• Home
  • »
  • News
  • »
  • lifestyle
  • »
  • Vikram- Betal: ವೀಕೆಂಡ್​ ಮಕ್ಕಳಿಗೆ ಹೇಳಿ ವಿಕ್ರಮ್ - ಬೇತಾಳದ ಈ ಅದ್ಭುತ ಸ್ಟೋರಿ

Vikram- Betal: ವೀಕೆಂಡ್​ ಮಕ್ಕಳಿಗೆ ಹೇಳಿ ವಿಕ್ರಮ್ - ಬೇತಾಳದ ಈ ಅದ್ಭುತ ಸ್ಟೋರಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Weekend Story: ಸಾಮಾನ್ಯವಾಗಿ ಯಾವುದಾದರೂ ಕಷ್ಟ ಅಥವಾ ವ್ಯಕ್ತಿ ನಮ್ಮನ್ನ ಬೆಂಬಿಡದೇ ಕಾಡಿದಾಗ ಬೆನ್ನು ಹತ್ತಿದ ಬೇತಾಳ ಎಂದು ಹೇಳುತ್ತೇವೆ. ಈ ರೀತಿ ಹೇಳುವುದರ ಹಿಂದೆ ಸಹ ಒಂದು ಕಥೆ ಇದೆ. ಅದೇ, ವಿಕ್ರಮ-ಬೇತಾಳ.

  • Share this:

ಇತ್ತೀಚಿನ ಮಕ್ಕಳಿಗೆ (Children) ಕಥೆ ಕೇಳುವ (Story) ಅಭ್ಯಾಸವೇ ಇಲ್ಲ, ಪೋಷಕರಿಗೆ (Parents) ಸಹ ಹೇಳುವ ಅಭ್ಯಾಸವಿಲ್ಲ. ಆದರೆ ಮೊದಲೆಲ್ಲ ಅಜ್ಜ, ಅಜ್ಜಿ ಅಥವಾ ತಂದೆ-ತಾಯಿ ಮಕ್ಕಳಿಗೆ ರಾತ್ರಿ ಮಲಗುವ ಮುನ್ನ ಒಂದೊಂದು ಅದ್ಭುತ ಕಥೆಗಳನ್ನು ಹೇಳುತ್ತಿದ್ದರು. ಈಗ ಸಮಯದ ಅಭಾವವಿದೆ. ಆದರೆ, ವೀಕೆಂಡ್​ನಲ್ಲಿ (Weekend) ನೀವು ಮಕ್ಕಳಿಗೆ ಒಂದೊಂದು ಕಥೆಗಳನ್ನು ಹೇಳಬಹುದು. ಆಗ, ಮಕ್ಕಳಿಗೆ ನಮ್ಮ ಇತಿಹಾಸದ (history) ಜೊತೆ ಜೀವನದ ಪಾಠ ಕಲಿಯಲು ಸಹಾಯವಾಗುತ್ತದೆ. ನಿಮಗೆ ಯಾವ ಕಥೆ ಹೇಳುವುದು ಎನ್ನುವ ಗೊಂದಲವಿದ್ದರೆ, ಅದಕ್ಕೆ ನಾವು ಸಹಾಯ ಮಾಡುತ್ತೇವೆ. ಪ್ರತಿ ವೀಕೆಂಡ್​ ಒಂದು ಹೊಸ ಕಥೆಯನ್ನು ನಾವು ನಿಮಗೆ ನೀಡಲಿದ್ದು, ಮಕ್ಕಳಿಗೆ ಅದನ್ನು ತಿಳಿಸಿ, ಹಲವಾರು ವಿಚಾರಗಳನ್ನು ಹೇಳಿಕೊಡಬಹುದು.  


ಸಾಮಾನ್ಯವಾಗಿ ಯಾವುದಾದರೂ ಕಷ್ಟ ಅಥವಾ ವ್ಯಕ್ತಿ ನಮ್ಮನ್ನ ಬೆಂಬಿಡದೇ ಕಾಡಿದಾಗ ಬೆನ್ನು ಹತ್ತಿದ ಬೇತಾಳ ಎಂದು ಹೇಳುತ್ತೇವೆ. ಈ ರೀತಿ ಹೇಳುವುದರ ಹಿಂದೆ ಸಹ ಒಂದು ಕಥೆ ಇದೆ. ಅದೇ, ವಿಕ್ರಮ-ಬೇತಾಳ.  ವಿಕ್ರಮಾದಿತ್ಯ ಎನ್ನುವ ರಾಜನನ್ನ ಕಾಡಿನ ದಾರಿಯಲ್ಲಿ ಬೇತಾಳವೊಂದು ಬೆನ್ನತ್ತಿ ಕುಳಿತು ಕಥೆ ಹೇಳುವುದು, ನಂತರ ಅದಕ್ಕೆ ಸಂಬಂಧಪಟ್ಟಂತೆ ದ್ವಂದರ್ಥದ ಪ್ರಶ್ನೆಗಳನ್ನು ಕೇಳಿ ಉತ್ತರಿಸದಿದ್ದರೆ ತಲೆ ಒಡೆಯುತ್ತೇನೆ ಎಂದು ಹೆದರಿಸುತ್ತದೆ. ಆ ಸಮಯದಲ್ಲಿ ಬೇತಾಳ ಹೇಳಿದ ಹಲವಾರು ಕಥೆಗಳು ಬಹಳ ಪ್ರಸಿದ್ದವಾಗಿದ್ದು, ಜೀವನಕ್ಕೆ ಬೇಕಾದ ಹಲವಾರು ನೀತಿಗಳನ್ನು ಅದು ತಿಳಿಸುತ್ತದೆ. ಈ ಬೇತಾಳ ಹೇಳುವ ಹಾಗೂ ಜಿವನಕ್ಕೆ ಅತಿ ಮುಖ್ಯವಾಗಿ ಬೇಕಾಗಿರುವ ನೀತಿಯೊಂದರ ಕಥೆಯನ್ನು ನಾವಿಲ್ಲಿ ನೀಡಿದ್ದೇವೆ.


ಒಂದು ಊರಿನಲ್ಲಿ ಒಬ್ಬ ಮುದುಕ ಇರುತ್ತಾನೆ. ಆತ ಬಹಳ ನಿಷ್ಠಾವಂತ. ಜನರಿಗೆ ಈತನ ಮೇಲೆ ಬಹಳ ನಂಬಿಕೆ. ಈ ಮುದುಕನ ಮನೆಯ ಪಕ್ಕದಲ್ಲಿ ಶ್ರೀಮಂತ ವ್ಯಾಪಾರಿಯೊಬ್ಬನಿದ್ದ. ಒಂದು ದಿನ, ಆ ವ್ಯಾಪಾರಿ ಬಂದು ನಾನು ಕೆಲಸದ ನಿಮಿತ್ತ ಸಮುದ್ರಯಾನ ಮಾಡಲಿದ್ದೇನೆ, ಹಾಗಾಗಿ ನನ್ನ ಸಂಪತ್ತನ್ನ ನೀವು ಜೋಪಾನವಾಗಿ ಇಟ್ಟುಕೊಳ್ಳುತ್ತೀರಾ? ಎಂದು ಕೇಳುತ್ತಾನೆ. ಇದಕ್ಕೆ ಒಪ್ಪಿಕೊಂಡ ಮುದುಕ, ದೇವರ ಸಾಕ್ಷಿಯಾಗಿ ಸಂಪತ್ತನ್ನ ಜೋಪಾನ ಮಾಡುವ ವಾಗ್ಧಾನ ಮಾಡುತ್ತಾನೆ.


ಹಾಗೆಯೇ ಸ್ವಲ್ಪ ಸಮಯದ ನಂತರ, ಮುದುಕ ಮಗನಿಗೆ ಸಂಪತ್ತನ್ನ ನೋಡಿಕೊಳ್ಳುವ ಜವಾಬ್ದಾರಿ ಕೊಡುತ್ತಾನೆ. ಆದರೆ ಮಗ, ಆ ಸಂಪತ್ತನ್ನ ಖರ್ಚು ಮಾಡಲು ಪ್ರಾರಂಭಿಸುತ್ತಾನೆ. ಈ ಬಗ್ಗೆ ಊರಿನ ಜನ ಮುದುಕನಿಗೆ ದೂರು ನೀಡಿದರೆ, ಮಗ ಅದೆಲ್ಲಾ ಸುಳ್ಳು ಎಂದು ವಾದ ಮಾಡಿ, ಬಾಯಿ ಮುಚ್ಚಿಸುತ್ತಾನೆ. ಆದರೆ, ಅದನ್ನು ಖರ್ಚು ಮಾಡುವುದನ್ನ ಮುಂದುವರೆಸುತ್ತಾನೆ.


ಇದನ್ನೂ ಓದಿ: ಈ 5 ಲಕ್ಷಣಗಳಲ್ಲಿದೆ ನಿಮ್ಮ ಹೃದಯದ ಆರೋಗ್ಯ ರಹಸ್ಯ


ಹೀಗೆಯೇ ಸಮಯ ಕಳೆದು, ಒಮ್ಮೆ ವ್ಯಾಪಾರಿ ಮರಳಿ ಬಂದು, ಸಂಪತ್ತನ್ನ ಮರಳಿ ನೀಡುವಂತೆ ಕೇಳುತ್ತಾನೆ. ಮುದುಕ ಮಗನನ್ನ ಕರೆದು, ಮರಳಿ ನೀಡುವಂತೆ ಕೇಳುತ್ತಾನೆ. ಆದರೆ ಮಗ ಮಾತ್ರ ಕೇವಲ ಕಾಲು ಭಾಗ ನೀಡಿ, ಇಷ್ಟೇ ಕೊಟ್ಟಿದ್ದು  ಎಂದು ಹೇಳುತ್ತಾನೆ. ಇದರಿಂದ ಕೋಪಗೊಂಡ ಶ್ರೀಮಂತ, ಮುದುಕ ಮೋಸ ಮಾಡುತ್ತಿದ್ದಾನೆ ಎಂದು ರಾಜನ ಬಳಿ ದೂರು ನೀಡುತ್ತಾನೆ.ಈ ದೂರನ್ನು ಕೇಳಿ ರಾಜ ವಿಚಾರಣೆ ಮಾಡಿದಾಗ, ಮುದುಕ ತನ್ನ ಮಗ ತಪ್ಪು ಮಾಡಿರುವ ಬಗ್ಗೆ ಒಪ್ಪಿಕೊಳ್ಳುತ್ತಾನೆ. ಆಗ, ರಾಜ ಮಗನನ್ನ ಥಳಿಸಿ, ಜೈಲಿಗೆ ಅಟ್ಟುತ್ತಾನೆ. ಆದರೆ, ವ್ಯಾಪಾರಿ ಮುದುಕನಿಗೆ ಶಿಕ್ಷೆಯಾಗಬೇಕು ಎಂದು ಕೇಳಿಕೊಳ್ಳುತ್ತಾನೆ. ಇದಕ್ಕೆ ರಾಜ ಕಾರಣ ಕೇಳಿದಾಗ, ನಾನು ಸಂಪತ್ತು ನೋಡಿಕೊಳ್ಳಲು ಹೇಳಿದ್ದು ಮುದುಕನಿಗೆ, ಆದರೆ ಮುದುಕ ಅದನ್ನು ಮಾಡದೇ ಮಗನಿಗೆ ಕೊಟ್ಟಿದ್ದು ತಪ್ಪು. ಆತನಿಂದ ನಾನು ನಷ್ಟ ಅನುಭವಿಸಿದ್ದೇನೆ. ಹಾಗಾಗಿ ಮುದುಕ ಅಪರಾಧಿ ಎನ್ನುತ್ತಾನೆ. ಇದು ರಾಜನಿಗೆ ಆಶ್ಚರ್ಯವನ್ನುಂಟು ಮಾಡುತ್ತದೆ.ಈ ಕಥೆಯನ್ನು ಹೇಳಿದ ಬೇತಾಳ, ಈಗ ಹೇಳು ರಾಜನ ನಿರ್ಧಾರ ಏನಾಗಬೇಕು ಎಂದು ವಿಕ್ರಮಾದಿತ್ಯನನ್ನ ಕೇಳುತ್ತದೆ. ಅದಕ್ಕೆ ವಿಕ್ರಮಾದಿತ್ಯ, ಮುದುಕ ನೇರವಾಗಿ ಸಂಪತ್ತನ್ನ ಕದ್ದಿಲ್ಲದಿದ್ದರೂ, ಅದನ್ನು ರಕ್ಷಣೆ ಮಾಡುವ ಜವಾಬ್ದಾರಿ ಆತನದ್ದೇ ಆಗಿತ್ತು. ಜನರು ಮಗನ ಬಗ್ಗೆ ದೂರು ನೀಡಿದಾಗ ಸಹ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ಹಾಗಾಗಿ ಮುದುಕನೇ ಅಪರಾಧಿ ಎನ್ನುತ್ತಾನೆ. ಶಿಕ್ಷೆಗೆ ಅರ್ಹ ಎನ್ನುತ್ತಾನೆ.


ಇದನ್ನೂ ಓದಿ: ಮಹಿಳೆಯರಲ್ಲಿ ಈ ಸಮಸ್ಯೆ ಕಾಣಿಸಿಕೊಂಡ್ರೆ ಅದು ಥೈರಾಯ್ಡ್​ ಲಕ್ಷಣವಂತೆ


ಇದರ ನೀತಿ ಎಂದರೆ, ಜೀವನದಲ್ಲಿ ಜವಾಬ್ದಾರಿಯಿಂದ ಯಾರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ನಮ್ಮ ಕರ್ತವ್ಯವನ್ನು ನಾವೇ ನಿಭಾಯಿಸಬೇಕು. ನಮ್ಮ ನಿರ್ಲಕ್ಷ್ಯಕ್ಕೆ ಬೇರೆ ಯಾರೂ ಹೊಣೆ ಅಲ್ಲ.

Published by:Sandhya M
First published: