Vegetables Peel: ಹಣ್ಣು, ತರಕಾರಿ ಸಿಪ್ಪೆ ಎಸೆಯುತ್ತೀರಾ? ಹೀಗೆ ಮಾಡುವ ಮುನ್ನ ಅದರಲ್ಲಿನ ಪೋಷಕಾಂಶಗಳ ಬಗ್ಗೆ ತಿಳಿದುಕೊಳ್ಳಿ

ಹಣ್ಣುಗಳು ಮತ್ತು ತರಕಾರಿಗಳ ಸಿಪ್ಪೆ ತೆಗೆದು ಬಳಸುವುದು ಅಂದ್ರೆ ಅವುಗಳ ಚರ್ಮವನ್ನು ತೆಗೆದು ಎಸೆದಂತೆ. ಆದರೆ ತರಕಾರಿಗಳು ಮತ್ತು ಹಣ್ಣುಗಳ ಸಿಪ್ಪೆಗಳು ಕೂಡ ಸಾಕಷ್ಟು ಪೋಷಕಾಂಶಗಳಿಂದ ಕೂಡಿರುತ್ತವೆ. ಇದು ತುಂಬಾ ಉಪಯುಕ್ತವಾಗಿದೆ. ತರಕಾರಿ ಮತ್ತು ಹಣ್ಣುಗಳ ಸಿಪ್ಪೆಯನ್ನು ಬಳಸಿಕೊಂಡು ಹಲವು ಕೆಲಸ ಮಾಡಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ನಾವು ಅಡುಗೆ (Cooking) ಮಾಡುವಾಗ ಸಾಮಾನ್ಯವಾಗಿ ತರಕಾರಿಗಳ ಸಿಪ್ಪೆಯನ್ನು (Vegetables Peel) ತೆಗೆದು ಬಳಕೆ ಮಾಡುತ್ತೇವೆ. ತರಕಾರಿ ಮತ್ತು ಹಣ್ಣುಗಳ (Fruits) ಸಿಪ್ಪೆಯನ್ನು ತೆಗೆದು ಬಳಸುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ ತಜ್ಞರ (Experts) ಪ್ರಕಾರ, ತರಕಾರಿ ಮತ್ತು ಹಣ್ಣುಗಳ ಸಿಪ್ಪೆಯನ್ನು ತೆಗೆದು ಬಳಸುವುದು ಸರಿಯಲ್ಲ ಎಂದು ಹೇಳುತ್ತಾರೆ. ಹಣ್ಣುಗಳು ಮತ್ತು ತರಕಾರಿಗಳ ಸಿಪ್ಪೆ ತೆಗೆದು ಬಳಸುವುದು ಅಂದ್ರೆ ಅವುಗಳ ಚರ್ಮವನ್ನು ತೆಗೆದು ಎಸೆದಂತೆ. ಆದರೆ ತರಕಾರಿಗಳು ಮತ್ತು ಹಣ್ಣುಗಳ ಸಿಪ್ಪೆಗಳು ಕೂಡ ಸಾಕಷ್ಟು ಪೋಷಕಾಂಶಗಳಿಂದ ಕೂಡಿರುತ್ತವೆ. ಹಾಗೂ ಇದು ತುಂಬಾ ಉಪಯುಕ್ತವಾಗಿದೆ. ತರಕಾರಿ ಮತ್ತು ಹಣ್ಣುಗಳ ಸಿಪ್ಪೆಯನ್ನು ಬಳಸಿಕೊಂಡು ಹಲವು ಕೆಲಸ ಮಾಡಬಹುದು.

    ತರಕಾರಿ ಮತ್ತು ಹಣ್ಣುಗಳ ಸಿಪ್ಪೆಯಲ್ಲಿ ಹೇರಳ ಪೋಷಕಾಂಶಗಳಿವೆ

    ಒಂದು ಅಧ್ಯಯನದ ಪ್ರಕಾರ ತರಕಾರಿ ಮತ್ತು ಹಣ್ಣುಗಳ ಸಿಪ್ಪೆಯಲ್ಲಿ ಹಣ್ಣಿನ ಖಾದ್ಯ ಭಾಗಕ್ಕಿಂತ ಹೆಚ್ಚಿನ ಪೋಷಕಾಂಶಗಳಿರುತ್ತವೆ. ಹಾಗಾಗಿ ಇಂದು ನಾವು ಕೆಲವು ಅದ್ಭುತ ಹ್ಯಾಕ್‌ಗಳ ಬಗ್ಗೆ ತಿಳಿಯೋಣ. ಇದರಲ್ಲಿ ತರಕಾರಿಗಳು ಮತ್ತು ಹಣ್ಣುಗಳ ತ್ಯಾಜ್ಯ ಸಿಪ್ಪೆಗಳು ನಿಮಗೆ ಹೇಗೆ ಉಪಯುಕ್ತವಾಗಲಿವೆ ಎಂದು ತಿಳಿಯೋಣ.

    ಸೌತೆಕಾಯಿ ಸಿಪ್ಪೆ

    ಸೌತೆಕಾಯಿ ಸಿಪ್ಪೆಯ ಜೊತೆಗೆ ಬಹುತೇಕ ಜನರು ಅದನ್ನು ಸೇವಿಸುತ್ತಾರೆ. ಸೌತೆಕಾಯಿಯನ್ನು ಜನರು ತಮ್ಮ ಡಯಟ್ ಲಿಸ್ಟ್ ನಲ್ಲಿ ಪ್ರಮುಖ ಆಹಾರವಾಗಿ ಸೇವನೆ ಮಾಡುತ್ತಾರೆ. ಮತ್ತು ಸೌತೆಕಾಯಿ ತಿರುಳನ್ನು ತೆಗೆದು ಸೇವನೆ ಮಾಡುವುದು ಅದರ ಪೋಷಕಾಂಶಗಳನ್ನು ತೆಗೆದು ಹಾಕುತ್ತದೆ.

    ಇದನ್ನೂ ಓದಿ: ನಿದ್ರೆಯ ಸಮಸ್ಯೆಗಳು ಯಾವುವು, ನಿದ್ರಾಹೀನತೆಗೆ ಕಾರಣವೇನು?

    ಇನ್ನು ಮನೆಯಲ್ಲಿ ಸ್ವಚ್ಛತೆ ವೇಳೆಯೂ ವಿಷಕಾರಿ ಮತ್ತು ದುಬಾರಿ ರಾಸಾಯನಿಕಗಳನ್ನು ತೆಗೆದು ಹಾಕಲು ಸೌತೆಕಾಯಿ ತಿರುಳನ್ನು ಬಳಸುತ್ತಾರೆ.

    ನಿಂಬೆ ತಿರುಳಿನಿಂದ ನಿಮ್ಮ ಶವರ್ ಬಾಗಿಲು ಸ್ವಚ್ಛಗೊಳಿಸುವುದು

    ನಾವೆಲ್ಲರೂ ಶವರ್ ಬಾಗಿಲುಗಳ ಒಳಭಾಗದಲ್ಲಿ ಅಂಟಿರುವ ಕೊಳಕು ನೀರಿನ ಗುರುತುಗಳು ಮತ್ತು ಸೋಪ್ ಕಲ್ಮಶವಾಗಿ ಹರಡಿದ್ದನ್ನು ನೋಡಿರುತ್ತೇವೆ. ಅದನ್ನು ತೊಡೆದು ಹಾಕಲು ತುಂಬಾ ಕಷ್ಟ ಆಗುತ್ತದೆ. ನಿಂಬೆ ಚೆನ್ನಾಗಿ ಕ್ಲೀನಿಂಗ್ ಬಳಕೆಯಲ್ಲಿ ಉಪಯೋಗವಾಗುತ್ತದೆ. ಗಲೀಜು ಪಾತ್ರೆಗಳನ್ನು ಕ್ಲೀನ್ ಮಾಡುವಾಗಲೂ ನಿಂಬೆ ತಿರುಳನ್ನು ಬಳಸುತ್ತಾರೆ.

    ಕೈ ಮತ್ತು ಕಾಲಿನ ಟ್ಯಾನ್ ಹಾಗೂ ಫೇಶಿಯಲ್ ಗೆ ನಿಂಬೆಯ ತಿರುಳನ್ನು ಬಳಕೆ ಮಾಡಲಾಗುತ್ತದೆ. ನಿಂಬೆಹಣ್ಣನ್ನು ಅರ್ಧಕ್ಕೆ ಹಿಸುಕಿ ಮತ್ತು ಉಳಿದ ಸಿಪ್ಪೆಗೆ ಉಪ್ಪನ್ನು ಸೇರಿಸಿ ಮತ್ತು ನಿಮ್ಮ ಶವರ್ ಡೋರ್ ಮತ್ತು ಇತರ ಗ್ಲಾಸ್ ಕ್ಯೂಬಿಕಲ್ ಪ್ಯಾನೆಲ್‌ಗಳಿಗೆ ಉಜ್ಜಿರಿ. ಇದರಿಂದ ನಿಂಬೆ ಸಿಪ್ಪೆಯ ತಿರುಳು ಇದು ಎಲ್ಲಾ ಕಲೆಗಳನ್ನು ತೆಗೆದು ಹಾಕುತ್ತದೆ.

    ಆಲೂಗಡ್ಡೆ ಸಿಪ್ಪೆಯಿಂದ ಕಣ್ಣುಗಳ ಹೊಳಪು ತರಿಸುವುದು

    ಆಲೂಗಡ್ಡೆ ಕಿಣ್ವಗಳು ಮತ್ತು ವಿಟಮಿನ್ ಸಿ ಅನ್ನು ಹೊಂದಿದೆ. ಇದು ನಿಮ್ಮ ಕಣ್ಣುಗಳ ಸುತ್ತಲಿನ ಸೂಕ್ಷ್ಮ ಚರ್ಮಕ್ಕೆ ಉತ್ತಮವಾಗಿದೆ. ಆಲೂಗಡ್ಡೆಯಲ್ಲಿರುವ ಕ್ಯಾಟೆಕೊಲೇಸ್ ಕಿಣ್ವ ಚರ್ಮದ ಟೋನ್ ಅನ್ನು ಹಗುರಗೊಳಿಸಲು ಹೆಸರುವಾಸಿ ಆಗಿದೆ.

    ಇದು ಕಪ್ಪು, ಉಬ್ಬಿದ ಕಣ್ಣಿನ ಚೀಲಗಳನ್ನು ಎದುರಿಸಲು ಉತ್ತಮ ಆಯ್ಕೆ ಆಗಿದೆ. 10 ನಿಮಿಷದವರೆಗೆ ರೆಫ್ರಿಜರೇಟರ್ನಲ್ಲಿ ಆಲೂಗಡ್ಡೆ ಸಿಪ್ಪೆಯ ಹಲವಾರು ತುಂಡುಗಳನ್ನು ಹಾಕಿ. ಅವುಗಳು ತಣ್ಣಗಾದ ಮೇಲೆ ಕಣ್ಣುಗಳನ್ನು ಮುಚ್ಚಿ ಸಿಪ್ಪೆ ಇರಿಸಿ. ಇದರಿಂದ ನಿಮ್ಮ ಕಪ್ಪು ವರ್ತುಲಗಳು ದೂರವಾಗುತ್ತವೆ.

    ಬಾಳೆಹಣ್ಣಿನ ಸಿಪ್ಪೆಯಿಂದ ಬೂಟುಗಳನ್ನು ಪಾಲಿಶ್ ಮಾಡುವುದು

    ನಿಯಮಿತವಾಗಿ ನೀವು ಶೂ ಪಾಲಿಶ್ ಮಾಡುತ್ತಿದ್ದರೆ, ಅದು ಖಾಲಿಯಾಗಿದ್ದರೆ, ನೀವು ಬಾಳೆಹಣ್ಣಿನ ಸಿಪ್ಪೆಯಿಂದ ಪಾಲಿಶ್ ಮಾಡಬಹುದು. ಇದು ನಿಮಗೆ ಉತ್ತಮ ಸಲಹೆ ಆಗಿದೆ. ಬಾಳೆಹಣ್ಣಿನ ಸಿಪ್ಪೆಯ ಒಳಭಾಗದಿಂದ ನಿಮ್ಮ ಬೂಟುಗಳನ್ನು ಸರಳವಾಗಿ ಉಜ್ಜಿ. ಇದು ಶೂಗಳ ಎಲ್ಲಾ ಕೊಳಕು ಮತ್ತು ಧೂಳನ್ನು ಸ್ವಚ್ಛಗೊಳಿಸುತ್ತದೆ.

    ತೀವ್ರ ರಕ್ತದೊತ್ತಡ ತಡೆಯುತ್ತವೆ ತರಕಾರಿಗಳು

    ಅಧಿಕ ರಕ್ತದೊತ್ತಡ ರೋಗಿಗಳಿಗೆ ಬೀಟ್ರೂಟ್ ಜ್ಯೂಸ್ ಸೇವನೆಯು ಪ್ರಯೋಜನಕಾರಿ ಆಗಿದೆ. ಇದರಲ್ಲಿ ಅನೇಕ ಅಂಶಗಳಿವೆ. ಇದು ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತದೆ. ಇದು ರಕ್ತದೊತ್ತಡ ಸಾಮಾನ್ಯ ಮಾಡಲು ಸಹಾಯ ಮಾಡುತ್ತದೆ.

    ಇದನ್ನೂ ಓದಿ: ಸಿಟ್ರಿಕ್ ಆಮ್ಲವಿರುವ ನಿಂಬೆ ಹಣ್ಣು ಕೂದಲ ಆರೈಕೆಗೆ ಹೇಗೆ ಪ್ರಯೋಜನಕಾರಿ?

    ತೂಕ ಕಡಿಮೆ ಮಾಡಲು ಸಹಕಾರಿ

    ಬೊಜ್ಜು ಕಡಿಮೆ ಮಾಡಲು ಕ್ಯಾರೆಟ್ ಸಹಕಾರಿ ಆಗಿದೆ. ಕ್ಯಾರೆಟ್ ಕಡಿಮೆ ಕ್ಯಾಲೋರಿ ಅಂಶ ಹೊಂದಿದೆ. ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನು ನಿಮ್ಮ ಡಯಟ್ ಪ್ಲಾನ್ ನಲ್ಲಿ ಸೇರಿಸುವುದು ತೂಕ ನಿಯಂತ್ರಣಕ್ಕೆ ಸಹಕಾರಿ ಆಗಿದೆ.
    Published by:renukadariyannavar
    First published: