• Home
 • »
 • News
 • »
 • lifestyle
 • »
 • Children Care: ನಿಮ್ಮ ಮಕ್ಕಳು ಹೆಚ್ಚಾಗಿ ವಿಡಿಯೋ ಗೇಮ್‌ ಆಡ್ತಾರಾ? ಯಾವೆಲ್ಲಾ ಸಮಸ್ಯೆಗೆ ತುತ್ತಾಗ್ತಾರೆ?

Children Care: ನಿಮ್ಮ ಮಕ್ಕಳು ಹೆಚ್ಚಾಗಿ ವಿಡಿಯೋ ಗೇಮ್‌ ಆಡ್ತಾರಾ? ಯಾವೆಲ್ಲಾ ಸಮಸ್ಯೆಗೆ ತುತ್ತಾಗ್ತಾರೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವೀಡಿಯೋ ಗೇಮ್‌ಗಳು ಮಕ್ಕಳಲ್ಲಿ ಮಾರಣಾಂತಿಕ ಅನಿಯಮಿತ ಹೃದಯ ಬಡಿತವನ್ನು ಉಂಟುಮಾಡಬಹುದು ಎಂದು ಅಧ್ಯಯನವೊಂದು ಹೇಳಿದೆ. ವೀಡಿಯೊ ಗೇಮ್‌ಗಳನ್ನು ಆಡುವಾಗ ಹಠಾತ್ ಪ್ರಜ್ಞೆ ಕಳೆದುಕೊಳ್ಳುವ ಮಕ್ಕಳ ಪ್ರಕರಣ ಹೆಚ್ಚಾಗಿದೆಯಂತೆ.

 • Share this:

  ಇತ್ತೀಚಿನ ಮಕ್ಕಳಿಗೆ ಮೊಬೈಲ್‌, ಟಿವಿ ತುಂಬಾ ಹತ್ತಿರವಾಗಿವೆ. ಯುಟ್ಯೂಬ್‌ ಜೊತೆಗೆ ಸಾಕಷ್ಟು ಗೇಮ್‌ ಅಪ್ಲಿಕೇಷನ್‌ ಗಳನ್ನು (Game Application) ಬಳಸೋದನ್ನು ಚಿಕ್ಕ ಚಿಕ್ಕ ಮಕ್ಕಳೂ ಸಹ ಕಲಿತು ಬಿಟ್ಟಿರುತ್ತವೆ. ಅದರಲ್ಲೂ ಕಳೆದ ಎರಡು ವರ್ಷಗಳಲ್ಲಿ ಕೊರೋನಾ (Corona) ಮಹಾಮಾರಿ ಬಂದಾಗಿನಿಂದ ಹೀಗೆ ವಿಡಿಯೋಗೇಮ್‌ (Video Game) ಹಾಗೂ ಯುಟ್ಯೂಬ್, ಕಾರ್ಟೂನ್‌ ನೋಡುವ ಮಕ್ಕಳ ಸಂಖ್ಯೆ ತೀರಾ ಹೆಚ್ಚಾಗಿದೆ. ಆದರೆ ಎಲ್ಲರಿಗೂ ಗೊತ್ತಿರೋ ಹಾಗೆ ಈ ಅಭ್ಯಾಸಗಳು ಮಕ್ಕಳ ಆರೋಗ್ಯಕ್ಕೆ ತೀರಾ ಹಾಳು. ಅಲ್ಲದೇ ಕಣ್ಣಿಗೆ, ಮೆದುಳಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡುತ್ತವೆ. ಆದರೆ ಇತ್ತೀಚಿಗೆ ಸಂಶೋಧಕರು ವಿಡಿಯೋ ಗೇಮ್‌ ಗಳಿಂದಾಗುವ ಅಡ್ಡ ಪರಿಣಾಮವನ್ನು ಕಂಡುಹಿಡಿದಿದ್ದಾರೆ. ಅದೇ ಮಕ್ಕಳಲ್ಲಿ ಅನಿಯಮಿತ ಹೃದಯ ಬಡಿತದ ತೊಂದರೆ.


  ಹೌದು.. ವೀಡಿಯೋ ಗೇಮ್‌ಗಳು ಮಕ್ಕಳಲ್ಲಿ ಮಾರಣಾಂತಿಕ ಅನಿಯಮಿತ ಹೃದಯ ಬಡಿತವನ್ನು ಉಂಟುಮಾಡಬಹುದು ಎಂದು ಅಧ್ಯಯನವೊಂದು ಹೇಳಿದೆ. ಆಸ್ಟ್ರೇಲಿಯಾದ ದಿ ಹಾರ್ಟ್ ಸೆಂಟರ್ ಫಾರ್ ಚಿಲ್ಡ್ರನ್‌ನ ಪ್ರಮುಖ ಲೇಖಕ ಕ್ಲೇರ್ ಎಂ. ಲಾವ್ಲಿ ಸೇರಿದಂತೆ ಅಧ್ಯಯನದ ಲೇಖಕರು ವಿಡಿಯೋ ಗೇಮ್‌ ಆಡುವಾಗ ಪ್ರಜ್ಞೆಯನ್ನು ಕಳೆದುಕೊಳ್ಳುವ ಮಕ್ಕಳಲ್ಲಿ ಅಸಾಮಾನ್ಯ ಹೃದಯ ಬಡಿತದ ವಿಭಿನ್ನ ಮಾದರಿಯನ್ನು ಗುರುತಿಸಿದ್ದಾರೆ.


  ಅನಿಯಮಿತ ಹೃದಯ ಬಡಿತದಿಂದ ಅಪಾಯ


  "ವಿಡಿಯೋ ಗೇಮ್‌ಗಳು ಕೆಲವು ಮಕ್ಕಳಿಗೆ ಅರೆಥಮಿಕ್ ಪರಿಸ್ಥಿತಿಗಳನ್ನು ಹೊಂದಿರುವ ಗಂಭೀರ ಅಪಾಯವನ್ನು ಉಂಟುಮಾಡಬಹುದು. ಎಲೆಕ್ಟ್ರಾನಿಕ್ ಗೇಮಿಂಗ್ ಆಡುವಾಗ ಹಠಾತ್ತನೆ ಪ್ರಜ್ಞೆ ಕಳೆದುಕೊಳ್ಳುವ ಮಕ್ಕಳನ್ನು ತಕ್ಷಣವೇ ಹೃದಯ ತಜ್ಞರ ಬಳಿ ಕರೆದುಕೊಂಡು ಹೋಗಬೇಕು. ಏಕೆಂದರೆ ಇದು ಗಂಭೀರ ಹೃದಯ ಸಮಸ್ಯೆಯ ಮೊದಲ ಚಿಹ್ನೆಯಾಗಿರಬಹುದು" ಎಂದು ತಜ್ಞ ಲಾವ್ಲಿ ಹೇಳಿದ್ದಾರೆ.


  ಇದನ್ನೂ ಓದಿ: ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಸಮಸ್ಯೆ ಕಡಿಮೆ ಮಾಡಲು ಯಾವ ಆಹಾರ ಸೇವಿಸಬೇಕು?


  ಮಲ್ಟಿಸೈಟ್‌ ಗೇಮಿಂಗ್‌ ಗಳ ಪ್ರಭಾವದ ಬಗ್ಗೆ ಅಧ್ಯಯನ


  ಇನ್ನು ಅಧ್ಯಯನಕ್ಕಾಗಿ, ತಂಡವು ಸಾಹಿತ್ಯದ ವ್ಯವಸ್ಥಿತ ವಿಮರ್ಶೆಯನ್ನು ನಡೆಸಿತು. ವೀಡಿಯೊ ಗೇಮ್‌ಗಳನ್ನು ಆಡುವಾಗ ಹಠಾತ್ ಪ್ರಜ್ಞೆ ಕಳೆದುಕೊಳ್ಳುವ ಮಕ್ಕಳ ಪ್ರಕರಣಗಳನ್ನು ಗುರುತಿಸಲು ಮಲ್ಟಿಸೈಟ್‌ ಗೇಮಿಂಗ್‌ ಗಳ ಪ್ರಭಾವದ ಬಗ್ಗೆ ಅಧ್ಯಯನ ಪ್ರಾರಂಭಿಸಿತು. ಅವರು ಕಂಡುಕೊಂಡ 22 ಪ್ರಕರಣಗಳಲ್ಲಿ, ಮಲ್ಟಿಪ್ಲೇಯರ್ ವಾರ್ ಗೇಮಿಂಗ್ ಹೆಚ್ಚಾಗಿ ಪ್ರಚೋದಕವಾಗಿದೆ. ಇನ್ನೂ ಆಘಾತಕಾರಿ ಸಂಗತಿಯೆಂದರೆ ಕೆಲವು ಮಕ್ಕಳು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಹಲವಾರು ಹೃದಯದ ಲಯದ ಪರಿಸ್ಥಿತಿಗಳ ನಂತರದ ರೋಗನಿರ್ಣಯಗಳು ಮಕ್ಕಳನ್ನು ಅಪಾಯಕ್ಕೆ ತಳ್ಳತ್ತವೆ ಎನ್ನಲಾಗಿದೆ.


  ಇನ್ನು ಕ್ಯಾಟೆಕೊಲಮಿನರ್ಜಿಕ್ ಪಾಲಿಮಾರ್ಫಿಕ್ ವೆಂಟ್ರಿಕ್ಯುಲರ್ ಟಾಕಿಕಾರ್ಡಿಯಾ (CPVT) ಮತ್ತು ಕಾಗ್ನಿಟಲ್‌ ಲಾಂಗ್ ಕ್ಯೂ ಟಿ ಸಿಂಡ್ರೋಮ್ (LQTS) ವಿಧಗಳು 1 ಮತ್ತು 2 ಅತ್ಯಂತ ಸಾಮಾನ್ಯವಾದ ಆಧಾರವಾಗಿರುವ ಕಾರಣಗಳಾಗಿವೆ. ರೋಗಿಗಳಲ್ಲಿ ಸಂಭಾವ್ಯ ಸಂಬಂಧಿತ ಆನುವಂಶಿಕ ರೂಪಾಂತರಗಳ (63%) ಸಂಭವ ಹೆಚ್ಚಿದೆ. ಇದು ಅವರ ಕುಟುಂಬಗಳಿಂದ ಗಮನಾರ್ಹ ಪರಿಣಾಮಗಳನ್ನು ಹೊಂದಿದೆ.


  ಹೃದಯದ ಬಡಿತದ ಸಮಸ್ಯೆ


  ಇನ್ನೂ ಕೆಲವು ಸಂದರ್ಭಗಳಲ್ಲಿ, ವೀಡಿಯೋ ಗೇಮಿಂಗ್ ಸಮಯದಲ್ಲಿ ಪ್ರಜ್ಞೆ ಕಳೆದುಕೊಂಡ ಮಗುವನ್ನು ತನಿಖೆ ಮಾಡುವುದರಿಂದ ಅನೇಕ ಕುಟುಂಬ ಸದಸ್ಯರು ನಿರ್ಣಾಯಕ ಕೌಟುಂಬಿಕ ಹೃದಯದ ಬಡಿತದ ಸಮಸ್ಯೆಯಿಂದ ಬಳಲುತ್ತಿರುವುದು ತಿಳಿದುಬರುತ್ತದೆ. ಈ ಬಗ್ಗೆ ತಜ್ಞರಾದ ಲಾವ್ಲಿಯವರು "ಕುಟುಂಬಗಳು ಮತ್ತು ಆರೋಗ್ಯ ರಕ್ಷಣಾ ತಂಡಗಳು ಅಪಾಯಕಾರಿ ವೇಗದ ಹೃದಯದ ಬಡಿತವು ಅಪಾಯವನ್ನು ಉಂಟುಮಾಡುವ ಸ್ಥಿತಿಯನ್ನು ಹೊಂದಿರುವ ಮಕ್ಕಳಲ್ಲಿ ತಿಳುವಳಿಕೆ ತುಂಬಬೇಕು. ಎಲೆಕ್ಟ್ರಾನಿಕ್ ಗೇಮಿಂಗ್ ಬಗ್ಗೆ ಸುರಕ್ಷತಾ ಮುನ್ನೆಚ್ಚರಿಕೆಗಳ ಬಗ್ಗೆ ತಿಳಿಸಬೇಕು ಎಂದಿದ್ದಾರೆ.


  ಇದನ್ನೂ ಓದಿ: ದೇಹದಲ್ಲಿ ಮೆಗ್ನೀಸಿಯಮ್ ಕೊರತೆ ಈ ಅಪಾಯಕ್ಕೆ ಕಾರಣವಂತೆ, ಎಚ್ಚರವಿರಲಿ


  ಒಟ್ಟಾರೆ, ಬೆಳೆಯುವ ಮಕ್ಕಳ ಚಟುವಟಿಕೆಗಳ ಮೇಲೆ ಪೋಷಕರಾದವರು ಒಂದಿಷ್ಟು ಗಮನ ಹರಿಸಲೇಬೇಕು. ಅವರ ವಿಡಿಯೋ ಗೇಮ್‌ ಆಟದ ಅಭ್ಯಾಸ ತೀರಾ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಅವರ ಆರೋಗ್ಯದ ದೃಷ್ಟಿಯಿಂದ ಸ್ವಲ್ಪ ಸ್ವಲ್ಪವೇ ಕಡಿಮೆ ಮಾಡಿಸಿ ಅದರಿಂದ ಹೊರತರಲು ಪ್ರಯತ್ನಿಸಬೇಕು. ಎಲ್ಲ ಆದ ಮೇಲೆ ಪಶ್ಚಾತ್ತಾಪ ಪಡೋದಕ್ಕಿಂತ ಮೊದಲೇ ಜಾಗೃತೆ ವಹಿಸಿದು ಉತ್ತಮ ಅಲ್ಲವೇ?

  Published by:ಪಾವನ ಎಚ್ ಎಸ್
  First published: