Digestion: ಅಡುಗೆಮನೆಯ ಈ ವಸ್ತುಗಳನ್ನು ಬಳಸಿದ್ರೆ ಕರುಳಿನ ಆರೋಗ್ಯ ಅದ್ಭುತವಾಗಿರುತ್ತೆ, ಆಗ ಜೀರ್ಣಕ್ರಿಯೆಯ ಯಾವ ಸಮಸ್ಯೆಯೂ ಬರಲ್ಲ

ಒತ್ತಡವು ಕೇವಲ ಮಾನಸಿಕವಾಗಿ ಮಾತ್ರವಲ್ಲ, ದೈಹಿಕವಾಗಿಯೂ ನಿಮ್ಮ ಮೇಲೆ ತುಂಬಾನೇ ಪರಿಣಾಮ ಬೀರುತ್ತದೆ. "ಒತ್ತಡವು ನಿಮ್ಮ ಕರುಳುಗಳು ಅಸಹಜವಾಗಿ ವರ್ತಿಸಲು ಒಂದು ಪ್ರಮುಖ ಕಾರಣವಾಗಿದೆ" ಎಂದು ವೈದ್ಯರು ಹೇಳಿದ್ದಾರೆ.

ಮಸಾಲೆ ಪದಾರ್ಥಗಳು

ಮಸಾಲೆ ಪದಾರ್ಥಗಳು

  • Share this:
ನಮ್ಮ ಒಟ್ಟಾರೆ ಆರೋಗ್ಯವು (Goo Health) ಚೆನ್ನಾಗಿರಬೇಕೆಂದರೆ ನಮ್ಮ ದೇಹದಲ್ಲಿ ಕರುಳಿನ ಆರೋಗ್ಯ, ಜೀರ್ಣಕಾರಿ ಆರೋಗ್ಯ ಮತ್ತು ರೋಗನಿರೋಧಕ ಶಕ್ತಿಯು (Immunity) ಚೆನ್ನಾಗಿರುವುದು ತುಂಬಾನೇ ಮುಖ್ಯವಾಗುತ್ತದೆ. ಕಳೆದ ಎರಡು ವರ್ಷಗಳಿಂದ ಈ ಕೋವಿಡ್-19 ಸಾಂಕ್ರಾಮಿಕ ರೋಗದ (pandemic) ಹಾವಳಿಯಿಂದಾಗಿ ಇಡೀ ಜಗತ್ತಿನಲ್ಲಿರುವ ಜನರೆಲ್ಲರೂ ತುಂಬಾನೇ ಭಯ ಭೀತರಾಗಿದ್ದು, ಇದರ ವಿರುದ್ಧ ಹೋರಾಡಲು ನಮ್ಮ ಒಟ್ಟಾರೆ ಆರೋಗ್ಯ ಚೆನ್ನಾಗಿಟ್ಟುಕೊಳ್ಳಲು ಮತ್ತು ದೇಹದಲ್ಲಿನ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸಿಕೊಳ್ಳುವುದು ತುಂಬಾನೇ ಮುಖ್ಯವಾಗಿದೆ. ವೈದ್ಯರು ಹೇಳುವ ಪ್ರಕಾರ ನಮ್ಮ ಕರುಳಿನ ಆರೋಗ್ಯವು (intestine health) ಚೆನ್ನಾಗಿದ್ದರೆ, ನಮ್ಮ ಒಟ್ಟಾರೆ ದೇಹದ ಆರೋಗ್ಯವು ಚೆನ್ನಾಗಿರುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ, ನಿಮ್ಮ ಕರುಳಿನ ಆರೋಗ್ಯವು ನಿಮ್ಮ ಒಟ್ಟಾರೆ ಆರೋಗ್ಯದೊಂದಿಗೆ ನಿಕಟವಾದ ಸಂಬಂಧವನ್ನು ಹೊಂದಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಇದಕ್ಕಾಗಿಯೇ ಕರುಳಿನ ಆರೋಗ್ಯ ಚೆನ್ನಾಗಿರಲು ಕರುಳಿನ ಸ್ನೇಹಿ ಆಹಾರಗಳನ್ನು ತಿನ್ನಲು ಮತ್ತು ಎಲ್ಲಾ ಜೀರ್ಣಾಂಗ ವ್ಯವಸ್ಥೆಯ ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳಲು ನಮ್ಮ ಜೀವನ ಶೈಲಿಯನ್ನು ತಕ್ಕ ಮಟ್ಟಿಗೆ ನಿಯಂತ್ರಣದಲ್ಲಿಡಲು ಸೂಚಿಸಲಾಗಿದೆ. ಆದರೆ, ನಿಮ್ಮ ಜೀರ್ಣಾಂಗ ಆರೋಗ್ಯವು ನಿಮ್ಮ ರೋಗನಿರೋಧಕತೆಯೊಂದಿಗೆ ಸಂಪರ್ಕ ಹೊಂದಿದೆ ಎಂದು ನಿಮಗೆ ತಿಳಿದಿದೆಯೇ?

ಕರುಳಿನ ಆರೋಗ್ಯಕ್ಕೂ ರೋಗನಿರೋಧಕ ಶಕ್ತಿಗೂ ಲಿಂಕ್

ನಾವೆಲ್ಲರೂ ನಮ್ಮ ರೋಗನಿರೋಧಕತೆಯನ್ನು ಬಲಪಡಿಸುವ ಮಾರ್ಗಗಳನ್ನು ಹುಡುಕುತ್ತಿರುವ ಸಮಯದಲ್ಲಿ, ನಮ್ಮ ಕರುಳಿನ ಆರೋಗ್ಯದ ಬಗ್ಗೆಯೂ ಗಮನ ಹರಿಸುವುದು ಸಂಪೂರ್ಣವಾಗಿ ಅತ್ಯಗತ್ಯ. ಆಯುರ್ವೇದ ತಜ್ಞೆ ಡಾ. ನಿತಿಕಾ ಕೊಹ್ಲಿ ಅವರು "ಜೀರ್ಣಕಾರಿ ಆರೋಗ್ಯ ಮತ್ತು ರೋಗನಿರೋಧಕ ಶಕ್ತಿ ಎರಡು ಸಹ ತುಂಬಾನೇ ನಿಕಟವಾದ ಸಂಬಂಧವನ್ನು ಹೊಂದಿದೆ" ಎಂದು ಹೇಳುತ್ತಾರೆ.

ಇದನ್ನೂ ಓದಿ: Gut Health: ಈ 7 ಅಭ್ಯಾಸಗಳನ್ನು ಇಂದೇ ತ್ಯಜಿಸಿ, ಕರುಳಿಗೆ ಹಾನಿಯಾಗೋದನ್ನ ತಪ್ಪಿಸಿ

"ನಿಮ್ಮ ಕರುಳಿನಲ್ಲಿ ವಾಸಿಸುವ ಸೂಕ್ಷ್ಮಜೀವಿಗಳು ನಿಮ್ಮ ರೋಗನಿರೋಧಕ ವ್ಯವಸ್ಥೆ ಮತ್ತು ನಿಮ್ಮ ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ" ಎಂದು ಅವರು ಹೇಳಿದರು. ತಜ್ಞರ ಪ್ರಕಾರ, ನಿಮ್ಮ ಕರುಳಿಗೆ ಸಹಾಯಕವಾಗುವ ಸರಿಯಾದ ಆಹಾರವನ್ನು ಸೇವಿಸುವುದು ನಿಮ್ಮ ದೇಹದ ರೋಗನಿರೋಧಕ ವ್ಯವಸ್ಥೆ ಮತ್ತು ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸುವಲ್ಲಿ ತುಂಬಾನೇ ಸಹಾಯ ಮಾಡುತ್ತದೆ" ಎಂದು ಹೇಳಿದ್ದಾರೆ.

ಇದಲ್ಲದೆ, ನಿಮಗಿರುವ ಜೀರ್ಣಕಾರಿ ತೊಂದರೆಗಳನ್ನು ಶಮನಗೊಳಿಸಲು ಮತ್ತು ನಿಮ್ಮ ರೋಗನಿರೋಧಕತೆಯನ್ನು ಹೆಚ್ಚಿಸಲು ಕೆಲವು ಸುಲಭವಾದ ಸಲಹೆಗಳನ್ನು ಇಲ್ಲಿ ಸೂಚಿಸಿದ್ದಾರೆ.

1. ದಾಲ್ಚಿನ್ನಿ ಆರೋಗ್ಯಕ್ಕೆ ಒಳ್ಳೆಯದು

ಡಾ. ಕೊಹ್ಲಿ ಪ್ರಕಾರ, ದಾಲ್ಚಿನ್ನಿ ಜೀರ್ಣಕಾರಿ ಅಸ್ವಸ್ಥತೆಯನ್ನು ಶಮನಗೊಳಿಸುತ್ತದೆ ಮತ್ತು ಜೀರ್ಣಕಾರಿ ಸಾಮರ್ಥ್ಯವನ್ನು ಸುಧಾರಿಸುತ್ತದೆ. ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಸಮತೋಲನಗೊಳಿಸುತ್ತದೆ.

2. ಶುಂಠಿ ಬೇರು

ಶುಂಠಿ ಬೇರು ನಿಮ್ಮ ಕರುಳಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಏಕೆಂದರೆ ಇದು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಉರಿಯೂತವನ್ನು ಕಡಿಮೆ ಮಾಡುತ್ತದೆ, ಉತ್ಕರ್ಷಣ ನಿರೋಧಕ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

3. ತಡವಾಗಿ ಊಟ ಮಾಡಬೇಡಿ

ತಜ್ಞರು ತಡ ಮಾಡದೆ ಬೇಗನೆ ಊಟ ಮಾಡುವಂತೆ ಸೂಚಿಸುತ್ತಾರೆ. "ರಾತ್ರಿ ಹೊತ್ತಿನಲ್ಲಿ ನೀವು ಮಲಗುವ ಸಮಯದ ಮುಂಚಿತವಾಗಿ ಹೊಟ್ಟೆ ತುಂಬಾ ಊಟ ಮಾಡುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಹಾನಿ ಉಂಟಾಗುತ್ತದೆ" ಎಂದು ಅವರು ಹೇಳಿದರು.

ಇದನ್ನೂ ಓದಿ: Health Benefits: ಅಡುಗೆ ಮನೆಯಲ್ಲಿರುವ ಈ ಮಸಾಲೆಗಳು ಎಷ್ಟು ಪ್ರಯೋಜನಕಾರಿ ನೋಡಿ

4. ತಪ್ಪದೆ ಪ್ರತಿದಿನ ವ್ಯಾಯಾಮ ಮಾಡಿ

ನಿಮ್ಮ ದೇಹದ ಆರೋಗ್ಯವನ್ನು ಸದೃಢವಾಗಿ ಮತ್ತು ಸಕ್ರಿಯವಾಗಿಟ್ಟುಕೊಳ್ಳುವುದು ಅತ್ಯಗತ್ಯ. "ನಿಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿಡಲು ವ್ಯಾಯಾಮದಿಂದ ಮಾತ್ರ ಸಾಧ್ಯ. ನಿಮ್ಮ ದಿನಚರಿಯಲ್ಲಿ ನಿಯಮಿತ ಗಂಟೆಗಳ ಕಾಲ ವ್ಯಾಯಾಮ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿರಿ " ಎಂದು ಡಾ. ಕೊಹ್ಲಿ ಸಲಹೆ ನೀಡಿದರು.

5. ಒತ್ತಡವನ್ನು ತೊಡೆದು ಹಾಕಿ

ಒತ್ತಡವು ಕೇವಲ ಮಾನಸಿಕವಾಗಿ ಮಾತ್ರವಲ್ಲ, ದೈಹಿಕವಾಗಿಯೂ ನಿಮ್ಮ ಮೇಲೆ ತುಂಬಾನೇ ಪರಿಣಾಮ ಬೀರುತ್ತದೆ. "ಒತ್ತಡವು ನಿಮ್ಮ ಕರುಳುಗಳು ಅಸಹಜವಾಗಿ ವರ್ತಿಸಲು ಒಂದು ಪ್ರಮುಖ ಕಾರಣವಾಗಿದೆ" ಎಂದು ವೈದ್ಯರು ಹೇಳಿದ್ದಾರೆ.
Published by:Soumya KN
First published: