HOME » NEWS » Lifestyle » USING PHONES WHILE SHOPPING MAY MAKE YOU BUY MORE RESEARCH VB

ಫೋನ್ ಬಳಸಿ ಶಾಪಿಂಗ್ ಮಾಡುತ್ತೀರಾ?; ಹಾಗಿದ್ದರೆ ಈ ಸ್ಟೋರಿ ನೀವು ಓದಲೇಬೇಕು

ಒಬ್ಬನೆ ಶಾಪಿಂಗ್​ ತೆರಳಿದಾಗ ಗೆಳೆಯರ ಅಥವಾ ಆಪ್ತರ ಜೊತೆ ದೂರವಾಣಿ ಕರೆ ಮಾಡಿ ನಾವು ಏನನ್ನು ಖರೀದಿಸುತ್ತಿದ್ದೇವೆ ಎಂಬುದನ್ನು ಹೇಳುತ್ತೇವೆ. ಇನ್ನೂ ಕೆಲವರು ಮೊಬೈಲ್​ನಲ್ಲಿ ಹಾಡು ಕೇಳುತ್ತಾ ಶಾಪಿಂಗ್​ ಮಾಡುತ್ತಿರುತ್ತಾರೆ.

news18-kannada
Updated:April 13, 2020, 9:52 AM IST
ಫೋನ್ ಬಳಸಿ ಶಾಪಿಂಗ್ ಮಾಡುತ್ತೀರಾ?; ಹಾಗಿದ್ದರೆ ಈ ಸ್ಟೋರಿ ನೀವು ಓದಲೇಬೇಕು
ಸಾಂದರ್ಭಿಕ ಚಿತ್ರ
  • Share this:
ಅನೇಕರಿಗೆ ಶಾಪಿಂಗ್​ ಮಾಡುವ ಹುಚ್ಚು ಇರುತ್ತದೆ. ಒಮ್ಮೆ ಅಂಗಡಿ ಹೊಕ್ಕಿದರೆ ಸಾಕು ಸಾವಿರಾರು ರೂಪಾಯಿ ಬೆಲೆಯ ವಸ್ತುಗಳನ್ನು ಖರೀದಿಸುತ್ತಾರೆ. ಒಬ್ಬನೆ ತೆರಳಿದರೆ ಆಯ್ಕೆಯಲ್ಲಿ ಗೊಂದಲವಾಗಬಹುದು ಎನ್ನುವ ಕಾರಣಕ್ಕೆ ಅನೇಕರು ಗೆಳೆಯರನ್ನು ಕರೆದುಕೊಂಡು ಹೋಗುತ್ತಾರೆ.

ಆದರೆ. ನೀವು ಯಾರನ್ನು ಬೇಕಿದ್ದರೂ ಶಾಪಿಂಗ್​ಗೆ ಕರೆದುಕೊಂಡು ಹೋಗಿ. ಮೊಬೈಲ್​ ಬಳಸುತ್ತಾ ಖರೀದಿಗೆ ಮುಂದಾದರೆ ಎಡವಟ್ಟು ಸಂಭವಿಸುವುದು ಖಚಿತ ಎನ್ನುತ್ತಿದೆ ಹೊಸ ಅಧ್ಯಯನ.

ಹುಡುಗರು ಯಾವರೀತಿ ಇದ್ರೆ ಹುಡುಗಿಯರಿಗೆ ಇಷ್ಟವಾಗುತ್ತೆ?; ಇಲ್ಲಿದೆ ಸೀಕ್ರೆಟ್

ಒಬ್ಬನೆ ಶಾಪಿಂಗ್​ ತೆರಳಿದಾಗ ಗೆಳೆಯರ ಅಥವಾ ಆಪ್ತರ ಜೊತೆ ದೂರವಾಣಿ ಕರೆ ಮಾಡಿ ನಾವು ಏನನ್ನು ಖರೀದಿಸುತ್ತಿದ್ದೇವೆ ಎಂಬುದನ್ನು ಹೇಳುತ್ತೇವೆ. ಇನ್ನೂ ಕೆಲವರು ಮೊಬೈಲ್​ನಲ್ಲಿ ಹಾಡು ಕೇಳುತ್ತಾ ಶಾಪಿಂಗ್​ ಮಾಡುತ್ತಿರುತ್ತಾರೆ. ಈ ಸಂದರ್ಭ ಶಾಪಿಂಗ್​ನಲ್ಲಿ ತಾವು ಏನು ಖರೀದಿ ಮಾಡಬೇಕೆಂದು ಅಂದುಕೊಂಡಿರುತ್ತೇನೆ, ಬದಲಾಗಿ ಬೇರೆ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಹೆಚ್ಚಿದೆಯಂತೆ.

'ಯುಎಸ್​ನ ಫೇರ್ ಫೀಲ್ಡ್ ಯುನಿರ್ವಸಿಟಿಯ ಮೈಕೆಲ್ ಸ್ಕೈಂದ್ರಾ' ಈ ಬಗ್ಗೆ ಅಧ್ಯಯನ ನಡೆಸಿದ್ದು, ಫೋನ್ ಬಳಸಿಕೊಂಡು ಯಾರು ಶಾಪಿಂಗ್ ಮಾಡುತ್ತಾರೋ ಅವರ ನಡವಳಿಕೆಯಲ್ಲಿ ಬದಲಾಗುತ್ತದೆ ಮತ್ತು ಹೆಚ್ಚಿನ ಖರ್ಚಿಗೆ ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ.

ವೈರಸ್​ ವಿರುದ್ಧ ಹೋರಾಡಲು ನಿಮ್ಮ ದೇಹವನ್ನು ಸಿದ್ಧಗೊಳಿಸುವುದು ಹೇಗೆ?; ಮನೆಯಲ್ಲೇ ಇದೆ ಔಷಧಿ...

ಈ ಕುರಿತು 230ಕ್ಕೂ ಅಧಿಕ ಮಂದಿಯ ಮೇಲೆ ಅಧ್ಯಯನ ನಡೆಸಿದ್ದು, ಮೊಬೈಲ್ ಫೋನ್ ಬಳಕೆ ಮಾಡಿಕೊಂಡು ಶಾಫಿಂಗ್ ಮಾಡುವವರು ತಾವೇನು ಖರೀದಿಸಬೇಕೆಂಬುದನ್ನು ಮರೆತು ಇತರೆ ವಸ್ತುಗಳ ಕಡೆ ಹೆಚ್ಚು ಆಕರ್ಷಿತರಾಗುತ್ತಾರೆ. ಅಲ್ಲದೆ, ಫೋನ್ ಗಳನ್ನು ಬಳಸಿ ಶಾಪಿಂಗ್ ಮಾಡುವುದರಿಂದಾಗಿ ಧನಾತ್ಮಕ ಮತ್ತು ಋಣಾತ್ಮಕ ಎರಡೂ ರೀತಿಯ ಪರಿಣಾಮಗಳು ಉಂಟಾಗುತ್ತವೆ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.
Youtube Video
First published: April 13, 2020, 9:52 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories