ಪ್ರೇಮಿಗಳ ದಿನವನ್ನು ಎಲ್ಲೆಲ್ಲಿ ಹೇಗೆ ಆಚರಿಸಲಾಗುತ್ತದೆ?

news18
Updated:February 14, 2018, 6:49 PM IST
ಪ್ರೇಮಿಗಳ ದಿನವನ್ನು ಎಲ್ಲೆಲ್ಲಿ ಹೇಗೆ ಆಚರಿಸಲಾಗುತ್ತದೆ?
news18
Updated: February 14, 2018, 6:49 PM IST
ನ್ಯೂಸ್ 18 ಕನ್ನಡ

ಪ್ರೇಮಿಗಳ ದಿನ ಪ್ರತಿಯೊಂದು ದೇಶದಲ್ಲೂ ಆಚರಣೆಯಲಿದೆ. ಪ್ರತಿಯೊಂದು ದೇಶದಲ್ಲಿ ಅವರದ್ದೇ ಆದ ರೀತಿಯಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ನಮ್ಮ ದೇಶದಲ್ಲಿ ಕೆಂಪು ವಸ್ತ್ರ ಧರಿಸಿ, ಪ್ರೀತಿ ಪಾತ್ರರಿಗೆ ಉಡುಗೊರೆ ನೀಡಲಾಗುತ್ತದೆ.

ಚೀನಾದಲ್ಲಿ ಫೆ. 14 ರಂದು ಕ್ವೀಶೀ ಫೆಸ್ಟಿವಲ್ ಎಂದು ಆಚರಿಸಲಾಗುತ್ತದೆ.  ಬಹುತೇಕ ಭಾಗಗಳಿಂದ ಬರುವ ಪ್ರೇಮಿಗಳು ಇಲ್ಲಿರುವ ಸೇತುವೆಯೊಂದರ ಮೇಲೆ ನಿಂತು ಫೋಟೋಗಳನ್ನು ಕ್ಲಿಕ್ಕಿಸಿ, ನೀರಿನಲ್ಲಿ ಕೈತರ ಲೈಟ್ ಅಳವಡಿಸಿರುವ ಹೀವುಗಳನ್ನು ತೇಲಿ ಬಿಡುತ್ತಾರೆ.

ಜಪಾನಿನಲ್ಲಿ ಹೆಣ್ಣು ಮಕ್ಕಳು ಮಾತ್ರವೇ ತಮ್ಮ ನೆಚ್ಚಿನ ಹುಡುಗರಿಗೆ ಚಾಕೋಲೇಟ್​ಗಳನ್ನು ನೀಡಿ ಹಬ್ಬವನ್ನು ಆಚರಿಸುತ್ತಾರೆ. ಇನ್ನು ಜರ್ಮನಿಯ ಪ್ರೇಮಿಗಳ ದಿನವನ್ನು ಫೆ. 14 ಸೇರಿದಂತೆ ಮಾರ್ಚ್ 14 ರಂದು ಕೂಡ ಆಚರಿಸಲಾಗುತ್ತದೆ. ಅಂದರಂತೆ ಚಾಕೋಲೇಟ್​ ಸವಿದ ಹುಡುಗರು ತಮ್ಮ ಹುಡುಗಿಯರಿಗೆ ಉಡುಗೊರೆಯನ್ನು ಕೊಟ್ಟು ಪ್ರೀತಿಯನ್ನು ವ್ಯಕ್ತಪಡಿಸಬೇಕು. ಇನ್ನು ಇದು ಕೇವಲ ಪ್ರೇಮಿಗಳಿಗೆ ಸೀಮಿತವಲ್ಲ. ತಮ್ಮ ಅಚುಮೆಚ್ಚಿನ ಸ್ನೇಹಿತರಿಗೂ ಪ್ರಶಂಸೆಯ ಸಂಕೇತವಾಗಿ ಚಾಕೋಲೇಟ್​ಗಳನ್ನು ಕೊಡುತ್ತಾರೆ.

ನ್ಯೂಯಾರ್ಕ್​ನಲ್ಲಿ ಪ್ರೇಮಿಗಳ ದಿನಕ್ಕಾಗಿ ಬಲೂನ್​ಗಳನ್ನ ಮಾರಾಟ ಮಾಡುತ್ತಿರುವುದು


ಲವರ್ಸ್​ ಪ್ಯಾರಡೈಸ್ ಎಂದು ಕರೆಸಿಕೊಳ್ಳುವ ಸ್ಥಳ ಪ್ಯಾರಿಸ್. ಪ್ರತಿಯೊಬ್ಬ ಪ್ರೇಮಿಯೂ ಜೀವನದಲ್ಲಿ ಒಮ್ಮೆ ಇಲ್ಲಿಗೆ ಹೋಗಲೇ ಬೇಕು ಅಂತ ಇಷ್ಟಪಡುವಂತಹ ಸೌಂದರ್ಯ ಅಲ್ಲಿದೆ. ಇಲ್ಲಿ ವ್ಯಾಲೆಂಟೈನ್ಸ್ ಡೇ ಸರ್ಕಾರಿ ರಜಾ ದಿನ ಕೂಡ. ಇಲ್ಲಿ ಇನ್ನೊಂದು ರೀತಿಯಾದಂತಹ ಅದ್ಭುತ ಆಚರಣೆಯನ್ನು ಮಾಡ್ತಾರೆ. ಅದೇ ನಿಮ್ಮ ಮತ್ತು ಪ್ರೀತಿಪಾತ್ರರಾದವರ ಹೆಸರನ್ನು ಬೀಗದ ಮೇಲೆ ಬರೆದು ಇಲ್ಲಿರುವ ಒಂದು ಲವ್ ಲಾಕ್ ಬ್ರಿಡ್ಜ್ ನ ಬದಿಯಲ್ಲಿರುವ ಫೇನ್ಸ್ ಗೆ ಲಾಕ್ ಹಾಕಿ ಅಲ್ಲಿಯೇ ಹರಿವ ನದಿಗೆ ಕೀಲಿ ಕೈಯನ್ನು ಎಸೆದುಬಿಡುತ್ತಾರೆ. ಆದರೆ ಕಾಲ ಕ್ರಮೇಣ ಇಲ್ಲಿರುವ ಬ್ರಿಡ್ಜ್ ರೈಲಿಂಗ್​ ಬೀಗದ ಭಾರಕ್ಕೆ ಕುಸಿದಿದ್ದರಿಂದ, ಆ  ಆಚರಣೆಗೆ ಈಗ ಕಡಿವಾಣ ಬಿದ್ದಿದೆ. ಇದರಿಂದ ಬಹಳಷ್ಟು ಪ್ರೇಮಿಗಳು ಇಲ್ಲಿಗೆ ಬಂದು ಬೀಗವನ್ನು ಹಾಗಬೇಕು ಎಂದುಕೊಂಡವರ ಕನಸು ಈಡೇರದಂತಾಗಿದೆ. ಇದರಿಂದ ಬಹಳಷ್ಟು ಜನರು ಬೇಸರವಾಗಿರೋದು ಹೌದು.


Loading...

ನಿಮಗಿಷ್ಟವಾಗುವವರಿಗೆ, ಅವರಿಗಿಷ್ಟವಾಗುವ ಉಡುಗೊರೆ ನೀಡಿ, ನೀವೂ ಪ್ರೇಮವನ್ನು ವ್ಯಕ್ತಪಡಿಸಿ. ನಿಮ್ಮ ಪ್ರೇಮಿಗಳ ದಿನದ ಆಚರಣೆ ಅದ್ದೂರಿಯಾಗದಿದ್ದರೂ ಅದ್ಭುತವಾಗಿ ಆಚರಿಸಿ ಅಂತ ಹೇಳುತ್ತಾ ಮತ್ತೊಮ್ಮೆ ಹ್ಯಾಪಿ ವ್ತಾಲೆಂಟೈನ್ಸ್​ ಡೇಯ ಶುಭಾಷಯಗಳು.
First published:February 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ