ಸಕಾಲಿಕ ಲಸಿಕೆ: ಮಗುವಿನ ಉತ್ತಮ ಆರೋಗ್ಯಕ್ಕೆ ಅತ್ಯಗತ್ಯ

ಪೋಷಕರಾಗುವುದು ಒಂದು ಧೈರ್ಯಗೆಡಿಸುವ ಕೆಲಸ, ಮತ್ತು ಪೋಷಕರಾಗಿ ನಿಮ್ಮ ಮಗುವಿನ ಸುರಕ್ಷತೆ ಯಾವಾಗಲೂ ಆದ್ಯತೆಯಾಗಿರುತ್ತದೆ. ನೀವು ಹೊಂದಿರಬೇಕಾದ ಕಾಳಜಿಗಳ ಮಟ್ಟವನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಆ ಚಿಂತೆಗಳನ್ನು ತಣಿಸಲು ಸಕಾಲಿಕ ಲಸಿಕೆಗಳು ಬಹಳ ಮುಖ್ಯವಾಗಿದೆ. ಆದ್ದರಿಂದ ನಿಮ್ಮ ಶಿಶುವೈದ್ಯರೊಂದಿಗೆ ಸಂಪರ್ಕದಲ್ಲಿರಿ, ಮತ್ತು ನಿಮ್ಮನ್ನು ಮತ್ತು ನಿಮ್ಮ ಮಗುವನ್ನು ಸುರಕ್ಷಿತವಾಗಿರಿಸಿಕೊಳ್ಳಿ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
  ಈ ಹಳೆಯ ಗಾದೆ ಮಾತು ಎಷ್ಟೋ ವಿಷಯಗಳಿಗೆ ನಿಜವೆನಿಸುತ್ತದೆ. ವಿಶೇಷವಾಗಿ ಇದು ನಿಮ್ಮ ಮಗುವಿನ ಸುರಕ್ಷತೆ ಮತ್ತು ಉತ್ತಮ ಆರೋಗ್ಯದ ವಿಷಯವಾಗಿದ್ದಾಗ, ನೀವು ಪಾಲಿಸಲೇ ಬೇಕಾದ ಮಂತ್ರವಾಗಿದೆ. ಲಸಿಕೆಯ ವಿಷಯಕ್ಕೆ ಬಂದಾಗ, ಹೊಸ ಪೋಷಕರಲ್ಲಿ ಅಥವಾ ಪೋಷಕರಾಗುವ ನಿರೀಕ್ಷೆಯಲ್ಲಿರುವವರಲ್ಲಿ ಯಾವಾಗಲೂ ಸಾಕಷ್ಟು ಅನುಮಾನಗಳಿರುತ್ತವೆ; ಇದು ಬಹಳ ಸಾಮಾನ್ಯವಾದ ವಿಷಯವಾಗಿದೆ. ಯಾವುದೇ ಸಂದೇಹಗಳಿದ್ದಲ್ಲಿ, ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ಶಿಶುವೈದ್ಯರನ್ನು ಸಂಪರ್ಕಿಸಿ ಎಂದು ನಾವು ಸಲಹೆ ನೀಡುತ್ತೇವೆ. ಎರಡನೆಯ ಹಂತವೆಂದರೆ, ಲಸಿಕೆಗಳೆಂದರೆ ಏನು, ಅವು ಹೇಗೆ ಕಾರ್ಯನಿರ್ವಹಿಸುತ್ತವೆ ಮತ್ತು ಸಮಯೋಚಿತ ಲಸಿಕೆಗಳ ಪ್ರಾಮುಖ್ಯತೆ ಇವುಗಳ ಬಗ್ಗೆ ವಿಶ್ವಾಸಾರ್ಹ ಮೂಲಗಳಿಂದ ಮಾಹಿತಿ ಪಡೆದುಕೊಳ್ಳುವುದು.

  ಸಕಾಲಿಕ ಲಸಿಕೆ ಏಕೆ ಮುಖ್ಯ?

  ಸಕಾಲಿಕ ಲಸಿಕೆ (ಶಿಶುವೈದ್ಯರು ಶಿಫಾರಸು ಮಾಡಿದ ವೇಳಾಪಟ್ಟಿಯ ಪ್ರಕಾರ) ದೀರ್ಘಾವಧಿಯ ರಕ್ಷಣೆಗಾಗಿ ನಾವು ಪಾಲಿಸಲೇ ಬೇಕಾದ ಮಾರ್ಗವಾಗಿದೆ. ನಿಮ್ಮ ಮಗುವಿಗೆ ಮಾರಣಾಂತಿಕ ಕಾಯಿಲೆಗಳಾಗಿ ಬದಲಾಗಬಹುದಾದ ವಿವಿಧ ಕಾಯಿಲೆಗಳಿಗೆ ಪ್ರತಿರಕ್ಷೆಯನ್ನು ನಿರ್ಮಿಸುವ ಅವಶ್ಯಕತೆಯಿದೆ, ತಿಳಿಯಿರಿ, ಅವರ ದೈಹಿಕ ವ್ಯವಸ್ಥೆಗಳು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿರುವುದಿಲ್ಲ , ಅದು ಅಪಾಯಗಳಿಗೆ ದಾರಿಮಾಡಿಕೊಡುತ್ತದೆ. ಮತ್ತು ಅದು ಕೇವಲ ರೋಗಕ್ಕೆ ತುತ್ತಾದವರಿಗೆ ಸೀಮಿತವಾಗಿರದೆ, ಅದನ್ನು ಇತರರಿಗೂ ಹರಡುವ ಸಾಧ್ಯತೆಯಿದೆ. ಲಸಿಕೆ ನಿಮ್ಮ ಮಗುವಿಗೆ ಮಾತ್ರವಲ್ಲದೆ ಹರಡುವಿಕೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

  ಅವರಿಗೆ ದಡಾರ ಅಥವಾ ಪೆರ್ಟುಸಿಸ್ / ನಾಯಿ ಕೆಮ್ಮಿನಂತಹ ಕಾಯಿಲೆಗಳು ಬರುವ ಸಾಧ್ಯತೆಗಳು ಕಡಿಮೆ ಇದ್ದರೂ, ಯಾವುದೇ ಅಚಾತುರ್ಯ ನಡೆಯದಂತೆ ನೋಡಿಕೊಳ್ಳುವುದು ಯಾವಾಗಲೂ ಉತ್ತಮ. ಇದನ್ನು ನೀವು ಚಾಲನೆ ಮಾಡುವಾಗ ನೀವು ಧರಿಸಿರುವ ಸೀಟ್-ಬೆಲ್ಟ್ ಎಂದು ಯೋಚಿಸಿ. ಲಸಿಕೆಗಳು, ಮತ್ತು ಹೆಚ್ಚು ಮುಖ್ಯವಾಗಿ ಸಕಾಲಿಕ ಲಸಿಕೆಗಳು ಅದೇ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ.

  ಯಾವುದೇ ಸಂದೇಹಗಳಿದ್ದಲ್ಲಿ ನಿಮ್ಮ ವ್ಯಾಕ್ಸಿನೇಷನ್ ಕಾರ್ಡ್ ಅನ್ನು ಪರೀಕ್ಷಿಸಲು ಮತ್ತು ನಿಮ್ಮ ಮಕ್ಕಳ ವೈದ್ಯರನ್ನು ಸಂಪರ್ಕಿಸಲು ನಾವು ಸಲಹೆ ನೀಡುತ್ತೇವೆ.

  ನಿಮ್ಮ ಮಗುವಿನ ವ್ಯಾಕ್ಸಿನೇಷನ್ ವೇಳಾಪಟ್ಟಿಗೆ COVID-19 ತೊಡಕಾಗಿದೆಯೇಇಂತಹ ಕಠಿಣ ಸಮಯಗಳಲ್ಲಿ  ಪೋಷಕರಾಗಿ / ಪೋಷಕರಾಗುವ ನೀರೇಕ್ಷೆಯಲ್ಲಿರುವವರಾಗಿ ನಿಮ್ಮ ಮಗುವಿನ ಆರೋಗ್ಯದ ಬಗ್ಗೆ ಚಿಂತೆ ಮಾಡಲು ನೀವು ಬದ್ಧರಾಗಿರುತ್ತೀರಿ. ಪ್ರಸ್ತುತ ಸಮಯದಲ್ಲಿ ಯಾವುದೇ ಅಪಾಯಗಳು ನಡೆಯದಂತೆ ನಿಮ್ಮ ಮಗುವಿನ ಲಸಿಕೆ ವೇಳಾಪಟ್ಟಿಯನ್ನು ಹೇಗೆ ನಿರ್ವಹಿಸುವುದು ಎಂಬುದರ ಕುರಿತು ಅನೇಕ ಸಂದೇಹಗಳು ಇರುತ್ತವೆ.

  ನಿಶ್ಚಿಂತರಾಗಿರಿ. ಲಸಿಕೆ ಅಗತ್ಯ ಸೇವೆಯೆಂದು WHO ಘೋಷಿಸಿದೆ ಮತ್ತು ಅದನ್ನು ಆ ರೀತಿ ಪರಿಗಣಿಸಬೇಕಾಗಿದೆ. ನಿಮ್ಮ ಮತ್ತು ನಿಮ್ಮ ಮಗುವಿನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ನೀವು ಮನೆಯ ಅಗತ್ಯ ವಸ್ತುಗಳನ್ನು ಪಡೆಯಲು ಹೊರಟಾಗ ಅನುಸರಿಸುವ ನಿಯಮಗಳನ್ನು ಈ ಸಮಯದಲ್ಲೂ ಸಹ ಅನುಸರಿಸಬೇಕು. ಆಗಾಗ್ಗೆ ಆಲ್ಕೋಹಾಲ್ ಆಧಾರಿತ ಸ್ಯಾನಿಟೈಜರ್‌ಗಳ  ಬಳಕೆಯನ್ನು ಖಚಿತಪಡಿಸಿಕೊಳ್ಳಿ, ಜೊತೆ ಹೋಗುವ ಪ್ರತಿಯೊಬ್ಬರೂ ಮಾಸ್ಕ್‌ಗಳನ್ನು ಧರಿಸಿರುವುದನ್ನು ಖಚಿತಪಡಿಸಿಕೊಳ್ಳಿ, ಎಲ್ಲಾ ಸಮಯದಲ್ಲೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ, ಹೊರಗಿರುವಾಗ ಮೇಲ್ಮೈಗಳೊಂದಿಗೆ ಯಾವುದೇ ರೀತಿಯ ಸಂಪರ್ಕವನ್ನು ತಪ್ಪಿಸಿ ಮತ್ತು ಪಾವತಿಗಳನ್ನು ಆದಷ್ಟೂ ಡಿಜಿಟಲ್ ರೂಪದಲ್ಲಿ ಮಾಡಿ. ಈ ಎಲ್ಲಾ ಹಂತಗಳನ್ನು ಗಮನಿಸಿ ಮತ್ತು ಪಾಲಿಸಿ, ಇದರಿಂದ ನಿಮ್ಮ ಮಗುವನ್ನು ನೀವು ಸುರಕ್ಷಿತವಾಗಿ ಮತ್ತು ಆರೋಗ್ಯವಾಗಿರಿಸಿಕೊಳ್ಳಬಹುದು.

  ಪೋಷಕರಾಗುವುದು ಒಂದು ಧೈರ್ಯಗೆಡಿಸುವ ಕೆಲಸ, ಮತ್ತು ಪೋಷಕರಾಗಿ ನಿಮ್ಮ ಮಗುವಿನ ಸುರಕ್ಷತೆ ಯಾವಾಗಲೂ ಆದ್ಯತೆಯಾಗಿರುತ್ತದೆ. ನೀವು ಹೊಂದಿರಬೇಕಾದ ಕಾಳಜಿಗಳ ಮಟ್ಟವನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಆ ಚಿಂತೆಗಳನ್ನು ತಣಿಸಲು ಸಕಾಲಿಕ ಲಸಿಕೆಗಳು ಬಹಳ ಮುಖ್ಯವಾಗಿದೆ. ಆದ್ದರಿಂದ ನಿಮ್ಮ ಶಿಶುವೈದ್ಯರೊಂದಿಗೆ ಸಂಪರ್ಕದಲ್ಲಿರಿ, ಮತ್ತು ನಿಮ್ಮನ್ನು ಮತ್ತು ನಿಮ್ಮ ಮಗುವನ್ನು ಸುರಕ್ಷಿತವಾಗಿರಿಸಿಕೊಳ್ಳಿ.

  Disclaimer: Information appearing in this material is for general awareness only. Nothing contained in this material constitutes medical advice. Please consult your physician for medical queries, if any, or any question or concern you may have regarding your condition. Issued in public interest by GlaxoSmithKline Pharmaceuticals Limited. Dr. Annie Besant Road, Worli, Mumbai 400 030, India. NP-IN-GVX-OGM-200065, DOP July 2020.
  Published by:HR Ramesh
  First published: