Valentines Day Ideas for Her: ಪ್ರೇಮಿಗಳ ದಿನಕ್ಕೆ ಆನ್ಲೈನ್ ಶಾಪಿಂಗ್ ಆ್ಯಪ್​ಗಳಲ್ಲಿ ಭಾರೀ ಆಫರ್!

Valentines Day Ideas for Her: ಪ್ರೇಮಿಗಳ ದಿನ ಎಂದರೆ ಪ್ರೀತಿ ಪಾತ್ರರರಿಗೆ ಒಂದಷ್ಟು ಉಡುಗೊರೆ ನೀಡಲಾಗುತ್ತದೆ. ಆದರೆ, ಆರ್ಥಿಕ ಸಮಸ್ಯೆಯಿಂದಾಗಿ ಕೆಲವರಿಗೆ ಗಿಫ್ಟ್​ ಕೊಡಲು ಸಾಧ್ಯವಾಗದೇ ಇರಬಹುದು. ಆದರೆ, ಹಲವು ಆನ್​ಲೈನ್​ ಶಾಪಿಂಗ್​ ತಾಣಗಳು, ಆ್ಯಪ್​ಗಳು ಈ ದಿನಕ್ಕಾಗಿ ಸಾಕಷ್ಟು ಆಫರ್​ಗಳನ್ನು ನೀಡಿವೆ. ಅವುಗಳ ಬಗ್ಗೆ ಇಲ್ಲಿದೆ ಮಾಹಿತಿ.

news18
Updated:February 12, 2019, 12:15 PM IST
Valentines Day Ideas for Her: ಪ್ರೇಮಿಗಳ ದಿನಕ್ಕೆ ಆನ್ಲೈನ್ ಶಾಪಿಂಗ್ ಆ್ಯಪ್​ಗಳಲ್ಲಿ ಭಾರೀ ಆಫರ್!
Valentines Day Ideas for Her
  • News18
  • Last Updated: February 12, 2019, 12:15 PM IST
  • Share this:
ಫೆಬ್ರವರಿ 7-14 ಪ್ರೇಮಿಗಳ ಪಾಲಿಗೆ ಹಬ್ಬ. ಫೆ.7 ಗುಲಾಬಿ ಹೂವು ಕೊಡುವ ದಿನ. ಫೆ.8 ಪ್ರೇಮ ನಿವೇದನೆ, ಫೆ.9 ಚಾಕೋಲೇಟ್​ ನೀಡುವುದು, ಫೆ.10 ಗೊಂಬೆ ಕೊಡುವುದು, ಫೆ.11 ಪ್ರಾಮಿಸ್​ ಡೇ, ಫೆ.12 ಹಗ್​ ಡೇ, ಫೆ.13 ಕಿಸ್​ ಡೇ, ಫೆ. 14ರಂದು ಪ್ರೇಮಿಗಳ ದಿನ ಎಂದು ಆಚರಿಸುವುದು ವಾಡಿಕೆ.

'ಪ್ರೇಮಿಗಳ ದಿನ' ಎಂದರೆ ಪ್ರೀತಿ ಪಾತ್ರರರಿಗೆ ಒಂದಷ್ಟು ಉಡುಗೊರೆ ನೀಡಲಾಗುತ್ತದೆ. ಆದರೆ, ಆರ್ಥಿಕ ಸಮಸ್ಯೆಯಿಂದಾಗಿ ಕೆಲವರಿಗೆ ಗಿಫ್ಟ್​ ಕೊಡಲು ಸಾಧ್ಯವಾಗದೇ ಇರಬಹುದು. ಆದರೆ, ಹಲವು ಆನ್​ಲೈನ್​ ಶಾಪಿಂಗ್​ ತಾಣಗಳು, ಆ್ಯಪ್​ಗಳು ಈ ದಿನಕ್ಕಾಗಿ ಸಾಕಷ್ಟು ಆಫರ್​ಗಳನ್ನು ನೀಡಿವೆ. ಅವುಗಳ ಬಗ್ಗೆ ಇಲ್ಲಿದೆ ಮಾಹಿತಿ.

ಕ್ರೆಡ್​ನಿಂದ ಆಫರ್​:

ಇತ್ತೀಚೆಗೆ ಫ್ರೀಚಾರ್ಜ್​ ಕ್ರೆಡ್​ (CRED) ಎನ್ನುವ ಸ್ಟಾರ್ಟ್​ಅಪ್​ ಆರಂಭಿಸಿದೆ. ಕ್ರೆಡಿಟ್​ ಕಾರ್ಡ್​ ಮೂಲಕ ಇಲ್ಲಿ ಖರೀದಿ ಮಾಡಿದರೆ, ನಿಮಗೆ ಸಾಕಷ್ಟು ಕ್ಯಾಶ್​ಬ್ಯಾಕ್​ ಸಿಗಲಿದೆ. ನೀವು ಎಷ್ಟು ಮೊತ್ತದ ವಸ್ತು ಖರೀದಿ ಮಾಡುತ್ತೀರಿ ಎನ್ನುವುದರ ಆಧಾರದ ಮೇಲೆ ನಿಮಗೆ ರಿವಾರ್ಡ್​ ಹಾಗೂ ಕ್ಯಾಶ್​ಬ್ಯಾಕ್​ ಸಿಗಲಿದೆ.

ಉಚಿತವಾಗಿ ಕಾಫಿ, ಜ್ಯೂಸ್ ಕುಡಿಯಿರಿ:

ನೀವು ಕ್ರೆಡ್​ ಆ್ಯಪ್​ನಲ್ಲಿ 2 ಸಾವಿರ ಕ್ರೆಡ್​ ಕಾಯಿನ್​ ಗೆದ್ದರೆ, ಬ್ಲ್ಯೂ ಟೋಕಾಯಿ ಕಾಫಿ ಶಾಪ್​ನಲ್ಲಿ ಉಚಿತವಾಗಿ ಕಾಫಿ ಕುಡಿಯಬಹುದು. ಅಲ್ಲದೆ, 5 ಸಾವಿರ ಕ್ರೆಡ್​ ಕಾಯಿನ್​ ಗೆದ್ದರೆ ರಾ ಪ್ರೆಸ್ಸರಿ ಸಂಸ್ಥೆಯಲ್ಲಿ ಉಚಿತವಾಗಿ ಜ್ಯೂಸ್​ ಕುಡಿಯಬಹುದು.

ಇದನ್ನೂ ಓದಿ: ಪ್ರೇಮ ನಿವೇದನೆಗೆ ಒಂದಷ್ಟು ಟಿಪ್ಸ್​ ಕ್ಯಾಬ್​ನಲ್ಲಿ ಹಣ ಕೊಡದೇ ಸುತ್ತಾಡಿ:

10 ಸಾವಿರ ಕ್ರೆಡ್​ ಕಾಯಿನ್​ ಗೆದ್ದರೆ ಬೈಕ್​ ಹಾಗೂ ಕಾರುಗಳನ್ನು ಬಾಡಿಗೆಗೆ ನೀಡುವ ಡ್ರೈವರ್ಜಿ ಸಂಸ್ಥೆ ನಿಮಗೆ ಒಂದು ಆಫರ್​ ನೀಡುತ್ತದೆ. ಇದರನ್ವಯ  1500 ರೂ. ವರೆಗೆ ಉಚಿತವಾಗಿ ಕ್ಯಾಬ್​ ರೈಡ್​ ಮಾಡಬಹುದು.

ವಿಮಾನ ಟಿಕೆಟ್​ ಮೇಲೆ 1,000 ರೂ. ಕ್ಯಾಶ್​ ಬ್ಯಾಕ್!:

ಕ್ರೆಡ್​ ಆ್ಯಪ್​ನಲ್ಲಿ 5 ಸಾವಿರ ಕ್ರೆಡ್​ ಕಾಯಿನ್​ ಗೆದ್ದರೆ ನಿಮಗೆ ವಿಮಾನ ಟಿಕೆಟ್​ಗಳ ಮೇಲೆ 1,000ರೂ. ಕ್ಯಾಶ್​ಬ್ಯಾಕ್​ ಸಿಗಲಿದೆ. ಕ್ರೆಡ್​ ಆ್ಯಪ್​ನಲ್ಲಿ 20 ಸಾವಿರ ಕಾಯಿನ್​ ಕಲೆಕ್ಟ್​​ ಆದರೆ, ಒಂದು ತಿಂಗಳ ಕಾಲ ಜೊಮ್ಯಾಟೋ ಗೋಲ್ಡ್​​ ಸದಸ್ಯತ್ವ ಉಚಿತವಾಗಿ ಸಿಗಲಿದೆ.

ಇದನ್ನೂ ಓದಿ: ಪ್ರೇಮಿಗಳ ವಾರ ಆರಂಭ, ಪ್ರೇಮ ನಿವೇದನೆಗೆ ನೀವು ತಯಾರಾಗಿದ್ದೀರಾ?

ಅಮೆಜಾನ್​ನಿಂದ ಆಫರ್​:

ಆನ್​ಲೈನ್​ ದಿಗ್ಗಜ ಅಮೆಜಾನ್​ ಸಂಸ್ಥೆಯಿಂದ ‘ಗಿಫ್ಟ್​​ ಆಫ್​ ಲವ್​’ ಅಡಿಯಲ್ಲಿ ಬರುವ ಹಲವು ವಸ್ತುಗಳಿಗೆ ಆಫರ್​ ಸಿಗಲಿದೆ. ಏರ್​​ಟೆಲ್​ ಪೇಮೆಂಟ್​ ಬ್ಯಾಂಕ್​ ಮೂಲಕ 2,000 ರೂ. ಮೌಲ್ಯದ ಗಿಫ್ಟ್​ ಕಾರ್ಡ್​ ಖರೀದಿ ಮಾಡಿದರೆ, 200 ರೂ. ಕ್ಯಾಶ್​ಬ್ಯಾಕ್​ ಸಿಗಲಿದೆ. ಅಮೇಜಾನ್​ ಆ್ಯಪ್​ನಲ್ಲಿ ಐಸಿಐಸಿಐ ಕ್ರೆಡಿಟ್​ ಕಾರ್ಡ್​ ಬಳಕೆ ಮಾಡಿದರೆ ಶೇ. 5 ರಿಯಾಯಿತಿ ಸಿಗಲಿದೆ.

ಫ್ಲಿಪ್​ಕಾರ್ಟ್​​ನಲ್ಲೇನಿದೆ:

ಫ್ಲಿಪ್​ಕಾರ್ಟ್​​ನಲ್ಲಿ ಚಾಕೋಲೇಟ್​ ಹಾಗೂ ಮನೆಯನ್ನು ಅಲಂಕಾರ ಮಾಡುವ ವಸ್ತು ಖರೀದಿಸಿದರೆ ಡಿಸ್ಕೌಂಟ್​ ಸಿಗಲಿದೆ.

First published:February 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ