Benefits of Mint Leaves: ಅಸ್ತಮಾ ಹೊಡೆದೋಡಿಸುತ್ತೆ ಪುದೀನಾ! ಮಿಂಟ್ ಎಲೆಗಳ ಅದ್ಭುತ ಆರೋಗ್ಯ ಗುಣಗಳಿವು

ಒತ್ತಡದಿಂದಾಗಿ ಉದ್ಭವಿಸುವ ಅನೇಕ ಸಮಸ್ಯೆಗಳು ಪುದೀನಾ ಸೇವನೆಯಿಂದ ಪರಿಹಾರವಾಗುತ್ತವೆ

ಪುದೀನಾ

ಪುದೀನಾ

  • Share this:
    ಪುದೀನದಲ್ಲಿ ಉತ್ಕರ್ಷಣ ನಿರೋಧಕಗಳು, ಮೆಂಥಾಲ್ (Manthal) ಮತ್ತು ಫೈಟೊನ್ಯೂಟ್ರಿಯಂಟ್‍ಗಳಿವೆ. ಇವು ಕಿಣ್ವಗಳಿಗೆ ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತವೆ. ಔಷಧಿಗಿಂತ ಯಾವುದಕ್ಕೂ ಕಡಿಮೆಯಿಲ್ಲದ ಪುದೀನಾದಲ್ಲಿ ವಿಟಮಿನ್-ಸಿ ಮತ್ತು ಖನಿಜಗಳು ಹೇರಳವಾಗಿವೆ. ಇದು ಬ್ಯಾಕ್ಟೀರಿಯಾ (Bacterial) ವಿರೋಧಿ ಗುಣಗಳನ್ನು ಹೊಂದಿರುವುದರಿಂದ ತ್ವಚೆಯಲ್ಲಿರುವ ಕೊಳೆಯನ್ನು ತೆಗೆದುಹಾಕುತ್ತದೆ. ನಿಮಗೆ ಜೀರ್ಣಕ್ರಿಯೆಯ ಸಮಸ್ಯೆಗಳಿದ್ದರೆ ಪುದೀನಾ (Mint) ಸೇವಿಸಿ. ಪುದೀನ ಎಲೆಗಳು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವ ಗುಣಲಕ್ಷಣಗಳನ್ನು ಹೊಂದಿವೆ. ಒತ್ತಡದಿಂದಾಗಿ ಉದ್ಭವಿಸುವ ಅನೇಕ ಸಮಸ್ಯೆಗಳು ಪುದೀನಾ ಸೇವನೆಯಿಂದ ಪರಿಹಾರವಾಗುತ್ತವೆ. ಪುದೀನ ಬಳಸುವುದರ ಮೂಲಕ ಯಾವೆಲ್ಲಾ ಆರೋಗ್ಯ (Health) ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಡಬಹುದು? ಎನ್ನುವುದನ್ನು ತಿಳಿಯಲು ಮುಂದಿನ ವಿವರಣೆಯನ್ನು ಪರಿಶೀಲಿಸಿ.

    ಚರ್ಮದ ಆರೋಗ್ಯವನ್ನು ಕಾಪಾಡುವುದು

    ಇದು ಮೊಡವೆ ವಿರೋಧಿಗಳಾಗಿ ಕಾರ್ಯನಿರ್ವಹಿಸುತ್ತದೆ. ಪುದೀನದಲ್ಲಿ ಉರಿಯೂತ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಒಳಗೊಂಡಿದ್ದೆ. ಇದು ಚರ್ಮದ ಮೇಲೆ ಮೊಡವೆ ಮತ್ತು ಗುಳ್ಳೆಗಳಂತಹ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುವುದು. ಪುದೀನದಲ್ಲಿ ಸ್ಯಾಲಿಸಿಲಿಕ್ ಆಮ್ಲವಿರುತ್ತದೆ. ಗಣನೀಯವಾಗಿ ಪುದೀನ ರಸವನ್ನು ಮುಖಕ್ಕೆ ಅನ್ವಯಿಸುವುದರಿಂದ ಚರ್ಮ ಸಂಬಂಧಿ ಆರೋಗ್ಯ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸುವುದು.

    ಇದನ್ನೂ ಓದಿ: Hair Care: ಬೇವು ಮತ್ತು ಬೆಟ್ಟದ ನೆಲ್ಲಿಕಾಯಿಯನ್ನು ನೈಸರ್ಗಿಕವಾಗಿ ಬಳಸಿ ಕೂದಲ ಕಾಳಜಿ ವಹಿಸಿ

    ತೂಕ ಇಳಿಕೆಗೆ ಸಹಾಯ ಮಾಡುವುದು

    ಪುದೀನದಲ್ಲಿ ಇರುವ ಸಾರಭೂತ ತೈಲ ಮತ್ತು ಪಿತ್ತರಸವು ಜೀರ್ಣ ಕ್ರಿಯೆಯನ್ನು ಉತ್ತೇಜಿಸುತ್ತದೆ. ತೂಕ ನಷ್ಟಕ್ಕೆ ಸಹಾಯ ಮಾಡುವ ನೈಸರ್ಗಿಕ ಉತ್ಪನ್ನಗಳಲ್ಲಿ ಪುದೀನ ಸಹ ಒಂದು. ಜೀರ್ಣಕಾರಿ ಕಿಣ್ವಗಳು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದಾಗಿ ಚಯಾಪಚಯ ಕ್ರಿಯೆಯು ಉತ್ತಮವಾಗುತ್ತದೆ. ಉತ್ತಮ ಜೀರ್ಣ ಕ್ರಿಯೆಯಿಂದ ಸುಲಭವಾಗಿ ತೂಕ ಇಳಿಸಬಹುದು. ಆಕರ್ಷಕ ದೇಹವನ್ನು ಹೊಂದಲು ಸಹಾಯ ಮಾಡುವುದು.

    ಪುದೀನದ ರಸ ಮತ್ತು ಅದರ ಪರಿಮಳವು  ಒತ್ತಡವನ್ನು ನಿವಾರಿಸುವುದು

    ಪುದೀನ ಉಲ್ಲಾಸಕರವಾದ ವಾಸನೆಯನ್ನು ಒಳಗೊಂಡಿರುವುದರಿಂದ ಅದು ಬಹು ಬೇಗ ಶಾಂತ ಹಾಗೂ ಉಲ್ಲಾಸದ ಭಾವನೆಯನ್ನು ನೀಡುತ್ತವೆ. ಪುದೀನದ ರಸ ಮತ್ತು ಅದರ ಪರಿಮಳವು ಮಾನಸಿಕ ಒತ್ತಡ ಹಾಗೂ ಖಿನ್ನತೆಯ ಭಾವನೆಯನ್ನು ಬಹುಬೇಗ ನಿವಾರಿಸುವುದು.  ಪುದೀನದಲ್ಲಿ ಇರುವ ಔಷಧೀಯ ಗುಣ ಹಾಗೂ ಅದರ ಪರಿಮಳವು ಅರೋಮಾ ಥೆರಪಿಗಳಿಗೆ ಸಹಾಯ ಮಾಡುವುದು. ರಕ್ತದಲ್ಲಿ ಸಿರೋಟಿನ್ ಅನ್ನು ತಕ್ಷಣ ಬಿಡುಗಡೆಮಾಡುವುದು. ಆಗ ಒತ್ತಡ ಹಾಗೂ ಖಿನ್ನತೆಯು ಸರಾಗವಾಗಿ ನಿವಾರಣೆಯಾಗುವುದು.

    ಇದನ್ನೂ ಓದಿ: Obesity Reduce Leaves: ಈ ಕೆಲವು ಸಸ್ಯಗಳಲ್ಲಿವೆ ಸೂಪರ್ ಪವರ್! ತೂಕ ಇಳಿಸಿ ಆರೋಗ್ಯ ರಕ್ಷಿಸುತ್ತೆ

    ನಿಯಮಿತವಾಗಿ  ಸೇವಿಸುವುದರಿಂದ ಪುದೀನ  ಅಸ್ತಮಕ್ಕೆ ಚಿಕಿತ್ಸೆ

    ಪುದೀನದಲ್ಲಿ ಇರುವ ಮೆಂಥಾಲ್ ಡಿಕೊಂಗಸ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಶ್ವಾಸಕೋಶದಲ್ಲಿ ಸಂಗ್ರಹಿಸಿದ ಲೋಳೆಯನ್ನು ಸಡಿಲಗೊಳಿಸಲು ಸಹಾಯ ಮಡುತ್ತದೆ. ಮೂಗಿನಲ್ಲಿ ಕಟ್ಟಿಕೊಂಡ ಪೊರೆಗಳನ್ನು ಕುಗ್ಗಿಸಿ ಸುಲಭವಾಗಿ ಉಸಿರಾಡಲು ಸಹಾಯ ಗುವಂತೆ ಮಾಡುವುದು ನಿಯಮಿತವಾಗಿ ಪುದೀನ ರಸ ಅಥವಾ ಪುದೀನ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಎದೆಯ ದಟ್ಟಣೆ ಕಡಿಮೆಯಾಗುತ್ತದೆ. ಪುದೀನವನ್ನು ಮಿತಿ ಮೀರಿ ಸೇವಿಸಬಾರದು. ಮಿತವಾಗಿ ಬಳಸಿದಾಗ ಸಮಸ್ಯೆಯನ್ನು ಆರೋಗ್ಯಕರ ರೀತಿಯಲ್ಲಿ ನಿಯಂತ್ರಣದಲ್ಲಿ ಇಡಬಹುದು. ಬೇಸಿಗೆಯಲ್ಲಿ ತೀವ್ರವಾದ ತಲೆನೋವಿನಿಂದ ಬಳಲುವವರಿಗೆ ಪುದೀನಾದಿಂದ ಮಾಡಿದ ವಸ್ತುಗಳು ಪರಿಹಾರವನ್ನು ನೀಡುತ್ತವೆ. ಪುದೀನಾ ಎಣ್ಣೆ ಅಥವಾ ಅದರಿಂದ ತಯಾರಿಸಿದ ಮುಲಾಮನ್ನು ತಲೆಗೆ ಹಚ್ಚಿದರೆ ತಲೆನೋವು ನಿವಾರಣೆಯಾಗುತ್ತದೆ.

    ಪುದೀನ ಎಲೆಯನ್ನು ಅಗಿಯುವುದರಿಂದ  ಬಾಯಿಯ ಆರೈಕೆ ಮಾಡುವುದು

    ಪುದೀನ ಎಲೆಯನ್ನು ಅಗಿಯುವುದರಿಂದ ಬಾಯಿಯ ನೈರ್ಮಲ್ಯ ಮತ್ತು ಹಲ್ಲಿನ ಆರೋಗ್ಯವನ್ನು ಸುಧಾರಿಸಲು ಸಹಾಯವಾಗುವುದು. ಪುದೀನದಲ್ಲಿನ ಸಾರಭೂತ ತೈಲಗಳು ತಾಜಾತನದ ಉಸಿರಾಟವನ್ನು ಪಡೆಯಲು ಸಹಾಯವಾಗುತ್ತದೆ. ಪುದೀನ ಎಣ್ಣೆಯನ್ನು ಹೊಂದಿರುವ ಮೌತ್‍ವಾಶ್‍ವನ್ನು ಬಳಸುವುದರಿಂದ ಬಾಯಿಗೆ ಸಂಬಂಧಿಸಿದ ಅನಾರೋಗ್ಯಗಳನ್ನು ಸುಧಾರಿಸಲು ಸಹಾಯವಾಗುವುದು. ಬ್ಯಾಕ್ಟೀರಿಯಾ ಕೊಲ್ಲಲು, ಆರೋಗ್ಯಕರ ಒಸಡುಗಳು ಮತ್ತು ಹಲ್ಲುಗಳನ್ನು ಹೊಂದಲು ಸಹಾಯವಾಗುತ್ತದೆ.
    Published by:Swathi Nayak
    First published: