• Home
  • »
  • News
  • »
  • lifestyle
  • »
  • Varicose Veins: ಉಬ್ಬಿರುವ ರಕ್ತನಾಳ ಸಮಸ್ಯೆಗೆ ತೊಡೆದು ಹಾಕಲು ಏನು ಮಾಡಬೇಕು?

Varicose Veins: ಉಬ್ಬಿರುವ ರಕ್ತನಾಳ ಸಮಸ್ಯೆಗೆ ತೊಡೆದು ಹಾಕಲು ಏನು ಮಾಡಬೇಕು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಉಬ್ಬಿರುವ ರಕ್ತನಾಳಗಳ ಸಮಸ್ಯೆ ಉಂಟಾಗಲು ಪ್ರಮುಖ ಕಾರಣ ಅಂದ್ರೆ ರಕ್ತನಾಳಗಳು ಸರಿಯಾಗಿ ಕೆಲಸ ಮಾಡದೇ ಇರುವುದು. ರಕ್ತನಾಳಗಳು ಸರಿಯಾಗಿ ಕೆಲಸ ಮಾಡದೇ ಇದ್ದರೆ ರಕ್ತನಾಳಗಳಲ್ಲಿನ ಏಕಮುಖ ಕವಾಟಗಳು ರಕ್ತದ ಹರಿವು ನಿಲ್ಲಿಸುತ್ತವೆ. ಆಗ ರಕ್ತನಾಳಗಳಲ್ಲಿ ರಕ್ತ ಸಂಗ್ರಹವಾಗಿ ಸಮಸ್ಯೆ ಉಂಟಾಗುತ್ತದೆ.

ಮುಂದೆ ಓದಿ ...
  • Share this:

    ರಕ್ತನಾಳಗಳು ದೊಡ್ಡದಾದಾಗ, ಅಗಲವಾದಾಗ ಅಥವಾ ರಕ್ತದಿಂದ ತುಂಬಿದಾಗ ಉಬ್ಬಿರುವ ರಕ್ತನಾಳ ಸಮಸ್ಯೆ (Varicose Veins Problem) ಅಂದ್ರೆ ವೆರಿಕೋಸ್ ವೇನಸ್ ಸಮಸ್ಯೆ ಉಂಟಾಗುತ್ತದೆ. ರಕ್ತನಾಳಗಳ ಉಬ್ಬುವಿಕೆಗೆ ಕಾರಣವಾಗುವ ಈ ಸಮಸ್ಯೆ ಉಂಟು ಮಾಡುತ್ತದೆ. ಉಬ್ಬಿರುವ ರಕ್ತನಾಳಗಳು ಸಾಮಾನ್ಯವಾಗಿ ಊದಿಕೊಂಡ ಮತ್ತು ಉಬ್ಬುವ ರಕ್ತನಾಳಗಳಾಗಿರುತ್ತವೆ. ಉಬ್ಬಿರುವ ರಕ್ತನಾಳಗಳು ನೀಲಿ, ಕೆಂಪು, ನೇರಳೆ ಬಣ್ಣದಲ್ಲಿ ಕಂಡು ಬರುತ್ತವೆ. ಉಬ್ಬಿರುವ ರಕ್ತನಾಳಗಳು ಆಗಾಗ್ಗೆ ನೋವುಂಟು (Painful) ಮಾಡುತ್ತವೆ. ವಿಶೇಷವಾಗಿ ಈ ಸಮಸ್ಯೆ ಮಹಿಳೆಯರಲ್ಲಿ (Women’s) ಹೆಚ್ಚು ಕಾಣಿಸಿಕೊಳ್ಳುತ್ತದೆ. ಸಾಕಷ್ಟು ಜನರು ಅದರಲ್ಲೂ ವಯಸ್ಕರರು ಉಬ್ಬಿರುವ ರಕ್ತನಾಳ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೆಚ್ಚಿನ ಸಮಯದಲ್ಲಿ ಉಬ್ಬಿರುವ ರಕ್ತನಾಳಗಳು ಕಾಲುಗಳಲ್ಲಿ ಹೆಚ್ಚು ಗೋಚರಿಸುತ್ತದೆ.


    ಉಬ್ಬಿರುವ ರಕ್ತನಾಳ ಸಮಸ್ಯೆಗೆ ಮುಖ್ಯ ಕಾರಣಗಳು ಹೀಗಿವೆ


    ಉಬ್ಬಿರುವ ರಕ್ತನಾಳಗಳ ಸಮಸ್ಯೆ ಉಂಟಾಗಲು ಪ್ರಮುಖ ಕಾರಣ ಅಂದ್ರೆ ರಕ್ತನಾಳಗಳು ಸರಿಯಾಗಿ ಕೆಲಸ ಮಾಡದೇ ಇರುವುದು. ರಕ್ತನಾಳಗಳು ಸರಿಯಾಗಿ ಕೆಲಸ ಮಾಡದೇ ಇದ್ದರೆ ರಕ್ತನಾಳಗಳಲ್ಲಿನ ಏಕಮುಖ ಕವಾಟಗಳು ರಕ್ತದ ಹರಿವು ನಿಲ್ಲಿಸುತ್ತವೆ.


    ಈ ಕವಾಟ ಕೆಲಸ ಮಾಡದೇ ಇದ್ದಾಗ ರಕ್ತವು ಹೃದಯ ತಲುಪುವ ಬದಲು, ರಕ್ತನಾಳಗಳಲ್ಲಿ ಸಂಗ್ರಹವಾಗುತ್ತದೆ. ಆಗ ರಕ್ತನಾಳಗಳ ಗಾತ್ರ ಹೆಚ್ಚುತ್ತದೆ. ಹಾಗಾಗಿ ಇದು ಕಾಲುಗಳ ಮೇಲೆ ಪರಿಣಾಮ ಬೀರುತ್ತದೆ.




    ಉಬ್ಬಿರುವ ರಕ್ತನಾಳ ಸಮಸ್ಯೆಗೆ ಕಾರಣಗಳು


    ಗರ್ಭಾವಸ್ಥೆ, ಋತುಬಂಧ ಸಮಯದಲ್ಲಿ, ಐವತ್ತಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ, ದೀರ್ಘಕಾಲ ನಿಂತು ಕೆಲಸ ಮಾಡುವವರಲ್ಲಿ, ಬೊಜ್ಜು, ಅಧಿಕ ತೂಕ ಹೊಂದಿರುವವರಲ್ಲಿ,


    ಉಬ್ಬಿರುವ ರಕ್ತನಾಳ ಸಮಸ್ಯೆ ಲಕ್ಷಣಗಳು ಯಾವವು?


    ಕಾಲುಗಳಲ್ಲಿ ನೋವು, ಕಾಲುಗಳು ಭಾರವಾದಂತೆ ಭಾಸವಾಗುವುದು, ಪಾದಗಳು ಊದಿಕೊಳ್ಳುವುದು, ಕಣಕಾಲುಗಳು ಊದಿಕೊಳ್ಳುವುದು, ಪಾದಗಳು ಬಿಸಿಯಾಗುವುದು, ಕಾಲುಗಳಲ್ಲಿ ಸ್ನಾಯು ಸೆಳೆತ, ರಾತ್ರಿ ಸ್ನಾಯು ಸೆಳೆತ ಸಮಸ್ಯೆ, ಪೀಡಿತ ಪ್ರದೇಶ ಭಾಗ ಒಣಗುವುದು,


    ತುರಿಕೆ ಉಂಟಾಗುವುದು, ಚರ್ಮ ತೆಳುವಾಗುವಿಕೆ ಸಮಸ್ಯೆ ಕಂಡು ಬರುತ್ತದೆ. ಕೆಲವು ಸಂದರ್ಭಗಳಲ್ಲಿ ರಕ್ತನಾಳಗಳ ಊತ, ಬಣ್ಣ ಬದಲಾವಣೆ ಸಮಸ್ಯೆ ಉಂಟಾಗುತ್ತದೆ. ತೀವ್ರತರ ಪ್ರಕರಣಗಳಲ್ಲಿ ರಕ್ತವು ಹೊರ ಬರುತ್ತದೆ, ಹುಣ್ಣು ಉಂಟಾಗುತ್ತದೆ.


    ಉಬ್ಬಿರುವ ರಕ್ತನಾಳ ಸಮಸ್ಯೆಗೆ ಮನೆಮದ್ದು ಹೀಗಿದೆ


    ನಿಯಮಿತವಾಗಿ ವ್ಯಾಯಾಮ ಮಾಡುವುದು


    ನಿಯಮಿತ ವ್ಯಾಯಾಮ ಮಾಡವುದು ಕಾಲುಗಳಲ್ಲಿ ರಕ್ತದ ಹರಿವು ಸುಧಾರಿಸುತ್ತದೆ. ವ್ಯಾಯಾಮ ಮಾಡಿದ್ರೆ ರಕ್ತನಾಳಗಳಲ್ಲಿ ರಕ್ತ ಸಂಗ್ರಹ ಹೋಗುತ್ತದೆ. ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಈಜು, ವಾಕಿಂಗ್, ಸೈಕ್ಲಿಂಗ್ ಮತ್ತು ಯೋಗ ಮಾಡುವುದು ಪರಿಹಾರ ನೀಡುತ್ತದೆ.


    ಫ್ಲೇವನಾಯ್ಡ್ ಭರಿತ ಆಹಾರ ಸೇವನೆ


    ಫ್ಲೇವನಾಯ್ಡ್ ಭರಿತ ಆಹಾರ ಉಬ್ಬಿರುವ ರಕ್ತನಾಳ ಸಮಸ್ಯೆ ಕಡಿಮೆ ಮಾಡುತ್ತದೆ. ಫ್ಲೇವನಾಯ್ಡ ರಕ್ತದ ಹರಿವು ಸುಧಾರಿಸುತ್ತದೆ. ಅಪಧಮನಿಗಳಲ್ಲಿನ ರಕ್ತದೊತ್ತಡ ಕಡಿಮೆ ಮಾಡುತ್ತದೆ.


    ರಕ್ತನಾಳಗಳಿಗೆ ವಿಶ್ರಾಂತಿ ನೀಡುತ್ತದೆ. ಉಬ್ಬಿರುವ ರಕ್ತನಾಳ ಸಮಸ್ಯೆ ಕಡಿಮೆ ಮಾಡುತ್ತದೆ. ಈರುಳ್ಳಿ, ಪಾಲಕ ಮತ್ತು ಕೋಸುಗಡ್ಡೆ, ದ್ರಾಕ್ಷಿ, ಚೆರ್ರಿ, ಬ್ಲೂಬೆರ್ರಿ, ಸಿಟ್ರಸ್ ಹಣ್ಣುಗಳು ಮತ್ತು ಬೆಳ್ಳುಳ್ಳಿ ಸೇವನೆ ಮಾಡಿ.


    ಸಾಂದರ್ಭಿಕ ಚಿತ್ರ


    ಮಸಾಜ್ ಮಾಡುವುದು


    ಪೀಡಿತ ಪ್ರದೇಶಕ್ಕೆ ಮಸಾಜ್ ಮಾಡಿದ್ರೆ ಪರಿಹಾರ ಸಿಗುತ್ತದೆ. ಎಣ್ಣೆ ಮಾಯಿಶ್ಚರೈಸ ಬಳಸಿ ಮಸಾಜ್ ಮಾಡಿ. ಇದು ನರಗಳ ಮೇಲೆ ಹೆಚ್ಚಿನ ಒತ್ತಡ ತೆಗೆದು ಹಾಕುತ್ತದೆ.


    ಉತ್ಥಾನಪಾದಾಸನ ಯೋಗ ಭಂಗಿ


    ಉತ್ಥಾನಪಾದಾಸನ ಯೋಗದ ಭಂಗಿಯನ್ನು ನಿಯಮಿತವಾಗಿ ಮಾಡಿದ್ರೆ ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ಹಸಿರು ರಕ್ತನಾಳ ಸಮಸ್ಯೆ ತೊಡೆದು ಹಾಕಬಹುದು. ಉತ್ಥಾನಪಾದಾಸನ ಮಾಡಿದ್ರೆ ಆಮ್ಲೀಯತೆ, ಅಜೀರ್ಣ ಮತ್ತು ಮಲಬದ್ಧತೆ ಸಮಸ್ಯೆ, ಹೊಟ್ಟೆಯ ಅಸ್ವಸ್ಥತೆ ನಿವಾರಣೆಯಾಗುತ್ತದೆ.


    ಬೆನ್ನು, ಸೊಂಟ, ತೊಡೆಯ ಸ್ನಾಯುಗಳನ್ನು ಬಲಪಡಿಸುತ್ತದೆ. ಬೆನ್ನು ನೋವು ಕಡಿಮೆ ಮಾಡುತ್ತದೆ. ಕಿಬ್ಬೊಟ್ಟೆ ಸ್ನಾಯುವಿಗೆ ಉತ್ತಮ. ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ. ಕೆಳಗಿನ ಬೆನ್ನಿನಲ್ಲಿ ರಕ್ತ ಪರಿಚಲನೆಗೆ ಸಹಕಾರಿ. ಸಂತಾನೋತ್ಪತ್ತಿ ಅಂಗಗಳ ಕಾರ್ಯ ನಿರ್ವಹಣೆಗೆ ಸಹಕಾರಿ.


    ಇದನ್ನೂ ಓದಿ: ಡಯಟ್ ಮತ್ತು ವ್ಯಾಯಾಮ ಇಲ್ಲದೆ ದೇಹದ ತೂಕ ಇಳಿಸಲು ಇಲ್ಲಿವೆ ಸುಲಭ ವಿಧಾನಗಳು..!


    ಯಾರು ಉತ್ಥಾನಪಾದಾಸನ ಮಾಡಬಾರದು?


    ಹೊಟ್ಟೆ ಅಥವಾ ಕೆಳಗಿನ ಭಾಗದಲ್ಲಿ ಶಸ್ತ್ರಚಿಕಿತ್ಸೆ ಆದವರು, ಕಿಬ್ಬೊಟ್ಟೆ ಸ್ನಾಯುಗಳು ದುರ್ಬಲವಾಗಿದ್ದವರು, ಸೊಂಟದಲ್ಲಿ ಗಾಯದ ಸಮಸ್ಯೆ ಇದ್ದವರು ಈ ಆಸನ ಮಾಡಬಾರದು.

    Published by:renukadariyannavar
    First published: