Happy HUG day 2019, Valentine’s Week: ಅಪ್ಪುಗೆ ದಿನದ ವಿಶೇಷತೆಗಳೇನು ಗೊತ್ತಾ?

Happy Hug Day 2019, Valentine’s Week: ತೀವ್ರ ಒತ್ತಡದಲ್ಲಿರುವಾಗ, ತುಂಬಾ ನೋವಿನಲ್ಲಿರುವಾಗ ಒಂದು ಅಪ್ಪುಗೆ ಸಿಕ್ಕರೆ ನಿಮಗೆ ಸಾಕಷ್ಟು ರಿಲೀಫ್ ಫೀಲ್ ಆಗಲಿದೆ. ಅಷ್ಟೇ ಅಲ್ಲ, ಹಗ್ನಿಂದ ನಿಮ್ಮ ಎದುರಿದ್ದವರಿಗೆ ನಿಮ್ಮ ಮೇಲೆ ಅಪಾರವಾದ ನಂಬಿಕೆ ಬರಲಿದೆ.

Rajesh Duggumane | news18
Updated:February 13, 2019, 8:44 AM IST
Happy HUG day 2019, Valentine’s Week: ಅಪ್ಪುಗೆ ದಿನದ ವಿಶೇಷತೆಗಳೇನು ಗೊತ್ತಾ?
ಸಾಂದರ್ಭಿಕ ಚಿತ್ರ
Rajesh Duggumane | news18
Updated: February 13, 2019, 8:44 AM IST
ಪ್ರೇಮಿಗಳ ದಿನಕ್ಕೆ ಇನ್ನು ಕೇವಲ ಎರಡು ದಿನಗಳು ಮಾತ್ರ ಬಾಕಿ ಉಳಿದಿದೆ. ವ್ಯಾಲಂಟೈನ್ಸ್ ಡೇ ಆಚರಣೆಗೆ ಒಂದು ವಾರ ಇರುವಾಗ ವಿವಿಧ ದಿನಗಳನ್ನು ಆಚರಣೆ ಮಾಡಲಾಗುತ್ತದೆ. ಅದರಲ್ಲಿ ಫೆ.12ರಂದು ಆಚರಿಸುವ ಹಗ್ ಡೇ ಕೂಡ ಒಂದು. ಅಷ್ಟಕ್ಕೂ ಏನಿದರ ವಿಶೇಷತೆ? ಪ್ರೀತಿ ಪಾತ್ರರಿಗೆ ಅಪ್ಪುಗೆ ಕೊಡುವುದರಿಂದ ಆಗುವ ಲಾಭಗಳೇನು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಪ್ರೀತಿಯನ್ನು ಶಬ್ದಗಳಲ್ಲಿ ವ್ಯಕ್ತಪಡಿಸುವ ಬದಲು, ಅದನ್ನು ಸಾಬೀತು ಮಾಡಿದಾರೆ, ಪ್ರೀತಿ ಪಾತ್ರರಿಗೆ ಹೆಚ್ಚು ಇಷ್ಟವಾಗುತ್ತದೆ. ನೀವು ದೂರದಲ್ಲಿ ನಿಂತು ‘ಐ ಲವ್ ಯು’ ಎಂದು ಮಾತಿನಲ್ಲಿ ಹೇಳಿದರೆ ಅದು ಅಷ್ಟು ಪ್ರಭಾವಶಾಲಿ ಆಗದೆ ಇರಬಹುದು. ಇದರ ಬದಲು, ಒಂದು ಹಗ್ ಮಾಡಿ, ನಿನ್ನ ಜೊತೆ ನಾನಿದ್ದೇನೆ ಎಂದು ಪ್ರೀತಿಸಿದವರ ತಲೆ ಸವರಿದರೆ ಸಾಕು. ನಿಮ್ಮ ಪ್ರೀತಿ ಎಷ್ಟಿದೆ ಎಂಬುದು ಅವರಿಗೆ ಅರ್ಥವಾಗಿ ಬಿಡುತ್ತದೆ.

ತೀವ್ರ ಒತ್ತಡದಲ್ಲಿರುವಾಗ, ತುಂಬಾ ನೋವಿನಲ್ಲಿರುವಾಗ ಒಂದು ಅಪ್ಪುಗೆ ಸಿಕ್ಕರೆ ನಿಮಗೆ ಸಾಕಷ್ಟು ರಿಲೀಫ್ ಫೀಲ್ ಆಗಲಿದೆ. ಅಷ್ಟೇ ಅಲ್ಲ, ಹಗ್​ನಿಂದ ನಿಮ್ಮ ಎದುರಿದ್ದವರಿಗೆ ನಿಮ್ಮ ಮೇಲೆ ಅಪಾರವಾದ ನಂಬಿಕೆ ಬರಲಿದೆ.

ಇದನ್ನೂ ಓದಿ: Happy Valentine's Day 2019 , Promise Day: ನೀವು ನೀಡುವ ಒಂದು ಭರವಸೆ, ನಿಮ್ಮ ಪ್ರೀತಿಯನ್ನು ಗೆಲ್ಲಿಸಲಿದೆ..!

ನಿಮಗೆ ಯಾರಿಂದಲೂ ತುಂಬಾ ನೋವಾಗಿರುತ್ತದೆ. ಆಗ ಸಹಜವಾಗಿಯೇ ಅಳು ಬರುತ್ತದೆ. ಇದನ್ನು ನಿಯಂತ್ರಿಸಲು ಒಂದು ಪ್ರೀತಿಯ ಅಪ್ಪುಗೆ ಸಿಕ್ಕರೆ ಸಾಕು. ಹಾಗಾಗಿ, ಅಪ್ಪುಗೆ ದುಃಖ ಶಮನ ಮಾಡಲು ಒಳ್ಳೆಯ ಮದ್ದು. ಅಷ್ಟೇ ಅಲ್ಲ ನಿಮ್ಮ ಕೋಪ ತಗ್ಗಿಸಲು ಹಗ್​ ತುಂಬಾನೇ ಅವಶ್ಯಕ. ನಿಮ್ಮ ಏಕಾಂಗಿತನವನ್ನು ಇದು ಕಳೆಯಲಿದೆ.

First published:February 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ