Hair Care: ಶುಷ್ಕತೆ ಹೋಗಲಾಡಿಸಿ ಕೂದಲನ್ನು ಹೊಳಪಾಗಿಸಲು ಅಡುಗೆ ಮನೆಯ ಈ ಎರಡು ಪದಾರ್ಥ ಬಳಸಿ ಸಾಕು!

ನಿಮ್ಮ ಕೂದಲು ಉದುರುವುದನ್ನು ನಿಲ್ಲಿಸಲು ಮತ್ತು ಹೊಳೆಯುವ ಉದ್ದ ಮತ್ತು ದಪ್ಪ ಕೂದಲನ್ನು ಹೊಂದಲು ನಿಮ್ಮ ಅಡುಗೆ ಮನೆಯಲ್ಲಿನ ಎರಡು ವಸ್ತುಗಳು ಸಾಕಷ್ಟು ಸಹಾಯ ಮಾಡುತ್ತವೆ. ಕೂದಲನ್ನು ಉದ್ದ, ದಪ್ಪ ಮತ್ತು ಬಲವಾಗಿಸಲು ಇವು ಸಹಕಾರಿಯಾಗುತ್ತವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಆರೋಗ್ಯವಾದ ದೇಹ (Healthy Body) ಮತ್ತು ಮನಸ್ಸು (Mind) ಎಲ್ಲರಿಗೂ ಬೇಕು. ಜೊತೆಗೆ ಆರೋಗ್ಯಕರ ಸ್ಕಿನ್ (Skin) ಹಾಗೂ ದಪ್ಪ ಹಾಗೂ ಕಪ್ಪು ದಟ್ಟ ಕೂದಲು (Hair) ಹೊಂದಬೇಕು ಎಂಬ ಆಸೆ ಕೂಡ ತುಂಬಾ ಜನರದ್ದು ಆಗಿದೆ. ಹೀಗಾಗಿಯೇ ತುಂಬಾ ಜನರು ಹೊಳೆಯುವ ಹಾಗೂ ದಪ್ಪ ಮತ್ತು ಕಪ್ಪು, ಉದ್ದ ಕೂದಲು ಹೊಂದಲು ಸಾಕಷ್ಟು ರೀತಿಯಲ್ಲಿ ಆರೈಕೆ ಮಾಡಿಕೊಳ್ಳುತ್ತಾರೆ. ಕೂದಲಿನ ಆರೈಕೆ ಇತ್ತೀಚಿನ ದಿನಗಳಲ್ಲಿ ಮುಖ್ಯ ಕೆಲಸಗಳಲ್ಲಿ ಒಂದಾಗಿದೆ. ಯಾಕೆಂದರೆ ಆಗಾಗ್ಗೆ ಅಥವಾ ಬಾಚಿದಾಗೆಲ್ಲಾ ಬಾಚಣಿಗೆಯ ಜೊತೆಗೆ ಬರಲು ಕೂದಲಿನ ದಪ್ಪ ಉಂಡೆ ಜನರನ್ನು ಆತಂಕಕ್ಕೆ ಈಡು ಮಾಡುತ್ತದೆ. ಹಾಗಾಗಿ ಕೂದಲಿನ ಆರೈಕೆ ಅವಶ್ಯಕವಾಗಿದೆ.

    ಆರೋಗ್ಯಕರ ಮತ್ತು ಮೃದುವಾದ ಕೂದಲು

    ನಿಮ್ಮ ಕೂದಲಿನ ಹೊಳಪು ಹೆಚ್ಚಿಸಲು ಮತ್ತು ಆರೋಗ್ಯಕರ ಮತ್ತು ಮೃದುವಾದ ಕೂದಲು ಹೊಂದಲು ನೀವೂ ಕೂಡ ಬಯಸುತ್ತೀರಿ ಅಲ್ವಾ? ಅದಕ್ಕಾಗಿ ನೀವು ಯಾವ ಯಾವ ಕ್ರಮಗಳನ್ನು ಕೈಗೊಳ್ಳುತ್ತಿದ್ದೀರಿ? ಇದಕ್ಕಾಗಿ ನೀವು ಯಾವಾಗಲೂ ಮಾರುಕಟ್ಟೆಯಿಂದ ದುಬಾರಿ ಉತ್ಪನ್ನಗಳನ್ನು ತಂದು ಅನ್ವಯಿಸುತ್ತೀರಾ? ಅಥವಾ ಪಾರ್ಲರ್ ಚಿಕಿತ್ಸೆ ಅವಲಂಬಿಸಿದ್ದೀರಾ?

    ಅದಾಗ್ಯೂ ನೀವು ಕೂದಲು ಉದುರುವುದನ್ನು ನಿಲ್ಲಿಸಲು ಮತ್ತು ಹೊಳೆಯುವ ಉದ್ದ ಮತ್ತು ದಪ್ಪ ಕೂದಲು ಹೊಂದಲು ನಿಮ್ಮ ಅಡುಗೆ ಮನೆಯಲ್ಲಿನ ಎರಡು ವಸ್ತುಗಳು ಸಾಕಷ್ಟು ಸಹಾಯ ಮಾಡುತ್ತವೆ. ಕೂದಲನ್ನು ಉದ್ದ-ದಪ್ಪ ಮತ್ತು ಬಲವಾಗಿಸಲು ಇವು ಸಹಕಾರಿ. ಯಾವುದೇ ಋತುವಿನಲ್ಲೂ ನೀವು ಈ ವಸ್ತುಗಳನ್ನು ಬಳಸಬಹುದು. ಬೇಸಿಗೆ ಮತ್ತು ಚಳಿಗಾಲದ ಋತುಗಳಲ್ಲಿ ಮುಖ್ಯವಾಗಿ ಕೂದಲಿಗೆ ಬಳಸಿ.

    ಇದನ್ನೂ ಓದಿ: ಬಾಲಿವುಡ್ ಕಿರುತೆರೆಯ ನಟಿಯರ ಆಹಾರ ಯೋಜನೆ ಕ್ರಮ ಹಾಗೂ ಫಿಟ್ನೆಸ್ ರಹಸ್ಯ ಹೀಗಿದೆ

    ಏಕೆಂದರೆ ಬೇಸಿಗೆಯಲ್ಲಿ ಪ್ರತಿದಿನ ಶಾಂಪೂ ಹಾಕಿಕೊಳ್ಳುವ ಅವಶ್ಯಕತೆ ಇದೆ. ಇದು ಕೂದಲಿನ ಶುಷ್ಕತೆ ಹೆಚ್ಚಾಗುವುದನ್ನು ತಡೆಯುತ್ತದೆ. ಚಳಿಗಾಲದಲ್ಲಿ ತಂಪಾದ ಗಾಳಿಯಿಂದ ಕೂದಲು ಶುಷ್ಕತೆ ಹೆಚ್ಚುತ್ತದೆ. ಹೀಗಾಗಿ ಕೂದಲು ತನ್ನ ಹೊಳಪನ್ನು ಕಳೆದುಕೊಳ್ಳುತ್ತದೆ. ಮತ್ತು ಶುಷ್ಕ ಮತ್ತು ನಿರ್ಜೀವವಾಗಿ ಕಾಣುತ್ತದೆ.

    ಹೆಚ್ಚುತ್ತಿರುವ ಶುಷ್ಕತೆ ನಿಲ್ಲಿಸುವ ಮೂಲಕ ನಿಮ್ಮ ಕೂದಲಿಗೆ ಹೊಳಪು ಮತ್ತೆ ತರಬಹುದು. ಇದಕ್ಕಾಗಿ ನೀವು ನಿಮ್ಮ ಕೂದಲನ್ನು ದಪ್ಪ ಮತ್ತು ಉದ್ದ ಮಾಡಿಕೊಳ್ಳಬಹುದು. ಇದಕ್ಕಾಗಿ ಇಲ್ಲಿ ಹೇಳಿರುವ ಎರಡು ಮನೆಮದ್ದುಗಳನ್ನು ನೀವು ಬಳಸಬಹುದು.

    ಕೂದಲಿಗೆ ಜೇನುತುಪ್ಪ ಹಚ್ಚುವುದು

    ನಿಮ್ಮ ಕೂದಲಿನ ಉದ್ದಕ್ಕೆ ಅನುಗುಣವಾಗಿ ಜೇನುತುಪ್ಪ ತೆಗೆದುಕೊಳ್ಳಿ. ಈ ಜೇನುತುಪ್ಪದಲ್ಲಿ ಜೇನುತುಪ್ಪದ ಪ್ರಮಾಣಕ್ಕಿಂತ ಅರ್ಧದಷ್ಟು ರೋಸ್ ವಾಟರ್ ಅನ್ನು ಮಿಶ್ರಣ ಮಾಡಿ. ಈಗ ಈ ದ್ರವವನ್ನು ಎಣ್ಣೆಯಂತೆ ಕೂದಲಿನ ಬುಡಕ್ಕೆ ಹಚ್ಚಿ ಲಘುವಾಗಿ ಮಸಾಜ್ ಮಾಡಿ.

    ಹಾಗೂ ಈ ಮಿಶ್ರಣವನ್ನು ಕೂದಲಿನ ಉದ್ದಕ್ಕೆ ಅನ್ವಯಿಸಿ ಮತ್ತು 25 ರಿಂದ 30 ನಿಮಿಷಗಳ ಹಾಗೇ ಬಿಟ್ಟು ನಂತರ ಶಾಂಪೂ ಹಾಕಿ ಕೂದಲು ತೊಳೆಯಿರಿ. ವಾರದಲ್ಲಿ ಎರಡು ಬಾರಿ ಈ ವಿಧಾನವನ್ನು ಫಾಲೋ ಮಾಡಿದರೆ ಇದು ನಿಮಗೆ ತ್ವರಿತ ಪ್ರಯೋಜನ ನೀಡುತ್ತದೆ.

    ಕೂದಲಿಗೆ ಮೊಸರು ಅನ್ವಯಿಸುವುದು

    ಮೊಸರು ಕೂದಲು ಕಂಡೀಷನಿಂಗ್‌ಗೆ ತುಂಬಾ ಒಳ್ಳೆಯದು. ಇದನ್ನು ಒಮ್ಮೆ ಹಚ್ಚಿಕೊಂಡರೆ ಕೂದಲಿಗೆ ಹೊಸ ಜೀವ ಬರುತ್ತದೆ. ಕೂದಲನ್ನು ಉದ್ದ-ದಪ್ಪ-ಕಪ್ಪು ಮತ್ತು ಬಲವಾಗಿಡಲು ಮೊಸರನ್ನು ಹಲವು ರೀತಿಯಲ್ಲಿ ಬಳಸಬಹುದು. ನೀವು ಕೂದಲಿಗೆ ಅನ್ವಯಿಸಲು ಬಯಸಿದರೆ, ನೀವು ಸರಳವಾದ ಮೊಸರನ್ನು ಸಹ ಬಳಸಬಹುದು.

    ಮೊಸರನ್ನು ಕಲೆಸಿ ಕೂದಲಿಗೆ ಹಚ್ಚಿ. ನಂತರ 25 ರಿಂದ 30 ನಿಮಿಷಗಳ ಕಾಲ ಹಾಗೇ ಬಿಟ್ಟು ನಂತರ ಶಾಂಪೂ ಹಾಕಿ ತೊಳೆದುಕೊಳ್ಳಿ. ನಿಮ್ಮ ಕೂದಲಿನ ಬಣ್ಣವೂ ಕಳೆಗುಂದುತ್ತಿದ್ದರೆ, ಈ ಮೊಸರಿಗೆ 1 ಚಮಚ ನೈಸರ್ಗಿಕ ಹೀನಾ ಪುಡಿ ಬೆರೆಸಿ ನಂತರ ಕೂದಲಿಗೆ ಹಚ್ಚಿ.

    ಇದನ್ನೂ ಓದಿ: ಅನ್ನನಾಳ ಕ್ಯಾನ್ಸರ್ ರೋಗಿಗಳು ಎದುರಿಸುವ ಸಮಸ್ಯೆಗಳು ಯಾವವು? ಸಂಶೋಧನೆ ಏನು ಹೇಳುತ್ತದೆ?

    ಗೋರಂಟಿ ಪುಡಿಯ ಹೊರತಾಗಿ, ನೀವು ಒಂದು ಟೀ ಚಮಚ ಕಾಫಿ ಪುಡಿ ಸೇರಿಸುವ ಮೂಲಕ ನಿಮ್ಮ ಕೂದಲಿಗೆ ಮೊಸರು ಅನ್ವಯಿಸಬಹುದು.
    Published by:renukadariyannavar
    First published: