ತ್ವಚೆ ಹಾಗೂ ಕೂದಲ ಆರೈಕೆಯಲ್ಲಿ ಕೊಬ್ಬರಿ ಎಣ್ಣೆ ಕಮಾಲ್

news18
Updated:February 12, 2018, 5:10 PM IST
ತ್ವಚೆ ಹಾಗೂ ಕೂದಲ ಆರೈಕೆಯಲ್ಲಿ ಕೊಬ್ಬರಿ ಎಣ್ಣೆ ಕಮಾಲ್
news18
Updated: February 12, 2018, 5:10 PM IST
ಸುಜಾತ ಭಾರದ್ವಾಜ್, ನ್ಯೂಸ್ 18 ಕನ್ನಡ
ತೆಂಗಿನ ಎಣ್ಣೆಯನ್ನು ತಲೆಗೆ ಹಚ್ಚಿದರೆ ಕೂದಲಿಗೆ ಒಳ್ಳೆಯದು, ತಿಂದರೆ ಆರೋಗ್ಯಕ್ಕೆ ಒಳ್ಳೆಯದು. ಇನ್ನು ಮೈಗೆ ಹಚ್ಚಿಕೊಂಡರಂತೂ ಯಾವ ಮಾಯಿಶ್ಚರೈಸರ್ ಮಾಡದ ಚಮತ್ಕಾರವನ್ನು ತೆಂಗಿನೆಣ್ಣೆ ಮಾಡುತ್ತದೆ. ಇಂತಹ ಕಮಾಲ್ ಕೊಬ್ಬರಿ ಎಣ್ಣೆಯ ಮತ್ತಷ್ಟು ಚಮತ್ಕಾರಗಳ ಬಗ್ಗೆ ತಿಳಿಯಲು ವರದಿ ನೋಡಿ.

ಕೊಬ್ಬರಿ ಎಣ್ಣೆಯ ಬಳಕೆ ಕೇವಲ ಕೂದಲ ಆರೋಗ್ಯ ಹಾಗೂ ಚರ್ಮದ ಕೋಮಲತೆಯನ್ನು ಹೆಚ್ಚಿಸುವುದಷ್ಟೆ ಅಲ್ಲ. ಕೊಬ್ಬರಿ ಎಣ್ಣೆ ಪೌಷ್ಠಿಕಾಂಶಗಳಿಂದ ಕೂಡಿದೆ. ಬೇರೆ ಆಹಾರದಲ್ಲಿನ ಕೊಬ್ಬಿನ ಅಂಶಗಳನ್ನು ಸುಲಭವಾಗಿ ಹೀರಿಕೊಳ್ಳುತ್ತದೆ. ಚರ್ಮವನ್ನು ಹೆಚ್ಚು ಕೋಮಲವಾಗಿಸುವ ಗುಣ ಇದಕ್ಕಿದೆ. ಕೂದಲಿನ ಬೆಳವಣಿಗೆ, ಹೊಟ್ಟು ನಿವಾರಣೆ ಎಲ್ಲದಕ್ಕೂ ಕೊಬ್ಬರಿ ಎಣ್ಣೆ ಲಾಜವಾಬ್! ಅತೀ ಕಡಿಮೆ ಕ್ಯಾಲೋರಿ ಇರುವ ಪದಾರ್ಥ ಎಂದರೆ ಅದು ತೆಂಗಿನ ಎಣ್ಣೆ ಎನ್ನಬಹುದು. ಅಲ್ಲದೆ ಇದು ಅತ್ಯುತ್ತಮ ಮನೆಮದ್ದಾಗಿ ಸಹ ಕೆಲಸ ಮಾಡುತ್ತದೆ. ತೆಂಗಿನೆಣ್ಣೆಯಿಂದ ತಯಾರಿಸಿದ ಆಹಾರಗಳಲ್ಲಿ ಜಿಡ್ಡಿನ ಅಂಶ ಕಡಿಮೆ ಇರುತ್ತದೆ. ಹೀಗಾಗಿ ಇದು ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರವಹಿಸುತ್ತದೆ.

ತೆಂಗಿನ ಎಣ್ಣೆಯ ಪ್ರಯೋಜನಗಳು

ಬೊಜ್ಜು ಕರಗಿಸಬೇಕೆ?

ನಿಮ್ಮ ಅಡುಗೆ ಮನೆಗೆ ಕೊಬ್ಬರಿ ಎಣ್ಣೆ ತಂದಿಡಿ. ದೇಹದಲ್ಲಿ ಶಕ್ತಿ ಹೆಚ್ಚಿಸಿ, ಜೀರ್ಣಕ್ರಿಯೆಯನ್ನು ವೃದ್ದಿಸಿ, ದೇಹದ ತೂಕವನ್ನು ಕಡಿಮೆ ಮಾಡುತ್ತದೆ. ತೆಂಗಿನ ಎಣ್ಣೆ ದೇಹದಲ್ಲಿರುವ ಕೊಬ್ಬು ಕರಗಲು ಸಹಾಯ ಮಾಡುತ್ತದೆ.

ಕೋಮಲ ತ್ವಚೆ
Loading...

ನಿಮ್ಮದು ಒಣ ಚರ್ಮವಾಗಿದ್ದರೆ, ಪ್ರತಿನಿತ್ಯ ಕೊಬ್ಬರಿಎಣ್ಣೆಯನ್ನು ಮುಖಕ್ಕೆ ಹಚ್ಚಿಕೊಂಡು ಮುಖ ತೊಳೆಯಿರಿ. ನಿಮ್ಮ ಮುಖ ಕಾಂತಿಯಿಂದ ಕೂಡಿರುತ್ತದೆ

ಮೇಕಪ್ ತೆಗೆಯಲು

ಮೇಕಪ್ ತೆಗೆಯಲು ಕೊಬ್ಬರಿ ಎಣ್ಣೆ ಬಳಸಿ. ಚರ್ಮದ ಸೋಂಕು, ಖಾಯಿಲೆಗಳಿಗೂ ಕೊಬ್ಬರಿ ಎಣ್ಣೆ ಉತ್ತಮ ಔಷಧ. ಮೇಕಪ್ ತೆಗೆಯಲು ತೆಂಗಿನೆಣ್ಣೆ ಬಳಸುವುದರಿಂದ ಸುಲಭವಾಗಿ ಮೇಕಪ್ ತೆಗೆಯಬಹುದು. ಇದರಿಂದ ರಾಸಾಯನಿಕಗಳಿಂದ ಆಗಬಹುದಾದ ಹಾನಿ ತಪ್ಪುತ್ತದೆ.

ಕೂದಲ ಆರೈಕೆ

ಕೂದಲಿನ ಕೋಮಲತೆ ಕಾಪಾಡುವುದು ಮಾತ್ರವಲ್ಲ, ಕೂದಲು ಉದುರುವ ಸಮಸ್ಯೆಗೂ ಇದು ರಾಮ ಬಾಣ. ಕೂದಲಿನಲ್ಲಿರುವ ಪ್ರೊಟೀನ್ ನಾಶವಾಗುವುದನ್ನು ತಡೆಗಟ್ಟುವುದಲ್ಲದೆ, ಕೂದಲಿಗೆ ಹೊಸ ಚೈತನ್ಯ ನೀಡುತ್ತದೆ.

ಕೂದಲ ಬುಡಕ್ಕೆ ಮಸಾಜ್

ಉಗುರು ಬೆಚ್ಚಗೆ ಮಾಡಿದ ಎಣ್ಣೆಯನ್ನು ಬುಡದಿಂದ ಹಚ್ಚುತ್ತ ಕೂದಲ ತುದಿಯವರೆಗೆ ಹಚ್ಚಿ. ನಂತರ ಸ್ವಲ್ಪ ಮಸಾಜ್ ಮಾಡಿ. ನಂತರ ತುದಿಯ ವರೆಗೂ ಜಡೆ ಹೆಣೆದು ಮೇಲೆ ಕಟ್ಟಿ ಒಂದು ಗಂಟೆಯ ನಂತರ ಕೂದಲನ್ನು ತೊಳೆದುಕೊಳ್ಳಿ.

ಮೊಡವೆ ಬರುವುದನ್ನು ತಡೆಯುತ್ತದೆ

ಮುಖದಲ್ಲಿ ಜಿಡ್ಡಿನಂಶವಿದ್ದರೆ ಮೊಡವೆ ಬರುವುದು, ಆದರೆ ತೆಂಗಿನೆಣ್ಣೆ ಮೊಡವೆ ಬರುವುದನ್ನು ತಡೆಯುತ್ತದೆ. ಜತೆಗೆ
ತ್ವಚೆಯನ್ನು ಕೋಮಲವಾಗಿ ಇಡುತ್ತದೆ. ರಾತ್ರಿ ಮುಖಕ್ಕೆ ಕೊಬ್ಬರಿ ಎಣ್ಣೆ ಹಚ್ಚಿ ಬೆಳಿಗ್ಗೆ ತೊಳೆಯುವುದರಿಂದ ಸಾಕಷ್ಟು ಲಾಭಗಳಿವೆ.

ನೈಸರ್ಗಿಕವಾದ ಸನ್​ಸ್ಕ್ರೀನ್​

ಬಿಸಿಲಿಗೆ ಹೋಗುವಾಗ ತ್ವಚೆಗೆ ತೆಂಗಿನೆಣ್ಣೆ ಹಚ್ಚಿದರೆ ತ್ವಚೆ ಆಕರ್ಷಕವಾಗಿರುತ್ತದೆ. ಸೂರ್ಯ ರಶ್ಮಿಗಳಿಂದ ರಕ್ಷಣೆಯೂ ಸಿಗುತ್ತದೆ.
First published:February 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ