• Home
  • »
  • News
  • »
  • lifestyle
  • »
  • Menstruation Time: ಸ್ಯಾನಿಟರಿ ಪ್ಯಾಡ್​ಗಳ ಬದಲು ಪರಿಸರ ಸ್ನೇಹಿ ಈ ವಸ್ತುಗಳ ಬಳಕೆ ಆರೋಗ್ಯಕ್ಕೆ ಉತ್ತಮ!

Menstruation Time: ಸ್ಯಾನಿಟರಿ ಪ್ಯಾಡ್​ಗಳ ಬದಲು ಪರಿಸರ ಸ್ನೇಹಿ ಈ ವಸ್ತುಗಳ ಬಳಕೆ ಆರೋಗ್ಯಕ್ಕೆ ಉತ್ತಮ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹೆಚ್ಚಿನ ಮಹಿಳೆಯರು ಮುಟ್ಟಿನ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್‌ ಬಳಸುತ್ತಾರೆ. ಸ್ಯಾನಿಟರಿ ಪ್ಯಾಡ್‌ ಸೌಕರ್ಯ ಮತ್ತು ಅದರ ಪರ್ಯಾಯ ಆಯ್ಕೆಗಳ ಬಗ್ಗೆ ತಿಳಿಯುವುದು ಸಹ ಮುಖ್ಯ. ಯಾಕೆಂದರೆ ದೀರ್ಘ ಕಾಲದವರೆಗೆ ಸ್ಯಾನಿಟರಿ ಪ್ಯಾಡ್‌ ಗಳ ಬಳಕೆ ಮಾಡುವುದು ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಮುಂದೆ ಓದಿ ...
  • Share this:

    ಮಹಿಳೆಯರು (Women’s) ಪ್ರತೀ ತಿಂಗಳು (Month) ನಿರ್ದಿಷ್ಟ ತಾರೀಖಿನಂದು (Date) ಋತುಚಕ್ರ (Menstruation) ಅನುಭವಿಸುತ್ತಾರೆ. ಪ್ರತೀ ತಿಂಗಳು ಬರುವ ಋತುಚಕ್ರ ಕೆಲವು ದೈಹಿಕ ಮತ್ತು ಮಾನಸಿಕ ಸಮಸ್ಯೆ (Physical And Mental Problem) ತಂದೊಡ್ಡುತ್ತದೆ. ಇದು ನೈಸರ್ಗಿಕ ಪ್ರಕ್ರಿಯೆ. ಆದರೆ ಅದರ ಸಮಯದಲ್ಲಿ ನೈರ್ಮಲ್ಯ ಕಾಳಜಿ ವಹಿಸುವುದು ತುಂಬಾ ಮುಖ್ಯ. ನಂತರ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಹೆಚ್ಚು. ಋತುಚಕ್ರದ ವೇಳೆ ಶುಚಿತ್ವ ಕಾಪಾಡಿಕೊಳ್ಳಲು ಮತ್ತು ಕಲೆ ತಪ್ಪಿಸಲು ಮಹಿಳೆಯರು ಸ್ಯಾನಿಟರಿ ಪ್ಯಾಡ್ ಬಳಕೆ ಮಾಡುತ್ತಾರೆ. ಆದರೆ ಪಿರಿಯಡ್ಸ್ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್‌ ಗಳನ್ನು ಬಳಸುವುದು ಎಷ್ಟು ಉತ್ತಮ?


    ಸ್ಯಾನಿಟರಿ ಪ್ಯಾಡ್‌ ಗಳ ಬಳಕೆ


    ಹೆಚ್ಚಿನ ಮಹಿಳೆಯರು ಮುಟ್ಟಿನ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್‌ ಬಳಸುತ್ತಾರೆ. ಸ್ಯಾನಿಟರಿ ಪ್ಯಾಡ್‌ ಸೌಕರ್ಯ ಮತ್ತು ಅದರ ಪರ್ಯಾಯ ಆಯ್ಕೆಗಳ ಬಗ್ಗೆ ತಿಳಿಯುವುದು ಸಹ ಮುಖ್ಯ. ಯಾಕೆಂದರೆ ದೀರ್ಘ ಕಾಲದವರೆಗೆ ಸ್ಯಾನಿಟರಿ ಪ್ಯಾಡ್‌ ಗಳ ಬಳಕೆ ಮಾಡುವುದು ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದು ಹೆಚ್ಚಿನ ಮಹಿಳೆಯರಿಗೆ ಗೊತ್ತಿಲ್ಲ. ಜೊತೆಗೆ ಇದು ಪರಿಸರಕ್ಕೆ ಹಾನಿಕಾರಕ ಆಗಿದೆ.


    ಸ್ಯಾನಿಟರಿ ಪ್ಯಾಡ್‌ ಗಳಿಗೆ ಪರ್ಯಾಯ ಬಳಕೆ ಏಕೆ ಬೇಕು?


    ಪಿರಿಯಡ್ಸ್ ವೇಳೆ ಬಳಸುವ ಸ್ಯಾನಿಟರಿ ಪ್ಯಾಡ್ ಪ್ಲಾಸ್ಟಿಕ್‌ನಿಂದ ಮಾಡಲ್ಪಟ್ಟಿದೆ. ಇದು ಸಂಪೂರ್ಣವಾಗಿ ಕೊಳೆಯಲು 500 ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುವ ಸಾಧ್ಯತೆ ಇದೆ. ಅದೇ ವೇಳೆ ದೀರ್ಘ ಕಾಲದವರೆಗೆ ಸ್ಯಾನಿಟರಿ ಪ್ಯಾಡ್‌ ಗಳ ಬಳಕೆ ಮಹಿಳೆಯರಿಗೆ ಕೆಲವು ಆರೋಗ್ಯ ಮತ್ತು ಚರ್ಮದ ಸಮಸ್ಯೆ ಉಂಟು ಮಾಡುವ ಸಾಧ್ಯತೆ ಇದೆ.


    ಇದನ್ನೂ ಓದಿ: ತೂಕ ಹೆಚ್ಚಾಗ್ಬೇಕು ಅಂತ ಸಿಕ್ಕಿದ್ದೆಲ್ಲಾ ತಿಂತೀರಾ? ಅದರ ಬದಲು ಈ ಆರೋಗ್ಯಕರ ಆಹಾರ ಸೇವಿಸಿ


    ಮೂತ್ರನಾಳದ ಸೋಂಕು, ಚರ್ಮದ ದದ್ದುಗಳು, ಜನನಾಂಗದ ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚು.  ಟ್ಯಾಂಪೂನ್ಗಳು ಸ್ಯಾನಿಟರಿ ಪ್ಯಾಡ್‌ಗಳ ನಂತರ ಸಾಮಾನ್ಯವಾಗಿ ಬಳಸುವ ವಸ್ತು ಆಗಿವೆ. ಇದು ಋತುಚಕ್ರ ಅವಧಿಗಳಲ್ಲಿ ನೈರ್ಮಲ್ಯ ಕಾಪಾಡಲು ಸಹಾಯ ಮಾಡುತ್ತದೆ.


    ಆದಾಗ್ಯೂ ಇದು ಸ್ಯಾನಿಟರಿ ಪ್ಯಾಡ್‌ ಗಳಂತೆ ಪರಿಸರ ಸ್ನೇಹಿ ಅಲ್ಲ. ಆದರೆ ಇದು ಚರ್ಮದ ಸಮಸ್ಯೆ ನಿವಾರಣೆ ಮಾಡುತ್ತದೆ. ಅದೇ ವೇಳೆ ಅದನ್ನು ಬಳಸುವುದು ತುಂಬಾ ಸುಲಭ.


    ಸ್ಯಾನಿಟರಿ ಪ್ಯಾಡ್‌ಗಳ ಬದಲಿಗೆ ಬಟ್ಟೆ ಪ್ಯಾಡ್‌ ಬಳಕೆ


    ಬಟ್ಟೆಯ ಪ್ಯಾಡ್‌ಗಳು ಸ್ಯಾನಿಟರಿ ಪ್ಯಾಡ್‌ ಗಳಂತೆ ಕಾಣುತ್ತವೆ. ಆದರೆ ಇದನ್ನು ವಿಶೇಷವಾಗಿ ತಯಾರಿಸಲಾಗುತ್ತದೆ. ಇವುಗಳನ್ನು ತೊಳೆದು ಮತ್ತೆ ಬಳಕೆ ಮಾಡಬಹುದು. ಇವುಗಳನ್ನು ಬಟ್ಟೆ ಮತ್ತು ಹತ್ತಿಯಿಂದ ಮಾಡಲಾಗಿದೆ.


    ಇದು ಪರಿಸರ ಸ್ನೇಹಿ ಆಗಿದೆ. ಸ್ಯಾನಿಟರಿ ಪ್ಯಾಡ್‌ಗಳಂತೆ ಇದನ್ನು ತಯಾರಿಸಲು ಇತರೆ ವಿಷಕಾರಿ ವಸ್ತುಗಳನ್ನು ಬಳಕೆ ಮಾಡಲಾಗುವುದಿಲ್ಲ. ಮತ್ತು ಚರ್ಮ ಮತ್ತು ಆರೋಗ್ಯ ಸಮಸ್ಯೆಗಳ ಅಪಾಯ ಕಡಿಮೆ ಮಾಡುತ್ತದೆ.


    ಮುಟ್ಟಿನ ಕಪ್


    ಟ್ಯಾಂಪೂನ್‌ಗಳಂತೆ, ಮುಟ್ಟಿನ ಕಪ್‌ಗಳನ್ನು ಸಹ ಯೋನಿಯೊಳಗೆ ಧರಿಸಲಾಗುತ್ತದೆ. ಇದು ಸ್ಯಾನಿಟರಿ ಪ್ಯಾಡ್‌ಗಳು ಮತ್ತು ಟ್ಯಾಂಪೂನ್‌ಗಳಿಗಿಂತ ಹೆಚ್ಚು ರಕ್ತವನ್ನು ಒಂದು ಸಮಯದಲ್ಲಿ ಸಂಗ್ರಹಿಸುತ್ತದೆ. ಅದೇ ವೇಳೆ ಮಹಿಳೆಯರು 3 ರಿಂದ 5 ವರ್ಷಗಳವರೆಗೆ ನೈರ್ಮಲ್ಯ ಪ್ಯಾಡ್ಸ್ ಈ ಆಯ್ಕೆಯನ್ನು ಬಳಸಬಹುದು. ಇದು ಪರಿಸರ ಸ್ನೇಹಿ ಪಟ್ಟಿಯಲ್ಲೂ ಇದೆ.


    ಮುಟ್ಟಿನ ಸ್ಪಾಂಜ್


    ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್‌ಗಳಿಗೆ ಮುಂದಿನ ಪರ್ಯಾಯ ವಸ್ತು ಅಂದ್ರೆ ಮುಟ್ಟಿನ ಸ್ಪಂಜು. ಕೆಲವೇ ಮಹಿಳೆಯರಿಗೆ ಇದರ ಬಗ್ಗೆ ತಿಳಿದಿದೆ. ಮುಟ್ಟಿನ ಸ್ಪಾಂಜ್ ಅನ್ನು ಸಮುದ್ರ ಸ್ಪಂಜು ಎಂದೂ ಕರೆಯುತ್ತಾರೆ. ಏಕೆಂದರೆ ಇದನ್ನು ಸಮುದ್ರದಿಂದ ಹೊರ ತೆಗೆಯಲಾಗುತ್ತದೆ. ಇದು ಸಂಪೂರ್ಣವಾಗಿ ನೈಸರ್ಗಿಕ ಸ್ನೇಹಿ ಆಗಿದೆ.


    ಇದನ್ನು 6 ತಿಂಗಳವರೆಗೆ ಮರು ಬಳಕೆ ಮಾಡಬಹುದು. ಮುಟ್ಟಿನ ಸ್ಪಂಜುಗಳನ್ನು ಟ್ಯಾಂಪೂನ್‌ಗಳಂತೆ ಯೋನಿಯೊಳಗೆ ಇರಿಸಲಾಗುತ್ತದೆ. ಮತ್ತು ಹೆಚ್ಚಿನ ಹೀರಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಇದು ಯಾವುದೇ ಬ್ಲೀಚ್, ಕ್ಲೋರಿನ್, ರಾಸಾಯನಿಕ ಅಥವಾ ಸಂಶ್ಲೇಷಿತ ವಸ್ತು ಹೊಂದಿಲ್ಲ. ಇದರಿಂದಾಗಿ ಇದು ಪರಿಸರ ಸ್ನೇಹಿ ಹಾಗೂ ಚರ್ಮ ಸ್ನೇಹಿ ಆಗಿದೆ.


    ಇದನ್ನೂ ಓದಿ: ನೈಸರ್ಗಿಕವಾಗಿ ಚರ್ಮದ ಕಾಳಜಿಗೆ ಈ ಆಹಾರ ಸೇವಿಸಿ, ಒಮ್ಮೆ ಟ್ರೈ ಮಾಡಿ ನೋಡಿ


    ಮುಟ್ಟಿನ ಡಿಸ್ಕ್


    ಮುಟ್ಟಿನ ಸಮಯದಲ್ಲಿ ಮಹಿಳೆಯರು ಸ್ಯಾನಿಟರಿ ಪ್ಯಾಡ್‌ಗಳ ಬದಲಿಗೆ ಮುಟ್ಟಿನ ಡಿಸ್ಕ್‌ಗಳನ್ನು ಸಹ ಬಳಸಬಹುದು. ಮುಟ್ಟಿನ ಡಿಸ್ಕ್ ಅನ್ನು ಋತುಚಕ್ರದ ಕಪ್ನಂತೆ ಬಳಸಲಾಗುತ್ತದೆ. ಮುಟ್ಟಿನ ಕಪ್ ಅನ್ನು ಗರ್ಭಕಂಠದ ಕೆಳಗೆ ಇರಿಸಲಾಗುತ್ತದೆ ಮತ್ತು ಮುಟ್ಟಿನ ಡಿಸ್ಕ್ ಅನ್ನು ಯೋನಿ ಫೋರ್ನಿಕ್ಸ್ ಮೇಲೆ ಇರಿಸಲಾಗುತ್ತದೆ. ಮರುಬಳಕೆ ಮಾಡಬಹುದು.

    Published by:renukadariyannavar
    First published: