Happy Promise Day, Valentine’s Week: ನೀವು ನೀಡುವ ಒಂದು ಭರವಸೆ, ನಿಮ್ಮ ಪ್ರೀತಿಯನ್ನು ಗೆಲ್ಲಿಸಲಿದೆ..!

Happy Promise Day, Valentine’s Week: ಪ್ರೇಮಿಗಳ ನಡುವೆ ಉಂಟಾಗುವ ಸಣ್ಣ ಪುಟ್ಟ ಜಗಳನ್ನು ಮರೆತು ಪರಸ್ಫರ ಹೊಂದಾಣಿಕೆಯ ಭರವಸೆಯನ್ನು ನೀಡಬಹುದು. ಈ ಹಿಂದಿನ ತಪ್ಪುಗಳನ್ನು ಒಪ್ಪಿಕೊಂಡು ಮುಂದೆ ಅಂತಹ ತಪ್ಪುಗಳು ನಡೆಯುವುದಿಲ್ಲ ಎಂದು ಮಾತು ನೀಡಿ.

zahir | news18
Updated:February 12, 2019, 12:05 PM IST
Happy Promise Day, Valentine’s Week: ನೀವು ನೀಡುವ ಒಂದು ಭರವಸೆ, ನಿಮ್ಮ ಪ್ರೀತಿಯನ್ನು ಗೆಲ್ಲಿಸಲಿದೆ..!
ಸಾಂದರ್ಭಿಕ ಚಿತ್ರ
zahir | news18
Updated: February 12, 2019, 12:05 PM IST
ಇಬ್ಬರ ಮಧ್ಯೆ ಅಳಿಸಲಾಗದ ಪ್ರೀತಿಯಿತ್ತು...ನನ್ನಲ್ಲಿ ನೆನಪಾಗಿ ಉಳಿಯಿತು...ಆದರೆ, ನೀ ಹಾಯಾಗಿರುವೆ ಎಲ್ಲ ಮರೆತು....! ಈ ಸಾಲುಗಳು ಮೂಕ ಮನಸಿನ ಪಿಸುಮಾತನ್ನು ತಿಳಿಸುತ್ತದೆ. ಹೇಳಲಾಗದ ಪ್ರೀತಿಗೆ ಕಣ್ಣೀರೆಷ್ಟು, ಆ ಕಣ್ಣೀರ ಕಂಡವರೆಷ್ಟು? ಸಿಕ್ಕಿದ ಅವಕಾಶವನ್ನು ಕೈಚೆಲ್ಲಿ ಕುಳಿತ ಮನಸುಗಳೆಷ್ಟು.

ಹೌದು, ನಾವು ಈಗ ವ್ಯಾಲೆಂಟೈನ್ಸ್​ ವೀಕ್​ನ ಸಂಭ್ರಮದಲ್ಲಿದ್ದೇವೆ. ಮನದಾಳದ ಪ್ರೀತಿಯನ್ನು ತನ್ನ ಸಂಗಾತಿಯೊಂದಿಗೆ ಹೇಳುವ ಅವಕಾಶವನ್ನು ಪಡೆದಿದ್ದೇವೆ. ಈಗಾಗಲೇ ರೋಸ್​ ಡೇ, ಚಾಕೊಲೇಟ್ ಡೇ, ಪ್ರೊಪೋಸ್ ಡೇ ಮತ್ತು ಮುದ್ದು ಮಾಡಲು ಸಿಕ್ಕಿದ ಟೆಡ್ಡಿ ಡೇ ಅನ್ನು ಕಳೆದಿದ್ದೇವೆ. ಆದರೂ ಮನದ ಇಂಗಿತವನ್ನು ಹೇಳಲಾಗದೇ ಚಡಪಡಿಕೆಯಲ್ಲೇ ಮತ್ತೊಂದು ದಿನದ ಹೊಸ್ತಿಲಲ್ಲಿದ್ದೇವೆ.

ಇಂದು ಫೆಬ್ರವರಿ 11 ಅಂದರೆ ಪ್ರೇಮಿಗಳ ಪ್ರಾಮಿಸ್ ಡೇ. ಈ ದಿನದಂದು ನಿಮ್ಮ ಸಂಗಾತಿಗೆ ಭರವಸೆ ನೀಡುವುದನ್ನು ಮರೆಯಬೇಡಿ. ಏಕೆಂದರೆ ಪ್ರೇಮಿಗಳು ಏಳೇಳು ಜನ್ಮದಲ್ಲೂ ಜೊತೆಯಾಗಿರುತ್ತಾರೆ ಎಂದು ಹೇಳಲಾಗುತ್ತದೆ. ಅದರಂತೆ ವಿಶೇಷವಾಗಿ ನಿಮ್ಮ ಇನಿಯ ಅಥವಾ ಇನಿಯಳಿಗೆ ಆಶ್ವಾಸನೆ ನೀಡಬಹುದು. ನಿಮ್ಮ ನಿಷ್ಕಲ್ಮಶ ಪ್ರೀತಿಯನ್ನು ತೋರ್ಪಡಿಸಿಕೊಳ್ಳಬಹುದು. ಆ ಮೂಲಕ ಭವಿಷ್ಯದಲ್ಲಿ ಜತೆಯಾಗುವುದರ ಬಗ್ಗೆ ಸ್ಪಷ್ಟತೆ ಹೊಂದಬಹುದು. ಇಂದು ನೀವಾಡುವ ಒಂದು ಮಾತು ಅವನ/ಅವಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಮಂಡ್ಯದಲ್ಲಿ ರೆಡ್​ ಮೀ ಮೊಬೈಲ್​ ಸ್ಫೋಟ: ಪ್ರಾಣಾಪಾಯದಿಂದ ಅಂಗಡಿ ಮಾಲೀಕ ಪಾರು

ಪ್ರೇಮಿಗಳ ನಡುವೆ ಉಂಟಾಗುವ ಸಣ್ಣ ಪುಟ್ಟ ಜಗಳನ್ನು ಮರೆತು ಪರಸ್ಫರ ಹೊಂದಾಣಿಕೆಯ ಭರವಸೆಯನ್ನು ನೀಡಬಹುದು. ಈ ಹಿಂದಿನ ತಪ್ಪುಗಳನ್ನು ಒಪ್ಪಿಕೊಂಡು ಮುಂದೆ ಅಂತಹ ತಪ್ಪುಗಳು ನಡೆಯುವುದಿಲ್ಲ ಎಂದು ಮಾತು ಕೊಡಿ. ನಿಮ್ಮ ನಿಷ್ಕಳಂಕವಾದ ಒಂದು ಭರವಸೆಯು ನಿಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ. ಏಕೆಂದರೆ ಪ್ರಾಮಿಸ್​ ಡೇ ನಿಮ್ಮ ಪ್ರೀತಿಯಲ್ಲಿ ಹೊಸ ಭರವಸೆ ಮೂಡಿಸುತ್ತದೆ. ಸದಾ ನಿನ್ನ ನೋವು ನಲಿವುಗಳಿಗೆ ಸಾಥ್​ ನೀಡುವುದಾಗಿ ನಿಮ್ಮ ಜೋಡಿಗೆ ಪ್ರಾಮಿಸ್ ಮಾಡಿ. ಎಂದೆಂದಿಗೂ, ಯಾವತ್ತಿಗೂ ನಾನು ನಿನ್ನ ಜೊತೆಯಾಗಿರುವೆ ಎಂದು ಹೇಳುವ ಒಂದು ಮಾತು ಇದೆಯಲ್ಲಾ, ಅದು ನಿಮ್ಮ ಪ್ರೀತಿಯ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

BSNL ನೇಮಕಾತಿ: 40 ಸಾವಿರ ವೇತನದ 198 ಹುದ್ದೆಗಳಿಗೆ ಅರ್ಜಿ ಆಹ್ವಾನ

First published:February 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ