ಆರೋಗ್ಯದ ವೃದ್ಧಿಗಾಗಿ ಅಲೊವೆರ: ಬೊಜ್ಜು ಕಡಿಮೆ ಮಾಡಲು ನಿತ್ಯ ಸೇವಿಸಿ ಲೋಳೆ ರಸ

news18
Updated:April 13, 2018, 1:15 PM IST
ಆರೋಗ್ಯದ ವೃದ್ಧಿಗಾಗಿ ಅಲೊವೆರ: ಬೊಜ್ಜು ಕಡಿಮೆ ಮಾಡಲು ನಿತ್ಯ ಸೇವಿಸಿ ಲೋಳೆ ರಸ
news18
Updated: April 13, 2018, 1:15 PM IST
ನ್ಯೂಸ್​ 18 ಕನ್ನಡ

ಆರ್ಯುವೇದ ಜಗತ್ತಿನಲ್ಲಿ ಅತ್ಯಂತ ದುಬಾರಿ ಎನಿಸಿದ ಹಲವು ಉತ್ಪನ್ನಗಳಿಗೆ ಬಳಸುವ ಗಿಡಮೂಲಿಕೆಗಳು ನಮ್ಮ ಮನೆಯ ಹಿತ್ತಲಲ್ಲೇ ಬೆಳೆಯುತ್ತಿರುತ್ತವೆ. ಆದರೆ ನಮಗೆ ಅದರ ಕಲ್ಪನೆಯೂ ಇರುವುದಿಲ್ಲ. ಅಂಥ ವಸ್ತುಗಳಲ್ಲಿ ಅಲೊವೆರ ಅಥವಾ ಲೋಳೆ ರಸ ಸಹ ಒಂದು. ಇದು ಸೌಂದರ್ಯ ವರ್ಧಕ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಲೊಳೆ ರಸವನ್ನು ಸೇವಿಸುವುದರಿಂದ ಲೆಕ್ಕವಿಲ್ಲದಷ್ಟು  ಆರೋಗ್ಯಕ್ಕೆ ಸಂಬಂಧಪಟ್ಟ ಪ್ರಯೋಜನಗಳಿವೆ. ಹೀಗಾಗಿಯೇ ಹಲವು ಆಯುರ್ವೇದ ಔಷಧಿಗಳಲ್ಲಿ ಹಾಗು ಸೌಂದರ್ಯವರ್ಧಕ ಉದ್ಯಮದಲ್ಲೂ ಇದರ ಬಳಕೆ ವ್ಯಾಪಕ.

ಇಂತಹ ಬಹುಪಯೋಗಿ ಅಲೊವೆರಾದಿಂದ ಆರೋಗ್ಯಕ್ಕಾಗುವ ಉಪಯೋಗಗಳ ಕುರಿತು ಇಲ್ಲಿ ತಿಳಿಯೋಣ.


  1. ವಿಟಮಿನ್ ಬಿ ಹೆಚ್ಚಾಗಿರುವ ಲೋಳೆ ರಸವನ್ನು ನೇರವಾಗಿ ಅಥವಾ ನೆಲ್ಲಿ, ತುಳಸಿ ರಸದ ಜತೆಗೂ ಸೇವಿಸಬಹುದು.

  2. ಮುಂಜಾನೆ ಲೋಳೆ ರಸದ ನಿತ್ಯ ಸೇವನೆ ಅಜೀರ್ಣ, ವಾಂತಿ, ಅಸಿಡಿಟಿ ಸಂಬಂಧಿತ ಸಮಸ್ಯೆಗಳಿಗೂ ರಾಮಬಾಣ.

  3. ದೇಹಕ್ಕೆ ಅಗತ್ಯವಾದ ಅಧಿಕ ಖನಿಜಾಂಶ ಹಾಗೂ ಜೀವಸತ್ವಗಳು ಈ ಲೋಳೆ ರಸದಲ್ಲಿವೆ. ನಿತ್ಯ ಒಂದು ಲೋಟ ಅಲೊವೆರಾದ ಜ್ಯೂಸನ್ನು ಸೇವಿಸಿದರೆ ಬೊಜ್ಜು ಕಡಿಮೆಯಾಗುತ್ತದೆ.

  4. Loading...

  5. ಅಲೋವೆರ ರಕ್ತಹೀನತೆ, ಲಿವರ್ ಸಮಸ್ಯೆ, ಕಾಮಲೆ ರೋಗಗಳಿಗೂ ಬಹಳ ಪ್ರಯೋಜನಕಾರಿ.

  6. ಹಾರ್ಮೋನ್ ಸಮತೋಲನದಲ್ಲಷ್ಟೇ ಅಲ್ಲದೆ ನಿದ್ರಾಹೀನತೆಗೂ ಇದು ಒಳ್ಳೆಯ ಔಷಧ.

  7. ಅಲೊವೆರಾದ ಜ್ಯೂಸ್ ಅನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ ಮಲಬದ್ಧತೆ ಹಾಗೂ ಕರುಳಿನ ಸಮಸ್ಯೆಗಳಿಂದ ಮುಕ್ತಿ ಪಡೆಯಿರಿ.

First published:April 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...