Vastu Tips: ಸಂಪತ್ತಿನ ವೃದ್ಧಿಗೆ ಪಾಲಿಸಿ ಈ ವಾಸ್ತು ಸಲಹೆ

ವಾಸ್ತುಶಾಸ್ತ್ರದ ಪ್ರಮುಖ ಕಾರ್ಯವೆಂದರೆ ಶಕ್ತಿಗಳನ್ನು ಧನಾತ್ಮಕ ರೂಪದಲ್ಲಿ ಮರುನಿರ್ದೇಶಿಸುವುದಾಗಿದೆ

Photo: Google

Photo: Google

  • Share this:

ವಾಸ್ತುಶಾಸ್ತ್ರದಲ್ಲಿ 16 ದಿಕ್ಕುಗಳನ್ನು ಸೂಚಿಸಲಾಗಿದ್ದು ಪ್ರತಿಯೊಂದು ದಿಕ್ಕುಗಳೂ ಒಂದೊಂದು ಅರ್ಥವನ್ನು ತಿಳಿಸುತ್ತವೆ. ವಾಸ್ತುಶಾಸ್ತ್ರದ ನಿಯಮಗಳನ್ನು ಪಾಲಿಸುವುದು ಹಾಗೂ ದಿಕ್ಕುಗಳಿಗಿರುವ ಮಹತ್ವಗಳನ್ನು ಅರಿತುಕೊಳ್ಳುವುದರಿಂದ ಮನೆಯಲ್ಲಿ ಆರೋಗ್ಯ, ಸಂಪತ್ತು, ಸುಖ ಶಾಂತಿ ಯಾವಾಗಲೂ ನೆಲೆಸುತ್ತದೆ. ವಾಸ್ತುವನ್ನು ನಿಜವಾಗಿಯೂ ಅನುಸರಿಸಬೇಕೇ ಎಂಬ ವಿಚಾರ ಬಂದಲ್ಲಿ ಇದಕ್ಕೆ ಉತ್ತರ ಹೌದು ಎಂದಾಗಿದೆ. ಏಕೆಂದರೆ ವಾಸ್ತುವನ್ನು ನಂಬುವುದು ಮೂಢನಂಬಿಕೆಯಲ್ಲ. ಇದಕ್ಕೆ ವೈಜ್ಞಾನಿಕ ನೆಲೆಗಟ್ಟು ಕೂಡ ಇದೆ ಎಂಬುದನ್ನು ಅರ್ಥಮಾಡಿಕೊಳ್ಳಲೇಬೇಕು.ಪ್ರಕೃತಿಯ ಐದು ಮುಖ್ಯ ಮೂಲಭೂತ ಅಂಶಗಳು ಹಾಗೂ ಜನರು ವಸ್ತುಗಳಿಗಾಗಿ ಅದರ ವಿಶೇಷತೆಗಳ ಸಂಯೋಜನೆಯಾದ್ಯಂತ ಕೆಲಸ ಮಾಡುವ ವಿಜ್ಞಾನ ಎಂಬುದಾಗಿ ವಾಸ್ತುವನ್ನು ವ್ಯಾಖ್ಯಾನಿಸಲಾಗಿದೆ. ವಾಸ್ತು ಸಂಯೋಜಿತ ವಾತಾವರಣವನ್ನು ರೂಪಿಸಲು ಸಹಾಯ ಮಾಡುವುದರ ಜೊತೆಗೆ ಸಕಾರಾತ್ಮಕ ಕೆಲಸ ಮತ್ತು ಜೀವನದ ಅಭಿವೃದ್ಧಿಗೂ ಸಹಕಾರಿಯಾಗಿದೆ.


ಪಂಚಭೂತಗಳೆಂಬ ಐದು ಪ್ರಮುಖ ಅಂಶಗಳಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದಾಗಿದ್ದು ಆರೋಗ್ಯ, ಸಂತೋಷ, ಸಮೃದ್ಧಿ, ಸಂಪತ್ತನ್ನು ಹೆಚ್ಚಿಸಲು ವಾಸ್ತುಶಾಸ್ತ್ರ ಅನುಸರಿಸಲೇಬೇಕು.


ವಾಸ್ತುಶಾಸ್ತ್ರದ ಪ್ರಮುಖ ಕಾರ್ಯವೆಂದರೆ ಶಕ್ತಿಗಳನ್ನು ಧನಾತ್ಮಕ ರೂಪದಲ್ಲಿ ಮರುನಿರ್ದೇಶಿಸುವುದಾಗಿದೆ. ವಾಸ್ತುವಿನಲ್ಲಿ ದಿಕ್ಕುಗಳು ನಿರ್ಣಾಯಕ ಪಾತ್ರಗಳನ್ನು ವಹಿಸುತ್ತವೆ. ವಾಸ್ತುವಿನ ಪ್ರಕಾರ ಒಂದು ಪರಿಪೂರ್ಣ ಕಟ್ಟಡ ರಚನೆಯಲ್ಲಿ ನೀವು ಎಲ್ಲಾ ದಿಕ್ಕುಗಳ ಪ್ರಾಮುಖ್ಯತೆಯನ್ನು ಅರಿತುಕೊಂಡಿರಬೇಕು. ವಾಸ್ತುವಿನ ಪ್ರಕಾರ 16 ದಿಕ್ಕುಗಳಿದ್ದು ಪ್ರತಿಯೊಂದು ದಿಕ್ಕು ತನ್ನದೇ ಮಹತ್ವವನ್ನು ಒಳಗೊಂಡಿದೆ.


1. ಈಶಾನ್ಯ ದಿಕ್ಕು


ಈ ದಿಕ್ಕು ಸ್ಪಷ್ಟತೆಯ ಸಂಕೇತವಾಗಿದೆ ಹಾಗೂ ಧ್ಯಾನ ಮಾಡಲು ಈ ದಿಕ್ಕು ಸೂಕ್ತವಾಗಿದೆ.


2. ಈಶಾನ್ಯ ಪೂರ್ವಭಾಗ


ಮನರಂಜನೆ ಹಾಗೂ ವಿನೋದಕ್ಕಾಗಿ ಈ ದಿಕ್ಕು ಪ್ರಶಸ್ತವಾಗಿದೆ. ಕುಟುಂಬ ಕೊಠಡಿಗೆ ಇದು ಸೂಕ್ತ


3. ಪೂರ್ವ ದಿಕ್ಕು


ಪೂರ್ವ ದಿಕ್ಕಿನಲ್ಲಿ ಉತ್ತಮ ಬಾಂಧವ್ಯಗಳು ಅಭಿವೃದ್ಧಿಗೊಳ್ಳುತ್ತವೆ ಹಾಗಾಗಿ ಲಿವಿಂಗ್ ರೂಮ್‌ಗೆ ಇದು ಸೂಕ್ತವಾಗಿದೆ.


4. ಆಗ್ನೇಯ ಪೂರ್ವಭಾಗ


ಇದು ನಿಮ್ಮ ಜೀವನದ ಗುರಿಗಳನ್ನು ಅರ್ಥೈಸುವಲ್ಲಿ ಸಹಕಾರಿಯಾಗಿದೆ. ತೊಂದರೆ ಹಾಗೂ ಆತಂಕವನ್ನು ಈ ದಿಕ್ಕು ಉಲ್ಲೇಖಿಸುತ್ತದೆ


5. ಆಗ್ನೇಯ ದಿಕ್ಕು


ಆಗ್ನೇಯ ದಿಕ್ಕು ಧನ ಸಂಪತ್ತು, ನಗದನ್ನು ಸಂಕೇತಿಸುತ್ತದೆ.


6. ಆಗ್ನೇಯ ದಕ್ಷಿಣ ದಿಕ್ಕು


ಇದು ಶಕ್ತಿ ಹಾಗೂ ವಿಶ್ವಾಸದ ಸಂಕೇತವಾಗಿದೆ.


7. ದಕ್ಷಿಣ ದಿಕ್ಕು


ಈ ದಿಕ್ಕಿನ ಪ್ರಾಮುಖ್ಯತೆಯು ಮಾನ್ಯತೆ ಹಾಗೂ ಸಾಮಾಜಿಕ ಖ್ಯಾತಿಯನ್ನು ನೀಡುತ್ತದೆ.


8. ನೈರುತ್ಯ ದಕ್ಷಿಣ ಭಾಗ


ಈ ದಿಕ್ಕಿನಲ್ಲಿ ಖರ್ಚು ವಿಪರೀತವಾಗಿರುತ್ತದೆ. ಈ ದಿಕ್ಕು ಜೀವನದ ಅನುಪಯುಕ್ತ ಅಂಶಗಳನ್ನು ನಿವಾರಿಸುತ್ತದೆ ಎಂಬ ನಂಬಿಕೆ ಇದೆ.


9. ನೈರುತ್ಯ ದಿಕ್ಕು


ನೈರುತ್ಯ ದಿಕ್ಕು ವಿವಾಹ, ಕೌಟುಂಬಿಕ ಬದ್ಧತೆ ಹಾಗೂ ಅನುಬಂಧಗಳನ್ನು ಉಲ್ಲೇಖಿಸುತ್ತದೆ.


10. ನೈರುತ್ಯ ಪಶ್ಚಿಮ ಭಾಗ


ಈ ದಿಕ್ಕು ಕಲಿಕೆ, ಜ್ಞಾನ, ಶಿಕ್ಷಣ ಮತ್ತು ಹೂಡಿಕೆಯನ್ನು ವ್ಯಾಖ್ಯಾನಿಸುತ್ತದೆ.


11. ಪಶ್ಚಿಮ ದಿಕ್ಕು


ಪಶ್ಚಿಮ ದಿಕ್ಕು ನಿಮಗೆ ವ್ಯಾಪಾರದಲ್ಲಿ ಅಭಿವೃದ್ಧಿಯನ್ನುಂಟು ಮಾಡುತ್ತದೆ


12. ವಾಯುವ್ಯ ಪಶ್ಚಿಮ ಭಾಗ


ಈ ದಿಕ್ಕು ಒತ್ತಡ ಹಾಗೂ ಖಿನ್ನತೆಯನ್ನು ಸಂಕೇತಿಸುತ್ತದೆ


13. ವಾಯುವ್ಯ ದಿಕ್ಕು


ಇದು ಬೆಂಬಲ ಹಾಗೂ ಆರೋಗ್ಯವನ್ನು ಸೂಚಿಸುತ್ತದೆ.


14. ವಾಯುವ್ಯ ದಿಕ್ಕಿನ ಉತ್ತರ ಭಾಗ


ಈ ದಿಕ್ಕು ಆಕರ್ಷಣೆ ಹಾಗೂ ಕೌಟುಂಬಿಕ ಸುಖವನ್ನು ಒದಗಿಸುತ್ತದೆ.


15. ಉತ್ತರ ದಿಕ್ಕು


ಉತ್ತರ ದಿಕ್ಕು ನಿರಂತರ ಬೆಳವಣಿಗೆ ಹಾಗೂ ಅವಕಾಶವನ್ನು ಸಂಕೇತಿಸುತ್ತದೆ.


16. ಈಶಾನ್ಯ ಉತ್ತರ ಭಾಗ


ಈ ದಿಕ್ಕು ಉತ್ತಮ ಆರೋಗ್ಯ ಹೆಚ್ಚು ಸಾಮರ್ಥ್ಯವುಳ್ಳ ರೋಗನಿರೋಧಕ ಶಕ್ತಿಯ ಕೇಂದ್ರವಾಗಿದೆ.


ಸಂಪತ್ತಿನ ಅಭಿವೃದ್ಧಿಗಾಗಿ ವಾಸ್ತು ಸಲಹೆಗಳು


- ಮನೆಯ ಪ್ರವೇಶ ದ್ವಾರವು ನಿಖರವಾದ ದಿಕ್ಕುಗಳಲ್ಲಿರಬೇಕು


- ಅಡುಗೆ ಕೋಣೆ ಆಗ್ನೇಯ ದಿಕ್ಕಿನಲ್ಲಿರಬೇಕು


- ಉತ್ತರ ಹಾಗೂ ಪಶ್ಚಿಮ ದಿಕ್ಕಿನಲ್ಲಿ ಸ್ನಾನ ಗೃಹವಿರಬಾರದು


- ಮನಿಪ್ಲಾಂಟ್ ಉತ್ತರ ದಿಕ್ಕಿನಲ್ಲಿರಬೇಕು


- ಕುಬೇರ ಮೂರ್ತಿಯನ್ನು ಉತ್ತರ ದಿಕ್ಕಿನಲ್ಲಿರಿಸಬೇಕು


- ಆಗ್ನೇಯ ದಿಕ್ಕಿನಲ್ಲಿ ಕೆಂಪು ಬೆಳಕಿನ ಬಲ್ಬ್ ಹಾಕಬೇಕು


- ಪಶ್ಚಿಮ ದಿಕ್ಕಿನಲ್ಲಿ ಸಸ್ಯಗಳನ್ನು ನೆಡಬಾರದು


- ಒಂದು ಜೋಡಿ ಬಿಳಿಕುದುರೆಗಳು ವಾಯುವ್ಯದಲ್ಲಿರಬೇಕು


- ಲಕ್ಷ್ಮೀ ಚಿಹ್ನೆಯನ್ನು ಆಗ್ನೇಯ ದಿಕ್ಕಿನಲ್ಲಿ ಬಳಸಿ


- ಪಶ್ಚಿಮ ದಿಕ್ಕಿನಲ್ಲಿ ಲಾಕರ್ ಇರಿಸಿ


- ಪೂರ್ವಕ್ಕೆ ತುಳಸಿ ಗಿಡ ನೆಡಿ


First published: