Valentines Day: ಒಂದು ಕಿಸ್​ನಿಂದ ನಿಮ್ಮ ಕಿಸ್ಮತ್ ಬದಲಾಗಬಹುದು

ಮೊದಲ ಬಾರಿಯ ಚುಂಬನದ ವೇಳೆ ಪ್ರೇಮಿಗಳು ಎಡವುದು ಸಾಮಾನ್ಯ. ಆದರೆ ಮನಸಲ್ಲೇ ಮುದುಡಿದ ಸಿಹಿಮುತ್ತೊಂದು ಹೊರ ಬಂದರೆ ಪ್ರೇಮಿಗಳಲ್ಲಿ ಮೂಡುವ  ಭಾವನೆ ವರ್ಣಿಸಲಸಾಧ್ಯ.

zahir | news18
Updated:February 13, 2019, 3:59 PM IST
Valentines Day: ಒಂದು ಕಿಸ್​ನಿಂದ ನಿಮ್ಮ ಕಿಸ್ಮತ್ ಬದಲಾಗಬಹುದು
ಸಾಂದರ್ಭಿಕ ಚಿತ್ರ
  • News18
  • Last Updated: February 13, 2019, 3:59 PM IST
  • Share this:
ವ್ಯಾಲೆಂಟೈನ್ಸ್​ ವೀಕ್​ನ ಕೊನೆಯ ಹಂತದಲ್ಲಿದ್ದೇವೆ. ನಾಳೆ ಪ್ರೇಮಿಗಳ ಹಬ್ಬ ವ್ಯಾಲೆಂಟೈನ್ಸ್​ ಡೇ. ಕಳೆದ ಒಂದು ವಾರದಿಂದ ಪ್ರೇಮಿಗಳು ರೋಸ್‌ ಡೇ, ಪ್ರಪೋಸ್‌ ಡೇ, ಚಾಕೊಲೇಟ್‌ ಡೇ, ಪ್ರಾಮೀಸ್‌ ಡೇ, ಹಗ್‌ ಡೇ ಅನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಈ ಎಲ್ಲಾ ಸಂಭ್ರಮಕ್ಕೂ ಕಿಚ್ಚು ಹಚ್ಚುವಂತಹ ದಿನವಿಂದು ಕಿಸ್‌ ಡೇ. ಇಂದು ವಿಶ್ವದೆಲ್ಲೆಡೆ ಪ್ರೇಮಿಗಳ ನಡುವೆ ಮುತ್ತಿನ ಸುರಿಮಳೆ ಆಗಿರುವುದರಲ್ಲಿ ಸಂಶಯವಿಲ್ಲ. ಆದರೆ ಒಂದು ಮುತ್ತಿನ ಗಮ್ಮತ್ತು ನಿಮಗೆ ತಿಳಿಯದಿದ್ದರೆ ಅದುವೇ ಸಾಕು ಪ್ರೀತಿಯಲ್ಲಿ ಬಿರುಕು ಮೂಡಿಸಲು.

ಮೊದಲ ಬಾರಿಯ ಚುಂಬನದ ವೇಳೆ ಪ್ರೇಮಿಗಳು ಎಡವುದು ಸಾಮಾನ್ಯ. ಆದರೆ ಮನಸಲ್ಲೇ ಮುದುಡಿದ ಸಿಹಿಮುತ್ತೊಂದು ಹೊರ ಬಂದರೆ ಪ್ರೇಮಿಗಳಲ್ಲಿ ಮೂಡುವ  ಭಾವನೆ ವರ್ಣಿಸಲಾಸಾಧ್ಯ. ನೀವು ಪ್ರೇಮಿಗಳ ವಾರದಂದೇ ಮುತ್ತಿಡಬೇಕೆಂಬ ನಿಯಮವೇನು ಇಲ್ಲ. ಆದರೆ ಸಂಬಂಧದಲ್ಲಿ ಮುತ್ತಿಗೂ ಒಂದು ಸ್ಥಾನವಿದೆ. ನೀವು ನೀಡುವ ಮಧುರ ಚುಂಬನ ಸಂಗಾತಿಯಲ್ಲಿ ಹೊಸ ಭಾವನೆ ಮೂಡಿಸಬಹುದು. ಪ್ರೇಮಲೋಕದಲ್ಲಿ ತೇಲಾಡುವಂತೆ ಮಾಡಬಹುದು. ಇದರಿಂದ ಪರಸ್ಪರ ನಂಬಿಕೆ ಹೆಚ್ಚಾಗುತ್ತದೆ. ಅಧರದ ಮಧುರ ನಿಮ್ಮ ಸಂಗಾತಿಯನ್ನು ಸದಾ ನಿಮ್ಮೊಂದಿಗೆ ಇರಿಸುವಂತೆ ಮಾಡಬಹುದು.

ಮನದೊಳಗಿನ ಮಾತೊಂದು ಹೊರ ಬರುವುದರಲಿತ್ತು,

ನಿನ್ನ ಬಿಸಿಯುಸಿರ ಅಧರವು ನನ್ನ ತುಟಿಯನ್ನು ಮುಚ್ಚಿತ್ತು,
ಭಾವನೆಗಳಿಗೆ ಬಾಗಿಲು ಹಾಕಿ, ಬಯಕೆಯ ಬೇಲಿಯೊಳಗೆ ಬಂಧಿಯಾಗಿದ್ದೆ..
ಬೇಲಿ ದಾಟಿ, ಪ್ರೇಮದ ಕಾಣಿಕೆಯನ್ನು ತಂದು ನನ್ನ ಬಾಳಿಗೆ ನೀ ಜೊತೆಯಾದೆ.
--------ಗೆಳೆಯ ನೀನೆಂದಿಗೂ ನನ್ನವನೆ ( ಶೇಖರ್ ಪೂಜಾರಿ)ಆದರೆ ನೆನಪಿಡಿ, ಪ್ರೇಮಿಗಳ ದಿನದಂದು ಮುತ್ತಿಡುವ ಮುನ್ನ ಸ್ವಲ್ಪ ಆಲೋಚಿಸಿ. ಏಕೆಂದರೆ ನೀವು ಸಂಗಾತಿಯ ಒಪ್ಪಿಗೆಯಿಲ್ಲದೆ ನೀಡುವ ಒಂದು ಚುಂಬನ ಅವರ ಮನಸ್ಸನ್ನು ಘಾಸಿಗೊಳಿಸಬಹುದು. ಹಾಗಾಗಿ ಅವರನ್ನು ಕಾಡಿ ಬೇಡಿ ಮುತ್ತಿಡುವುದು ಅಥವಾ ಆತುರದ ನಿರ್ಧಾರ ಮಾತ್ರ ತೆಗೆದುಕೊಳ್ಳಬೇಡಿ. ನಿಮ್ಮ ಬಾಳ ಸಂಗಾತಿಯ ಒಪ್ಪಿಗೆಯೊಂದಿಗೆ ಮುತ್ತಿನ ದಿನವನ್ನು ಆಚರಿಸಿಕೊಳ್ಳುವುದು ಸೂಕ್ತ. ಏಕೆಂದರೆ ಅಧರದಲ್ಲಿರುವ ಭಾವನೆ ಮಧುರವಾಗಿರ ಬೇಕಿದ್ದರೆ ಪರಸ್ಪರ ಗೌರವ ಕೂಡ ಮುಖ್ಯ.

ಇದನ್ನೂ ಓದಿ: Valentines Day, Kiss Day 2019: ಪ್ರೇಮಿಗಳಿಗೆ ಇಂದು ಅಧರದ ಮಧುರ ಚುಂಬನದ ಖುಷಿ

First published:February 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ