Weekend Tips: ಯಶಸ್ವಿ ಜನರ ವಾರಾಂತ್ಯ ಹೀಗಿರುತ್ತಂತೆ, ನೀವೂ ಈ 12 ಅಭ್ಯಾಸ ಬೆಳೆಸಿಕೊಳ್ಳಿ

ಸೋಮವಾರದಿಂದ ಶುಕ್ರವಾರದವರೆಗೆ ದುಡಿದು ಶನಿವಾರ, ಭಾನುವಾರ ಏನ್ಮಾಡೋದಪ್ಪ ಅಂತ ಯೋಚಿಸ್ತಾ ಇದ್ದೀರಾ? ಹಾಗಿದ್ರೆ ಇಲ್ಲಿದೆ ನೋಡಿ 12 ಉಪಯುಕ್ತ ಟಿಪ್ಸ್

ಸೈಕ್ಲಿಂಗ್ - ಸಾಂದರ್ಭಿಕ ಚಿತ್ರ

ಸೈಕ್ಲಿಂಗ್ - ಸಾಂದರ್ಭಿಕ ಚಿತ್ರ

  • Share this:
ವಾರವೆಲ್ಲಾ ಕೆಲಸ ಮಾಡಿ ಮಾಡಿ ಸುಸ್ತಾಗಿ, ಯಾವಾಗ ವೀಕೆಂಡ್ (Weekend) ಬರುತ್ತಪ್ಪಾ ಅಂತ ಕಾಯುತ್ತಾ ಇರುತ್ತೇವೆ. ಸೋಮವಾರದಿಂದ (Monday) ಶುಕ್ರವಾರದವರೆಗೂ (Friday) ಆರೋಗ್ಯದ (Health) ಬಗ್ಗೆ ಗಮನ ಕೊಡದೇ, ಕಷ್ಟಪಟ್ಟು ದುಡಿಯುತ್ತೇವೆ. ಶನಿವಾರ (Saturday), ಭಾನುವಾರ (Sunday) ಕೆಲಸದ ಯಾವುದೇ ಟೆನ್ಷನ್ (Work Tension) ಇಲ್ಲದೇ ಕಾಲ ಕಳೆಯಲು ಇಷ್ಟ ಪಡುತ್ತೇವೆ. ವೀಕೆಂಡ್ ಅಂದ್ರೆ ಎಲ್ಲಾ ವರ್ಗದವರಿಗೂ ಖುಷಿನೇ. ಹಾಗಾದ್ರೆ ಯಶಸ್ವಿ ವ್ಯಕ್ತಿಗಳು ಅವರ ವೀಕೆಂಡ್ ಹೇಗೆ ಕಳೆಯುತ್ತಾರೆ? ವಾರದ ಒತ್ತಡವನ್ನು ಎರಡು ದಿನಗಳಲ್ಲಿ ಹೇಗೆ ನಿವಾರಿಸಿಕೊಳ್ಳುತ್ತಾರೆ ಎನ್ನುವುದು ಎಲ್ಲರ ಕುತೂಹಲ. ಯುವ ವಾಣಿಜ್ಯೋದ್ಯಮಿಗಳು ವಾರಾತ್ಯಂದಲ್ಲಿ ಏನೆಲ್ಲಾ ಮಾಡ್ತಾರೆ ಎಂಬುವುದರ ಬಗ್ಗೆ ಅವರೇ ತಿಳಿಸಿದ್ದಾರೆ, ಓದಿ…

ವಾರಾಂತ್ಯದ 12 ಉತ್ತಮ ಅಭ್ಯಾಸಗಳು

1. ಸಂಪರ್ಕ ಕಡಿತಗೊಳಿಸಿ

ವಾರಾಂತ್ಯದಲ್ಲಿ ಕೆಲಸದಿಂದ ದೂರವಿದ್ದು, ವಿರಾಮವನ್ನು ತೆಗೆದುಕೊಳ್ಳುವುದು ಅತ್ಯಗತ್ಯ. ಸಂಗೀತ ಕೇಳುವುದು, ಚಿತ್ರಕಲೆ ಅಥವಾ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ಉತ್ತಮ. ಈ ರೀತಿಯ ಕೆಲವು ಸೃಜನಶೀಲ ಚಟುವಟಿಕೆಗಳು ನಿಮ್ಮನ್ನು ಆರಾಮದಾಯಕವಾಗಿಸುತ್ತವೆ

2. ವ್ಯಾಯಾಮ

ದೇಹವನ್ನು ಬಲಪಡಿಸಲು ಮತ್ತು ಮನಸ್ಸನ್ನು ಸ್ಥಿರಗೊಳಿಸಲು ವ್ಯಾಯಾಮವು ಅತ್ಯುತ್ತಮ ಮಾರ್ಗಗಳಲ್ಲಿ ಒಂದಾಗಿದೆ. ಎಂಡಾರ್ಫಿನ್‌ಗಳು ನಿಮ್ಮ ದೇಹವನ್ನು ರೀಚಾರ್ಜ್ ಮಾಡಲು ಸಹಾಯ ಮಾಡುತ್ತದೆ ಮತ್ತು ಇದು ನಿಮ್ಮ ನಿದ್ರೆಯ ಅಭ್ಯಾಸವನ್ನು ಸುಧಾರಿಸುತ್ತದೆ. ವಾರಾಂತ್ಯದಲ್ಲಿ ಹೆಚ್ಚು ವಾಕಿಂಗ್, ವ್ಯಾಯಾಮ ಮಾಡುವುದರಿಂದ ಸೋಮವಾರ ಕೆಲಸಕ್ಕೆ ತೆರಳುವಾಗ ಹೊಸ ಹುಮ್ಮಸ್ಸು ಬರುತ್ತದೆ.

ಇದನ್ನೂ ಓದಿ: Research: ಬಡ ಮಕ್ಕಳಿಗಿಂತ Rich ಫ್ಯಾಮಿಲಿಯಲ್ಲಿ ಹುಟ್ಟಿದ ಮಕ್ಕಳೇ ಹೆಚ್ಚು ಚುರುಕಂತೆ!

3. ಸ್ವ- ಆರೈಕೆ

ಬೆಳಗ್ಗೆಯಿಂದ ಸಂಜೆಯವರೆಗೆ ಕೆಲಸದಲ್ಲೇ ಬ್ಯುಸಿ ಇರುವಾಗ ನಮ್ಮ ಬಗ್ಗೆ ಕಾಳಜಿ ವಹಿಸಲು ಸಮಯವಿರುವುದಿಲ್ಲ. ಹೀಗಾಗಿ ವೀಕೆಂಡ್‌ನಲ್ಲಿ ನಿಮ್ಮ ಆರೈಕೆಗೆ ಸಮಯ ಮೀಸಲಿಡಿ. ಓದುವುದು, ಹೊಸ ಕೌಶಲ್ಯವನ್ನು ಕಲಿಯುವುದು ಅಥವಾ ಪ್ರೀತಿಪಾತ್ರರ ಜೊತೆ ಸಮಯ ಕಳೆಯುವುದು, ಒಳ್ಳೆಯ ಊಟ ಹೀಗೆ ನಿಮಗೆ ಅಂತ ಸಮಯ ಕೊಡಿ.

4. ಧ್ಯಾನ

ವೀಕೆಂಡ್‌ನಲ್ಲಿ ಧ್ಯಾನ ಮಾಡಲು ಸಾಕಷ್ಟು ಸಮಯ ಸಿಗುತ್ತದೆ. ಧ್ಯಾನ ಮನಸ್ಸಿಗೆ ವಿರಾಮವನ್ನೂ ನೀಡುತ್ತದೆ ಮತ್ತು ಹೊಸ ಉತ್ತೇಜನ ಬರುತ್ತದೆ. ನಿಯಮಿತ ವಿರಾಮ ಮತ್ತು ಸಾಮಾಜಿಕ ಮಾತುಕತೆ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು.

5. ಏಕಾಂಗಿಯಾಗಿರಿ

ಶನಿವಾರ ಅಥವಾ ಭಾನುವಾರ ಬೆಳಗ್ಗೆ ಕೆಲವು ಗಂಟೆಗಳ ಕಾಲ ಏಕಾಂಗಿಯಾಗಿ ಸಮಯ ಕಳೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ಡಿಕಂಪ್ರೆಸ್ ಮಾಡಲು ಮತ್ತು ಗಮನಹರಿಸಲು ಉತ್ತಮ ಮಾರ್ಗವಾಗಿದೆ. ಈ ಸಮಯದಲ್ಲಿ ನಿಮ್ಮ ಸಾಧನೆಗಳನ್ನು ಅವಲೋಕಿಸಿ ಮತ್ತು ಮುಂಬರುವ ವಾರದ ಯೋಜನೆ ಮಾಡಿಕೊಳ್ಳಿ. ನೀವು ಏನನ್ನು ಸಾಧಿಸಿದ್ದೀರಿ ಎಂಬುದರ ಬಗ್ಗೆ ನೀವು ಹೆಮ್ಮೆಪಡುತ್ತೀರಿ ಮತ್ತು ಮುಂದೆ ಮತ್ತಷ್ಟು ಸಾಧನೆ ಮಾಡುವುದಕ್ಕೆ ಸಿದ್ಧರಾಗುತ್ತೀರಿ.

ಇದನ್ನೂ ಓದಿ: Food: ಸಸ್ಯಾಹಾರಿಗಳೇ ಇಲ್ಲಿ ಕೇಳಿ, ಇನ್ಮುಂದೆ ನೀವೂ ಸಹ ವೆಜ್ ಫಿಶ್ ಫ್ರೈ ತಿನ್ನಬಹುದು!

6. ಮನೆ ಕೆಲಸಗಳು

ಕಚೇರಿಯ ಕೆಲಸದ ನಂತರ ಹೆಚ್ಚಿನ ಜನರು ಮಾಡಲು ಬಯಸುವ ಕೊನೆಯ ವಿಷಯವೆಂದರೆ ಮನೆ ಕೆಲಸಗಳನ್ನು ಮುಂದುವರಿಸುವುದು. ಇದರ ಬದಲಿಗೆ ಶನಿವಾರ ಅಥವಾ ಭಾನುವಾರದಂದು ದಿನಸಿ ಶಾಪಿಂಗ್, ಮನೆ ಕ್ಲೀನಿಂಗ್, ಮತ್ತು ಲಾಂಡ್ರಿ ಕೆಲಸಗಳನ್ನು ಇಟ್ಟುಕೊಳ್ಳಿ.

7. ವಿಶ್ರಾಂತಿ

ವಾರಾಂತ್ಯದಲ್ಲಿ ನಿಮ್ಮ ಫೋನ್ ಅನ್ನು ಆಫ್ ಮಾಡಿ ಅಥವಾ ಇಮೇಲ್ ನೋಟಿಫಿಕೇಶನ್ ಆಫ್ ಮಾಡಿ. ಮನೆಯಲ್ಲಿಯೇ ಹೆಚ್ಚು ವಿಶ್ರಾಂತಿ ಪಡೆಯಿರಿ.

8. ವಾರಾಂತ್ಯವನ್ನು ಪ್ಲಾನ್ ಮಾಡಿ

ವಾರಾಂತ್ಯದಲ್ಲಿ ನಿಮ್ಮ ಸಮಯವನ್ನು ಸಾಧ್ಯವಾದಷ್ಟು ಉತ್ತಮವಾಗಿ ಯೋಜಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಈ ವಾರದಲ್ಲಿ ಏನೆಲ್ಲಾ ಕೆಲಸ ಮಾಡಬೇಕು ಎಂಬುವುದರ ಬಗ್ಗೆ ಮೊದಲೇ ಬ್ಲೂ ಪ್ರಿಂಟ್ ಹಾಕಿಕೊಳ್ಳಿ. ಸ್ನೇಹಿತರ ಭೇಟಿ, ವಾರದ ದಿನಸಿ ಹೀಗೆ ಎಲ್ಲವನ್ನೂ ವೀಕೆಂಡ್‌ನಲ್ಲಿ ಪ್ಲ್ಯಾನ್ ಮಾಡಿಡಿ.

9. ಓದುವ ಹವ್ಯಾಸ

ಪ್ರತಿ ವಾರಾಂತ್ಯದಲ್ಲಿ ಪುಸ್ತಕ ಓದುವುದನ್ನು ಕಡ್ಡಾಯಗೊಳಿಸಿ. ಇದು ನಿಮ್ಮ ಮನಸ್ಸನ್ನು ರಿಫ್ರೆಶ್ ಮಾಡುತ್ತದೆ. ನಿಮಗೆ ತಿಳಿದಿರುವ ಮತ್ತು ಪರಿಚಯವಿಲ್ಲದ ವಿಷಯಗಳ ಬಗ್ಗೆ ಓದುವ ಅಭ್ಯಾಸ ಸಕಾರಾತ್ಮಕ ರೀತಿಯಲ್ಲಿ ಪರಿಣಾಮ ಬೀರುತ್ತದೆ.

10. ಹೊಸ ವಿಷಯಗಳ ಪ್ರಯತ್ನ

ನಿಮ್ಮ ಮನಸ್ಸನ್ನು ವಿಸ್ತರಿಸಲು ಉತ್ತಮ ಮಾರ್ಗವೆಂದರೆ ಹೊಸ ವಿಷಯಗಳನ್ನು ಪ್ರಯತ್ನಿಸುವುದು. ಕವನ, ಕಾದಂಬರಿ ಓದುವುದು, ಹೊಸ ಹವ್ಯಾಸವನ್ನು ಪ್ರಯತ್ನಿಸುವುದು ಸೂಕ್ತ.

11. ಸಮತೋಲನವನ್ನು ಹುಡುಕಿ

ವಾರಾಂತ್ಯದ ದಿನವನ್ನು ವ್ಯರ್ಥ ಮಾಡದೇ ಉತ್ತಮವಾಗಿ ಕಳೆಯಿರಿ. ಹೊಸದನ್ನು ಕಲಿಯುವುದು ಮತ್ತು ಸ್ವಯಂ-ಆರೈಕೆ ಎರಡರಲ್ಲೂ ಸಮತೋಲನ ಕಂಡುಕೊಳ್ಳಬೇಕು.

12. ಟ್ರೆಕ್ಕಿಂಗ್, ಸೈಕ್ಲಿಂಗ್

ವಾರಾತ್ಯಂತದ ಎರಡು ದಿನಗಳ ಸಾಹಸವು ನಿಜವಾಗಿಯೂ ಮನಸ್ಸಿಗೆ ವಿಶ್ರಾಂತಿ ನೀಡುತ್ತದೆ. ಟ್ರೆಕ್ಕಿಂಗ್, ಸೈಕ್ಲಿಂಗ್ ನಿಮ್ಮ ಮನಸ್ಸನ್ನು ಮುದಗೊಳಿಸಲು ಸಹಾಯ ಮಾಡುತ್ತದೆ.

ಇವೆಲ್ಲ ಓದಿದ್ದೀರಲ್ವಾ? ಹಾಗಿದ್ರೆ ಇನ್ಯಾಕೆ ತಡ? ಈ ವಾರಾಂತ್ಯದಲ್ಲೇ ಈ ಟಿಪ್ಸ್‌ಗಳನ್ನು ಫಾಲೋ ಮಾಡಿ.
Published by:Annappa Achari
First published: