ಲವ್​ ಸೆಕ್ಸ್​ ದೋಖಾ: ರೋಗಿಯೊಂದಿಗಿನ ಸರಸ ಸಲ್ಲಾಪಕ್ಕಾಗಿ ಹೆಂಡತಿಯನ್ನೇ ಕೊಂದು ಜೀವಂತವಾಗಿರಿಸಿದ ಹೃದಯ ತಜ್ಞ

ಚಿಕಿತ್ಸೆಗೆ ಬಂದ ಯುವತಿಯೊಂದಿಗೆ ಪ್ರೇಮಬಲೆಯಲ್ಲಿ ಸಿಲುಕಿದ ಆತ ಹೆಂಡತಿಗೆ ವಿಚ್ಛೇದನ ನೀಡಿದ. ಅಷ್ಟೇ ಸಾಲದು ಎಂದು ಆಕೆಯನ್ನು ಸಾಯಿಸಿ ಬದುಕಿರುವಂತೆ ಜನರನ್ನು ನಂಬಿಸಲು ಮುಂದಾದ

Seema.R | news18
Updated:December 24, 2018, 12:39 PM IST
ಲವ್​ ಸೆಕ್ಸ್​ ದೋಖಾ: ರೋಗಿಯೊಂದಿಗಿನ ಸರಸ ಸಲ್ಲಾಪಕ್ಕಾಗಿ ಹೆಂಡತಿಯನ್ನೇ ಕೊಂದು ಜೀವಂತವಾಗಿರಿಸಿದ ಹೃದಯ ತಜ್ಞ
ಸಾಂದರ್ಭಿಕ ಚಿತ್ರ
Seema.R | news18
Updated: December 24, 2018, 12:39 PM IST
ಆತ ಜನರ ಹೃದಯಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯ. ಅತ್ಯಂತ ಜನಪ್ರಿಯ ಹೃದಯತಜ್ಞ ಎಂದು ಹೆಸರಾದ ಡಾಕ್ಟರ್​. ಆದರೆ, ಹೆಂಡತಿ ವಿಷಯದಲ್ಲಿ ಮಾತ್ರ ಆತ ಹೃದಯವನ್ನು ಕಲ್ಲಾಗಿಸಿಕೊಂಡ. ಆಸ್ತಿ ಕೇಳಿದ ಹೆಂಡತಿಯನ್ನು ಕೊಲ್ಲಲು ಮುಂದಾಗಿದ್ದ ಆತ ಹೃದಯವನ್ನು ಕಲ್ಲಾಗಿಸಿಕೊಂಡಿದ್ದ. ಅಷ್ಟಕ್ಕೂ ಈತ ಕೊಲೆಗಾರ ಎಂಬುದನ್ನು ಪತ್ತೆ ಮಾಡಿದ್ದು ಫೇಸ್​ಬುಕ್​.

ಉತ್ತರ ಪ್ರದೇಶದ ಗೊರಾಕ್​ಪುರ್​ದ ಹೃದಯತಜ್ಞ ಧರ್ಮೇಂದ್ರ ಪ್ರದಾನ್ ಉಷಾ ಸಿಂಗ್​ ಎಂಬ ಮಹಿಳೆಯೊಂದಿಗೆ ಮದುವೆಯಾಗಿ ಜೀವನ ನಡೆಸುತ್ತಿದ್ದ. ಈ ವೇಳೆ 2006ರಲ್ಲಿ ಧರ್ಮೇಂದ್ರ ಪ್ರಸಾದ್​ ಬಳಿ ಚಿಕಿತ್ಸೆಗೆ ಬಂದ ರಾಜೇಶ್ವರಿ ಎಂಬ ಯುವತಿ ಜೊತೆ ದೈಹಿಕ ಸಂಬಂಧ ಹೊಂದಿದ.

ಮದುವೆ ಆಗಿಲ್ಲ ಎಂದು ರಾಜೇಶ್ವರಿಯನ್ನು ನಂಬಿಸಿದ ಧರ್ಮೇಂದ್ರ ಪ್ರದಾನ್​ ಈ ಸತ್ಯವನ್ನು ಬಹುದಿನಗಳ ಕಾಲ ಮುಚ್ಚಿಡಲು ಸಾಧ್ಯವಾಗಿಲ್ಲ. ಈ ವಿಷಯ ತಿಳಿದಾಕ್ಷಣ ರಾಜೇಶ್ವರಿ  ಹೆಂಡತಿಗೆ ವಿಚ್ಛೇದನ ನೀಡುವಂತೆ ಒತ್ತಾಯಿಸಿದಳು.

ಅದರಂತೆ ಮೊದಲ ಹೆಂಡತಿಗೆ ಧರ್ಮೇಂದ್ರ ಪ್ರದಾನ್​ ವಿಚ್ಛೇದನ ನೀಡಿದ. ಆದರೆ, ಮೊದಲ ಹೆಂಡತಿ ಉಷಾ ತನ್ನ ಹಕ್ಕಿನ ಭಾಗವಾಗಿ ಆಸ್ತಿಯಲ್ಲಿ ಪಾಲು ನೀಡುವಂತೆ ಪೀಡಿಸಿದಳು. ಈ ಮಧ್ಯೆ ಮತ್ತೊಬ್ಬನೊಂದಿಗೆ ಉಷಾ ಸಿಂಗ್​ ಮದುವೆ ಕೂಡ ನಡೆದು ಹೋಯಿತು.

ಇದನ್ನು ಓದಿ: ಕೇಂದ್ರ ಸರ್ಕಾರ ಚಾಪೆ ಕೆಳಗೆ ನುಸುಳಿದ್ರೆ, ಪೋರ್ನ್​ ಪ್ರಿಯರು ರಂಗೋಲಿ ಕೆಳಗೆ ತೂರಿ ವೀಡಿಯೊ ವೀಕ್ಷಿಸುತ್ತಿದ್ದಾರೆ..!

ಮೊದಲ ಹೆಂಡತಿ ಆಸ್ತಿ ಕೊಡುವಂತೆ ಕಾಟ ಹೆಚ್ಚಾದ ಹಿನ್ನಲೆ ಇದಕ್ಕೆಲ್ಲಾ ಒಂದು ಇತಿಶ್ರೀ ಹಾಡಬೇಕು ಎಂದು ನಿರ್ಧರಿಸಿದ ವೈದ್ಯ ಆಕೆಯನ್ನು ಮನೆಗೆ ಬರುವಂತೆ ಕರೆದ. ಮನೆಗೆ ಹೋದ ಹೆಂಡತಿಯನ್ನು ಯಾರಿಗೂ ತಿಳಿಯದಂತೆ ಬಾರದ ಲೋಕಕ್ಕೆ ಕಳುಹಿಸಿದ. ಈ ನಡುವೆ ಯಾರಿಗೂ ಅನುಮಾನ ಬಾರದಂತೆ ಆಕೆಯ ಫೇಸ್​ಬುಕ್​ ಅನ್ನು ಅಪ್ಡೆಟ್​​ ಕೂಡ ಮಾಡುತ್ತಿದ್ದ.

ಇತ್ತ ಉಷಾ ಸಿಂಗ್​ ಕೈಗೆ ಸಿಗದ ಹಿನ್ನಲೆ ಆಕೆಯ ಎರಡನೇ ಗಂಡ ಕೂಡ ಹುಡುಕಾಟ ನಡೆಸಿದ. ಫೇಸ್​ಬುಕ್​ನಲ್ಲಿ ಸದಾ ಆ್ಯಕ್ಟಿವ್​ ಆಗಿರುತ್ತಿದ್ದ ಆಕೆಗೆ ಅನೇಕ ಬಾರಿ ಫೇಸ್​ಬುಕ್​ ಕರೆ ಮಾಡಿದರು ಸ್ವೀಕರಿಸದ ಹಿನ್ನಲೆ ಅನುಮಾನಕೊಂಡು ಪೊಲೀಸ್​ ಠಾಣೆ ಮೆಟ್ಟಿಲೇರಿದಾಗ ಅಸಲಿ ವಿಷಯ ಬೆಳಕಿಗೆ ಬಂದಿದೆ.
Loading...

First published:December 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ