news18-kannada Updated:November 21, 2020, 4:17 PM IST
ಟಾಯ್ಲೆಟ್ನಲ್ಲಿ ಕುಳಿತಾಗ ಉಳಿದೆಲ್ಲವೂ ಅದರ ಪಾಡಿಗೆ ಅದು ನಡೆಯುತ್ತಿರುತ್ತದೆ. ಹೀಗಿರುವಾಗ ಸುಮ್ಮನೆ ಕುಳಿತಿರುವುದೇಕೆ ಎಂದು ಕೆಲವರು ಮೊಬೈಲ್ ಬಳಕೆ ಮಾಡುತ್ತಾರೆ. ಇದು ಅಪಾಯ ತಂದೊಡ್ಡಬಹುದಂತೆ!

ಕೂತರೂ ಮೊಬೈಲ್, ನಿಂತರೂ ಮೊಬೈಲ್, ಮಲಗಿದರೂ ಮೊಬೈಲ್, ಬೈಕ್ನಲ್ಲಿದ್ದಾಗ ಮೊಬೈಲ್, ಕಾರಿನಲ್ಲಿದ್ದಾಗ ಮೊಬೈಲ್.

ಇನ್ನೂ ಕೆಲವರು ಟಾಯ್ಲೆಟ್ನಲ್ಲೂ ಮೊಬೈಲ್ ಬಳಸುವವರಿದ್ದಾರೆ! ಇದು ಅನೇಕರಿಗೆ ಅಚ್ಚರಿ ತರುವ ವಿಚಾರವೇ ಅಲ್ಲ.

ಮೊದಲೆಲ್ಲ ಟಾಯ್ಲೆಟ್ನಲ್ಲಿ ಕೂತು ಪೇಪರ್ ಓದುತ್ತಿದ್ದರು. ಆದರೆ, ಇಂದು ಕಾಲ ಬದಲಾಗಿದೆ. ಟಾಯ್ಲೆಟ್ನಲ್ಲಿ ಪೇಪರ್ ಓದುವ ಬದಲು ಮೊಬೈಲ್ ಬಳಕೆ ಮಾಡುತ್ತಾರೆ.

ಮೊದಲು ಪೇಪರ್ ಇಲ್ಲದೇ ಸರಾಗವಾಗಿ ಆಗುವುದೇ ಇಲ್ಲ ಎಂದು ಕೆಲವರು ಹೇಳುತ್ತಿದ್ದರು. ಆದರೆ, ಈಗ ಕಾಲ ಕೊಂಚ ಬದಲಾಗಿದೆ.

ಈಗ ಟಾಯ್ಲೆಟ್ನಲ್ಲಿ ಮೊಬೈಲ್ ಇಲ್ಲದಿದ್ದರೆ ಮಲ ವಿಸರ್ಜನೆ ಸರಿ ಆಗುವುದೇ ಇಲ್ಲ ಎಂದು ಹೇಳುವ ಕೆಲ ವ್ಯಕ್ತಿಗಳೂ ಇದ್ದಾರೆ.

ಟಾಯ್ಲೆಟ್ನಲ್ಲಿ ಕುಳಿತಾಗ ಉಳಿದೆಲ್ಲವೂ ಅದರ ಪಾಡಿಗೆ ಅದು ನಡೆಯುತ್ತಿರುತ್ತದೆ. ಹೀಗಿರುವಾಗ ಸುಮ್ಮನೆ ಕುಳಿತಿರುವುದೇಕೆ ಎಂದು ಕೆಲವರು ಮೊಬೈಲ್ ಬಳಕೆ ಮಾಡುತ್ತಾರೆ.

ಆದರೆ, ಇದು ತೀರಾ ಅಪಾಯಕಾರಿ ಎನ್ನುತ್ತಿದ್ದಾರೆ ವಿಜ್ಞಾನಿಗಳು.

ಬ್ರಿಟನ್ನಲ್ಲಿ ಒಟ್ಟು ಜನ ಸಂಖ್ಯೆಯಲ್ಲಿ ಶೇ. 57 ಜನರು ಮಲವಿಸರ್ಜನೆ ಮಾಡುವಾಗ ಮೊಬೈಲ್ ಬಳಕೆ ಮಾಡುತ್ತಾರೆ. ಇದನ್ನು ಬಹುತೇಕ ಜನರು ಒಪ್ಪಿಕೊಳ್ಳುತ್ತಾರೆ.

ಟಾಯ್ಲೆಟ್ನಲ್ಲಿ ಮೊಬೈಲ್ ಬಳಕೆ ಮಾಡಿದರೆ ಮೂಲವ್ಯಾಧಿ ಕಾಡುವ ಸಾಧ್ಯತೆ ಹೆಚ್ಚಿದೆಯಂತೆ.

ಇದಕ್ಕೆ ಸೂಕ್ತ ಕಾರಣವನ್ನೂ ನೀಡುತ್ತಾರೆ ವೈದ್ಯರು. ಮೊಬೈಲ್ ಬಳಕೆ ಮಾಡುತ್ತಾ ಟಾಯ್ಲೆಟ್ನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಸಮಯವನ್ನು ಜನರು ಕಳೆಯುತ್ತಾರೆ.

ಹೀಗೆ ಜಾಸ್ತಿ ಹೊತ್ತು ಕೂತಿದ್ದರೆ ನಿಮ್ಮ ಗುದದ್ವಾರದಲ್ಲಿರುವ ರಕ್ತನಾಳದ ಮೇಲೆ ಒತ್ತಡ ಬೀಳಲಿದೆಯಂತೆ. ಇದರಿಂದ ಪೈಲ್ಸ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನುತ್ತಾರೆ ವೈದ್ಯರು.

ಹೀಗಾಗಿ, ಟಾಯ್ಲೆಟ್ನಲ್ಲಿ ಆದಷ್ಟು ಮೊಬೈಲ್ ಬಳಕೆ ಕಡಿಮೆ ಮಾಡಿದರೆ ಉತ್ತಮ ಎನ್ನುವುದು ವೈದ್ಯರ ಸೂಚನೆ.
Published by:
Rajesh Duggumane
First published:
November 21, 2020, 4:17 PM IST