• Home
  • »
  • News
  • »
  • lifestyle
  • »
  • Saath Kabar: ಕೇಳದೆ ನಿಮಗೀಗ ಹೃದಯ ವಿದ್ರಾವಕ ಕೂಗು? 60 ಪತ್ನಿಯರ ಸಮಾಧಿ ನಿರ್ಮಾಣಗೊಂಡ ಇತಿಹಾಸ ಇದು!

Saath Kabar: ಕೇಳದೆ ನಿಮಗೀಗ ಹೃದಯ ವಿದ್ರಾವಕ ಕೂಗು? 60 ಪತ್ನಿಯರ ಸಮಾಧಿ ನಿರ್ಮಾಣಗೊಂಡ ಇತಿಹಾಸ ಇದು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Travel Stories: ಇಲ್ಲಿಗೆ ಜನ ಬೆಳಗಿನ ಸಮಯದಲ್ಲಿ ಬರುತ್ತಾರೆ. ಪ್ರವಾಸಿಗರಿಂದ ತುಂಬಿ ತುಳುಕುವ ಒಂದು ಸ್ಥಳ ಕೂಡ ಹೌದು. ಆದರೆ ರಾತ್ರಿ ಸಮಯದಲ್ಲಿ ಇಲ್ಲಿ ಒಬ್ಬರೇ ಓಡಾಡಲು ಜನ ಭಯಪಡುತ್ತಾರೆ.

  • Share this:

ವಿಜಯಪುರ (Vijayapura) ಅಥವಾ ಬಿಜಾಪುರ (Bijapur) ಕರ್ನಾಟಕದ (Karnataka) ಒಂದು ಸುಂದರ ಪ್ರವಾಸಿ ತಾಣಗಳಲ್ಲಿ (Travel)  ಒಂದು. ಈ ಒಂದು ಜಿಲ್ಲೆಗೆ ವಿಸಿಟ್​ ಮಾಡಿದರೆ ನಿಮಗೆ ನೋಡಲು ಹಲವಾರು ಸ್ಥಳಗಳಿವೆ. ಅಲ್ಲದೇ, ಇತಿಹಾಸದ ಹಲವಾರು ಕಥೆಗಳನ್ನು ಸಾರುವ ವಿವಿಧ ಜಾಗಗಳಿದ್ದು, ಅಲ್ಲಿನ ವಿಚಾರಗಳನ್ನು ಕೇಳಿದಾಗ ನಮಗೆ ಯಾವುದೋ ಲೋಕಕ್ಕೆ ಹೋಗಿ ಬಂದ ಹಾಗೆ ಆಗುತ್ತದೆ. ಇಲ್ಲಿ ಒಂದು ಸ್ಥಳವಿದೆ. ಆ ಸ್ಥಳದ ಇತಿಹಾಸ ನಿಜಕ್ಕೂ ಕೇಳುಗರನ್ನು ಬೆಚ್ಚಿ ಬೀಳಿಸುತ್ತದೆ.  ಈ ಊರಿನಲ್ಲಿ  ಗೋಲ್‌ ಗುಂಬಜ್, ಬಾರಾ ಕಮಾನ್, ಬಿಜಾಪುರ ಕೋಟೆ , ಇಬ್ರಾಹಿಂ ರೋಜಾ ಮಸ್ಜಿದ್ ಹೀಗೆ ಹಲವಾರು ಸ್ಥಳಗಳಿವೆ. ಆದರೆ, ಈ ಒಂದು ಸ್ಥಳ ಮಾತ್ರ ಎಲ್ಲದಕ್ಕಿಂತ ವಿಭಿನ್ನ. ಅದೇ, ಸಾಠ್​ ಕಬರ್ (Saath Kabar).


ಈ ಸ್ಥಳದ ಬಗ್ಗೆ ಹಲವಾರು ಜನರಿಗೆ ಗೊತ್ತಿರುವುದಿಲ್ಲ. ಆದರೆ, ಪ್ರವಾಸಿಗರಿಗೆ ಹಾಗೂ ಇತಿಹಾಸ ಪ್ರಿಯರಿಗೆ ಬಹಳ ಇಷ್ಟವಾಗುತ್ತದೆ.  ಸಾಠ್​ ಕಬರ್ ಒಂದು ಐತಿಹಾಸಿಕ ಸ್ಮಾರಕವಾಗಿದ್ದು, ಇದನ್ನು ಡಾರ್ಕ್‌ ಟೂರಿಸ್ಟ್ ಸ್ಪಾಠ್​ ಆಫ್‌ ಬಿಜಾಪುರ್ ಅಥವಾ ವಿಜಯಪುರ ಎಂದು ಸಹ ಕರೆಯಲಾಗುತ್ತದೆ. ಸಾಠ್​ ಕಬರ್ ಎಂದ ಹೆಸರಿನಲ್ಲಿಯೇ ಇದರ ಅರ್ತ ಹಾಗೂ ಕಥೆ ಇದೆ. ಸಾಠ್​​ ಎಂದರೆ 60, ಕಬರ್ ಎಂದರೆ ಸಮಾಧಿ ಎಂದು ಅರ್ಥ. ಈ ಸ್ಥಳದ ಒಟ್ಟಾರೆ ಅರ್ಥ 60 ಸಮಾಧಿಗಳು ಎಂದು.


vijayapur Saath Kabar history travel story


ಅದೊಂದು ಪಾತಕ ಕೃತ್ಯದ ಕಥೆ


ಅರೇ, ಸಮಾಧಿಗಳ ಸ್ಥಳ ಎಂದರೆ ಸ್ಮಶಾನ ಅದರಲ್ಲಿ ವಿಶೇಷವೇನಿದೆ. 60 ಅಲ್ಲ, 600 ಸಮಾಧಿಗಳು ಒಂದೆಡೆ ಇರುತ್ತದೆ ಎಂಬ ಕುತೂಹಲ ಎಲ್ಲರಲ್ಲಿ ಮನೆಮಾಡುತ್ತದೆ. ಆದರೆ, ಈ 60 ಸಮಾಧಿ ಒಂದೆಡೆ ಇರಲು ಹಾಗೂ ಅದರಲ್ಲೂ ವಿಜಯಪುರದಲ್ಲಿರಲು ಒಂದು ಕಾರಣ ಹಾಗೂ ಕಥೆ ಇದೆ. ಆದರೆ, ಅದು ಮಾತ್ರ ನಿಜಕ್ಕೂ ಹೃದಯ ವಿದ್ರಾವಕ ಕಥೆ.


ಈ ಸಮಾಧಿ ಆಗಿನ ದೊರೆ ಆಲಿ ಆದಿಲ್ ಶಾಹ II ರ ಆಸ್ಥಾನದಲ್ಲಿದ್ದ ಸಾಮಂತ ಧಳಪತಿ ಅಫ್ಜಲ್‌ ಖಾನ್‌ ತನ್ನ ಹೆಂಡತಿಯರಿಗೆ ಕಟ್ಟಿಸಿದ್ದ ಎನ್ನಲಾಗುತ್ತದೆ. ಬರೋಬ್ಬರು  60 ಹೆಂಡತಿಯರನ್ನು ಹೊಂದಿದ್ದ ಈತ, ಅವರೆಲ್ಲರನ್ನೂ ಬಾವಿಗೆ ತಳ್ಳಿ ಸಾಯಿಸಿ, ನಂತರ ಅವರಿಗಾಗಿ ನಿರ್ಮಿಸಿದ ಸಮಾಧಿ ಎನ್ನುತ್ತಾರೆ.


ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆ ಸಿಹಿ ಸಿಹಿಯಾದ ಈ ಸ್ವೀಟ್ಸ್​ ಮಾಡಿ ಸವಿಯಿರಿ


ಪತ್ನಿಯರನ್ನು ಕೊಂದು ಸಮಾಧಿ ಮಾಡಿದ್ದ ಭೂಪ


ಇದನ್ನು ವಿಜಯಪುರದಿಂದ ಸುಮಾರು 5 ಕಿ.ಮಿ ದೂರದಲ್ಲಿರುವ ನವರಸಪುರದಲ್ಲಿ ನಿರ್ಮಿಸಲಾಗಿದ್ದು, ಪ್ರವಾಸಿಗರು ಮಿಸ್​ ಮಾಡದೇ ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ.  ಈ ದುರಂತ ಕತೆ ನಡೆದಿದ್ದು, 1659ರ ಆದಿಲ್ ಶಾಹಿ ಆಡಳಿತ ಕಾಲದಲ್ಲಿ. ಆ ಸಮಯದಲ್ಲಿ ಆದಿಲ್ ಶಾಹಿಗಳ ಆಳ್ವಿಕೆಯಲ್ಲಿದ್ದ ವಿಜಯಪುರದ ಮೇಲೆ ಮೊಘಲರು ಹಾಗೂ ಮರಾಠರು ದಾಳಿ ಮಾಡುತ್ತಾರೆ.


vijayapur Saath Kabar history travel story
ಸಾಂದರ್ಭಿಕ ಚಿತ್ರ


ಈ ಸಮಯದಲ್ಲಿ ಬಹಳ ಜ್ಯೋತಿಷ್ಯದಲ್ಲಿ ನಂಬಿಕೆ ಇಟ್ಟುಕೊಂಡಿದ್ದ ಅಫ್ಜಲ್‌ ಖಾನ್‌, ಶಿವಾಜಿ ಜೊತೆ ಯುದ್ಧಕ್ಕೂ ಮುನ್ನ ತಮ್ಮ ಜ್ಯೋತಿಷಿಗಳ ಬಳಿ ಹೋಗಿ ಯುದ್ಧದ ಭವಿಷ್ಯ ಕೇಳುತ್ತಾನೆ. ಅಫ್ಜಲ್ ಖಾನ್ ಯುದ್ಧದಲ್ಲಿ ಸೋಲುತ್ತಾನೆ ಎಂದು ಹೇಳುತ್ತಾರೆ. ಇದನ್ನು ಕೇಳಿ, ಯೋಚಷಿಸಿದ ಆತ,  ಹೆಂಡತಿಯರು ಪರ ಪುರುಷರ ಪಾಲಾಗುತ್ತಾರೆ ಎಂದು ಯೋಚಿಸಿ, ತನ್ನ ಪತ್ನಿಯರನ್ನೆಲ್ಲಾ ನವರಸ ಪುರದಲ್ಲಿರುವ ಆಳವಾದ ಬಾವಿಗೆ ತಳ್ಳಿ ಕೊಲೆ ಮಾಡುತ್ತಾನೆ.




ಅವರನ್ನೆಲ್ಲಾ ಸಾಯಿಸಿದ ನಂತರ ಅಲ್ಲೇ ಸಮೀಪದಲ್ಲಿ 60 ಪತ್ನಿಯರಿಗಾಗಿ ಸಮಾಧಿಯನ್ನು ಆತ ಕಟ್ಟಿಸಿದ್ದು, ಈಗ ಆ ಸ್ಥಳ ಸಾಟ್ ಕಬರ್ ಎಂದು ಫೇಮಸ್​ ಆಗಿದೆ. ಆದರೆ, ಇಲ್ಲೊಂದು ಮತ್ತೊಂದು ವೈಶಿಷ್ಟವಾದ ಕಥೆಯಿದೆ. ಈ 60ಸಮಾಧಿಗಳಲ್ಲಿ ಒಂದು ಸಮಾಧಿ ಮಾತ್ರ ಖಾಲಿ ಇದೆ ಎಂದು ಸಹ ಹೇಳುತ್ತದೆ.


ಇದನ್ನೂ ಓದಿ: ಧೋನಿ ಪತ್ನಿ, ಸಾಕ್ಷಿಯಂತೆ ನೀವೂ ರೆಡಿಯಾಗ್ಬೇಕಾ? ಇಲ್ಲಿದೆ ಟಿಪ್ಸ್​


ಯಾಕೆಂದರೆ ಅಫ್ಜಲ್‌ ಖಾನ್‌ನ ಒಬ್ಬಳು ಪತ್ನಿ ಕಷ್ಟಪಟ್ಟು ತಪ್ಪಿಸಿಕೊಂಡು ಹೋಗಿದ್ದಳು ಎಂದು ಜನ ಹೇಳುತ್ತಾರೆ.  ಇಲ್ಲಿಗೆ ಜನ ಬೆಳಗಿನ ಸಮಯದಲ್ಲಿ ಬರುತ್ತಾರೆ. ಪ್ರವಾಸಿಗರಿಂದ ತುಂಬಿ ತುಳುಕುವ ಒಂದು ಸ್ಥಳ ಕೂಡ ಹೌದು. ಆದರೆ ರಾತ್ರಿ ಸಮಯದಲ್ಲಿ ಇಲ್ಲಿ ಒಬ್ಬರೇ ಓಡಾಡಲು ಜನ ಭಯಪಡುತ್ತಾರೆ. ಏನೇ ಆಗಲಿ ಒಮ್ಮೆ ಆದ್ರೂ ನೀವು ಇಲ್ಲಿಗೆ ವಿಸಿಟ್​ ಮಾಡಿ.

Published by:Sandhya M
First published: