ಇತ್ತೀಚಿನ ಮಕ್ಕಳಿಗೆ (Children) ಕಥೆ ಕೇಳುವ (Story) ಅಥವಾ ಪೋಷಕರಿಗೆ ಕಥೆ ಹೇಳುವ ಅಭ್ಯಾಸವೇ ಇಲ್ಲ. ಬರೀ ಸಿನಿಮಾ ಹಾಗೂ ಮೊಬೈಲ್ ಬಿಟ್ಟರೆ ಶಾಲೆ ಇದೇ ಜೀವನ ಆಗಿದೆ. ಮಕ್ಕಳ ಜೀವನಕ್ಕೆ ಅಗತ್ಯವಾದ ಪಾಠಗಳನ್ನು ಶಾಲೆಯನ್ನು ಮಾತ್ರ ನೀಡುವುದಿಲ್ಲ, ಕಥೆಗಳ ಮೂಲಕ ಸಹ. ಜೀವನ ಸಾಗಿಸಲು ಹಣ ಸಂಪಾದಿಸಲು ನಮಗೆ ಶಾಲೆಯಲ್ಲಿ ಶಿಕ್ಷಣ ಸಿಗುತ್ತದೆ, ಹಾಗೆಯೇ. ಜೀವನ ನಡೆಸಲು ನಮಗೆ ಬುದ್ದಿವಂತಿಕೆ ಹಾಗೂ ಯಾವುದು ತಪ್ಪು ಸರಿ ಎಂಬುದರ ಬಗ್ಗೆ ಮಾಹಿತಿ ಇರಬೇಕು. ಇದನ್ನು ಮಕ್ಕಳಿಗೆ ಕಥೆಗಳ ಮೂಲಕ ಹೆಳಲು ಸಾಧ್ಯವಾಗುತ್ತದೆ. ಮೊದಲೆಲ್ಲ ಅಜ್ಜ, ಅಜ್ಜಿ ಅಥವಾ ತಂದೆ-ತಾಯಿ ಮಕ್ಕಳಿಗೆ ರಾತ್ರಿ ಮಲಗುವ ಮುನ್ನ ಒಂದೊಂದು ಅದ್ಭುತ ಕಥೆಗಳನ್ನು ಹೇಳುತ್ತಿದ್ದರು. ಈಗ ಸಮಯದ ಅಭಾವವಿದೆ. ಆದರೆ, ವೀಕೆಂಡ್ನಲ್ಲಿ (Weekend) ನೀವು ಮಕ್ಕಳಿಗೆ ಒಂದೊಂದು ಕಥೆಗಳನ್ನು ಹೇಳಬಹುದು. ಆಗ, ಮಕ್ಕಳಿಗೆ ನಮ್ಮ ಇತಿಹಾಸದ (history) ಜೊತೆ ಜೀವನದ ಪಾಠ ಕಲಿಯಲು ಸಹಾಯವಾಗುತ್ತದೆ. ಹಾಗೆಯೇ ವಿಕ್ರಮ ಬೇತಾಳ ಕಥೆ ಸಹ. ಈ ವಾರದ ವಿಕ್ರಮ ಬೇತಾಳ ಕಥೆ ಮನುಷ್ಯನಿಗೆ ಶ್ರಮವಹಿಸಿ ಕೆಲಸ ಮಾಡುವುದು ಎಷ್ಟು ಮುಖ್ಯ ಎಂಬುದನ್ನ ತಿಳಿಸುತ್ತದೆ.
ಒಂದು ದೇಶ ಹೆಸರು ಪ್ರತಾಪ ನಗರ, ಆ ಊರಿನ ರಾಜನ ಹೆಸರು ಪ್ರತಾಪ. ಅಲ್ಲಿನ ದೊಡ್ಡ ಕಾಡಿನ ಹೊರಭಾಗದಲ್ಲಿ ಒಬ್ಬ ಸಂನ್ಯಾಸಿ ಧ್ಯಾನ ಮಾಡುತ್ತಾ ಕುಳಿತಿರುತ್ತಾರೆ. ಹೀಗೆ ಕೆಲ ದಿನಗಳು ಕಳೆದ ನಂತರ ಊರಿನ ಜನ ಸಹ ಈ ಸಂನ್ಯಾಸಿಗಳ ಬಳಿ ಬರುತ್ತಾರೆ. ಹೀಗೆ ಪ್ರತಿದಿನ ಬರುತ್ತಿದ್ದ ರೈತನ ಬಳಿ ಒಂದು ದಿನ ಸಂನ್ಯಾಸಿಯು, ನೀನು ಪ್ರತಿದಿನ ಮಲಗುವ ಗದ್ದೆಯ ಮನೆಯಲ್ಲಿ ಇಂದು ಮಲಗುವುದು ಬೇಡ ಎಂದು ಹೇಳಿ ಕಳುಹಿಸುತ್ತಾರೆ. ಯಾಕೆ ಸಂತರು ಹೀಗೆ ಹೇಳಿದರು ಎಂಬುದನ್ನ ಚಿಂತಿಸುತ್ತಲೇ ರೈತ , ಆ ದಿನ ಮನೆಯ ಹೊರಗೆ ಮಲಗುತ್ತಾನೆ. ಕೆಲ ಹೊತ್ತಿನಲ್ಲಿಯೇ ದೊಡ್ಡ ಸಿಡಿಲು ಬಡಿದು, ರೈತ ಮನೆ ಸುಟ್ಟು ಹೋಗುತ್ತದೆ. ಆದರೆ ರೈತನ ಜೀವ ಉಳಿಯುತ್ತದೆ. ಈ ಸುದ್ದಿ ಊರೆಲ್ಲಾ ಹರಡುತ್ತದೆ. ಆ ಸಂನ್ಯಾಸಿಯಿಂದಲೇ ರೈತನ ಜೀವನ ಉಳಿದದ್ದು ಎಂದು ಎಲ್ಲರೂ ತಮ್ಮ ಕಷ್ಟ ಹೇಳಿಕೊಳ್ಳುತ್ತಾರೆ. ಆ ಸಂನ್ಯಾಸಿಗೆ ದಿವ್ಯ ಜ್ಞಾನಿ ಎಂಬ ಬಿರುದನ್ನ ನೀಡುತ್ತಾರೆ.
ಈ ಸಂನ್ಯಾಸಿಯ ವಿಚಾರಗಳನ್ನು ಕೇಳಿದ ರಾಜ ಪ್ರತಾಪನ ಸೇನಾಧಿಪತಿ ರಾಜನ ಬಳಿ ಸಹ ಇದೇ ವಿಚಾರವಾಗಿ ಮಾತನಾಡುತ್ತಾನೆ. ರಾಜ, ಆ ಸಂನ್ಯಾಸಿ ನಿಜಕ್ಕೂ ದಿವ್ಯ ಜ್ಞಾನಿ ನಿನ್ನೆ ನನ್ನ ಮಗನಿಗೆ ನೀರಿನಿಂದ ಅಪಾಯವಿದೆ ಎಂದಿದ್ದರು, ಇಂದು ಹಾಗೆಯೇ ನನ್ನ ಮಗ ನೀರಿನಲ್ಲಿ ಮುಳುಗುತ್ತಿದ್ದ, ಆದರೆ ಬಚಾವ್ ಆದ ಎಂದು ಆ ಸಂನ್ಯಾಸಿಯ ಗುಣಗಾನ ಮಾಡುತ್ತಾನೆ. ಅದಕ್ಕೆ ರಾಜ ಇರಬಹುದು ಆದರೆ ನಮ್ಮ ವಿಧಿ ಲಿಖಿತವನ್ನು ಯಾರೂ ಬದಲಿಸಲು ಸಾಧ್ಯವಿಲ್ಲ, ಆತ ಕೇವಲ ಏನಾಗುತ್ತೆ ಎಂಬುದನ್ನ ಹೇಳಬಹುದೇನು ಎಂದು ಹೇಳುತ್ತಾನೆ.
ಸಂನ್ಯಾಸಿಯ ಪರೀಕ್ಷೆ ಮಾಡಿದ ಮಂತ್ರಿ
ಇದನ್ನೆಲ್ಲಾ ಕೇಳಿಸಿಕೊಂಡ ಆ ರಾಜನ ಮಂತ್ರಿ ಶ್ರೀಧರ ಬಹಳ ಕುತೂಹಲದಿಂದ ಆ ಸಂನ್ಯಾಸಿಯ ಬಳಿ ಹೋಗುತ್ತಾನೆ. ಸಂನ್ಯಾಸಿಯನ್ನು ಭೇಟಿ ಮಾಡಿ ಹೊರಡುವ ಸಮಯದಲ್ಲಿ, ಮಂತ್ರಿಗೆ ಒಂದು ಔಷಧವನ್ನು ನೀಡುತ್ತಾರೆ. ಇದರಲ್ಲಿ ಒಂದು ಔಷಧವಿದೆ. ಇದು ಯಾವುದೇ ಗಾಯವನ್ನು ಗುಣಪಡಿಸುವ ಶಕ್ತಿ ಹೊಂದಿದೆ ಎಂದು ಹೇಳಿ ಕಳುಹಿಸುತ್ತಾರೆ. ಆಗ ಮಂತ್ರಿಗೆ ಚಿಂತೆಯಾಗುತ್ತದೆ, ಯಾರಿಗೆ ಗಾಯವಾಗುತ್ತದೆ ಎಂದು ಯೋಚನೆ ಮಾಡುತ್ತಾ ಕಾಡಿನ ದಾರಿಯಲ್ಲಿ ಬರುವಾಗ ಮರವೊಂದು ಬಿದ್ದು ಗಾಯವಾಗುತ್ತದೆ. ಅದಕ್ಕೆ ಸಂನ್ಯಾಸಿ ಕೊಟ್ಟ ಔಷಧಿಯನ್ನು ಹಾಕುತ್ತಾನೆ. ಇದರಿಂದ ಮಂತ್ರಿಗೆ ನಿಜಕ್ಕೂ ಆಶ್ಚರ್ಯವಾಗುತ್ತದೆ.
ಮರುದಿನ ರಾಜನ ಬಳಿ ಹೋಗಿ ನಡೆದ ಘಟನೆಯನ್ನು ವಿವರಿಸುತ್ತಾನೆ. ಇದನ್ನು ಕೆಳಿ ರಾಜ ಸಹ ಸಂನ್ಯಾಸಿ ಬಳಿ ಹೋಗುತ್ತಾನೆ. ನಾನು ಬೇಟೆಗೆ ಹೋಗುತ್ತಿದ್ದೇನೆ, ನನಗೆ ಎಷ್ಟು ಪ್ರಾಣಿಗಳು ಸಿಗುತ್ತದೆ ಎಂದು ಕೇಳುತ್ತಾನೆ. ಆಗ ಆ ಜ್ಞಾನಿಗಳು ಇಂದು ನಿನಗೆ ಒಂದೂ ಬೇಟೆ ಸಿಗುವುದಿಲ್ಲ ಎಂದು ಹೇಳುತ್ತಾರೆ. ಆದರೆ ರಾಜ ಇದನ್ನು ನಂಬುವುದಿಲ್ಲ. ಕಾಡಿಗೆ ಹೋದ ರಾಜನಿಗೆ ಆ ದಿನ ಒಂದೂ ಬೇಟೆಯೂ ಸಿಗುವುದಿಲ್ಲ. ಅಂದಿನಿಂದ ರಾಜ ಸಹ ಸಂನ್ಯಾಸಿಯನ್ನು ನಂಬಲು ಆರಂಭಿಸುತ್ತಾನೆ.
ಹೀಗೆ ದಿನ ಕಳೆದಾಗ ಒಂದು ದಿನ ಸೇನಾಧಿಪತಿಯ ಮಗ ಅನಾರೋಗ್ಯದಿಂದ ಸಾವನ್ನಪ್ಪುತ್ತಾನೆ. ಇದನ್ನು ನೋಡಿ ರಾಜ ಮಂತ್ರಿಯ ಬಳಿ ಜ್ಞಾನಿಯ ಹತ್ತಿರ ಕರೆದುಕೊಂಡು ಹೋಗಿಲ್ಲವೇ ಎಂದು ಕೇಳುತ್ತಾನೆ. ಅದಕ್ಕೆ ಕರೆದುಕೊಂಡು ಹೋಗಿದ್ದರೂ ಉಪಯೋಗವಾಗಿಲ್ಲ, ಸಾವು ಲಿಖಿತವಾಗಿತ್ತು. ಅವರ ಕೈನಲ್ಲಿ ಸಹ ಏನು ಮಾಡಲು ಆಗಲಿಲ್ಲ ಎಂದು ಹೇಳುತ್ತಾನೆ.
ಇದನ್ನು ಕೇಳಿದ ರಾಜ , ಮಂತ್ರಿಗೆ ಇಬ್ಬರು ನೌಕರರ ಜೊತೆ ಹೋಗಿ ಆ ಸಂನ್ಯಾಸಿಯನ್ನು ಕಾಡಿಗೆ ಬಿಡಲು ಹೇಳುತ್ತಾನೆ. ಇಲ್ಲಿದೆ ಕಥೆ ನಿಲ್ಲಿಸಿದ ಬೇತಾಳ ಏಕೆ ರಾಜ ಹೀಗೆ ಮಾಡಿದ, ಸಂನ್ಯಾಸಿಯಿಂದ ರಾಜ್ಯಕ್ಕೆ ಒಳ್ಳೆಯದಾಗಿತ್ತು ಎಂದು ವಿಕ್ರಮನ ಕೇಳುತ್ತದೆ.
ಸರಿಯಾಗಿ ಕಥೆಯನ್ನು ಕೇಳಿಸಿಕೊಂಡಿದ್ದ ವಿಕ್ರಮ, ಸಂನ್ಯಾಸಿ ಇಲ್ಲಿಯೇ ಇದ್ದಿದ್ದರೆ ಜನ ಕಷ್ಟಪಡುತ್ತಿರಲಿಲ್ಲ. ಯಾವುದೇ ಕೆಲಸ ಮಾಡುವ ಮುನ್ನ ಸಂನ್ಯಾಸಿಗಳನ್ನು ಕೇಳಿ ಮಾಡುತ್ತಿದ್ದರು. ಅವರು ಅಪಾಯವಿದ್ದರೆ ಮಾಡುವುದು ಬೇಡ ಅನ್ನುತ್ತಿದ್ದರು, ಇದರಿಂದ ಜನ ಶ್ರಮ ಹಾಕುತ್ತಿರಲಿಲ್ಲ, ಇದು ರಾಜ್ಯಕ್ಕೆ ಅಪಾಯ ಎಂದು ರಾಜ ಓಡಿಸಿದ ಎನ್ನುತ್ತಾನೆ. ವಿಕ್ರಮನ ಉತ್ತೆ ಕೇಳಿ ಬೇತಾಳ ಮತ್ತೆ ಹಾರಿ ಹೋಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ