Varicose veins: ವೆರಿಕೋಸ್ ರಕ್ತನಾಳಗಳಾಗಲು ಕಾರಣಗಳೇನು? ಬೇಸಿಗೆಯಲ್ಲಿ ಈ ರೀತಿ ಕಾಳಜಿ ವಹಿಸಿ

ಉಬ್ಬಿರುವ, ನೀಲಿಗಟ್ಟಿರುವ ಮತ್ತು ತಿರುಚಿದಂತಿರುವ ವೆರಿಕೋಸ್ ರಕ್ತನಾಳಗಳು (Varicose Veins) ಸಾಮಾನ್ಯವಾಗಿ ಕಾಲುಗಳಲ್ಲಿ (Legs) ರಕ್ತನಾಳಗಳ (Veins) ಮೇಲೆ ಪರಿಣಾಮ ಬೀರುತ್ತವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಉಬ್ಬಿರುವ, ನೀಲಿಗಟ್ಟಿರುವ ಮತ್ತು ತಿರುಚಿದಂತಿರುವ ವೆರಿಕೋಸ್ ರಕ್ತನಾಳಗಳು (Varicose Veins) ಸಾಮಾನ್ಯವಾಗಿ ಕಾಲುಗಳಲ್ಲಿ (Legs) ರಕ್ತನಾಳಗಳ (Veins) ಮೇಲೆ ಪರಿಣಾಮ ಬೀರುತ್ತವೆ. ಏಕೆಂದರೆ, ನಿಲ್ಲುವುದರಿಂದ ಹಾಗೂ ನಡೆಯುವುದರಿಂದ ದೇಹದ ಕೆಳಭಾಗದ ರಕ್ತನಾಳಗಳ ಮೇಲೆ ಒತ್ತಡವನ್ನು ಹೆಚ್ಚಿಸುತ್ತವೆ. ನೀವು ಅಂತಹ ರಕ್ತನಾಳಗಳನ್ನು ಹೊಂದಿದ್ದರೆ, ಬೇಸಿಗೆಯಲ್ಲಿ (Summer) ತುಂಬಾ ಎಚ್ಚರಿಕೆಯಿಂದ ಇರಬೇಕು, ಇಲ್ಲವಾದಲ್ಲಿ ಅದು ನಿಮ್ಮ ನೋವನ್ನು ಹೆಚ್ಚಿಸಬಹುದು ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ ಈ ರೀತಿ ವೆರಿಕೋಸ್ ರಕ್ತನಾಳಗಳು ಆಗಲು ಪ್ರಮುಖ ಕಾರಣಗಳು ಏನು? ಹಾಗೂ ಅದರ ಲಕ್ಷಣಗಳು ಯಾವ ರೀತಿ ಇರುತ್ತದೆ ಮತ್ತು ಬೇಸಿಗೆಯಲ್ಲಿ ಇದರ ಕುರಿತು ಯಾವ ರೀತಿ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು ಎಂದು ಇ್ಲಲಿದೆ ನೋಡಿ ಮಾಹಿತಿ.

ಕಾರಣಗಳು:

ಇದನ್ನು ವೆರಿಕೋಸಸ್ ಅಥವಾ ವೆರಿಕೋಸೈಟೀಸ್ ಎಂದು ಕೂಡ ಕರೆಯುತ್ತಾರೆ. ರಕ್ತನಾಳಗಳು ಹಿಗ್ಗಿದಾಗ ಮತ್ತು ಹೆಚ್ಚುವರಿ ರಕ್ತದಿಂದ ತುಂಬಿಕೊಂಡಾಗ ಇದು ಸಂಭವಿಸುತ್ತದೆ. ರಕ್ತದ ಹರಿವಿಗೆ ಅಡಚಣೆಯಾದಾಗ ಮತ್ತು ರಕ್ತವು ಸೂಕ್ತ ರೀತಿಯಲ್ಲಿ ಹರಿಯಲು ಸಾಧ್ಯವಾಗದಾಗ ಹೀಗಾಗುತ್ತದೆ. ಅದರ ಪರಿಣಾಮವಾಗಿ, ರಕ್ತನಾಳಗಳು ತುಂಬಾ ದೊಡ್ಡದಾಗುತ್ತವೆ, ಊದಿಕೊಳ್ಳುತ್ತವೆ ಮತ್ತು ತಿರುಚಿಕೊಳ್ಳುತ್ತವೆ. ಆದರೆ ಸಾಮಾನ್ಯವಾಗಿ ಇವು ಅಪಾಯಕಾರಿ ಅಲ್ಲ, ಆದರೂ ಅವುಗಳಿಂದ ನೋವು ಉಂಟಾಗುತ್ತದೆ ಮತ್ತು ಅವು ವಿಕಾರವಾಗಿ ಕಾಣುತ್ತವೆ.

ಲಕ್ಷಣಗಳು: 

ಲ್ಯಾಪರೋಸ್ಕೋಪಿ ಮತ್ತು ಲೇಸರ್ ಸರ್ಜನ್ ಡಾ. ರಾಜನ್ ಮೋದಿ ಅವರು ಸಂದರ್ಶನವೊಂದರಲ್ಲಿ, “ ರಕ್ತನಾಳಗಳು ಊದಿಕೊಂಡು ಮತ್ತು ಹಿಗ್ಗಿಕೊಂಡಾಗ, ವ್ಯಕ್ತಿ ವೆರಿಕೋಸ್‍ನಿಂದ ನರಳುತ್ತಾನೆ. ಆ ರಕ್ತನಾಳಗಳ ಸುತ್ತಮುತ್ತಲಿನ ಚರ್ಮದ ಬಣ್ಣದಲ್ಲಿ ಬದಲಾವಣೆ ಆಗುವುದು, ತುರಿಕೆ, ದೀರ್ಘಕಾಲ ಕುಳಿತಾಗ ನಿಂತಾಗ ನೋವುಂಟಾಗುವುದು, ಕಾಲುಗಳು ಭಾರವೆನಿಸುವುದು ಮತ್ತು ಕೆಳಕಾಲುಗಳ ಊತ ಇದರ ಲಕ್ಷಣಗಳು. ಬೇಸಿಗೆಯಲ್ಲಿ ವೆರಿಕೋಸ್ ರಕ್ತನಾಳಗಳ ಸಮಸ್ಯೆ ಉಲ್ಬಣಗೊಳ್ಳುತ್ತದೆ ಎಂದು ತಿಳಿದರೆ ನಿಮಗೆ ಅಚ್ಚರಿ ಆಗಬಹುದು” ಎಂದು ಹೇಳಿದ್ದಾರೆ.

ಇದನ್ನೂ ಓದಿ: Bottle Gourd: ಬೇಸಿಗೆಯಲ್ಲಿ ಸೋರೆಕಾಯಿ ಸೇವನೆ ಮಾಡುವುದರಿಂದ ಈ ಕಾಯಿಲೆಗಳನ್ನು ಗುಣಪಡಿಸಬಹುದಂತೆ!

ಬೇಸಿಗೆಯಲ್ಲಿ ವೆರಿಕೋಸ್ ರಕ್ತನಾಳಗಳ ಸಮಸ್ಯೆಯ ನಿರ್ವಹಣೆ:

ಬೇಸಿಗೆಯಲ್ಲಿ ಉಬ್ಬಿದ ರಕ್ತನಾಳದ ಸಮಸ್ಯೆ ಇರುವವರು , ಅದನ್ನು ಹೇಗೆ ನಿರ್ವಹಿಸಿಕೊಳ್ಳಬಹುದು ಎಂಬ ಕುರಿತು ಡಾ. ರಾಜನ್ ಮೋದಿ ಅವರು ಕೆಲವು ಸಲಹೆಗಳನ್ನು ನೀಡಿದ್ದಾರೆ. ಅವು ಹೀಗಿವೆ.

1. ಕಾಲುಗಳ ಎತ್ತರ : ಹಾಸಿಗೆಯಲ್ಲಿ ಮಲಗಿ, ಕೆಲವು ದಿಂಬುಗಳ ಮೇಲೆ ಕಾಲನ್ನು ಇರಿಸಿ, ವಿಶ್ರಾಂತಿ ಪಡೆಯಬಹುದು. ಅದರಿಂದ ಕಾಲುಗಳಿಗೆ ಸರಿಯಾಗಿ ರಕ್ತದ ಹರಿವು ಉಂಟಾಗುತ್ತದೆ.

2. ಸ್ಟ್ರೆಚ್ಚಿಂಗ್ ಮತ್ತು ವ್ಯಾಯಾಮ: ಕಾಲುಗಳನ್ನು ಸ್ವಲ್ಪವೂ ಅಲ್ಲಾಡಿಸದಿದ್ದರೆ, ನಿಮ್ಮ ನೋವು ಉಲ್ಬಣಗೊಳ್ಳಬಹುದು. ಹಾಗಾಗಿ, ವೈದ್ಯರನ್ನು ಸಂಪರ್ಕಿಸಿ, ಬಳಿಕ ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದು ಕಡ್ಡಾಯ.

3. ಕಾಲುಗಳಿಗೆ ಮಸಾಜ್: ಕಾಲ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದನ್ನು ಕಡಿಮೆ ಮಾಡಲು ಪ್ರಯತ್ನಿಸಿ. ರಕ್ತನಾಳಗಳಿಗೆ ರಕ್ತದ ಹರಿವನ್ನು ಹೆಚ್ಚಿಸಲು ಕಾಲುಗಳಿಗೆ ಮಸಾಜ್ ಮಾಡಬೇಕು. ಹಾಗಂತ ನೀವು ರಕ್ತ ನಾಳಗಳ ಮೇಲೆ ಒತ್ತಡ ಹೇರಬಾರದು.

4. ಕಂಪ್ರೆಶನ್ ಸ್ಟಾಕಿಂಗ್ಸ್ ಧರಿಸಿ : ವೈದ್ಯರನ್ನು ಸಂಪರ್ಕಿಸಿ, ಅವರು ಒಪ್ಪಿಗೆ ನೀಡಿದರೆ ಮಾತ್ರ ಕಂಪ್ರೆಶನ್ ಸ್ಟಾಕಿಂಗ್ಸ್ ಧರಿಸಿ.

ಇದನ್ನೂ ಓದಿ: Periods Postpone: ಬೇಗ ಋತುಚಕ್ರ ಆಗಬೇಕಾ? ಹಾಗಿದ್ರೆ ಈ 5 ಪಾನೀಯಗಳನ್ನು ಸೇವಿಸಿ

5. ಹೈಡ್ರೇಶನ್ ಬಹಳ ಮುಖ್ಯ: ಕಾಲಿನಲ್ಲಿ ರಕ್ತ ಪರಿಚಲನೆ ಚೆನ್ನಾಗಿ ಆಗಲು, ಸಾಕಷ್ಟು ನೀರು ಕುಡಿಯಿರಿ. ನಿರ್ಜಲೀಕರಣದಿಂದ ಕಾಲುಗಳ ಅಂಗಾಂಶದಲ್ಲಿ ಊತ ಮತ್ತು ಸ್ನಾಯು ಸೆಳೆತ ಉಂಟಾಗಬಹುದು. ಆಲ್ಕೋಹಾಲ್ ಸೇವೆನೆ ಬಿಟ್ಟುಬಿಡಿ.

6. ಸಾಕಷ್ಟು ವಿಶ್ರಾಂತಿ: ವೆರಿಕೋಸ್ ರಕ್ತನಾಳಗಳು, ಕಾಲುಗಳ ನೋವು ಮತ್ತು ಊತಕ್ಕೆ ಕಾರಣವಾಗುತ್ತದೆ. ಹಾಗಾಗಿ ಸಾಕಷ್ಟು ವಿಶ್ರಾಂತಿ ಪಡೆಯುವುದು ಅಗತ್ಯ. ಜೊತೆಗೆ ಚೆನ್ನಾಗಿ ನಿದ್ದೆ ಮಾಡಬೇಕು ಕೂಡ.

7. ಗಂಟೆಗಟ್ಟಲೆ ಕುಳಿತುಕೊಳ್ಳಬೇಡಿ : ನೀವು ಗಂಟೆಗಟ್ಟಲೆ ಕುಳಿತುಕೊಂಡಿದ್ದರೆ, ನಿಮ್ಮ ಕಾಲುಗಳಲ್ಲಿ ರಕ್ತ ಸಂಗ್ರಹವಾಗಿ, ನೋವಿಗೆ ಕಾರಣ ಆಗಬಹುದು.

8. ಬೇಸಿಗೆಯಲ್ಲಿ ಸಡಿಲ ಬಟ್ಟೆ ಧರಿಸಿ: ಬಿಗಿಯಾದ ಬಟ್ಟೆಗಳನ್ನು ಧರಿಸಿದರೆ, ನಿಮ್ಮ ರಕ್ತನಾಳಗಳ ಮೇಲೆ ಅನಗತ್ಯವಾದ ಹೆಚ್ಚುವರಿ ಒತ್ತಡ ಉಂಟಾಗುತ್ತದೆ. ಆದ್ದರಿಂದ ಸಡಿಲವಾದ ಮತ್ತು ಸರಾಗವಾಗಿ ಉಸಿರಾಡಲು ಸಾಧ್ಯವಾಗುವಂತಹ ಬಟ್ಟೆಗಳನ್ನು ಧರಿಸಿ.

9. ಸೂಕ್ತ ಪಾದರಕ್ಷೆಗಳನ್ನು ಆರಿಸಿ: ಎತ್ತರ ಹಿಮ್ಮಡಿಯ ಪಾದರಕ್ಷೆಗಳು ಕಾಫ್‍ಗಳ ಚಲನೆಗೆ ಅಡ್ಡಿಯಾಗುತ್ತವೆ ಮತ್ತು ಅದರಿಂದ ಕಾಲುಗಳಿಗೆ ರಕ್ತ ಪರಿಚಲನೆ ಕಡಿಮೆ ಆಗುತ್ತದೆ, ಊತ ಮತ್ತು ಧಮನಿಗಳ ಸಮಸ್ಯೆಯನ್ನು ಉಲ್ಪಣವಾಗುತ್ತದೆ. ಆದ್ದರಿಂದ ಸೂಕ್ತವಾದ ಪಾದರಕ್ಷೆಗಳನ್ನು ಧರಿಸಿ.
Published by:shrikrishna bhat
First published: