• Home
 • »
 • News
 • »
 • lifestyle
 • »
 • Obesity Problem: ಆಹಾರದಲ್ಲಿ ಬಳಸುವ ಈ 3 ಬಿಳಿ ಪದಾರ್ಥಗಳು ಸ್ಥೂಲಕಾಯ ಹಾಗೂ ಹೃದಯಕ್ಕೆ ಹಾನಿಕರ!

Obesity Problem: ಆಹಾರದಲ್ಲಿ ಬಳಸುವ ಈ 3 ಬಿಳಿ ಪದಾರ್ಥಗಳು ಸ್ಥೂಲಕಾಯ ಹಾಗೂ ಹೃದಯಕ್ಕೆ ಹಾನಿಕರ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸ್ಥೂಲಕಾಯ ಸಮಸ್ಯೆಯು ಅನುವಂಶಿಕವಾಗಿಯೂ ಬರುತ್ತದೆ. ಸಮಯಕ್ಕೆ ಸರಿಯಾಗಿ ಈ ಬೊಜ್ಜಿಗೆ ಚಿಕಿತ್ಸೆ ನೀಡದೇ ಹೋದರೆ ಅದು ಮಾರಣಾಂತಿಕ ಕಾಯಿಲೆಗಳಿಗೆ ಕಾರಣ ಆಗುವ ಸಾಧ್ಯತೆ ಹೆಚ್ಚು. ಸ್ಥೂಲಕಾಯ ನಿಯಂತ್ರಿಸಲು ಮತ್ತು ತೊಡೆದು ಹಾಕಲು ಅತ್ಯಂತ ಪರಿಣಾಮಕಾರಿ ಚಿಕಿತ್ಸೆ ಅಂದ್ರೆ ಸರಿಯಾದ ಆಹಾರ ಕ್ರಮವನ್ನು ಆಯ್ಕೆ ಮಾಡಿಕೊಳ್ಳುವುದು.

ಮುಂದೆ ಓದಿ ...
 • Share this:

  ಬೊಜ್ಜು (Obesity) ಇಂದಿನ ದಿನಗಳಲ್ಲಿ ಉಂಟಾಗುತ್ತಿರುವ ಅತ್ಯಂತ ಸಾಮಾನ್ಯ ಸಮಸ್ಯೆ (Problem) ಆಗಿದೆ. ಇತ್ತೀಚಿನ ದಿನಗಳಲ್ಲಿ ಜನರ (People) ಆಹಾರ (Food) ಪದ್ಧತಿ ಬದಲಾಗಿದೆ. ಬೀದಿ ಬದಿ ಮತ್ತು ಹೊರಗಿನ ಆಹಾರ ಸೇವನೆ ಹೆಚ್ಚಾಗಿದೆ. ದೀರ್ಘಕಾಲ ಟಿವಿ, ಕಂಪ್ಯೂಟರ್ ಎದುರು ಕುಳಿತೇ ಇರುವುದು, ತಡವಾಗಿ ಮಲಗುವುದು (Late Sleeping) ಮತ್ತು ತಡವಾಗಿ ಏಳುವ ದಿನಚರಿ, ದೈಹಿಕ ಚಟುವಟಿಕೆ ಇಲ್ಲದಿರುವುದು ಜನರಲ್ಲಿ ಒಬೆಸಿಟಿ ಹೆಚ್ಚಾಗಲು ಕಾರಣ ಆಗಿದೆ. ಹೆಚ್ಚಿನ ಜನರಲ್ಲಿ ಸ್ಥೂಲಕಾಯ ಸಮಸ್ಯೆ ಹೆಚ್ಚಾಗಲು ಜಡ ಜೀವನಶೈಲಿ ಮತ್ತು ಕಳಪೆ ಆಹಾರ ಪದ್ಧತಿ ಕಾರಣ ಆಗಿದೆ ಎಂದು ಹಲವು ತಜ್ಞರು ಹೇಳಿದ್ದಾರೆ.


  ಸ್ಥೂಲಕಾಯ ಸಮಸ್ಯೆ ತೊಡೆದು ಹಾಕುವುದು ಹೇಗೆ?  


  ಸ್ಥೂಲಕಾಯ ಸಮಸ್ಯೆಯು ಅನುವಂಶಿಕವಾಗಿಯೂ ಬರುತ್ತದೆ. ಸಮಯಕ್ಕೆ ಸರಿಯಾಗಿ ಈ ಬೊಜ್ಜಿಗೆ ಚಿಕಿತ್ಸೆ ನೀಡದೇ ಹೋದರೆ ಅದು ಮಾರಣಾಂತಿಕ ಕಾಯಿಲೆಗಳಿಗೆ ಕಾರಣ ಆಗುವ ಸಾಧ್ಯತೆ ಹೆಚ್ಚು.


  ಸ್ಥೂಲಕಾಯ ನಿಯಂತ್ರಿಸಲು ಮತ್ತು ತೊಡೆದು ಹಾಕಲು ಅತ್ಯಂತ ಪರಿಣಾಮಕಾರಿ ಚಿಕಿತ್ಸೆ ಅಂದ್ರೆ ಸರಿಯಾದ ಆಹಾರ ಕ್ರಮವನ್ನು ಆಯ್ಕೆ ಮಾಡಿಕೊಳ್ಳುವುದು.
  ಆಯುರ್ವೇದ ತಜ್ಞ ಡಾ. ಚೈತಾಲಿ ರಾಥೋಡ್ ಅವರು ಹೇಳುವ ಪ್ರಕಾರ, ಇತ್ತೀಚೆಗೆ ಬೊಜ್ಜು ಹೆಚ್ಚಿಸುವ ಮೂರು ವಿಷಯಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಇಲ್ಲಿ ಹೇಳಲಾಗಿರುವ ಮೂರು ಪದಾರ್ಥಗಳನ್ನು ಬಹುತೇಕ ಪ್ರತಿ ಮನೆಯಲ್ಲೂ ಬಳಕೆ ಮಾಡುತ್ತಾರೆ.


  ನೀವು ಅನಾರೋಗ್ಯಕರ ತೂಕ ನಿಯಂತ್ರಿಸಲು ಬಯಸಿದರೆ ಅಥವಾ ತೂಕ ಇಳಿಸಲು ಬಯಸಿದರೆ ಸಕ್ಕರೆ, ಮೈದಾ ಹಿಟ್ಟು, ಅಡಿಗೆ ಸೋಡಾ ಈ ಮೂರು ಪದಾರ್ಥಗಳಿಂದ ದೂರವಿರುವಂತೆ ಸಲಹೆ ನೀಡಿದ್ದಾರೆ.


  ಇದು ನಿಮ್ಮ ದೇಹದಲ್ಲಿ ಹೆಚ್ಚುವರಿ ಕೊಬ್ಬಬ್ಬು ಉಂಟಾಗಲು ಕಾರಣವಾಗುತ್ತದೆ. ಜೊತೆಗೆ ಗಂಭೀರ ಕಾಯಿಲೆಗಳ ಅಪಾಯ ಹೆಚ್ಚಿಸುತ್ತದೆ.


  ಬಿಳಿ ಸಕ್ಕರೆ


  ಅಡುಗೆಯ ರುಚಿ ಹೆಚ್ಚಿಸಲು ಮತ್ತು ಸಹಿ ಪದಾರ್ಥಗ ತಯಾರಿಕೆ ಹಾಗೂ ಚಹಾ, ಕಾಫಿಗಳಲ್ಲಿ ಹೆಚ್ಚಾಗಿ ಬಿಳಿ ಸಕ್ಕರೆ ಬಳಕೆ ಮಾಡಲಾಗುತ್ತದೆ. ಸಕ್ಕರೆ ಗಂಭೀರ ಪರಿಣಾಮಗಳಿಗೆ ಸಹ ಪ್ರಸಿದ್ಧತೆ ಪಡೆದಿದೆ. ಹಾಗಾಗಿ ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಸೇರಿಸಲು ಆರೋಗ್ಯ ತಜ್ಞರು ಶಿಫಾರಸು ಮಾಡುವುದಿಲ್ಲ.


  ಸಂಸ್ಕರಿಸಿದ ಸಕ್ಕರೆ ಸೇವನೆ ಅಂಗಗಳನ್ನು ದಪ್ಪವಾಗಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವ ಮೂಲಕ ಹೃದ್ರೋಗದ ಅಪಾಯ ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಹಾಗಾಗಿ ಆಹಾರದಲ್ಲಿ ಬಿಳಿ ಸಕ್ಕರೆ ಬಳಕೆ ಬಿಟ್ಟು ಬಿಡಿ. ಬದಲಿಯಾಗಿ ಮಾಧುರ್ಯ, ರುಚಿ ನೀಡುವ ಕಂದು ಸಕ್ಕರೆ ಅಥವಾ ಸಕ್ಕರೆ ಕ್ಯಾಂಡಿ ಬಳಸಿ.


  ಮೈದಾ ಹಿಟ್ಟು


  ಮೈದಾ ಹಿಟ್ಟು ಆರೋಗ್ಯಕ್ಕೆ ಹಾನಿಕರ. ತಂದೂರಿ ರೋಟಿ ಸೇರಿದಂತೆ, ಸಿಹಿ ಪದಾರ್ಥಗಳ ತಯಾರಿಕೆಯಲ್ಲೂ ಹೆಚ್ಚಾಗಿ ಮೈದಾ ಹಿಟ್ಟನ್ನು ಬಳಕೆ ಮಾಡುವುದು ರೂಢಿಯಲ್ಲಿದೆ. ಇದರ ಸೇವನೆ ತ್ವರಿತವಾಗಿ ಸ್ಥೂಲಕಾಯ ಸಮಸ್ಯೆ ಹೆಚ್ಚಿಸು ಕಾರಣವಾಗುತ್ತದೆ. ಹೆಚ್ಚಿನ ಜನರು ಮೈದಾ ಸೇವನೆಯಿಂದ ಸ್ಥೂಲಕಾಯ ಸಮಸ್ಯೆಗೆ ಗುರಿಯಾಗಿದ್ದಾರೆ.


  ನೀವು ತೂಕ ನಿಯಂತ್ರಿಸಲು ಮತ್ತು ತೂಕ ಇಳಿಸಲು ಬಯಸಿದರೆ ಮೈದಾ ಹಿಟ್ಟಿನ ಪದಾರ್ಥಗಳ ಸೇವನೆ ಬಿಟ್ಟು ಬಿಡಿ. ಬದಲಿಗೆ ಸಂಪೂರ್ಣ ಗೋಧಿ ಹಿಟ್ಟು, ಜೋಳದ ಹಿಟ್ಟು, ರಾಗಿ ಹಿಟ್ಟು ಬಳಸಿ. ಮೈದಾವನ್ನು ಅತಿಯಾಗಿ ಸೇವಿಸಿದರೆ ಅಜೀರ್ಣ, ಮಲಬದ್ಧತೆ, ಟೈಪ್ 2 ಡಯಾಬಿಟಿಸ್, ಹೃದಯ ಸಂಬಂಧಿ ಕಾಯಿಲೆ ಮತ್ತು ಬೊಜ್ಜು ಕಾಯಿಲೆಗಳು ಉಂಟಾಗುತ್ತವೆ.


  ಅಡುಗೆ ಸೋಡಾ


  ಅಡುಗೆ ಸೋಡಾವನ್ನು ಅಡುಗೆ ತಯಾರಿಕೆಯಲ್ಲಿ ಬಳಸುತ್ತಾರೆ. ಇದು ಆಹಾರವನ್ನು ನಯವಾಗಿಸುತ್ತದೆ. ಆಹಾರವನ್ನು ಸ್ಪಂಜಿಯನ್ನಾಗಿ ಮಾಡಲು ಬಳಸುತ್ತಾರೆ. ಹೆಚ್ಚಾಗಿ ಅಡಿಗೆ ಸೋಡಾವನ್ನು ಪಿಜ್ಜಾ, ಬ್ರೆಡ್, ಬೇಕರಿ ವಸ್ತುಗಳು, ಹುದುಗಿಸಿದ ಆಹಾರ ತಯಾರಿಕೆಯಲ್ಲಿ ಬಳಸುತ್ತಾರೆ. ಇವು ಆಹಾರದ ಜೀರ್ಣಕ್ರಿಯೆ ಕಷ್ಟವಾಗಿಸುತ್ತವೆ.


  ಇದನ್ನೂ ಓದಿ: ಹೊಟ್ಟೆಯ ಬೊಜ್ಜು ಕರಗಿಸಲು ಪರದಾಡುತ್ತಿದ್ರೆ ಇಲ್ಲಿದೆ ಟಿಪ್ಸ್


  ಹೊಟ್ಟೆ ಉಬ್ಬುವುದು, ಹೊಟ್ಟೆ ಭಾರವಾದ ಭಾವನೆ ಉಂಟು ಮಾಡುತ್ತದೆ. ನಿಯಮಿತ ಸೇವನೆ ರೋಗಗಳು ಮತ್ತು ಸ್ಥೂಲಕಾಯ ಮತ್ತು ಹೃದಯ ಸಂಬಂಧಿ ಕಾಯಿಲೆ ಹೆಚ್ಚಿಸುತ್ತದೆ. ಆರೋಗ್ಯದ ಕಾಳಜಿಗಾಗಿ ನಿಮ್ಮ ಅಡುಗೆ ಮನೆಯಿಂದ ಈ 3 ಬಿಳಿ ವಸ್ತುಗಳನ್ನು ತೆಗೆದು ಹಾಕಿ ಆರೋಗ್ಯ ಕಾಪಾಡಿ.

  Published by:renukadariyannavar
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು