Varamahalakshmi Recipe: ವರಮಹಾಲಕ್ಷ್ಮೀ ಹಬ್ಬಕ್ಕೆ ಕಡಲೆಬೇಳೆ ಪಾಯಸ- ಹೀಗೊಮ್ಮೆ ಮಾಡಿನೋಡಿ

ವರಮಹಾಲಕ್ಷ್ಮೀ ಹಬ್ಬ ಹೆಣ್ಣುಮಕ್ಕಳಿಗೆ ವಿಶೇಷ. ಅದರಲ್ಲೂ ಲಕ್ಷ್ಮೀ ದೇವಿಗೆ ಕಡಲೆಬೇಳೆಯ ನೈವೇದ್ಯ ಹೆಚ್ಚು ಪ್ರಿಯ. ಈ ಹಬ್ಬಕ್ಕೆ ಡಿಫರೆಂಟ್ ಸ್ಟೈಲಲ್ಲಿ ಕಡಲೆಬೇಳೆ ಪಾಯಸ ಮಾಡೋದನ್ನು ನಾವು ಹೇಳಿಕೊಡ್ತೀವಿ

ಸಿಂಪಲ್ ಕಡಲೆಬೇಳೆ ಪಾಯಸ

ಸಿಂಪಲ್ ಕಡಲೆಬೇಳೆ ಪಾಯಸ

  • Share this:
ಎಲ್ಲೆಡೆ ವರಮಹಾಲಕ್ಷ್ಮೀ (Varamahalakshmi) ಹಬ್ಬದ ಸಂಭ್ರಮ ಮನೆಮಾಡಿದೆ. ಹಬ್ಬ ಅಂದ್ರೆ ಸಾಕು ವಿಧ ವಿಧವಾಗಿ ಅಡುಗೆ ಮಾಡೋದೇ ಒಂಥರಾ ಖುಷಿ. ಅದರಲ್ಲೂ ಮನೆಯಲ್ಲಿ ತುಂಬಾ ಜನ ಇದ್ದರಂತು ಇನ್ನೂ ಹೆಚ್ಚಿನ ಸಡಗರ (Celebration) ಮನೆ ಮಾಡಿರುತ್ತೆ. ಹಬ್ಬದಡುಗೆ (Festival Food) ಮಾಡಿ ದೇವರಿಗೆ ನೈವೇದ್ಯ ಇಟ್ಟು ಕೊನೆಗೆ ಎಲ್ಲರೂ ಜೊತೆಗೂಡಿ ಊಟ ಮಾಡುವುದರೊಂದಿಗೆ ಹಬ್ಬ (Festival) ಸಂಪನ್ನವಾಗುತ್ತೆ. ಆದರೆ ಮನೆಯಲ್ಲಿ ಸಾಮಾನ್ಯವಾಗಿ ಮಾಡಿದ ರೆಸಿಪಿಯನ್ನೇ (Recipe) ಯಾಕೆ ಮಾಡ್ತೀರಾ ಅನ್ನೋ ಮಾತು ಹೆಚ್ಚಾಗಿ ಕೇಳಿ ಬರುತ್ತೆ. ಹಾಗಾದರೆ ವರಮಹಾಲಕ್ಷ್ಮೀ ಹಬ್ಬಕ್ಕೆ ಈ ಬಾರಿ ಸಿಂಪಲ್ ಹಾಗೂ ಟೇಸ್ಟಿ ರೆಸಿಪಿನ ನಾವು ಹೇಳಿಕೊಡ್ತೀವಿ.

ವರಮಹಾಲಕ್ಷ್ಮೀ ಹಬ್ಬ ಹೆಣ್ಣುಮಕ್ಕಳಿಗೆ ವಿಶೇಷ. ಅದರಲ್ಲೂ ಲಕ್ಷ್ಮೀ ದೇವಿಗೆ ಕಡಲೆಬೇಳೆಯ ನೈವೇದ್ಯ ಹೆಚ್ಚು ಪ್ರಿಯ. ಈ ಹಬ್ಬಕ್ಕೆ ಡಿಫರೆಂಟ್ ಸ್ಟೈಲಲ್ಲಿ ಕಡಲೆಬೇಳೆ ಪಾಯಸ ಮಾಡೋದನ್ನು ನಾವು ನೋಡೋಣ

ಲಕ್ಷ್ಮೀಗೆ ಪ್ರಿಯ ಕಡಲೆಬೇಳೆ

ವರವ ಕೊಡೋ ವರಮಹಾಲಕ್ಷ್ಮೀ ದೇವಿಗೆ ಕಡಲೆಬೇಳೆ, ಕಡಲೆಕಾಳು ಪ್ರಿಯವಾದ ನೈವೇದ್ಯ. ಹಾಗಾಗಿ ವರಮಹಾಲಕ್ಷ್ಮೀ ಹಬ್ಬಕ್ಕೆ ಹೆಚ್ಚಾಗಿ ಮಹಿಳೆಯರು ಕಡಲೆಕಾಳಿನ ರೆಸಿಪಿಯನ್ನೇ ಮಾಡ್ತಾರೆ.

ಇದನ್ನೂ ಓದಿ: ಅರಿಶಿನ ನೀರಿನ 6 ಆರೋಗ್ಯಕರ ಪ್ರಯೋಜನಗಳಿವು

ಕಡಲೆಬೇಳೆ ಪಾಯಸದಲ್ಲಿ ತೆಂಗಿನಕಾಯಿ ಮತ್ತು ಬೆಲ್ಲದ ಮಿಶ್ರಣ ಇರೋದ್ರಿಂದ ಆರೋಗ್ಯಕ್ಕೂ ಒಳ್ಳೆಯದು. ತೆಂಗಿನಕಾಯಿ ಮತ್ತು ಬೆಲ್ಲದ ಖಾದ್ಯಗಳು ಹೆಚ್ಚು ಸ್ವಾದವಾಗಿಯೂ ಇರುತ್ತೆ. ಹಬ್ಬದಂದು ಈ ರೆಸಿಪಿಗೆ ಹೆಚ್ಚು ಡಿಮ್ಯಾಂಡ್. ಊಟದ ಬಳಿಕ ಸೇವಿಸಿದರೆ ನಿದ್ರೆಯೂ ಚೆನ್ನಾಗಿ ಆಗುತ್ತೆ.

Varamahalakshmi festival special recipe easy method payasa
ಕಡಲೆಬೇಳೆ ಪಾಯಸ


ಕಡಲೆಬೇಳೆ ಪಾಯಸಕ್ಕೆ ಬೇಕಾದ ಸಾಮಾಗ್ರಿಗಳು

250 ಗ್ರಾಂ ಕಡಲೆಬೇಳೆ

400 ಗ್ರಾಂ ಬೆಲ್ಲ

ಅರ್ಧ ತೆಂಗಿನಕಾಯಿ

1 ಹಿಡಿಯಷ್ಟು ದೋಸೆ ಅಕ್ಕಿ

6 ಗ್ಲಾಸ್​ ನೀರು

2 ಚಮಚ ತುಪ್ಪ

15 ಗೋಡಂಬಿ

10 ಒಣದ್ರಾಕ್ಷಿ

2 ಏಲಕ್ಕಿ

ಕಡಲೆಬೇಳೆ ಪಾಯಸ ಮಾಡುವ ವಿಧಾನ

ಕಡಲೆಬೇಳೆಯನ್ನು ಅರ್ಧಗಂಟೆಗಳ ಕಾಲ ನೆನೆಸಿಡಬೇಕು. ನಂತರ 1 ಕುಕ್ಕರ್​ನಲ್ಲಿ 4 ಗ್ಲಾಸ್​ ನೀರು ತೆಗೆದುಕೊಂಡು 2 ವಿಷಲ್ ಕೂಗಿಸಿಕೊಳ್ಳಬೇಕು. ಬೇಯಿಸುವಾಗ ಅರ್ಧ ಚಮಚ ತುಪ್ಪ ಸೇರಿಸಿ. ಮತ್ತೊಮ್ಮೆ ಕಡಲೆಬೇಳೆ ಬೆಂದಿದ್ಯಾ ಅಂತಾ ನೋಡಿಕೊಳ್ಳಿ

ಇದನ್ನೂ ಓದಿ: ಬಗೆ ಬಗೆಯ ಹೋಳಿಗೆಯೊಂದಿಗೆ ಬೆಂಗಳೂರಿನಲ್ಲಿ ವರಮಹಾಲಕ್ಷ್ಮೀ ಪೂಜಾ ಸಂಭ್ರಮ! ಇಲ್ಲಿದೆ ನೋಡಿ ಚೆಂದದ ಫೋಟೋಗಳು

ಕಡಲೆಬೇಳೆ ಬೆಂದ ಬಳಿಕ ನಂತರ ದೊಡ್ಡ ಪಾತ್ರೆಗೆ ಕಡಲೆಬೇಳೆಯನ್ನು ಹಾಕಿ ಅದಕ್ಕೆ ಬೆಲ್ಲ ಹಾಕಬೇಕು. ಬೆಲ್ಲ ಕರಗೋವರೆಗೆ ಚೆನ್ನಾಗಿ ಕುದಿಸಿ. ಬೆಲ್ಲವನ್ನು ಮೊದಲೇ ನೀರು ಹಾಕಿ ಇಟ್ಟುಕೊಂಡರೆ ಇನ್ನೂ ಒಳ್ಳೆಯದು. ಬೆಲ್ಲ ಹಾಕಿದ ಮೇಲೆ ಕಡಲೆಬೇಳೆ ಬೇಯೋದಕ್ಕೆ ಹೆಚ್ಚು ಸಮಯ ಹಿಡಿಯುತ್ತೆ.

ಈಗ ಮುಕ್ಕಾಲುಗಂಟೆ ನೆನೆಸಿ ಇಟ್ಟುಕೊಂಡ ದೋಸೆ ಅಕ್ಕಿ ಮತ್ತು ತೆಂಗಿನಕಾಯಿಯನ್ನು ಮಿಕ್ಸಿಗೆ ಹಾಕಿ ರುಬ್ಬಬೇಕು. ಹದಕ್ಕೆ ಬೇಕಾದಷ್ಟು ನೀರು ಸೇರಿಸಿ ಚೆನ್ನಾಗಿ ನುಣ್ಣಗೆ ರುಬ್ಬಬೇಕು.

ನಂತರ ಮಿಕ್ಸಿಯಲ್ಲಿ ರುಬ್ಬಿದ ಹಾಲನ್ನು ಶುಭ್ರವಾದ ಒಂದು ಬಟ್ಟೆಯಲ್ಲಿ ಸೋಸಿಕೊಳ್ಳಬೇಕು. ಉಳಿದ ನೀರನ್ನು ಕೂಡ ಚೆನ್ನಾಗಿ ಬಳಸಿ ಸೋಸಿಕೊಳ್ಳಿ.

ನಂತರ ಕುದಿಯುತ್ತಿರೋ ಕಡಲೆಬೇಳೆ ಪಾಕಕ್ಕೆ ಸೋಸಿಕೊಂಡ ಹಾಲನ್ನು ಹಾಕಬೇಕು. ಎಲ್ಲವನ್ನೂ ಸೇರಿಸಿಕೊಂಡು ನಂತರ ಒಂದೆರಡು ಕುದಿ ಬರೋವರೆಗೆ ಕುದಿಸಬೇಕು. ಈ ವೇಳೆ ಕೊಂಚ ನೀರನ್ನು ಕೂಡ ಸೇರಿಸಿಕೊಳ್ಳಬಹುದು.

ಈಗ ಒಂದು ಬಾಣಲೆಗೆ ತುಪ್ಪ ಹಾಕಿ ಗೋಡಂಬಿಯನ್ನು ಕೆಂಪಾಗಿ ಹುರಿದುಕೊಳ್ಳಿ. ಅದನ್ನು ಪಾಯಸಕ್ಕೆ ಸೇರಿಸಿ. ನಂತರ ಒಣದ್ರಾಕ್ಷಿಯನ್ನು ಹುರಿದುಕೊಂಡು ಅದನ್ನೂ ಪಾಯಸಕ್ಕೆ ಸೇರಿಸಿ. ಈಗ ವರಮಹಾಲಕ್ಷ್ಮೀ ಹಬ್ಬಕ್ಕೆ ಘಮಘಮವಾದ ಕಡಲೆಬೇಳೆ ಪಾಯಸ ರೆಡಿ.

ಕಡಲೆಬೇಳೆ ಪಾಯಸದಲ್ಲಿ ಆರೋಗ್ಯವೃದ್ಧಿಯ ಅಂಶಗಳಿವೆ. ಕಡಲೆಬೇಳೆ ಪಾಯಸದಲ್ಲಿ ತೆಂಗಿನಕಾಯಿ, ಬೆಲ್ಲವೇ ಪ್ರಮುಖವಾಗಿರುವುದರಿಂದ ಉತ್ತಮ ಆರೋಗ್ಯಕ್ಕೆ ಒಳ್ಳೆಯದು. ತೆಂಗಿನಕಾಯಿ ನಿಮಗೆ ಕಾಂತಿ ನೀಡಿದರೆ, ಬೆಲ್ಲ ದೇಹದ ಆಯಾಸ ಕಡಿಮೆ ಮಾಡುತ್ತದೆ. ಪೂಜೆ ಎಲ್ಲಾ ಮುಗಿಸಿ ಸೇವಿಸಿದರೆ ಒಳ್ಳೆಯ ನಿದ್ರೆಯೂ ನಿಮಗಾಗುತ್ತದೆ.
Published by:Thara Kemmara
First published: