ವಯಾಗ್ರ ಸೈಡ್​ ಎಫೆಕ್ಟ್​: ಲೈಂಗಿಕ ಮಾತ್ರೆಗಳನ್ನು ತೆಗೆದುಕೊಳ್ಳುವ ಮುನ್ನ ಎಚ್ಚರ

news18
Updated:October 3, 2018, 12:25 PM IST
ವಯಾಗ್ರ ಸೈಡ್​ ಎಫೆಕ್ಟ್​: ಲೈಂಗಿಕ ಮಾತ್ರೆಗಳನ್ನು ತೆಗೆದುಕೊಳ್ಳುವ ಮುನ್ನ ಎಚ್ಚರ
REUTERS
  • Advertorial
  • Last Updated: October 3, 2018, 12:25 PM IST
  • Share this:
-ನ್ಯೂಸ್ 18 ಕನ್ನಡ

ವಿಶ್ವದಲ್ಲಿ ಅತಿ ಹೆಚ್ಚು ಬಿಕರಿಯಾಗುವ ಔಷಧಿಗಳಲ್ಲಿ ವಯಾಗ್ರ ಮಾತ್ರೆ ಕೂಡ ಒಂದು. ವೈಯುಕ್ತಿಕ ಸಂಬಂಧಗಳನ್ನು ಬಲಪಡಿಸಲು ಹಾಗೂ ಲೈಂಗಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಹೆಚ್ಚಿನವರು ಈ ನೀಲಿ ಮಾತ್ರೆಯ ಮೊರೆ ಹೋಗುತ್ತಾರೆ. ಈ ಮಾತ್ರೆಗಳನ್ನು ನಿರಂತರ ಸೇವಿಸುವುದರಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ ಎಂಬುದು ಗೊತ್ತಿದೆ. ಆದರೆ ಇತ್ತೀಚಿನ ಸಂಶೋಧನೆವೊಂದರಿಂದ ವಯಾಗ್ರ ಮಾತ್ರೆ ಸೇವನೆಯಿಂದ ದೃಷ್ಟಿ ದೋಷ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುತ್ತದೆ ಎಂಬ ಅಚ್ಚರಿಯ ಅಂಶ ಪತ್ತೆಯಾಗಿದೆ.

ಅಮೆರಿಕದ 31 ವರ್ಷದ ವ್ಯಕ್ತಿಯೊಬ್ಬರು ಇತ್ತೀಚೆಗೆ ಕಣ್ಣಿನ ದೃಷ್ಟಿಗೆ ಹಾನಿಯುಂಟಾಗಿದೆ ಎಂದು ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ರೋಗಿಯು ಕಳೆದು ಎರಡು ದಿನಗಳಿಂದ ಕಣ್ಣುಗಳಲ್ಲಿ ಕೆಂಪು ಬಣ್ಣದ ಛಾಯೆ ಆವರಿಸಿಕೊಂಡಿರುವಂತೆ ಭಾಸವಾಗುತ್ತಿದೆ ಎಂದು ತಿಳಿಸಿದ್ದರು. ಈ ಅಪರೂಪದ ಪ್ರಕರಣವನ್ನು ಸಿನೈ ಹೆಲ್ತ್ ಸಿಸ್ಟಂ ಸಂಶೋಧಕರು ಪರೀಕ್ಷಿಸಿದ್ದರು. ಈ ವೇಳೆ ಕಳೆದ ಕೆಲವು ದಿನಗಳಿಂದ ಕಾಮಾಸಕ್ತಿ ಕೆರಳಿಸುವ ವಯಾಗ್ರವನ್ನು ತೆಗೆದುಕೊಂಡಿರುವುದಾಗಿ ವ್ಯಕ್ತಿ ತಿಳಿಸಿದ್ದಾರೆ. ಈ ಬಗ್ಗೆ ಸಂಶೋಧಕರು ಮತ್ತಷ್ಟು ಅಧ್ಯಯನ ನಡೆಸಿದಾಗ ವಯಾಗ್ರ ಬ್ರಾಂಡ್​ನ ಸಿಲ್ಡೆನಫಿಲ್​ ಸಿಟ್ರೇಟ್​ ಲಿಕ್ವಿಡ್​ ಪರಿಣಾಮದಿಂದ ಈ ಸಮಸ್ಯೆ ಉಂಟಾಗಿದ್ದು, ಇದು ದೃಷ್ಟಿ ದೋಷದ ಆರಂಭದ ಲಕ್ಷಣವಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಸಿಲ್ಡೆನಫಿಲ್​ ಸಿಟ್ರೇಟ್​ನ ಸಾಮಾನ್ಯ ಡೋಸೇಜ್​ನಿಂದ ಕೂಡ ದೃಷ್ಟಿ ದೋಷ ಕಾಣಿಸಿಕೊಳ್ಳಬಹುದು. ಆದರೆ ಇಂತಹ ಸಮಸ್ಯೆಯನ್ನು 24 ಗಂಟೆಗಳ ಒಳಗೆ ಪರಿಹರಿಸಿಕೊಳ್ಳಬಹುದು ಎನ್ನುತ್ತಾರೆ ವೈದ್ಯರು. ಆದರೆ ಈ ದೋಷ ಕಾಣಿಸಿಕೊಂಡ ರೋಗಿಯು 50ಮಿ.ಗ್ರಾಂ ಡೋಸ್​​ಗಿಂತ ಹೆಚ್ಚು ಬಳಸಿದ್ದರು. ಇದರಿಂದಾಗಿ ಈ ಇಂತಹ ರೋಗ ಲಕ್ಷಣಗಳು ಕಾಣಿಸಿಕೊಂಡಿದೆ ಎಂದು ಸಿನೈ ಹೆಲ್ತ್ ಸಿಸ್ಟಂ ವೈದ್ಯರು ತಿಳಿಸಿದ್ದಾರೆ.

ವಯಾಗ್ರ ಬಳಸಿದ ವ್ಯಕ್ತಿಯ ಕಣ್ಣಿನ ರೆಟಿನಾ ಪದರವು ಹಾನಿಗೊಳಗಾಗಿದೆ. ಈ ಸಮಸ್ಯೆಯಿಂದ ಮುಕ್ತಿ ಹೊಂದಲು ಅನೇಕ ರೀತಿಯ ಚಿಕಿತ್ಸೆಯ ಅಗತ್ಯವಿದ್ದು, ಮುಂದಿನ ಒಂದು ವರ್ಷದವರೆಗೆ ದೃಷ್ಟಿ ಶಕ್ತಿ ಸುಧಾರಿಸುವುದಿಲ್ಲ. ರೆಟಿನಾ ಕೋನ್​ಗಳ ಜೀವಕೋಶಗಳಿಗೆ ಸೂಕ್ಷ್ಮ ಗಾಯಗಳನ್ನು ಈ ಸಂಶೋಧನೆಯಲ್ಲಿ ಗುರುತಿಸಿದ್ದು, ರೆಟಿನೈಟಿಸ್ ಪಿಗ್ಮೆಂಟೊಸಾ ಅಥವಾ ಕೋನ್-ರಾಡ್ ಡಿಸ್ಟ್ರೋಫಿಗಳಂತಹ ರೆಟಿನಾ ಖಾಯಿಲೆಯನ್ನು ಈ ಸಮಸ್ಯೆ ಹೋಲುತ್ತದೆ ಎಂದು ಡಾಕ್ಟರ್​ಗಳು ತಿಳಿಸಿದ್ದಾರೆ.

'ದೃಷ್ಟಿಯಲ್ಲಿ ಬಣ್ಣಗಳ ಅಸ್ತವ್ಯಸ್ತತೆ ಮುಖ್ಯ ಕಾರಣ ರೋಗಿಯು ತೆಗೆದುಕೊಂಡಿರುವ ಲೈಂಗಿಕ ಶಕ್ತಿ ವೃದ್ದಿಸುವ ಮಾತ್ರೆಯ ಅಡ್ಡ ಪರಿಣಾಮವಾಗಿದ್ದು, ಈವರೆಗೂ ರೋಗಿಯ ರೆಟಿನಾ ಸಮಸ್ಯೆಗೆ ಔಷಧದ ಮೂಲಕವೇ ಪರಿಣಾಮ ಬೀರಲು ಸಾಧ್ಯವಾಗಿಲ್ಲ. ವೈದ್ಯರ ಸಲಹೆ ಪಡೆದು ಮಾತ್ರ ವಯಾಗ್ರಗಳನ್ನು ತೆಗೆದುಕೊಳ್ಳಬೇಕು. ರೋಗಿಗಳಿಗೆ ಉಂಟಾಗುವ ಅಡ್ಡ ಪರಿಣಾಮಗಳ ಕುರಿತು ಡಾಕ್ಟರ್​ಗಳು ಅರಿವು ಮೂಡಿಸುವ ಕೆಲಸ ಆಗಬೇಕು' ಎಂದು ನ್ಯೂಯಾರ್ಕ್​ನ ಐ ಅಂಡ್ ಇಯರ್ ಇನ್ಫರ್ಮರಿ ಆಫ್ ಮೌಂಟ್ ಸಿನೈ (NYEE)ನ ಡಾಕ್ಟರ್ ರಿಚರ್ಡ್ ರೋಸೆನ್ ತಿಳಿಸಿದ್ದಾರೆ.
First published:October 3, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ