ಪ್ರೇಮಿಗಳು ಆಚರಿಸುವ ಎಂಟು ದಿನಗಳ ಹಬ್ಬ 'ವ್ಯಾಲೆಂಟೈನ್ಸ್​ ಡೇ'

news18
Updated:February 13, 2018, 12:54 PM IST
ಪ್ರೇಮಿಗಳು ಆಚರಿಸುವ ಎಂಟು ದಿನಗಳ ಹಬ್ಬ 'ವ್ಯಾಲೆಂಟೈನ್ಸ್​ ಡೇ'
news18
Updated: February 13, 2018, 12:54 PM IST
ನ್ಯೂಸ್​ 18 ಕನ್ನಡ

ಪ್ರೇಮಿಗಳ ದಿನಾಚರಣೆ ಯಾರಿಗೆತಾನೆ ನೆನಪಿರಲ್ಲ ಹೇಳಿ? ಫೆ. 14ರಂದು ವಿಶ್ವದಾದ್ಯಂತ ‘ವ್ಯಾಲೆಂಟೈನ್ಸ್‌ ಡೇ’ ಆಚರಿಲಾಗುತ್ತದೆ. ಆದರೆ ಪ್ರೇಮಿಗಳ ದಿನ ಕೇವಲ ಒಂದು ದಿನದ ಆಚರಣೆ ಅಲ್ಲ. ಪ್ರೇಮಿಗಳಿಗೆ ಅದು 8 ದಿನಗಳ ಹಬ್ಬ ಎಂದರೆ ತಪ್ಪಾಗಲಾರದು.

ಪ್ರೇಮಿಗಳ ದಿನಕ್ಕೂ ಮುನ್ನ ಆಚರಿಸುವ ಏಳು ದಿನಗಳಲ್ಲಿ ಒಂದೊಂದು ದಿನವನ್ನೂ ವಿಬಿನ್ನವಾಗಿ ಪ್ರೀತಿ ನಿವೇದನೆ ಮಾಡುವ ಮೂಲಕ ಪ್ರೀತಿ ಪಾತ್ರರಿಗೆ ಉಡುಗೊರೆ ನೀಡಲಾಗುತ್ತದೆ.

ಮೊದಲ ದಿನ ರೋಸ್‌ ಡೇ, ಎರಡನೇ ದಿನ ಪ್ರಪೋಸ್‌ ಡೇ, ಮೂರನೇ ದಿನ ಚಾಕೋಲೇಟ್‌ ಡೇ, ನಾಲ್ಕನೇ ಟೆಡ್ಡಿ ಡೇ, ಐದನೇ ದಿನ ಪ್ರಾಮಿಸ್‌ ಡೇ, ಆರನೇ ದಿನ ಹಗ್‌ ಡೇ, ಏಳನೇ ದಿನ ಕಿಸ್‌ ಡೇ ನಂತರ ವ್ಯಾಲೆಂಟೈನ್ಸ್‌ ಡೇ.

ಪ್ರೇಮಿಗಳ ದಿನದ ವಾರ ಗುಲಾಬಿ ದಿನದಿಂದ ಆರಂಭವಾಗುತ್ತದೆ. ಕೆಂಪು ಗುಲಾಬಿ ಪ್ರೀತಿಯ ಸಂಕೇತ ಎಂದೇ ಕರೆಯಲಾಗುತ್ತದೆ. ಯಾರಾದರೂ ಯಾರಿಗಾದರೂ ಕೆಂಪು ಗುಲಾಬಿಯನ್ನು ನೀಡಿದರೆ, ಅದು ಅವರ ಪ್ರೀತಿಯನ್ನು ತೋರಿಸುತ್ತದೆ. ಇದರಿಂದಾಗಿ ಪ್ರೇಮಿಗಳ ದಿನದಂದು ಗುಲಾಬಿ ಬಹಳ ಪ್ರಮುಖ ಪಾತ್ರವಹಿಸುತ್ತದೆ.

ಗುಲಾಬಿಯಲ್ಲಿ ವಿವಿಧ ಬಣ್ಣಗಳಿದ್ದು, ಒಂದೋಂದು ಬಣ್ಣ ಒಂದೊಂದು ಅರ್ಥ ಕೊಡುತ್ತದೆ. ಉದಾಹರಣೆಗೆ, ಹಳದಿ ಗುಲಾಬಿಗಳು ಸ್ನೇಹಿತರಿಗಾಗಿ. ಕೆಂಪು ಗುಲಾಬಿಯನ್ನು ಪ್ರಿಯರಿಗೆ ನೀಡಲಾಗುತ್ತದೆ. ಬಿಳಿ ಗುಲಾಬಿಗಳು ಮದುವೆ ಮತ್ತು ಹೊಸ ಆರಂಭದ ಸಂಕೇತ.

ಗುಲಾಬಿ ನೀಡಿದ ನಂತರ ಬರುವ ದಿನಗಳಲ್ಲೂ ಪ್ರೀತಿ ಪಾತ್ರರಿಗೆ ಪ್ರೇಮ ನಿವೇದನೆ ಸೇದರಿದಂತೆ ಟೆಡ್ಡಿ, ಚಾಕೋಲೇಟ್ ನೀಡುವಂತೆ ಕೊನೆಯ ದಿನ ಪ್ರೀತಿಯ ಸಂಕೇತವಾಗಿ ಮುತ್ತನ್ನು ನೀಡಲಾಗುತ್ತದೆ. ಇದನ್ನು ವಿದೇಶಗಳಲ್ಲಿ ಹೆಚ್ಚಾಗಿ ಆಚರಿಸಲಾಗುತ್ತದೆ. ಆದರೆ ನಮ್ಮ ದೇಶದಲ್ಲಿ ಪ್ರೀತಿಪಾತ್ರಿಗೆ ಗುಲಾಬಿ, ಗ್ರೀಟಿಂಗ್​ ಕಾರ್ಡ್​, ಟೆಡ್ಡಿ ಸೇರಿದಂತೆ ಇತರೆ ಉಡುಗೊರೆಗಳನ್ನು ನೀಡಿ ಆಚರಿಸಲಾಗುತ್ತದೆ.
Loading...

ಇದು ಕೇಲವ ಪ್ರೇಮಿಗಳಿಗೆ ಮಾತ್ರ ಇರುವ ದಿನವಲ್ಲ. ಇಲ್ಲಿ ವಯಸ್ಸು, ಲಿಂಗ ಬೇಧವಿಲ್ಲದೆ, ಯಾರು ಯಾರನ್ನ ಇಷ್ಟಪಟ್ಟರೂ ಸಹ ಅವರಿಗೆ ತಮ್ಮ ಪ್ರೀತಿಯನ್ನು ಹೇಳಿಕೊಳ್ಳಬಹುದು. ಅದನ್ನು ಯಾವ ರೀತಿ ವ್ಯಕ್ತಪಡಿಸುತ್ತೀರಾ ಅನ್ನೋದು ಮಾತ್ರ ಅವರವರಿಗೆ ಬಿಟ್ಟಿದ್ದು. ಒಟ್ಟಾರೆ ಪ್ರೇಮಿಗಳ ದಿನದಂದು ಪ್ರೀತಿಯನ್ನು ಹಂಚುವ ಮೂಲಕ ಎಲ್ಲರೂ ಖುಷಿಯಾಗಿರಬೇಕೆಂಬುದೇ ನಮ್ಮ ಆಸೆ. ​
First published:February 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ