದೆ. ಆದರೆ, ವಿಕ್ರಮನಿಗೆ ಬೇತಾಳ ಹೇಳಿದ ಒಂದು ಕಥೆ ಕೇವಲ ನಿಮ್ಮ ಜೀವನದಲ್ಲಿ ಮಾತ್ರವಲ್ಲದೇ, ದೇಶದ ರಾಜಕೀಯ ವ್ಯವಸ್ಥೆ ಬಗ್ಗೆ ಸಹ ಪಾಠವಾಗುತ್ತದೆ. 

ಮುಂದೆ ಓದಿ ...
  • Share this:

ಕೆಲವೊಂದು ಸಹ ನಾವು ಮಾಡುವ ಸಣ್ಣ ತಪ್ಪುಗಳು (Mistakes) ಹಾಗೂ ಸಣ್ಣ ಸಹಾಯ ನಮಗೆ ವರವಾಗಬಹುದು ಅಥವಾ ಶಾಪ ಸಹ ಆಗಬಹುದು. ನಾವು ಕಷ್ಟದಲ್ಲಿದ್ದಾರೆ ಎಂದು ಒಬ್ಬರಿಗೆ ಸಹಾಯ ಮಾಡಿದರೆ, ಅವರಿಂದ ಏನೂ ಬಯಸದಿದ್ದರೂ ಸಹ ಕೆಲವೊಮ್ಮೆ ನಮಗೆ ಒಳ್ಳೆಯದೇ ಸಿಗುತ್ತದೆ. ಇನ್ನೂ ಕೆಲವೊಮ್ಮೆ ನಮ್ಮ ಬೆನ್ನಿಗೆ ಚೂರಿ ಹಾಕುತ್ತಾರೆ. ಅದಕ್ಕೆ ಉದಾಹರಣೆ ನಮ್ಮ ನಿತ್ಯ ಜೀವನದಲ್ಲಿ (Life) ಸಹ ಸಿಗುತ್ತದೆ. ಆದರೆ, ವಿಕ್ರಮನಿಗೆ ಬೇತಾಳ (Vikram Betal) ಹೇಳಿದ ಒಂದು ಕಥೆ ಕೇವಲ ನಿಮ್ಮ ಜೀವನದಲ್ಲಿ ಮಾತ್ರವಲ್ಲದೇ, ದೇಶದ ರಾಜಕೀಯ ವ್ಯವಸ್ಥೆ ಬಗ್ಗೆ ಸಹ ಪಾಠವಾಗುತ್ತದೆ.


ರಾಜನೊಬ್ಬನ ಉತ್ತಮ ಗುಣಕ್ಕೆ ಪರದಾಡಿದ ಜನ


ಒಂದಾನೊಂದು ಕಾಲದಲ್ಲಿ ಮಹೇಶನೂರು ಎನ್ನುವ ರಾಜ್ಯದಲ್ಲಿ ಅದ್ಭುತ ರಾಜನ ಆಡಳಿತದಲ್ಲಿ ಪ್ರಜೆಗಳು ಬಹಳ ಸುಖ ಸಂತೋಷದಿಂದ್ದ ಬಾಳುತ್ತಿದ್ದ ಕಾಲವಿತ್ತು. ಒಂದು ದಿನ ಅಲ್ಲಿಗೆ ಮಾಯನ್ಮಾರ್ ಎಂಬ ದೇಶದಿಂದ ಓಡಿಸಲ್ಪಟ್ಟ ಒಬ್ಬ ನಿರಾಶ್ರಿತ ಆಶ್ರಯ ಬಯಸಿ ಈ ರಾಜನ ಆಸ್ಥಾನಕ್ಕೆ ಬಂದು ಬೇಡಿಕೊಳ್ಳುತ್ತಾನೆ. ಇನ್ನು ಕರುಣಾಮಯಿಯಾಗಿದ್ದ ಮಹಾರಾಜನು ಆತನಿಗೆ ತನ್ನ ಸೈನ್ಯದಲ್ಲಿ ಒಂದು ಜವಾಬ್ದಾರಿಯುತ ಸ್ಥಾನವನ್ನು ನೀಡಿ, ಗೌರವಿಸುತ್ತಾನೆ.


ಆದರೆ ಈ ಆಶ್ರಯ ಪಡೆದ ವ್ಯಕ್ತಿ ಮಾತ್ರ ಒಳ್ಳೆಯವನಾಗಿರಲಿಲ್ಲ. ತನಗೆ ಆಶ್ರಯ ನೀಡಿದ ರಾಜ ನಿಧನ ಹೊಂದಿದ ನಂತರ, ಕುತಂತ್ರದಿಂದ ಆ ನಿರಾಶ್ರಿತ ಆ ರಾಜಕುಟುಂಬದವರಿಂದ ಅಧಿಕಾರವನ್ನು ಕಿತ್ತುಕೊಂಡು ತಾನೇ ಆಡಳಿತ ಮಾಡಲು ಆರಂಭಿಸುತ್ತಾನೆ. ಅಷ್ಟಕ್ಕೇ ಸುಮ್ಮನಾಗದೇ, ಬೀದಿಯಲ್ಲಿ ಬಿದ್ದಿದ್ದ ತನಗೆ ಆಶ್ರಯ ನೀಡಿದ್ದ ರಾಜನ ಕುಟುಂಬದವರನ್ನು ಬಹಳ ಹೀನಾಯವಾಗಿ ನಡೆಸಿಕೊಳ್ಳುತ್ತಿರುತ್ತಾರೆ. ಹೀಗೆ ಕಾಳಗಳು ಕಳೆಯುತ್ತವೆ. ಸುಮಾರು ವರ್ಷಗಳ ನಂತರ ಈ ನಿರಾಶಿತನಾಗಿ ಬಂದು ರಾಜನಾದವನು ಸಾವಿಗೀಡಾಗುತ್ತಾನೆ. ಅವನ ನಂತರ ಅವನ ಮಗ ಪಟ್ಟಕ್ಕೆ ಬಂದು, ರಾಜನಾಗುತ್ತಾನೆ.




ಇನ್ನು ಆತನ ಮಗ ಅಧಿಕಾರಕ್ಕೆ ಬಂದ ನಂತರ ಸಮಸ್ಯೆ ಇನ್ನೂ ಹೆಚ್ಚಾಗುತ್ತದೆ. ಆತ ತನ್ನ ತಂದೆಗೆ ಆಶ್ರಯ ನೀಡಿದ್ದ ರಾಜನ ಕುಟುಂಬಕ್ಕೆ ಆಪ್ತರಾಗಿದ್ದವರನ್ನೆಲ್ಲಾ ಬೀದಿಬೀದಿಯಲ್ಲಿ ಕೊಂದು ರಕ್ತದ ಮಳೆಯನ್ನು ಸುರಿಸುತ್ತಾನೆ. ಅಲ್ಲದೇ, ತನ್ನ ಕುತಂತ್ರ ಬುದ್ದಿಯಿಂದ ನಿಧಾನವಾಗಿ ಅಕ್ಕ ಪಕ್ಕದ ರಾಜ್ಯಗಳನ್ನೆಲ್ಲಾ ಆಕ್ರಮಿಸಿಕೊಂಡು ಮೆರೆಯುತ್ತಿರುತ್ತಾನೆ.


ಅಲ್ಲದೇ, ಆತ ಎಷ್ಟು ಕೆಟ್ಟವನು ಎಂದರೆ ತನ್ನ ವಿರುದ್ಧ ನಿಂತವರನ್ನು ಹಾಗೂ ತನಗಾಗದವರನ್ನೆಲ್ಲಾ ಆನೆಯ ಕಾಲಿಗೆ ಕಟ್ಟಿ ನೂರಾರು ರಸ್ತೆಯಲ್ಲಿ ಎಳೆದಾಡಿಸಿ ಕೊಂದು ಹಾಕುತ್ತಿರುತ್ತಾನೆ. ಹಾಗೆಯೇ, ತನ್ನ ಧರ್ಮದವರಲ್ಲದ ಜನಗಳನ್ನು ಸಹ ಕೊಲ್ಲುತ್ತೇನೆ ಎಂದು ಹೇಳುತ್ತಾನೆ. ಇದರಿಂದ ಭಯಬೀತರಾಗಿ ಒಪ್ಪಿದವರನ್ನು ಮತಾಂತರ ಮಾಡುತ್ತಾನೆ, ಒಪ್ಪದವರ ರುಂಡ ಕಡಿದು ಹಾಕುತ್ತಾನೆ. ದಿನದಿಂದ ದಿನಕ್ಕೆ ಆತನ ದುಷ್ಕಾರ್ಯಗಳು ಹೆಚ್ಚಾಗುತ್ತಲೇ ಹೋಗುತ್ತದೆ.




ಇದೇ ರೀತಿ ನಡೆಯುತ್ತಿರುತ್ತದೆ. ಈ ಸಮಯದಲ್ಲಿ ಆತನ ರಾಜ್ಯದ ಮೇಲೆ ಬ್ರಿಟೇಶ್ ಕಳ್ಳಪ್ಪ ಎನ್ನುವ ಪರದೇಶೀ ರಾಜ ಕಣ್ಣು ಹಾಕುತ್ತಾನೆ. ಈ ದುಷ್ಟ ರಾಜ ಆತನನ್ನ ಸೋಲಿಸುವ ಭರದಲ್ಲಿ ಕಳ್ಳನ ಜೊತೆ ಕೈ ಜೋಡಿಸಿ ತಾನೇ ಹೆಣವಾಗಿ ಹೋಗುತ್ತಾನೆ.


ಕ್ರೂರಿಯನ್ನು ನೆನೆದು ಸಂಭ್ರಮಪಡುವಂತೆ ಆದೇಶ


ಅಷ್ಟೇ ಆಗಿದ್ದರೆ ಪರವಾಗಿಲ್ಲ. ಆದರೆ ಸ್ವಲ್ಪ ವರ್ಷಗಳ ನಂತರ ಎಲ್ಲವನ್ನೂ ಮರೆತು ಇನ್ನೇನು ನೆಮ್ಮದಿಯಿಂದ ಬದುಕಬಹುದು ಎನ್ನುವ ಸಮಯದಲ್ಲಿ, ದುಷ್ಟ ರಾಜನ ದೂರದ ಸಂಬಂಧಿಯೊಬ್ಬ ಅದೇ ರಾಜ್ಯದಲ್ಲಿ ನಾಡ ದೊರೆಯಾಗಿ ಪಟ್ಟಕ್ಕೇರಿದ. ಈ ರಾಜನ ಆದೇಶ ಜನರನ್ನು ಬೆಚ್ಚಿ ಬಿಳಿಸಿತ್ತು. ಆತ, ತನ್ನ ಪೂರ್ವಜರನ್ನು ಹಾಡಿ ಹೊಗಳಬೇಕು ಎಂದು ಆದೇಶ ಮಾಡುತ್ತಾನೆ.


ಇದನ್ನೂ ಓದಿ: ಮಹಿಳೆಯರು ಈ ಆಹಾರಗಳನ್ನು ಮಿಸ್​ ಮಾಡದೇ ಸೇವನೆ ಮಾಡಬೇಕು


ಯಾರಿಂದ ಇಷ್ಟಲ್ಲಾ ಕಷ್ಟ ಅನುಭವಿಸಿದ್ದರೋ, ಯಾರಿಂದ ಕುಟುಂಬದವರನ್ನು ಕಳೆದುಕೊಂಡಿದ್ದೇವೆಯೋ, ಆತನನ್ನ ನಮ್ಮ ಸ್ವಂತ ದುಡ್ಡಿನಿಂದ ಸಂಭ್ರಮಿಸಬೇಕು ಎಂಬುದನ್ನ ಜನರಿಗೆ ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಈ ನಿರ್ಧಾರವನ್ನು ವಿರೋಧ ಮಾಡುತ್ತಾರೆ. ಆದರೆ, ಸರ್ವಾಧಿಕಾರಿಯಾಗಿದ್ದ ರಾಜ, ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ.


ವಿಕ್ರಮನ ಉತ್ತರ


ಇಲ್ಲಿಗೆ ಕಥೆ ನಿಲ್ಲಿಸಿದ ಬೇತಾಳ, ವಿಕ್ರಮಾದಿತ್ಯನಿಗೆ ಈಗ ಹೇಳು ರಾಜ ಮಾಡಿದ್ದು, ಸರಿ ಇದಿಯಾ? ಕಷ್ಟಕೊಟ್ಟವರನ್ನು ನೆನೆಯಿರಿ ಎಂದು ತಪ್ಪಲ್ಲವೇ ಎನ್ನುತ್ತಾನೆ. ಇದಕ್ಕೆ ವಿಕ್ರ, ಒಬ್ಬ ನಾಡ ದೊರೆಯಾಗಿ  ಆತ ತೆಗೆದುಕೊಳ್ಳುವುದರಲ್ಲಿ ತಪ್ಪಿಲ್ಲ. ಅಲ್ಲದೆ ಆತ ಅದೇ ಮಾಯನ್ಮಾರೀ ನಿರಾಶ್ರಿತ ಮಹೇಶನೂರು ರಾಜನ ಕುಟುಂಬದೊಂದಿಗೆ  ಸಂಬಂಧ ಹೊಂದಿದವನಾದ್ದರಿಂದ ತನ್ನ ಪೂರ್ವಜನನ್ನು ತನ್ನ ರಾಜ್ಯದ ಪ್ರಜೆಗಳೆಲ್ಲಾ ನೆನೆಯಲಿ, ಹಾಡಿ ಹೊಗಳಲಿ ಎಂದು ಆಶಿಸುವುದರಲ್ಲೂ ತಪ್ಪಿಲ್ಲ.


ಇದನ್ನೂ ಓದಿ: ಪಟ್ಟದಕಲ್ಲಿನ ಕಲ್ಲು ಕಲ್ಲುಗಳಲ್ಲೂ ಇದೆ ಕರುನಾಡ ಇತಿಹಾಸ, ನೀವೂ ಒಮ್ಮೆ ನೋಡಿ ಬನ್ನಿ ಚಾಲುಕ್ಯರ ಸಾಹಸ


ಹಾಗೆ ನೋಡಿದರೆ  ರಾಜ್ಯದ ಯುವ ಜನತೆಗೆ ಆತ ನಿಜಕ್ಕೂ ಯಾರು, ತಮ್ಮ ಪೂರ್ವಜರನ್ನೆಲ್ಲಾ ಹೇಗೆ ನಡೆಸಿಕೊಂಡಿದ್ದ ಎನ್ನುವುದೆಲ್ಲವನ್ನೂ ಮತ್ತೊಮ್ಮೆ ತಿಳಿಯುವಂತೆ ಮಾಡುತ್ತಿದ್ದಾನೆ. ಜನ ಮರೆತ ಕ್ರೂರಿಯನ್ನು ನೆನಪಿಸಿ, ಎಲ್ಲರಿಗೂ ಇತಿಹಾಸ ಹೇಳುವಂತೆ ಮಾಡಿದ್ದಾನೆ. ಅವನು ಮಾಡಿದ್ದು, ಸರಿ ಇದೆ ಅಲ್ವಾ? ಎನ್ನುತ್ತಾನೆ.

Published by:Sandhya M
First published: