• Home
  • »
  • News
  • »
  • lifestyle
  • »
  • Child Games: ಅತಿಯಾಗಿ ವಿಡಿಯೋ ಗೇಮ್ ಆಡಿದ್ರೆ ಮಕ್ಕಳ ಹೃದಯಕ್ಕೆ ಅಪಾಯವಂತೆ

Child Games: ಅತಿಯಾಗಿ ವಿಡಿಯೋ ಗೇಮ್ ಆಡಿದ್ರೆ ಮಕ್ಕಳ ಹೃದಯಕ್ಕೆ ಅಪಾಯವಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Video Games May Cause Heart Problems: ವಿಡಿಯೋ ಗೇಮ್‌ಗಳು ಮಾನಸಿಕ ಬೆಳವಣಿಗೆಗೆ ಉತ್ತಮವಾಗಿದ್ದರೂ, ಅವುಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದು ಮಾರಕವಾಗಬಹುದು. ಆದ್ದರಿಂದ, ಪೋಷಕರು ತಮ್ಮ ಮಕ್ಕಳು ಯಾವ ವಿಡಿಯೋ ಗೇಮ್‌ಗಳನ್ನು ಆಡುತ್ತಿದ್ದಾರೆ ಎಂಬುದರ ಬಗ್ಗೆ ಜಾಗರೂಕರಾಗಿರಬೇಕು

ಮುಂದೆ ಓದಿ ...
  • Share this:

ಮಕ್ಕಳು (Children) ಅಥವಾ ಹದಿಹರೆಯದವರಾಗಿರಲಿ, (Youths) ಅನೇಕ ಜನರು ವಿಡಿಯೋ ಗೇಮ್‌ಗಳನ್ನು (Video Games) ಬಹಳ ಇಷ್ಟಪಡುತ್ತಾರೆ. ವಿಡಿಯೋ ಗೇಮ್‌ಗಳನ್ನು ಆಡಲು ಯಾವುದೇ ವಯಸ್ಸಿನ ಮಿತಿಯಿಲ್ಲ ಎಂಬುದು ಸತ್ಯ. ನಮ್ಮಲ್ಲಿ ಅನೇಕರು ಮಕ್ಕಳಾಗಿ ವಿಡಿಯೋ ಗೇಮ್‌ಗಳನ್ನು ಆಡಿರಬಹುದು, ಕೆಲ ವಯಸ್ಕರು ಈಗಲೂ ವಿಡಿಯೋ ಗೇಮ್​ ಆಡುತ್ತಾರೆ. ಮಕ್ಕಳ ಮಾನಸಿಕ ಬೆಳವಣಿಗೆಗೆ (Mental Health)  ವಿಡಿಯೋ ಗೇಮ್‌ಗಳು ಉಪಯುಕ್ತ ಎಂದು ಹೇಳಲಾಗುತ್ತದೆ. ಆದರೆ, ಈ ಆಟದ ಚಟ ಅಪಾಯಕಾರಿ. ವಿಡಿಯೋ ಗೇಮ್‌ಗಳ ಕುರಿತು ಇತ್ತೀಚಿನ ಅಧ್ಯಯನವು (Study) ಕೆಲವು ಪ್ರಮುಖ ಮಾಹಿತಿಯನ್ನು ಬಹಿರಂಗಪಡಿಸಿದೆ. 


ಆಸ್ಟ್ರೇಲಿಯಾದಲ್ಲಿ ನಡೆಸಲಾದ ಅಧ್ಯಯನವು ವಿಡಿಯೋ ಗೇಮ್ ಚಟ ಅಥವಾ ಅದರ ಅಭ್ಯಾಸವು ನಿಮ್ಮ ಮಕ್ಕಳನ್ನು ಹೃದ್ರೋಗಿಗಳನ್ನಾಗಿ ಮಾಡಬಹುದು ಎಂದು ಬಹಿರಂಗಪಡಿಸಿದೆ. ಅಷ್ಟೇ ಅಲ್ಲ, ನಿಮ್ಮ ಮಕ್ಕಳ ಪ್ರಾಣಕ್ಕೂ ಅಪಾಯ ತಂದೊಡ್ಡಬಹುದು ಎಂದು ತಿಳಿಸಿದೆ.


ವಿಡಿಯೋ ಗೇಮ್‌ಗಳನ್ನು ಆಡುವುದರಿಂದ ಜೀವಕ್ಕೆ ಅಪಾಯ ತಂದೊಡ್ಡುವ ಅನಿಯಮಿತ ಹೃದಯ ಬಡಿತಕ್ಕೆ ಒಳಗಾಗುವ ಮಕ್ಕಳಲ್ಲಿ ಈ ಹಿಂದೆ ಕಾರಣ ಗೊತ್ತಾಗಿರಲಿಲ್ಲ, ಆದರೆ ಈಗ ಈ ಒಂದು ಅಧ್ಯಯನ ಅದನ್ನು ಬಹಿರಂಗಪಡಿಸಿದೆ.


ಹಾರ್ಟ್ ರಿದಮ್ ಜರ್ನಲ್‌ನಲ್ಲಿ ಇತ್ತೀಚೆಗೆ ಪ್ರಕಟವಾದ ಸಂಶೋಧನೆಯು ವಿಡಿಯೋ ಗೇಮ್‌ಗಳನ್ನು ಆಡುವಾಗ ಪ್ರಜ್ಞೆಯನ್ನು ಕಳೆದುಕೊಳ್ಳುವ ಮಕ್ಕಳಲ್ಲಿ ಹೃದಯ ಬಡಿತ ಏರುಪೇರಾಗಬಹುದು ಎಂದು ತಿಳಿಸಿದೆ.  ವಿಡಿಯೋ ಗೇಮ್‌ಗಳು ಮತ್ತು ಮಕ್ಕಳ ಆರೋಗ್ಯದ ಮೇಲೆ ಅವುಗಳ ಪ್ರಭಾವದ ಕುರಿತು ಅಧ್ಯಯನವನ್ನು ಈ ಸಂಶೋಧನೆಯ ಸಮಯದಲ್ಲಿ ನಡೆಸಲಾಯಿತು. ಇದರಲ್ಲಿ ಹಲವು ಆಘಾತಕಾರಿ ಫಲಿತಾಂಶಗಳು ಹೊರಬಿದ್ದಿವೆ.


ಅಧ್ಯಯನಗಳ ಪ್ರಕಾರ, ವಿಡಿಯೋ ಗೇಮ್‌ಗಳಲ್ಲಿ ತೋರಿಸುವ ಅಪಾಯಕಾರಿ ಸಾಹಸಗಳನ್ನು ವೀಕ್ಷಿಸಿದಾಗ ಮಕ್ಕಳ ಹೃದಯ ಬಡಿತವು ವೇಗವಾಗಿ ಹೆಚ್ಚಾಗುತ್ತದೆ ಮತ್ತು ಹಾಗೆಯೇ, ಹೆಚ್ಚು ವೇಗವಾಗಿ ಕಡಿಮೆಯಾಗುತ್ತದೆ. ಇದು ಅವರ ವಯಸ್ಸು ಮತ್ತು ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಮಕ್ಕಳ ಹೃದಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.




ಅಧ್ಯಯನ ಹೇಳಿದ್ದೇನು?


ಇತ್ತೀಚೆಗಷ್ಟೇ ‘ಹಾರ್ಟ್ ರಿದಮ್’ ನಿಯತಕಾಲಿಕದಲ್ಲಿ ವಿಡಿಯೋ ಗೇಮ್‌ಗಳನ್ನು ನೋಡುತ್ತಾ ಮೂರ್ಛೆ ಹೋಗುವ ಮಕ್ಕಳ ಕುರಿತು ‘ಹೃದಯದ ಆರೋಗ್ಯ’ ಎಂಬ ವಿಷಯದ ಕುರಿತು ಸಂಶೋಧನೆಯೊಂದು ಪ್ರಕಟವಾಗಿದೆ. ಆಸ್ಟ್ರೇಲಿಯಾದ 'ದಿ ಹಾರ್ಟ್ ಸೆಂಟರ್ ಫಾರ್ ಚಿಲ್ಡ್ರನ್' ಮುಖ್ಯಸ್ಥ ಕ್ಲೇರ್ ಎಂ ಲಾಲಿ ಈ ಸಂಶೋಧನೆ ನಡೆಸಿದ್ದಾರೆ.


ಇದನ್ನೂ ಓದಿ: ಅದ್ಭುತ ಸ್ನೇಹಿತರಿದ್ರೆ ಯಾವುದೇ ಕಷ್ಟವನ್ನೂ ಎದುರಿಸಬಹುದಂತೆ, ಪಂಚತಂತ್ರ ಕಥೆ ಕೇಳಿ


ಈ ಸಂಶೋಧನೆಯು ಎಲೆಕ್ಟ್ರಾನಿಕ್ ವಿಡಿಯೋ ಗೇಮ್ ಸ್ಟಂಟ್‌ಗಳು ಮತ್ತು ಇತರ ಆಟಗಳನ್ನು ಆಡುವಾಗ ಮೂರ್ಛೆ ಹೋದ 22 ಮಕ್ಕಳ ಹೃದಯದ ಆರೋಗ್ಯದ ಆಳವಾದ ಅಧ್ಯಯನವನ್ನು ಮಾಡಲಾಗಿತ್ತು.


ಮಕ್ಕಳ ಸಾವಿನ ಅಪಾಯ 


ಈ ಸಂಶೋಧನೆಯಲ್ಲಿ ಆಘಾತಕಾರಿ ಅಂಶವೊಂದು ಹೊರಬಿದ್ದಿದೆ. ಸಂಶೋಧನೆಯ ಸಮಯದಲ್ಲಿ ಮಲ್ಟಿಪ್ಲೇಯರ್ ವಾರ್ ಗೇಮಿಂಗ್ ಆಡುವಾಗ ಮಕ್ಕಳು ಸಾವನ್ನಪ್ಪಿದ ಪ್ರಕರಣಗಳನ್ನು ಸಹ  ಕಂಡು ಹಿಡಿಯಲಾಗಿದೆ.ನಂತರ ಅವರ ಸಾವಿಗೆ ಹೃದಯಾಘಾತ ಕಾರಣ ಎಂದು ತಿಳಿದುಬಂದಿದೆ.


ಹಾಗಾಗಿ ಮಗುವು ಅಂತಹ ಯಾವುದೇ ತೊಂದರೆ ಅಥವಾ ಸಮಸ್ಯೆಯನ್ನು ಅನುಭವಿಸುತ್ತಿದ್ದರೆ ಅಥವಾ ವಿಡಿಯೋ ಗೇಮ್‌ಗಳನ್ನು ಆಡುವಾಗ ತೀವ್ರ ಚಡಪಡಿಕೆ ಮತ್ತು ಉಸಿರಾಟದ ತೊಂದರೆಯನ್ನು ಅನುಭವಿಸುತ್ತಿದ್ದರೆ, ಮಗುವನ್ನು ತಕ್ಷಣವೇ ಹೃದ್ರೋಗ ತಜ್ಞರ ಬಳಿ ಕರೆದುಕೊಂಡು ಹೋಗಬೇಕು ಎಂದು ಸಲಹೆ ನೀಡಿದ್ದಾರೆ ಸಂಶೋಧಕರು.


ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆ ಶಾಪಿಂಗ್ ಮಾಡುವಾಗ ಹಣ ಉಳಿಸಲು ಈ 4 ಟಿಪ್ಸ್​ ನೆನಪಿಡಿ


ವಿಡಿಯೋ ಗೇಮ್‌ಗಳು ಮಾನಸಿಕ ಬೆಳವಣಿಗೆಗೆ ಉತ್ತಮವಾಗಿದ್ದರೂ, ಅವುಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದು ಮಾರಕವಾಗಬಹುದು. ಆದ್ದರಿಂದ, ಪೋಷಕರು ತಮ್ಮ ಮಕ್ಕಳು ಯಾವ ವಿಡಿಯೋ ಗೇಮ್‌ಗಳನ್ನು ಆಡುತ್ತಿದ್ದಾರೆ ಎಂಬುದರ ಬಗ್ಗೆ ಜಾಗರೂಕರಾಗಿರಬೇಕು.

Published by:Sandhya M
First published: