ಒಮ್ಮೆ ನೋಡು ನನ್ನ ನಿನಗಾಗಿ ಕಾದಿರುವೆ...ಇಂಗ್ಲಿಷ್ ಉಪನ್ಯಾಸಕಿಯ ಪ್ರೀತಿ ತುಂಬಿದ ಕನ್ನಡ ಕವನ

valentines day: ಫೆಬ್ರವರಿ 7 ರಿಂದ ಪ್ರೇಮಿಗಳು ತಮ್ಮ ಸಂಗಾತಿಗೆ ಹಲವು ರೀತಿ ಸರ್ಪ್ರೈಸ್ ಗಿಫ್ಟ್​ಗಳನ್ನು ನೀಡಿರುತ್ತಾರೆ. ಅದು ಹೂವಿರಬಹುದು, ಟೆಡ್ಡಿ ಬೇರ್ ಇರಬಹುದು ಅಥವಾ ಚಾಕೋಲೇಟ್​ಗಳಿರಬಹುದು. ಹೀಗೆ ಕಳೆದೊಂದು ವಾರದಿಂದ ಪ್ರೇಮಿಗಳು ಪ್ರೇಮಲೋಕದಲ್ಲಿ ತೇಲಾಡಿದ್ದಾರೆ. ಪ್ರೇಮಿಗಳ ದಿನದಂದು ಕೆಂಪು ಬಣ್ಣ ಉಡುಗೆ ತೊಡುವುದು ಸಾಮಾನ್ಯ.

zahir | news18-kannada
Updated:February 14, 2020, 4:20 PM IST
ಒಮ್ಮೆ ನೋಡು ನನ್ನ ನಿನಗಾಗಿ ಕಾದಿರುವೆ...ಇಂಗ್ಲಿಷ್ ಉಪನ್ಯಾಸಕಿಯ ಪ್ರೀತಿ ತುಂಬಿದ ಕನ್ನಡ ಕವನ
Love
  • Share this:
ಇಂದು ವಾಲೆಂಟೈನ್ಸ್​ ಡೇ. ಅಚ್ಚ ಕನ್ನಡದಲ್ಲಿ ಹೇಳುವುದಾದರೆ  ಪ್ರೇಮಿಗಳ ದಿನಾಚರಣೆ. ಈ ದಿನವನ್ನು ವಿಶ್ವದಾದ್ಯಂತ ಬಲು ಸಂಭ್ರಮದಿಂದ ಆಚರಿಸಲಾಗುತ್ತಿದೆ.  ಇದೊಂದು ಪಾಶ್ಚಾತ್ಯ ದೇಶದ ಆಚರಣೆಯಾಗಿದ್ದರೂ, ಇಂದು ಭಾರತದ ಮೂಲೆ ಮೂಲೆಯಲ್ಲೂ ಸಡಗರದಿಂದ ಆಚರಿಸಲಾಗುತ್ತಿದೆ. ಇದುವೇ ಪ್ರೀತಿಯ ಶಕ್ತಿ ಎಂದರೆ ತಪ್ಪಾಗಲಾರದು.

ಫೆಬ್ರವರಿ 7 ರಿಂದ ಪ್ರೇಮಿಗಳು ತಮ್ಮ ಸಂಗಾತಿಗೆ ಹಲವು ರೀತಿ ಸರ್ಪ್ರೈಸ್ ಗಿಫ್ಟ್​ಗಳನ್ನು ನೀಡಿರುತ್ತಾರೆ. ಅದು ಹೂವಿರಬಹುದು, ಟೆಡ್ಡಿ ಬೇರ್ ಇರಬಹುದು ಅಥವಾ ಚಾಕೋಲೇಟ್​ಗಳಿರಬಹುದು. ಹೀಗೆ ಕಳೆದೊಂದು ವಾರದಿಂದ ಪ್ರೇಮಿಗಳು ಪ್ರೇಮಲೋಕದಲ್ಲಿ ತೇಲಾಡಿದ್ದಾರೆ. ಪ್ರೇಮಿಗಳ ದಿನದಂದು ಕೆಂಪು ಬಣ್ಣ ಉಡುಗೆ ತೊಡುವುದು ಸಾಮಾನ್ಯ.

ಪ್ರೀತಿಯಲ್ಲಿ ಕೆಂಗುಲಾಬಿ ಮುಖ್ಯ ಪಾತ್ರವಹಿಸುವುದರಿಂದ ಇದೇ ಬಣ್ಣ ಪ್ರೇಮಿಗಳ ವರ್ಣವಾಗಿ ಮಾರ್ಪಟ್ಟಿದೆ. ಅಂದಿಗೂ ಇಂದಿಗೂ ಪ್ರೇಮಿಗಳ ದಿನಾಚರಣೆಯಲ್ಲಿ ಹಲವು ಬದಲಾವಣೆಗಳಾಗಿವೆ. ಆದರೂ ಬದಲಾಗದಿರುವುದು ಮಾತ್ರ ಪ್ರೀತಿಯ ಅಣಿಮುತ್ತುಗಳು. ಅರ್ಥಾತ್ ಪ್ರೀತಿಯಲ್ಲಿ ಅರಳಿದ ಪ್ರೇಮ ಕವನಗಳು. ಇಂತಹ ಎರಡು ಕವನಗಳನ್ನು ಇಲ್ಲಿ ನೀಡಲಾಗಿದೆ.  ಬಾಗಲಕೋಟೆ ಜಿಲ್ಲೆಯ  ಆರ್ ಎಂ ಜಿ ಪಿಯು ಕಾಲೇಜಿನ ಇಂಗ್ಲಿಷ್ ಉಪನ್ಯಾಸಕಿ ಅನೀತಾ ಆರ್ ಪಾಟೀಲ್ ಬರೆದಿರುವ ಈ ಕವನಗಳನ್ನು ಓದಿದರೆ ನಿಮ್ಮ ಹೃದಯದಲ್ಲೂ ಪ್ರೀತಿಯ ಓಯಸಿಸ್ ಚಿಮ್ಮಬಹುದು.
"ಮತ್ತೆ ಅರಳಿದ ಪ್ರೀತಿ"

ತೆರದಿರೋ ಕಣ್ಣನು ಮತ್ತೆ ತೋರಿಸಿದೆ..

ನಿನ್ನ ಮೋಹದ ನೋಟದಿಂದ..

ಮತ್ತೆ ಸೆಳೆದಿದೆ ನಿನ್ನ ಪ್ರೀತಿ...ನಿನ್ನ ಒಂದು ಸಲುಗೆಯಿಂದ..

ನಗುವ ನಯನ ಎಲ್ಲ ಹೇಳಿವೇ..

ನಿನ್ನ ಭಾವನೆಯನ್ನ..

ಮಾತಿನಲ್ಲೇ ಕಾವ್ಯ ಬರೆದಿರುವೆ..

ಕಣ್ಣು ನೋಟದಿಂದ....

ದೂರ ನಿಂತು ಒಮ್ಮೆ ನೋಡಿದೆ ನಿನ್ನ ಚೆಲುವನ್ನು..

ಮತ್ತೆ ನೀ ಕರೆಯಲು..

ಹೃದಯ ಅರಳಿದೆ..

ಆಲಿಂಗನದ ಕನಸ್ಸಿನಿಂದ..

-ಅನೀತಾ ಆರ್ ಪಾಟೀಲ್.
ಇಂಗ್ಲಿಷ್ ಉಪನ್ಯಾಸಕಿ ಆರ್ ಎಂ ಜಿ ಪಿಯು ಕಾಲೇಜು ಮುಧೋಳ, ಜಿಲ್ಲೆ-ಬಾಗಲಕೋಟೆ.

love

ಪ್ರೀತಿಯ ಒಲವೇ

ಎಲ್ಲ ಕನಸುಗಳಿಗೆ ಕಾರಣ ನೀನು..

ಕೌತುಕ ಭಾವನೆಗಳಿಗೆ ಹೊದಿಕೆ ನೀನು...

ಬಣ್ಣಿಸಲಾಗದ ಆಸೆಯ ಕಡಲಿಗೆ..

ಅಮೃತದ ಬಿಂದು ನೀನು..

ನಿನ್ನ ಒಂದು ಹನಿಯ ಸ್ಪರ್ಶಕ್ಕೆ ..

ಕಾದಿರುವೆ ಪ್ರೇಮಿ ನಾನು..

ಕ್ಷಣದ ಪ್ರೀತಿಗೆ ಯುಗದಿಂದ ಕಾದಿರುವೆ..

ನಿನ್ನ ಹೃದಯದ ಶ್ವಾಸಕ್ಕೆ ಉಸಿರಾಗಿ ನಾನಿರುವೆ..

ಅಚ್ಚೆಯ ಅಕ್ಷರದಲ್ಲಿ ನಿನ್ನ ಹೆಸರನ್ನು ನಾ ಬರೆಸುವೆ..

ಮಡಿಲ ಮೇಲೆ ಮಲಗಿಸಿ ನಿನ್ನ ಕಣ್ಣೊರೆಸುವೆ..

ನನ್ನ ತೋಳುಗಳಲ್ಲಿ ಮಗುವಿನಂತೆ ನಿನ್ನ ಲಾಲಿಸುವೆ..

ಒಮ್ಮೆ ನೋಡು ನನ್ನ ನಿನಗಾಗಿ ಕಾದಿರುವೆ..

ಮನಸ್ಸಲ್ಲಿ ಅವಿತು ಕುಳಿತ ಭಾವನೆಗೂ ಬಣ್ಣ ಬಂದಿದೆ..

ನನ್ನ ಹೃದಯ ಅಂಗಳಕ್ಕೆ ರಂಗು ತಂದಿದೆ..

ಹಳೆಯ ಕಾಲಕ್ಕೆ ಹೊಸ ಭಾಷ್ಯ ಬರೆದು..

ನೀ ಹೋದ ದಾರಿಗೆ ಬಂದು ನಿಂತಿರುವೆ..

ಬದುಕಿನ ಚೆಲುವೆಯೇ..

ಒಮ್ಮೆ ನೋಡು ನನ್ನ ನಿನಗಾಗಿ ಕಾದಿರುವೆ...

-ಅನೀತಾ ಆರ್ ಪಾಟೀಲ್. ಇಂಗ್ಲೀಷ್ ಉಪನ್ಯಾಸಕಿ ಆರ್ ಎಂ ಜಿ ಪಿಯು ಕಾಲೇಜು ಮುಧೋಳ ಜಿಲ್ಲೆ-ಬಾಗಲಕೋಟೆ

 

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಮುಂದಿನ ಕನ್ನಡ ಸಿನಿಮಾ ಯಾವುದು? ಬಿಟ್ಟು ಕೊಟ್ರು ಒಂದು ಸಣ್ಣ ಸುಳಿವು
First published: February 14, 2020, 4:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading