• Home
  • »
  • News
  • »
  • lifestyle
  • »
  • Health Care: ವಾತ, ಪಿತ್ತ ಸೇರಿದಂತೆ ಹಲವು ರೋಗ ಶಮನಕ್ಕೆ ಪ್ರಯೋಜನ ನೀಡುತ್ತದೆ ನಾಭಿ ಚಿಕಿತ್ಸೆ!

Health Care: ವಾತ, ಪಿತ್ತ ಸೇರಿದಂತೆ ಹಲವು ರೋಗ ಶಮನಕ್ಕೆ ಪ್ರಯೋಜನ ನೀಡುತ್ತದೆ ನಾಭಿ ಚಿಕಿತ್ಸೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹೊಕ್ಕುಳ ಚಿಕಿತ್ಸೆ ಅಥವಾ ಹೊಕ್ಕುಳಿಗೆ ಎಣ್ಣೆ ಅನ್ವಯಿಸುವ ಪದ್ಧತಿ ಶತಮಾನಗಳಷ್ಟು ಹಳೆಯದ್ದು. ಹಾಗೂ ವಿವಿಧ ಆರೋಗ್ಯ ಪ್ರಯೋಜನಗಳಿಗೆ ಇದನ್ನು ಬಳಕೆ ಮಾಡಲಾಗುತ್ತದೆ. ಹೊಕ್ಕುಳವು ತಾಯಿ ಮತ್ತು ಗರ್ಭಾಶಯದಲ್ಲಿ ಬೆಳೆಯುತ್ತಿರುವ ಮಗುವಿನ ನಡುವಿನ ಕೊಂಡಿಯಾಗಿ ಕೆಲಸ ಮಾಡುತ್ತದೆ.

  • Share this:

    ಆಯುರ್ವೇದ (Ayurveda) ಹಲವು ಆರೋಗ್ಯ ಪ್ರಯೋಜನಗಳು (Health Benefits) ಮತ್ತು ಕಾರಣಗಳಿಂದಾಗಿ ಹೊಕ್ಕುಳನ್ನು (Navel) ಪ್ರಮುಖ ಮರ್ಮ ಬಿಂದು ಎಂದು ಹೇಳುತ್ತದೆ. ಹೊಕ್ಕುಳ ಬಳ್ಳಿಯು ಮಗುವಿನ ತಾಯಿ (Baby And Mother) ಜೊತೆಗಿನ ದೈಹಿಕ ಮತ್ತು ಮಾನಸಿಕ ಸಂಪರ್ಕದ ಆರಂಭಿಕ ಹಂತ. ಮತ್ತು ಆರೋಗ್ಯಕರ ಬೆಳವಣಿಗೆಗೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಒದಗಿಸುವ ಪ್ರಮುಖ ಅಂಶವೂ ಆಗಿದೆ. ಜನನದ ವೇಳೆ ಹೊಕ್ಕುಳ ಬಳ್ಳಿಯನ್ನು ಕತ್ತರಿಸುತ್ತಾರೆ. ಇದು ಹೊಕ್ಕುಳು ಗಂಟು ಆಗಲು ಕಾರಣವಾಗುತ್ತದೆ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಹೊಕ್ಕುಳ ಸ್ವಚ್ಛತೆ ಮತ್ತು ಆರೋಗ್ಯ ಕಾಪಾಡುವುದು ಮುಖ್ಯ ಎಂದು ಹೇಳಲಾಗುತ್ತದೆ. ವ್ಯಕ್ತಿಗೆ ಹೊಕ್ಕುಳ ಆರೋಗ್ಯ ಅನೇಕ ಕಾಯಿಲೆಗಳಿಂದ ಕಾಪಾಡುತ್ತದೆ ಎಂದು ನಂಬಲಾಗಿದೆ.


    ಹೊಕ್ಕುಳ ಅತ್ಯಂತ ಪ್ರಮುಖ ದೈಹಿಕ ಪ್ರದೇಶ


    ಆಯುಶಕ್ತಿಯ ಸಹ ಸಂಸ್ಥಾಪಕಿ ಡಾ. ಸ್ಮಿತಾ ನರಮ್ ಅವರು ಹೇಳುವ ಪ್ರಕಾರ, ಹೊಕ್ಕುಳ ಅತ್ಯಂತ ಪ್ರಮುಖವಾದ ದೈಹಿಕ ಪ್ರದೇಶ ಆಗಿದೆ. ಅದು ವ್ಯಕ್ತಿಗೆ ಅನೇಕ ಪ್ರಯೋಜನ ನೀಡುತ್ತದೆ. ವಿವಿಧ ಸಾರಭೂತ ತೈಲಗಳಿಂದ ದೇಹಕ್ಕೆ ಮಸಾಜ್ ಮಾಡುವ ಮೂಲಕ ವಿವಿಧ ಚಿಕಿತ್ಸಕ ಪ್ರಯೋಜನ ಪಡೆಯಬಹುದು ಎನ್ನುತ್ತಾರೆ.


    ಹೊಕ್ಕುಳ ಚಿಕಿತ್ಸೆ ಅಥವಾ ಹೊಕ್ಕುಳಿಗೆ ಎಣ್ಣೆ ಅನ್ವಯಿಸುವ ಪದ್ಧತಿ ಶತಮಾನಗಳಷ್ಟು ಹಳೆಯದ್ದು. ಹಾಗೂ ವಿವಿಧ ಆರೋಗ್ಯ ಪ್ರಯೋಜನಗಳಿಗೆ ಇದನ್ನು ಬಳಕೆ ಮಾಡಲಾಗುತ್ತದೆ. ಹೊಕ್ಕುಳವು ತಾಯಿ ಮತ್ತು ಗರ್ಭಾಶಯದಲ್ಲಿ ಬೆಳೆಯುತ್ತಿರುವ ಮಗುವಿನ ನಡುವಿನ ಕೊಂಡಿಯಾಗಿ ಕೆಲಸ ಮಾಡುತ್ತದೆ.


    ಇದನ್ನೂ ಓದಿ: ಪಾರ್ಶ್ವವಾಯುಗೆ ತುತ್ತಾಗದಂತೆ ತಡೆಯುತ್ತೆ ಈ ಆಹಾರಗಳು


    ಮತ್ತು ದೇಹದ ವಿವಿಧ ಭಾಗಗಳಿಗೆ ಕಾರಣವಾಗುವ ಅನೇಕ ನರಗಳನ್ನು ಸಂಪರ್ಕಿಸುವ ಅಂಗ ಆಗಿದೆ. ಹಾಗಾಗಿ ಆಯುರ್ವೇದವು ಸ್ವಚ್ಛವಾದ ಹೊಕ್ಕುಳ ಕಾಪಾಡಿಕೊಳ್ಳುವುದು ಮತ್ತು ಸಾರಭೂತ ತೈಲದಿಂದ ಹೊಕ್ಕುಳನ್ನು ಆರೈಕೆ ಮಾಡುವುದು ಮುಖ್ಯ ಎಂದು ಹೇಳುತ್ತದೆ. ಜೊತೆಗೆ ಆರೈಕೆ ಮಾಡುವುದು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಸಹಕಾರಿ.


    ಪೆಚೋಟಿ ವಿಧಾನ ಎಂದರೇನು?


    ಅಗತ್ಯ ಅಥವಾ ಔಷಧೀಯ ತೈಲಗಳ ಮೂಲಕ ಅಗತ್ಯ ಅಂಶಗಳನ್ನು ಹೀರಿಕೊಳ್ಳಲು ಹೊಕ್ಕುಳದಲ್ಲಿನ ಪೆಚೋಟಿ ಗ್ರಂಥಿ ಬಳಸುವ ಅಭ್ಯಾಸವೇ ಪೆಚೋಟಿ ವಿಧಾನ ಅಥವಾ ಹೊಕ್ಕುಳ ಚಿಕಿತ್ಸೆ ಆಗಿದೆ. ಕೆಲವು ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡಲು ಚಿಕಿತ್ಸಕ ತೈಲಗಳನ್ನು ಹೊಕ್ಕಳಿಗೆ ಹಚ್ಚುತ್ತಾರೆ.


    ಪೆಚೋಟಿ ವಿಧಾನ ಮತ್ತು ಸಾರಭೂತ ತೈಲಗಳು


    ನೋವು ನಿವಾರಣೆ ಮತ್ತು ವಿಶ್ರಾಂತಿಗಾಗಿ ಪೆಚೋಟಿ ವಿಧಾನವು ತಮ್ಮ ಹೊಕ್ಕುಳದ ಮೂಲಕ ನೈಸರ್ಗಿಕ ಸಾರಭೂತ ತೈಲ ಹೀರಿಕೊಳ್ಳುವ ಪ್ರಕ್ರಿಯೆ ಆಗಿದೆ. ಸಾಂಪ್ರದಾಯಿಕವಾಗಿ ಪೆಚೋಟಿ ವಿಧಾನ ಫಾಲೋ ಮಾಡಲಾಗುತ್ತದೆ. ಪರ್ಯಾಯ ಪ್ರಾಚೀನ ಆಯುರ್ವೇದ ಪ್ರಕ್ರಿಯೆ ಇದೆ.


    ಪೆಚೋಟಿ ವಿಧಾನ ಹೇಗೆ ಮಾಡುವುದು?


    ಪ್ರಾಚೀನ ಆಯುರ್ವೇದದಲ್ಲಿ, ಮಾಪನ ವಿಧಾನದಿಂದ ಪೆಚೋಟಿ ವಿಧಾನ ಸಹ ಮಾಡಬಹುದು. ಇಲ್ಲಿ ಪ್ರಾರಂಭಿಸುವ ಮೊದಲು ಪುರುಷರು ಮತ್ತು ಮಹಿಳೆಯರಿಗೆ ಹೊಕ್ಕುಳದ ಅಳತೆ ತೆಗೆದುಕೊಳ್ಳಲಾಗುತ್ತದೆ ಮತ್ತು ನಂತರ ಅವರನ್ನು ಬೆನ್ನಿನ ಮೇಲೆ ಮಲಗಿಸಿ, ಸರಿಯಾದ ಬಿಂದು ಮತ್ತು ಒತ್ತಡ ಹಾಕುತ್ತಾರೆ. ಇದು ವ್ಯಕ್ತಿಗೆ ವಿಶ್ರಾಂತಿ ಭಾವನೆ ನೀಡುತ್ತದೆ.


    ಪೆಚೋಟಿ ವಿಧಾನದ ಪ್ರಯೋಜನಗಳು


    ಜೀರ್ಣಕಾರಿ ಸಮಸ್ಯೆಗಳಿಂದ ಅನಿಯಮಿತ ನಿದ್ರೆಯ ಚಕ್ರದವರೆಗೆ ಯಾವುದೇ ಅನಿರೀಕ್ಷಿತ ಸಂದರ್ಭಗಳಿಂದ ಪೆಚೋಟಿ ಪಾಯಿಂಟ್ ಸ್ಥಳಾಂತರವಾದ್ರೆ ದೇಹದಲ್ಲಿ ಪೆಚೋಟಿ ಪ್ರಮುಖ ಪಾತ್ರ ವಹಿಸುತ್ತದೆ. ದೇಹದ ಜೋಡಣೆಗೆ ಅಡ್ಡಿಯಾಗಬಹುದು.


    ಹೊಕ್ಕುಳಕ್ಕೆ ತೈಲ ಅನ್ವಯಿಸುವ ಮುಖ್ಯ ಪ್ರಯೋಜನ ಅಂದ್ರೆ ವಾತದ ನಿಯಂತ್ರಣ, ಇದು ನಮಗೆ ಸುರಕ್ಷಿತ, ಆರಾಮದಾಯಕ ಮತ್ತು ಉತ್ತಮ ಆಹಾರ ಸೇವನೆಗೆ ಸಹಕಾರಿ ಆಗಿದೆ.


    ಹೊಕ್ಕುಳಕ್ಕೆ ಎಣ್ಣೆ ಅನ್ವಯಿಸುವುದರ ಪ್ರಯೋಜನಗಳು


    ಹೊಕ್ಕುಳಿನ ಕುಳಿಯಲ್ಲಿ ಪೂಲಿಂಗ್ ತೈಲ ಹಾಕುವುದು ವಾತ ಮತ್ತು ಪಿತ್ತ ಶಮನಗೊಳಿಸಲು ಸಹಕಾರಿ. ಕೊಲೊನ್ ವಾತದ ಸ್ಥಾನವಾಗಿ ಕಾರ್ಯ ನಿರ್ವಹಿಸುತ್ತದೆ. ಮತ್ತು ಡ್ಯುವೋಡೆನಮ್, ಸಣ್ಣ ಕರುಳು ಅಥವಾ ಹೊಟ್ಟೆಯ ಕೆಳಭಾಗವು ಪಿತ್ತದಂತೆ ಕೆಲಸ ಮಾಡುತ್ತದೆ.


    ಇದನ್ನೂ ಓದಿ: ಪ್ರತಿದಿನ ರುಚಿಕರ ಮತ್ತು ಹೆಲ್ದೀ ಪ್ರೊಟೀನ್ ಪೌಡರ್ ಮನೆಯಲ್ಲಿ ತಯಾರಿಸಿ, ಇಲ್ಲಿದೆ ರೆಸಿಪಿ


    ಪೆಚೋಟಿ ವಿಧಾನ ನೋವು ಮತ್ತು ಒತ್ತಡ ನಿವಾರಿಸುವ ಮೂಲಕ ದೇಹ ವಿಶ್ರಾಂತಿ ಪಡೆಯಲು ಸಹಕಾರಿ. ಇದು ನಿದ್ರೆಯ ಚಕ್ರ ಸುಧಾರಿಸುತ್ತದೆ. ಅಜೀರ್ಣ ಕಡಿಮೆ ಮಾಡುತ್ತದೆ. ದೇಹವನ್ನು ಶುದ್ಧೀಕರಿಸುತ್ತದೆ. ಆರೋಗ್ಯಕರ, ಹೊಳೆಯುವ ಮೈಬಣ್ಣ ನೀಡುತ್ತದೆ.

    Published by:renukadariyannavar
    First published: