ಗೃಹಿಣಿಯರ ದಿನನಿತ್ಯದ ಸಮಸ್ಯೆಗಳಿಗೆ ಯೋಗಾಸನದಲ್ಲಿದೆ ಶಾಶ್ವತ ಪರಿಹಾರ!

news18
Updated:June 21, 2018, 10:09 AM IST
ಗೃಹಿಣಿಯರ ದಿನನಿತ್ಯದ ಸಮಸ್ಯೆಗಳಿಗೆ ಯೋಗಾಸನದಲ್ಲಿದೆ ಶಾಶ್ವತ ಪರಿಹಾರ!
news18
Updated: June 21, 2018, 10:09 AM IST
ನ್ಯೂಸ್​ 18 ಕನ್ನಡ

ಗೃಹಿಣಿಯರು ಸಾಮಾನ್ಯ ಮನೆಗಳಲ್ಲಿ ಮಾಡುವ ಕೆಲಸವೇ ಅವರ ದೇಹಕ್ಕಾಗುವ ವ್ಯಾಯಾಮ ಎಂದು ಸಾಕಷ್ಟು ಮಂದಿ ಸುಮ್ಮನಾಗುತ್ತಾರೆ. ಆದರೆ ಯಾರು ಎಷ್ಟೇ ಕೆಲಸ ಮಾಡಿದರು ದೇಹಕ್ಕೆ ನಿಗದಿತ ಸಮಯದಲ್ಲಿ ಮಾಡುವ ವ್ಯಾಯಾಮ ಅತ್ಯಗತ್ಯ. ಇದನ್ನು ಮಾಡುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ವ್ಯಾಯಾಮ ಎಂದರೆ ಯೋಗವೂ ಸಹ ಒಂದು ರೀತಿಯ ವ್ಯಾಯಾಮ. ಮನೆಯಲ್ಲೇ ಯೋಗದ ಆಸನಗಳನ್ನು ಮಾಡುವ ಮೂಲಕ ಮಹಿಳೆಯರು ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.

ಮಹಿಳೆಯರು ದೇಹದ ಪ್ರತಿಯೊಂದು ಅಂಗಗಳ ಮೇಲೆ ದಿನನಿತ್ಯ ಹೆಚ್ಚಿನ ಒತ್ತಡ ಹಾಕುತ್ತಿರುತ್ತಾರೆ. ಇದರಿಂದಾಗಿ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕುತ್ತಿಗೆ ನೋವು ಕಾಣಿಸಿಕೊಳ್ಳುವುದು. ಮಲಗುವ ಮತ್ತು ಕುಳಿತುಕೊಳ್ಳುವ ಭಂಗಿಯಿಂದಾಗಿ ಕುತ್ತಿಗೆ ನೋವು ಬರುವುದು ಸಹಜ. ಕುತ್ತಿಗೆ ನೋವು ನಿವಾರಣೆ ಮಾಡಲು ಸುಲಭವಾಗಿ ಮಾಡಬಹುದಾದ ಕೆಲವೊಂದು ಆಸನಗಳು ಇವೆ.
ಬಾಲಾಸನ ಅಥವಾ ಮಗುವಿನ ಆಸನ: ಬೆನ್ನಿಗೆ ಆರಾಮ ನೀಡಿ ನರ ವ್ಯವಸ್ಥೆಯು ಶಾಂತವಾಗಿರುವಂತೆ ಮಾಡುವುದು. ಮಲಬದ್ಧತೆ ನಿವಾರಿಸುತ್ತದೆ. ಬೆನ್ನು ಅಥವಾ ಮೊಣಕಾಲಿನ ಗಾಯದ ಸಮಸ್ಯೆಯಿದ್ದರೆ ಹಾಗೂ ಗರ್ಭಿಣಿ ಮಹಿಳೆಯರು ಈ ಆಸನ ಮಾಡಬಾರದು.

ಕಾಡುವ ಸೊಂಟ ನೋವಿಗೆ 'ಆನಂದ ಬಾಲಾಸನ': ಇದು ಮನಸ್ಸಿಗೆ ಶಾಂತಿ ನೀಡಿ, ಒತ್ತಡ ಕಡಿಮೆ ಮಾಡುವುದರೊಂದಿಗೆ ದೇಹಸ್ಥಿತಿಯನ್ನು ಸುಧಾರಿಸುತ್ತದೆ. ಆದರೆ ಗರ್ಭಿಣಿ ಮಹಿಳೆಯರು ಈ ಆಸನ ಮಾಡಬಾರದು.

ಮಾರ್ಜಾಸನ ಅಥವಾ ಬೆಕ್ಕಿನ ಆಸನ: ಬೆನ್ನಿನಲ್ಲಿ ಸ್ಥಿತಿಸ್ಥಾಪಕತ್ವ ಹೆಚ್ಚಿಸುವುದರೊಂದಿಗೆ ಮೊಣಕೈ ಹಾಗೂ ಭುಜ ಬಲಗೊಳಿಸುತ್ತದೆ. ಜೀರ್ಣಕ್ರಿಯೆ ವ್ಯವಸ್ಥೆಗೆ ಮಸಾಜ್ ಮಾಡಿ ಜೀರ್ಣಕ್ರಿಯೆ ಸುಧಾರಿಸಿ, ಹೊಟ್ಟೆಗೆ ಶಕ್ತಿ ನೀಡುತ್ತದೆ. ಅಲ್ಲದೆ
ಮನಸ್ಸಿಗೆ ಆರಾಮ ನೀಡಿ ರಕ್ತಸಂಚಾರ ಉತ್ತಮಗೊಳಿಸುತ್ತದೆ. ಬೆನ್ನು ನೋವು ಅಥವಾ ಕುತ್ತಿಗೆ ನೋವು ಇರುವವರು ಇದನ್ನು ಮಾಡಬಾರದು.
Loading...

ವಿಪರೀತ ಕರನಿ ಆಸನ ಅಥವಾ ಕಾಲುಗಳನ್ನು ಗೋಡೆಗೆ ಇಡುವುದು:ಈ ಆಸನ ತಲೆನೋವು, ನಿಶ್ಯಕ್ತಿ, ಕಾಲುಗಳಲ್ಲಿ ಸ್ನಾಯು ಸೆಳೆತವನ್ನು ನಿವಾರಿಸುತ್ತದೆ. ಕುತ್ತಿಗೆ ಅಥವಾ ಬೆನ್ನು ನೋವು ಇರುವವರು ಇದನ್ನು ಮಾಡಬೇಡಿ.

ಉತ್ಥಿತ ತ್ರಿಕೋನಾಸನದ ಲಾಭಗಳು: 
ಸಾಮಾನ್ಯ ತಲೆ ನೋವು ಹಾಗೂ ದೇಹದ ಯಾವುದೇ ಒತ್ತಡವನ್ನು ನಿವಾರಿಸುತ್ತದೆ. ಜೊತೆಗೆ ಬೆನ್ನು ಮೂಳೆ ಬಲಗೊಳ್ಳುವುದು ಮತ್ತು ವಿಸ್ತಾರವಾಗುವಂತೆ ಮಾಡುತ್ತದೆ. ಹೃದಯ ಸಮಸ್ಯೆ, ಕಡಿಮೆ ರಕ್ತದೊತ್ತಡ ಇರುವವರು ಹಾಗೂ ಭೇದಿ ಇರುವವರು ಇದನ್ನು ಮಾಡಬಾರದು

ನೀವು ಪ್ರತಿನಿತ್ಯವು ಈ ಆಸನಗಳನ್ನು ಮಾಡುವುದರಿಂದ ಹೆಚ್ಚು ಆರಾಮ ಪಡೆಯಬಹುದು. ಎಷ್ಟೇ ವ್ಯಸ್ತರಾಗಿದ್ದರೂ ನೀವು ಈ ಆಸನಗಳನ್ನು ಮಾಡಬಹುದಾಗಿದೆ. ಇದಕ್ಕೆ ಹೆಚ್ಚು ಸಮಯವೂ ಬೇಕಿಲ್ಲ.
First published:June 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...