• Home
  • »
  • News
  • »
  • lifestyle
  • »
  • Vikram Betal Story: ಒಂದು ಸಣ್ಣ ತಪ್ಪು ದೊಡ್ಡ ಸಮಸ್ಯೆಗೆ ಕಾರಣ, ಸಹೋದರರ ಕಥೆ ಕೇಳಿ

Vikram Betal Story: ಒಂದು ಸಣ್ಣ ತಪ್ಪು ದೊಡ್ಡ ಸಮಸ್ಯೆಗೆ ಕಾರಣ, ಸಹೋದರರ ಕಥೆ ಕೇಳಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Weekend Entertainment: ಬೇತಾಳ (Betal) ವಿಕ್ರಮನಿಗೆ (Vikram) ಹೇಳುತ್ತದೆ, ಅದಕ್ಕೆ ವಿಕ್ರಮ ನೀಡಿದ ಉತ್ತರ ನಮಗೆ ಒಂದು ಪಾಠ ಎನ್ನಬಹುದು. ಹಾಗಾದ್ರೆ ಕತೆ ಏನು ಎಂಬುದು ಇಲ್ಲಿದೆ.

  • Share this:

ಪ್ರತಿಬಾರಿಯಂತೆ ವಿಕ್ರಮನಿಗೆ (Vikram)  ಬೇತಾಳ (Betal)  ಕಥೆ (Story) ಹೇಳಲು ಆರಂಭ ಮಾಡುತ್ತದೆ. ಆದರೆ ಈ ಬಾರಿ ಸ್ವಲ್ಪ ವಿಭಿನ್ನವಾಗಿರುತ್ತದೆ. ಒಂದು ಹಳ್ಳಿ ಚಿಕ್ಕದಾದರೂ ಚೊಕ್ಕವಾಗಿತ್ತು, ಯಾವುದೇ ಕೊರತೆ ಇರಲಿಲ್ಲ, ಜ್ಞಾಂಪ ಎನ್ನುವ ಮರದ ಕೆಲಸಗಾರನಿಂದ, ಅವನ ಜೊತೆ ಅವನ ಪರಿವಾರವೂ ಇತ್ತು. ಅವನಿಗೆ 4 ಗಂಡು ಮಕ್ಕಳಿದ್ದರು. ಜ್ಞಾಂಪ ದಿನವಿಡಿ ಕೆಲಸ ಮಾಡಿ ಸೋತು ಹೋಗಿದ್ದರೂ ಸಹ ,ಕೆಲ ಮಾಡದೇ ಇರುತ್ತಿರಲಿಲ್ಲ. ಅವನ ಕೆಲಸದಲ್ಲಿ ಹೆಂಡತಿ ಸುನಂದ ಸಹ ಸಹಾಯ ಮಾಡುತ್ತಿದ್ದಳು. ಆದರೆ, ಇಷ್ಟೆಲ್ಲಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ದ ಆತನ ಮಕ್ಕಳು ಮಾತ್ರ ಬಹಳ ಆಲಸಿಗಳಾಗಿದ್ದರು. ಕೆಲಸ ಮಾಡಬೇಕು ಎನ್ನುವ ಯಾವುದೇ ಆಲೋಚನೆ ಇರಲಿಲ್ಲ. ದಿನವಿಡಿ ಗಲಾಟೆ ಮಾಡಿಕೊಂಡು ಇರುತ್ತಿದ್ದರೆ, ದಿನಾ ಕೆಲಸದ ಬಗ್ಗೆ ಸಲಹೆ ನೀಡಿದರೂ ಯಾವುದೇ ಪ್ರಯೋಜವಾಗಲಿಲ್ಲ.


ಮನೆ ಬಿಟ್ಟು ಹೊರಟ ಮಕ್ಕಳು


ಒಂದು ದಿನ ತನ್ನ ಮಕ್ಕಳಿಗೆ ನೀವು ಮನೆಯಲ್ಲಿ ಕೆಲಸ ಮಾಡುವುದಿಲ್ಲ, ಹೊರಗೆ ಸಹ ಮಾಡುವುದಿಲ್ಲ. ಅಲ್ಲದೇ ಹಳ್ಳಿಯಲ್ಲಿ ಗಲಾಟೆ ಮಾಡಿಕೊಂಡು ಓಡಾಡುತ್ತಿರುತ್ತೀರಾ. ಹಾಗಾಗಿ ಈಗಾಲೇ ಮನೆಬಿಟ್ಟು ಹೋಗಿ ಎಂದು ಹೇಳುತ್ತಾನೆ. ಆ 4 ಮಕ್ಕಳು ಸಹ ಮನೆಬಿಟ್ಟು, ಊರ ಹೊರಗಿರುವ ದೇವಾಲಯದಲ್ಲಿ ಕುಳಿತು, ನಾನು 4 ವರ್ಷದ ನಂತರ ಇಲ್ಲಿಯೇ ಭೇಟಿ ಆಗೋಣ, ಏನಾದರೂ ಕಲಿತು ಬರೋಣ ಎಂದು 4 ದಿಕ್ಕಿಗೆ ಹೋಗುತ್ತಾರೆ. 4 ವರ್ಷದ ನಂತರ ಮತ್ತೆ ಬಂದು, ಆ ದೇವಾಲಯದಲ್ಲಿ ಪಾರ್ವತಿ ಸಲ ನೆಲೆಸಿರುತ್ತಾಳೆ. ಈ ನಾಲ್ವರು ಏನು ವಿದ್ಯೆ ಕಲಿತಿದ್ದಾರೆ ಎಂದು ತಿಳಿಯುವ ಕುತೂಹಲ ಇರುತ್ತದೆ.


ಮೊದಲನೇಯವನು ಹೇಳುತ್ತಾನೆ, ನಾನು ಒಂದು ಎಲುಬು ಮುಟ್ಟು ಪೂರ್ತಿ ಅಸ್ಥಿಪಂಜರ ಮಾಡಬಲ್ಲೆ ಎಂದು, ಎರಡನೇಯವನು ನಾನು ಆ ಅಸ್ತಿಪಂಜರಕ್ಕೆ ರಕ್ತ ಮತ್ತು ಮಾಂಸ ತುಂಬಿ ಚರ್ಮವನ್ನು ನೀಡಬಲ್ಲೆ ಇನ್ನುತ್ತಾನೆ. ಮೂರನೇಯವನು ಇದೇನು ಮಹಾ ನಾನು ಈ ಅಸ್ಥಿಪಂಜರಕ್ಕೆ ನೀರು ಹಾಕಿ ಜೀವ ನೀಡಬಲ್ಲೆ ಎನ್ನುತ್ತಾನೆ.


ಇದನೆಲ್ಲಾ ಕೇಳಿಕೊಂಡು ನಾಲ್ಕನೆಯವನು ಸುಮ್ಮನಿರುತ್ತಾನೆ. ಈ ಮೂವರು ನೀನು ಏನು ಕಲಿತಿದ್ದೀಯಾ ಎಂದು ಕೇಳಿದಾಗ, ನಾನು ಕೇವಲ ಒಂದು ಬಾರಿ ಉಸಿರಾಡಿ ಜೀವ ತೆಗೆಯಬಲ್ಲೆ ಎಂದು ಹೇಳುತ್ತಾನೆ. ಆಗ, ಆ ಮೂವರು ಇದೇನೂ ಮಹಾ, ಒಬ್ಬರ ಜೀವ ತೆಗೆಯುವುದು ಒಂದು ವಿಚಾರವಲ್ಲ ಎನ್ನುತ್ತಾರೆ. ಅದಕ್ಕೆ ನಾಲ್ಕನೆಯವನು, ಸಮಯ ಬಂದಾಗ ತಿಳಿಯುತ್ತದೆ ಎನ್ನುತ್ತಾನೆ.




ಈ 4 ಜನರಿಗೆ ತಮ್ಮ ವಿದ್ಯೆ ಪರೀಕ್ಷೆ ಮಾಡಬೇಕು ಅನಿಸುತ್ತದೆ, ಆಗ ಒಂದು ಎಲಬು ಹುಡುಕಿ ಮೊದಲನೇಯವ್ನು ಅಸ್ಥಿಪಂಜರ ಮಾಡುತ್ತಾನೆ. ಅದಕ್ಕೆ ನಾಲ್ಕನೇಯವನು ಇದು ಎಮ್ಮೆಯ ಅಸ್ಥಿಪಂಜರ ಇರಬೇಕು ಎನ್ನುತ್ತಾನೆ. ಆಗ ಎರಡನೇಯವನು ಇಲ್ಲ ಇದು ಹುಲಿ ಎನ್ನುತ್ತಾನೆ.  ಹಾಗೆಯೇ ಆ ಅಸ್ತಿಪಂಜರಕ್ಕೆ ಚರ್ಮ ಹಾಗೂ ರಕ್ತ ಮಾಂಸ ತುಂಬುತ್ತಾನೆ. ಒಂದು ಹುಲಿ ಸಿದ್ಧವಾಗುತ್ತದೆ. ಈ ಮೂರನೇಯವನು ಅದಕ್ಕೆ ನೀರು ಹಾಕಿ ಜೀವ ಬರಿಸುತ್ತಾನೆ. ಆಗ ಆ ಹುಲಿ ಜೋರಾಗಿ ಘರ್ಜಿಸಿ, ಮೂರನೇಯವನ ಮೇಲೆ ಎರಗುತ್ತಾನೆ. ಆಗ ನಾಲ್ಕನೇಯವನು ಅಡ್ಡ ಬಂದು ಒಂದು ಉಸಿರುಬಿಟ್ಟು, ಹುಲಿಯನ್ನು ಸಾಯಿಸುತ್ತಾನೆ.


ಇದನ್ನೂ ಓದಿ: ಒಬ್ಬರಿಗೆ ಸಹಾಯ ಮಾಡಿದ್ರೆ ಎಂದಿಗೂ ಕೆಟ್ಟದಾಗಲ್ಲ, ಪಾರಿವಾಳ-ಇರುವೆಯ ಸುಂದರ ಕಥೆ


ಬುದ್ದಿ ಕಲಿಯದ ಸಹೋದರರು


ಆಗ ಈ ಮೂವರು ನಾವು ಇದನ್ನು ಮನುಷ್ಯರ ಮೇಲೆ ಪ್ರಯೋಗ ಮಾಡಬೇಕಿತ್ತು ಎಂದು ನಿರ್ಧರಿಸಿ, ಎಲ್ಲಿಂದಲೋ ಒಂದು ಮನುಷ್ಯನ ಎಲುಬು ತಂದು ಅದಕ್ಕೆ ಜೀವ ನೀಡುತ್ತಾರೆ. ಅದು ಒಂದು ಸುಂದರ ಹೆಣ್ಣಾಗಿರುತ್ತದೆ. ಈ ಸುಂದರಿಯನ್ನು ನೋಡಿ ಪ್ರತಿಯೊಬ್ಬರು ನಾನು ಮದುವೆ ಆಗಬೇಕು ಎಂದು ಹಠ ಹಿಡಿದು, ಜಗಳ ಮಾಡುತ್ತಾರೆ. ಇದರಿಂದ ಬೇಸತ್ತ ನಾಲ್ಕನೇಯವನು, ಈ ಸಮಸ್ಯೆಯ ಮೂಲವನ್ನೇ ಸಾಯಿಸುತ್ತೇನೆ ಎಂದು ಆ ಸುಂದರಿಯನ್ನು ಉಸಿರಾಟದ ಮೂಲಕ ಸಾಯಿಸುತ್ತಾನೆ.


ಇದರಿಂದ ಕೋಪಗೊಂಡ ಮೂರನೇಯವನು ತಮ್ಮನ್ನ ಕೊಂದು ಬಿಡುತ್ತಾನೆ. ಆದರೆ ಕೆಲವೇ ಕ್ಷಣಗಳಲ್ಲಿ ತಪ್ಪಿನ ಅರಿವಾಗಿ ಒಂದು ಹೆಣ್ಣಿಗೋಸ್ಕರ ತಮ್ಮನನ್ನ ಸಾಯಿಸಿದೆ ಎಂದು ಬೇಸರ ಮಾಡಿಕೊಂಡು, ಮರಕ್ಕೆ ತಲೆ ಚಚ್ಚಿಕೊಂಡು ಅವನು ಸತ್ತು ಹೋಗುತ್ತಾನೆ. ಇದನ್ನು ನೋಡಿ ಉಳಿದ ಇಬ್ಬರೂ ಸಹ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.


ಇದನ್ನೆಲ್ಲಾ ನೋಡಿ ಪಾರ್ವತಿಗೆ ಬಹಳ ಬೇಸರವಾಗುತ್ತದೆ, ಶಿವನ ಬಳಿ ಹೋಗಿ ಅವರಿಗೆ ಜೀವ ನೀಡುವಂತೆ ಮನವಿ ಮಾಡುತ್ತಾಳೆ. ಶಿವ ಒಪ್ಪಿ ಆ ನಾಲ್ಕು ಜನರಿಗೆ  ಮಾತ್ರವಲ್ಲದೇ ಆ ಸುಂದರಿಗೆ ಸಹ ಜೀವ ನೀಡುತ್ತಾನೆ. ಆದರೆ ಮತ್ತೆ ಈ ನಾಲ್ಕು ಜನ ಜಗಳ ಮಾಡಲು ಆರಂಭಿಸುತ್ತಾರೆ. ಆದರೆ ಈ ಬಾರಿ ಆ ಸುಂದರಿ, ನೋಡಿ ಕಳೆದ ಬಾರಿ ನೀವು ನನಗಾಗಿ ಜಗಳ ಮಾಡಿದಾಗ ನಾನು ಸುಮ್ಮನಿದ್ದೆ.ನೀವು ನನಗೆ ಮರುಜನ್ಮ ಕೊಟ್ವರು ಎಂದು ಗೌರವ ನೀಡಿದೆ. ಆದರೆ ಈ ಬಾರಿ ಶಿವ ನಮಗೆ ಜೀವ ಕೊಟ್ಟಿದ್ದು, ಹಾಗಾಗಿ ನಾನು ಯಾರನ್ನು ಮದುವೆ ಆಗಬೇಕು ಎಂದು ನಾನೇ ನಿರ್ಧರಿಸುತ್ತೇನೆ ಎನ್ನುತ್ತಾಳೆ.


ಇದನ್ನೂ ಓದಿ: ಸ್ವಾರ್ಥದಿಂದ ಎಲ್ಲವನ್ನೂ ಕಳೆದುಕೊಂಡ ದಾನಿಯ ಕಥೆ, ಮಕ್ಕಳಿಗೊಂದು ಸುಂದರ ಪಾಠ


ಇಲ್ಲಿಗೆ ಕಥೆ ಮುಗಿಸಿದ ಬೇತಾಳ, ವಿಕ್ರಮ ಈಗ ಹೇಳು  ಆ ಸುಂದರಿ ಯಾರನ್ನು ಮದುವೆ ಆಗಬೇಕು ಎಂದು ಕೇಳುತ್ತದೆ. ಆಗ ವಿಕ್ರಮ, ನಾಲ್ಕನೇಯವನನ್ನ ಮದುವೆ ಆಗಬೇಕು. ಏಕೆಂದರೆ ಆತ ಮನಸ್ಸು ಮಾಡಿದ್ರೆ ಆ ಮೂವರನ್ನು ಸಾಯಿಸಿ, ಅವಳನ್ನು ವಿವಾಹವಾಗಬಹುದಿತ್ತು, ಆದರೆ ಆತ ಹಾಗೆ ಮಾಡಲಿಲ್ಲ. ಅಲ್ಲದೇ ಆತ ಬಹಳ ಚತುರ ಎಂದು ಹೇಳುತ್ತಾನೆ. ಇದನ್ನು ಕೇಳಿ ಬೇತಾಳ ಸರಿಯಾದ ಉತ್ತರ ಎಂದು ಸಾರಿ ಹೋಗುತ್ತದೆ.

Published by:Sandhya M
First published: