Body Care: ಬೇಸಿಗೆಯಲ್ಲಿ ದೇಹದ ಕಾಳಜಿಗಾಗಿ ಅಡುಗೆ ಮನೆಯಲ್ಲೇ ಇವೆ ಅಗತ್ಯ ವಸ್ತುಗಳು

ಈರುಳ್ಳಿಯನ್ನು ಹಸಿ ಅಥವಾ ಬೇಯಿಸಿ ತಿನ್ನುವುದು ತುಂಬಾ ಪ್ರಯೋಜನಕಾರಿ ಆಗಿದೆ. ಈರುಳ್ಳಿಯ ಸೇವನೆ ದೇಹಕ್ಕೆ ಸಾಕಷ್ಟು ಪ್ರಯೋಜನಕಾರಿ ಅಂಶಗಳನ್ನು ನೀಡುತ್ತದೆ. ದೇಶದಲ್ಲಿ ಜನರು ಇದನ್ನು ಸಲಾಡ್ ರೂಪದಲ್ಲಿ ಸೇವನೆ ಮಾಡುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬೇಸಿಗೆಯಲ್ಲಿ (Summer) ಉರಿಯುವ ಬಿಸಿಲಿನಿಂದ ದೇಹಕ್ಕೆ (Body) ರಕ್ಷಣೆ ಒದಗಿಸಲು ತಂಪು ಆಹಾರ (Cold Food) ಸೇವನೆ ಸಹಕಾರಿ ಆಗುತ್ತದೆ. ಬೇಸಿಗೆಯಲ್ಲಿ ತಂಪು ಆಹಾರ ಸೇವನೆ ಮಾಡಬೇಕು ಎಂಬ ಬಯಕೆ (Want) ಆಗೋದು ಸಹಜ. ದೇಹಕ್ಕೆ ತಂಪು ಪದಾರ್ಥಗಳು (Ingredients) ಬೇಕು ಎನ್ನಿಸುತ್ತದೆ. ದೇಹವನ್ನು ಆರೋಗ್ಯಕರವಾಗಿಡುವ ಅಗ್ಗದ ಮತ್ತು ಉತ್ತಮ ಆಹಾರ ಪದಾರ್ಥಗಳು ನಮ್ಮ ಅಡುಗೆ ಮನೆಯಲ್ಲೇ ಇವೆ. ಅವುಗಳಲ್ಲಿ ಈರುಳ್ಳಿ (Onion) ಒಂದಾಗಿದೆ. ಈರುಳ್ಳಿಯನ್ನು ಹಸಿ ಅಥವಾ ಬೇಯಿಸಿ ತಿನ್ನುವುದು ತುಂಬಾ ಪ್ರಯೋಜನಕಾರಿ ಆಗಿದೆ. ಈರುಳ್ಳಿಯ ಸೇವನೆ ದೇಹಕ್ಕೆ ಸಾಕಷ್ಟು ಪ್ರಯೋಜನಕಾರಿ ಅಂಶಗಳನ್ನು ನೀಡುತ್ತದೆ. ದೇಶದಲ್ಲಿ ಜನರು ಇದನ್ನು ಸಲಾಡ್ ರೂಪದಲ್ಲಿ ಸೇವನೆ ಮಾಡುತ್ತಾರೆ.

    ಅಡುಗೆ ಮನೆಯ ಅವಿಭಾಜ್ಯ ಅಂಗ ಈರುಳ್ಳಿ

    ಮತ್ತೊಂದೆಡೆ ಈರುಳ್ಳಿ ಇಲ್ಲದೆ ಯಾವುದೇ ಅಡುಗೆ ಅಥವಾ ರೆಸಿಪಿ ಯಾವುದೇ ತರಕಾರಿ ಪೂರ್ಣಗೊಳ್ಳುವುದೇ ಇಲ್ಲ. ಈರುಳ್ಳಿಯು ಅಡುಗೆ ಮನೆಯ ಅವಿಭಾಜ್ಯ ಅಂಗವಾಗಿದೆ. ಈರುಳ್ಳಿ ಜೀವನದ ಒಂದು ಭಾಗವೂ ಆಗಿದೆ. ಈರುಳ್ಳಿಯನ್ನು ಪ್ರತಿಯೊಂದು ಭಾರತೀಯ ಪಾಕ ವಿಧಾನದಲ್ಲಿಯೂ ಬಳಕೆ ಮಾಡುತ್ತಾರೆ.

    ನಿತ್ಯದ ಆಹಾರದಲ್ಲಿ ಈರುಳ್ಳಿ ಸೇರಿಸಿ

    ಈರುಳ್ಳಿಯ ಪವಾಡದ ಗುಣ ಲಕ್ಷಣಗಳನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯ. ಇದನ್ನು ಬೇಸಿಗೆಯಲ್ಲಿ ನೀವು ಉತ್ತಮವಾಗಿ ಬಳಸಬಹುದು. ಬೇಸಿಗೆಯಲ್ಲಿ ನೈಸರ್ಗಿಕವಾಗಿ ನಿಮ್ಮನ್ನು ತಂಪಾಗಿಸುವ ಆಹಾರಗಳನ್ನು ನಿಮ್ಮ ನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಈ ಋತುವಿನಲ್ಲಿ ಸುಡುವ ಶಾಖ ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ತುಂಬಾ ಹಾನಿ ಉಂಟು ಮಾಡುತ್ತದೆ.

    ಇದನ್ನೂ ಓದಿ: ಸುಡು ಬಿಸಿಲು, ಮಕ್ಕಳ ಆಹಾರದಲ್ಲಿ ಈ ಪದಾರ್ಥಗಳನ್ನು ಮಿಸ್ ಮಾಡಲೇಬೇಡಿ

    ನೀವು ದಿನದಲ್ಲಿ ನೀರು ಮತ್ತು ಇತರ ಪಾನೀಯಗಳನ್ನು ಸೇವನೆ ಮಾಡುತ್ತಿದ್ದರೆ ಆಗ ದೇಹದಲ್ಲಿ ನೀರಿನ ಕೊರತೆ ಇರುವುದಿಲ್ಲ. ಇದು ಆರೋಗ್ಯ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಣೆ ಮಾಡುತ್ತದೆ. ವಾಸ್ತವವಾಗಿ, ದೇಹದಲ್ಲಿನ ನೀರಿನ ಸರಿಯಾದ ಹೊಂದಾಣಿಕೆ ಮತ್ತು ಆರೋಗ್ಯಕರ ಆಹಾರ ನೈಸರ್ಗಿಕ ರೀತಿಯಲ್ಲಿ ಹೀಟ್ ನ್ನು ಸೋಲಿಸಲು ನಿಮಗೆ ಸಹಾಯ ಮಾಡುತ್ತದೆ.

    ಕೆಲವು ಪಾನೀಯಗಳನ್ನು ಸೇವನೆ ಮಾಡಿ

    ಕೆಲವು ಹಣ್ಣುಗಳು ಮತ್ತು ತರಕಾರಿಗಳು ನಿಮ್ಮ ದೇಹದಲ್ಲಿನ ನೀರಿನ ಕೊರತೆಯನ್ನು ನಿಯಂತ್ರಣದಲ್ಲಿ ಇಡುತ್ತದೆ. ನೀವು ಕೆಲವು ಪ್ರಮುಖ ಕೆಲಸಗಳಿಗೆ ಮನೆಯಿಂದ ಹೊರಗೆ ಹೋಗಿದ್ದರೆ, ನಿಂಬೆ ಪಾನಕ, ಕಬ್ಬಿನ ರಸ, ಮಜ್ಜಿಗೆ, ಜೀರಿಗೆ ನೀರನ್ನು ನಿತ್ಯವೂ ಸೇವನೆ ಮಾಡುವುದನ್ನು ರೂಢಿಸಿಕೊಳ್ಳಿ. ಇದರಿಂದ ನಿಮ್ಮ ದೇಹದಲ್ಲಿ ನೀರಿನ ಕೊರತೆ ನೀಗುತ್ತದೆ.

    ಮಾವು ಮತ್ತು ಈರುಳ್ಳಿ ಎಲೆಗಳು ಶಾಖದಿಂದ ರಕ್ಷಿಸುತ್ತವೆ

    ಮಾವು, ಈರುಳ್ಳಿ ಪಾನ ಕುಡಿದು ಮನೆಯಿಂದ ಹೊರ ಬಂದರೆ ಹಲವು ಗಂಟೆಗಳ ಕಾಲ ಬಿಸಿಲ ತಾಪ ನಿಮ್ಮನ್ನು ಕಾಡುವುದಿಲ್ಲ. ಗ್ರಾಮೀಣ ಭಾರತದಲ್ಲಿ ಬೇಸಿಗೆಯಲ್ಲಿ ಮನೆಯಿಂದ ಹೊರಗೆ ಹೊರಡುವಾಗ ಹಸಿ ಈರುಳ್ಳಿಯನ್ನು ನಿಮ್ಮೊಂದಿಗೆ ಇಟ್ಟುಕೊಳ್ಳುವುದು ಒಳ್ಳೆಯದು.

    ಈರುಳ್ಳಿ ಶಾಖವನ್ನು ಹೀರಿಕೊಳ್ಳುವ ಅದ್ಭುತ ಸಾಮರ್ಥ್ಯ ಹೊಂದಿದೆ. ಬಿಸಿಲಿನಲ್ಲಿ ಹೋಗುವಾಗ ಈರುಳ್ಳಿ ಹತ್ತಿರವಿದ್ದರೆ ದೇಹಕ್ಕೆ ಹಾನಿ ಆಗುವುದನ್ನು ತಪ್ಪಿಸುತ್ತದೆ. ಈರುಳ್ಳಿ ಹೊರಗಿನಿಂದ ಉಂಟಾಗುವ ಶಾಖವನ್ನು ತಡೆಯುತ್ತದೆ. ಈರುಳ್ಳಿ ಉತ್ಕರ್ಷಣ ನಿರೋಧಕಗಳಿಂದ ಹೆಚ್ಚು ಸಮೃದ್ಧವಾಗಿದೆ.

    ಅಗತ್ಯ ವಿಟಮಿನ್‌ಗಳು ಮತ್ತು ಈರುಳ್ಳಿಯಲ್ಲಿ ಕಂಡು ಬರುತ್ತವೆ. ಈರುಳ್ಳಿಯಲ್ಲಿ ಕಬ್ಬಿಣ, ಆಂಟಿ ಆಕ್ಸಿಡೆಂಟ್‌ಗಳು ಕಂಡು ಬರುತ್ತವೆ. ಇದು ಫೋಲೇಟ್ ಸೇರಿದಂತೆ ವಿಟಮಿನ್ ಸಿ ಮತ್ತು ಬಿ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಈ ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸಲು ಈರುಳ್ಳಿಯನ್ನು ಹೆಚ್ಚು ಸೇವಿಸುವುದು ಉತ್ತಮ. ರುಚಿಯ ಹೊರತಾಗಿ ಅದ್ಭುತ ಆರೋಗ್ಯ ಪ್ರಯೋಜನ ಸಿಗುತ್ತದೆ.

    ಇದನ್ನೂ ಓದಿ: ಪದೇ ಪದೇ ಕಾಣಿಸಿಕೊಳ್ಳೋ ಮೊಡವೆ ನಿವಾರಣೆಗೆ ತ್ವಚೆಯ ಹೊರಗಲ್ಲ ಒಳಗಿಂದಲೇ ಮದ್ದು ಮಾಡಿ

    ದೇಹದ ಉಷ್ಣತೆಯನ್ನು ಸಮತೋಲನಗೊಳಿಸುತ್ತದೆ

    ಈರುಳ್ಳಿ ಬೇಸಿಗೆಯಲ್ಲಿ ತಂಪಾಗುವ ಗುಣ ಹೊಂದಿದೆ. ಇದು ದೇಹದ ಉಷ್ಣತೆಯನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಬಾಷ್ಪಶೀಲ ವಸ್ತುಗಳನ್ನು ಈರುಳ್ಳಿ ಒಳಗೊಂಡಿದೆ. ಈರುಳ್ಳಿಯನ್ನು ಬೇಸಿಗೆಯಲ್ಲಿ ಹಲವು ವಿಧಗಳಲ್ಲಿ ಬಳಸಲಾಗುತ್ತದೆ. ಇದನ್ನು ಪಲ್ಯ, ಚಟ್ನಿ, ಮಾಡಿ ರುಚಿಯಾಗಿ ತಿನ್ನಬಹುದು.
    Published by:renukadariyannavar
    First published: